ಲಾಕ್ ಡೌನ್ ಸ್ಥಗಿತ : 8 ಬಸ್ಸುಗಳ ಸಂಚಾರ!!

ಮಧುಗಿರಿ :       ಕರೋನಾ ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಬಸ್ ಸಂಚಾರ ಪ್ರಥಮ ಬಾರಿಗೆ ಮಂಗಳವಾರ ದಂದು ಮಧುಗಿರಿ ಕೆ.ಎಸ್. ಆರ್. ಟಿ.ಸಿ .ಡಿಪೊನಿಂದ ಎಂಟು ಬಸ್ಸುಗಳು ಸಂಚರಿಸಿದೆ.         ಈ ಪೈಕಿ ಬೆಂಗಳೂರಿಗೆ ನಾಲ್ಕು, ತುಮಕೂರಿಗೆ ಮೂರು ಹಾಗೂ ಪಾವಗಡಕ್ಕೆ ಒಂದು ಬಸ್ ಸಂಚಾರ ಬೆಳೆಸಿದವು. ಪ್ರಯಾಣಿಕರಿಲ್ಲದೆ ಭಣಗುಡುತ್ತಿದ್ದ ಬಸ್ ನಿಲ್ದಾಣದಲ್ಲಿ ಆಶಾ ಕಾರ್ಯಕರ್ತರು, ಕೆ ಎಸ್ ಆರ್ ಟಿಸಿ ಸಂಸ್ಥೆಯ ಮಹಿಳಾ ಸಿಬ್ಬಂದಿಯ ಸಹಕಾರದೊಂದಿಗೆ ಸ್ಕ್ರೀನ್ ಟೆಸ್ಟಿಂಗ್ ಮತ್ತು ಸ್ಯಾನಿ ಟೈಸಿಂಗ್ ಮಾಡಿ ಪ್ರಯಾಣಿಕರನ್ನು ಮಾಸ್ಕ್ ಇದ್ದವರಿಗೆ ಮಾತ್ರ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿತ್ತು.       ಮಧುಗಿರಿ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣವನ್ನು ಪ್ರಸ್ತುತ ಒನ್ವೇ ಮಾಡಿದ್ದು ಮುಖ್ಯದ್ವಾರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಸಾಲುಗಟ್ಟಿ ಪ್ರಯಾಣಿಕರು ಬರುವ ರೀತಿ ವ್ಯವಸ್ಥೆ ಮಾಡಲಾಗಿದೆ.…

ಮುಂದೆ ಓದಿ...

ಅಂತರ್ಜಲ ಅಭಿವೃದ್ಧಿಯಂತಹ ದೂರದೃಷ್ಠಿ ಕಾರ್ಯಕ್ರಮ ಆಗಬೇಕು : ಸಚಿವ

ಚಿಕ್ಕನಾಯಕನಹಳ್ಳಿ:        ಅಟಲ್‍ಭೂಜಲ್ , ಜಲಾಮೃತ ಹಾಗೂ ಜಲಜೀವನ್ ಯೋಜನೆಯನ್ನು ಸಮರ್ಥವಾಗಿ ಜಾರಿಗೆ ತರುವ ಮೂಲಕ ರೈತಸ್ನೇಹಿ ಜಲಪೂರಣ, ಹಳ್ಳಿಗಳಲ್ಲಿ ಮನೆಮನೆಗೆ ಕೊಳಾಯಿ ನೀರು ಹಾಗೂ ಅಂತರ್ಜಲ ಅಭಿವೃದ್ಧಿಯಂತಹ ದೂರದೃಷ್ಠಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಬೇಕಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.       ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೇಂದ್ರಸರ್ಕಾರದ ವಿವಿಧ ಜಲಾಧಾರಿತ ಯೋಜನೆಗಳ ಅನುಷ್ಠಾನದ ಕುರಿತಾದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ ಕೇಂದ್ರ ಸರ್ಕಾರ ಅಟಲ್ ಭೂಜಲ್ ಯೋಜನೆ ಜಾರಿಗೆ ತಂದಿದ್ದು ಇಡೀ ದೇಶದಲ್ಲಿ ನಮ್ಮ ಜಿಲ್ಲೆಯನ್ನುÉ ಪ್ರಥಮವಾಗಿ ಆಯ್ಕೆ ಮಾಡಿಕೊಂಡಿದೆ. ನಾವು ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಪ್ರತಿ ಹಂತದ ವರದಿಯನ್ನು ಕೇಂದ್ರಕ್ಕೆ ನೀಡಬೇಕಿದೆ, ಇದಕ್ಕಾಗಿ ಸಾವಿರಕೋಟಿ. ಅನುದಾನ ಇರಿಸಿದೆ.       ಜಿಲೆಯಲ್ಲಿ ಅಂತರ್ಜಲ ಉಳಿಸಿ ಹಾಗೂ ಬೆಳೆಸುವ ನಿಟ್ಟಿನಲ್ಲಿ ಇಂದು ಸಾಂಪ್ರದಾಯಿಕ ಬೆಳೆಗಳನ್ನೆ…

ಮುಂದೆ ಓದಿ...

ತುಮಕೂರು: ಇಂದಿನಿಂದ ಜಿಲ್ಲಾಸ್ಪತ್ರೆಯಲ್ಲಿ ನಾನ್ ಕೋವಿಡ್ ಸೇವೆ ಆರಂಭ!!

ತುಮಕೂರು:       ತುಮಕೂರು ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಲಾಗಿದ್ದು, ನಾನ್ ಕೋವಿಡ್ ಸೇವೆಯನ್ನು ಇಲ್ಲಿಯವರೆಗೂ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಚಿಕಿತ್ಸೆಗಾಗಿ ರೆಫರ್ ಮಾಡಲಾಗುತ್ತಿತ್ತು.       ಮೇ 20ರಿಂದ ಜಿಲ್ಲಾಸ್ಪತ್ರೆಯಲ್ಲಿಯೇ ನಾನ್ ಕೋವಿಡ್ ಸೇವೆಗಳನ್ನು ಮತ್ತು ಸಾರ್ವಜನಿಕ ರೋಗಿಗಳ ಹಿತದೃಷ್ಟಿಯಿಂದ ಪುನಾರಾರಂಭಿಸಲಾಗಿದೆ.       ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಟಿ.ಎ. ವೀರಭದ್ರಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದೆ ಓದಿ...

ತುಮಕೂರು : ಬಸ್ ಸಂಚಾರ ಆರಂಭ : ಮಾಸ್ಕ್ ಇಲ್ಲದೆ ಪ್ರವೇಶವಿಲ್ಲ

ತುಮಕೂರು:       ಹೊರ ರಾಜ್ಯಗಳಿಂದ 439 ಜಿಲ್ಲೆಗೆ ಆಗಮಿಸಿದ್ದು, ಅವರನ್ನು ವಸತಿ ಶಾಲೆ, ಹೋಟೆಲ್‍ಗಳಲ್ಲಿ ಕ್ವಾರೆಂಟೈನ್ ಮಾಡಲಾಗಿದೆ. ಈಗಾಗಲೇ ಗಂಟಲು ದ್ರಾವ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಕೆಲವರ ವರದಿ ನೆಗೆಟಿವ್ ಬಂದಿವೆ. ಇನ್ನು ಕೆಲವು ಮಾದರಿಗಳ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ಅವರು ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ಈವರೆಗೂ 4 ಕೋವಿಡ್-19 ಸಕ್ರಿಯ ಪ್ರಕರಣಗಳಿದ್ದು, ಶೀಘ್ರವಾಗಿ ಗುಣಮುಖರಾಗಲು ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಮ್ಮೆ ಅವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುವುದು. ನೆಗೆಟಿವ್ ಬಂದಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದರು.       ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಲಾಕ್‍ಡೌನ್ ಸಡಿಲಿಕೆಯಾಗಿದ್ದು, ಜಿಲ್ಲೆಯಲ್ಲಿ ಇಂದಿನಿಂದ ಬಸ್ ಸಂಚಾರ ಆರಂಭವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಖಾಸಗಿ ವಾಹನಗಳ ಮಾಡಲು ಅನುಮತಿ ನೀಡಲಾಗಿದೆ. ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಅಂತರ್ ಜಿಲ್ಲೆಗೆ ಪ್ರಯಾಣಿಸಲು ಯಾವುದೇ ಪಾಸ್…

ಮುಂದೆ ಓದಿ...