ತುಮಕೂರು: ಮಾವು ಬೆಳೆಗಾರರಿಗೆ “ಕಲ್ಪತರು” ಬ್ರಾಂಡೆಡ್ ಮಾರುಕಟ್ಟೆ

        ಜಿಲ್ಲೆಯ ಮಾವು ಬೆಳೆಗಾರರು ಕೋವಿಡ್-19 ಸಂಕಷ್ಟದ ಹಿನ್ನೆಲೆಯಲ್ಲಿ ತಾವು ಬೆಳೆದ ಮಾವಿನ ಹಣ್ಣುಗಳನ್ನು ಮಾರಾಟ ಮಾಡದೆ ಇರುವುದನ್ನು ಗಮನಿಸಿ “ಕಲ್ಪತರು” ಎಂಬ ಬ್ರಾಂಡ್ ಅಡಿಯಲ್ಲಿ ತೋಟಗಾರಿಕೆ ಇಲಾಖೆಯ ಮೂಲಕ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.       ಅವರು ಇಂದು ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ(ಜಿ.ಪಂ.), ಮಹಾನಗರ ಪಾಲಿಕೆ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಮಾವು ಮೇಳ ಉದ್ಘಾಟಿಸಿ ಮಾತನಾಡಿದರು.       ಜಿಲ್ಲೆಯ ರೈತರು ತಮ್ಮ ಹಣ್ಣುಗಳನ್ನು ನೇರವಾಗಿ ಗ್ರಾಹಕರ ಕೈಗೆಟಕುವ ದರದಲ್ಲಿ ಸ್ಥಳೀಯವಾಗಿ ಸಣ್ಣ-ಸಣ್ಣ ಮಾರುಕಟ್ಟೆಗಳ ಮೂಲಕ ಮಾರಾಟ ಮಾಡಿ ಲಾಭ ಗಳಿಸಬಹುದಾಗಿದೆ. ಹಾಗೂ…

ಮುಂದೆ ಓದಿ...

ಬುಗುಡನಹಳ್ಳಿ ಜಲ ಸಂಗ್ರಹಾಗಾರದಲ್ಲಿ ನೀರು ಖಾಲಿ

ತುಮಕೂರು:        ನಗರಕ್ಕೆ ಹೇಮಾವತಿ ನೀರು ಪೂರೈಕೆ ಮಾಡುವ ಬುಗುಡನಹಳ್ಳಿ ಜಲ ಸಂಗ್ರಹಾಗಾರದಲ್ಲಿ ಕೇವಲ ಒಂದೂವರೆ ತಿಂಗಳಿಗಾಗುವಷ್ಟು ನೀರು ಸಂಗ್ರಹಣೆ ಮಾತ್ರ ಇದ್ದು, ಈಗಾಗಲೇ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿ ಜನರು ಪರಿತಪಿಸುವಂತಾಗಿದೆ ಎಂದು ಸರ್ಕಾರ ಮತ್ತು ಮಹಾನಗರಪಾಲಿಕೆ ಆಡಳಿತಕ್ಕೆ ಸಾರ್ವಜನಿಕ ಸುರಕ್ಷಾ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ಮಹಾನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ. ಮಹೇಶ ಆಕ್ಷೇಪಿಸಿದ್ದಾರೆ.       ಹೇಮಾವತಿ ನೀರನ್ನು ಬುಗುಡನಹಳ್ಳಿ ಜಲ ಸಂಗ್ರಹಾಗಾರದಿಂದ ನಗರದ ಬಹುತೇಕ ಬಡಾವಣೆಗಳಿಗೆ ವಿತರಿಸುತ್ತಿದ್ದು ಸದ್ಯ ಬುಗುಡನಹಳ್ಳಿಯಲ್ಲಿ ನೀರಿನ ಸಂಗ್ರಹಣೆ ಕಡಿಮೆಯಾಗುತ್ತಿರುವುದರಿಂದ ಇದೀಗ ಹಲವು ಬಡಾವಣೆಗಳಲ್ಲಿ ಶೇಕಡ ಮೂವತ್ತೈದರಷ್ಟು ನೀರು ಪೂರೈಕೆ ಕಡಿಮೆಯಾಗಿ ನೀರಿಗೆ ತೊಂದರೆ ಅನುಭವಿಸುವಂತಾಗಿದೆ.       ಇಂದು ಬುಗುಡನಹಳ್ಳಿ ಜಲಸಂಗ್ರಹಾಗಾರದ ಪ್ರದೇಶಕ್ಕೆ ಭೇಟಿ ನೀಡಿದ ಸಾರ್ವಜನಿಕ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಪಿ. ಮಹೇಶ, ಪದಾಧಿಕಾರಿಗಳಾದ ಕೆ. ಹರೀಶ್, ಎಂ.ಎಸ್. ಚಂದ್ರಪ್ಪ, ಮದನ್‍ಸಿಂಗ್,…

ಮುಂದೆ ಓದಿ...

ಮಧುಗಿರಿ: ಹೇಮಾವತಿ ನೀರು ಚರಂಡಿ ಪಾಲು!!

ಮಧುಗಿರಿ:       ಪಟ್ಟಣಕ್ಕೆ ಕುಡಿಯುವ ನೀರೋದಗಿಸುವ ಸಿದ್ದಾಪುರ ಕೆರೆಯಲ್ಲಿ ಸಂಗ್ರಹವಾಗಿರುವ ಹೇಮಾವತಿ ನೀರು ಜಲ ಸಂಗ್ರಹ ಕೇಂದ್ರದಿಂದ ಬೆಸ್ಕಾಂ ಮುಂಭಾಗವಿರುವ ಓವರ್ ಟ್ಯಾಂಕ್ಗೆ ಸರಬರಾಜಾಗುವ ಹೇಮಾವತಿ ನೀರು ಚರಂಡಿ ಪಾಲಾಗುತ್ತಿದ್ದು ಈ ಬಗ್ಗೆ ಪುರಸಭೆ ನಿರ್ಲಕ್ಷ್ಯ ಎತ್ತಿ ತೋರಿಸುತ್ತಿದೆ.       ಲಕ್ಷಾಂತರ ರೂ ಬೆಸ್ಕಾಂ ಕಚೇರಿಗೆ ಹಣ ಕಟ್ಟಿ ಈ ನೀರನ್ನು ಬಳ್ಳಾಪುರ ಪಂಪ್ ಹೌಸ್ ನಿಂದ ಮಧುಗಿರಿ ಸಿದ್ದಾಪುರ ಕೆರೆಗೆ ಪೈಪ್ಲೈನ್ ಮೂಲಕ ನೀರು ಹರಿಸಲಾಗುತ್ತಿದೆ.       ಮಧುಗಿರಿಯ ಸಿದ್ದಾಪುರ ಗೇಟ್ ಬಳಿ ಇರುವ ಕುರುಬರ ಸಂಘದ ಹಾಸ್ಟೆಲ್ ಸಮೀಪ ಪೈಪ್ ಒಡೆದು ಹೋಗಿ ನೀರು ಚರಂಡಿ ಪಾಲಾಗುತ್ತಿದೆ.        ಈ ಬಗ್ಗೆ ದುರಸ್ತಿ ಮಾಡುವಂತೆ ಸಿದ್ದಾಪುರ ಗೇಟ್ ಹಾಗೂ ಮಧುಗಿರಿ ನಾಗರಿಕರು ಪುರಸಭೆಗೆ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲವೆಂದು ನಾಗರಿಕರ…

ಮುಂದೆ ಓದಿ...

ಪಾಕ್ಷಿಕ ಪತ್ರಿಕೆಯ ಸಂಪಾದಕ, ವರದಿಗಾರನ ವಿರುದ್ಧ ಪ್ರತಿಭಟನೆ

ಕೊರಟಗೆರೆ:       ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮದ ಜೊತೆ ಕೊರಟಗೆರೆ ಕ್ಷೇತ್ರದ ರೈತರ ಅನುಕೂಲಕ್ಕಾಗಿ ಅಂತರ್ಜಲ ಅಭಿವೃದ್ಧಿಗೆ ಹತ್ತಾರು ಕೆರೆಗಳ ಪುನಶ್ಚೇತನ ಮತ್ತು ನಿರಾಶ್ರಿತ ಬಡಜನತೆಗೆ ಆಶ್ರಯ ನೀಡುತ್ತಿರುವ ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿಯ ವಿರುದ್ಧ ಸುಳ್ಳುಸುದ್ದಿ ಬಿತ್ತರ ಮಾಡಲಾಗಿದೆ ಎಂದು ಆರೋ ಭಕ್ತಾಧಿವೃಂಧ ಪ್ರತಿಭಟನೆ ನಡೆಸಿದರು.       ಕೊರಟಗೆರೆ ಅಖಿಲ ಭಾರತ ವೀರಶೈವ ಮಹಾಸಭಾ ಘಟಕ ಮತ್ತು ನೂರಾರು ಜನ ಭಕ್ತವೃಂಧದಿಂದ ಕೊರಟಗೆರೆ ತಹಶೀಲ್ದಾರ್ ಗೋವಿಂದರಾಜು ಮತ್ತು ಮಧುಗಿರಿ ಡಿವೈಎಸ್ಪಿ ಪ್ರವೀಣ್‍ಗೆ ಮನವಿ ಸಲ್ಲಿಸಿದ ನಂತರ ತುಮಕೂರು ಸ್ಥಳೀಯ ಮಾಸಿಕ ಪತ್ರಿಕೆಯ ಸಂಪಾದಕ ಮತ್ತು ಕೊರಟಗೆರೆ ವರದಿಗಾರನ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದರು.       ಅಖಿಲ ಭಾರತ ವೀರಶೈವ ಮಹಾಸಭಾ ಘಟಕದ ಕೊರಟಗೆರೆ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ ಯುವ ತಪಸ್ವಿ ಸಿದ್ದರಬೆಟ್ಟ…

ಮುಂದೆ ಓದಿ...

ಜಮೀರ್, ಇಬ್ರಾಹಿಂ, ಹ್ಯಾರೀಸ್ ನಾಗರೀಕ ರೂಪದ ಟೆರರಿಸ್ಟ್‍ಗಳು – ಸೊಗಡು ಶಿವಣ್ಣ

ತುಮಕೂರು:       ಕಾಂಗ್ರೆಸ್ ನಾಯಕರಾದ ಜಮೀರ್, ಇಬ್ರಾಹಿಂ ಮತ್ತು ಹ್ಯಾರೀಸ್‍ರಂತವರು ದೇಶ ವಿಭಜನೆಗೆ ಕೆಲಸ ಮಾಡುತ್ತಿದ್ದಾರೆ ಇವರನು ನಾಗರೀಕರ ರೂಪದಲ್ಲಿರುವ ಇವರನ್ನು ಕೂಡಲೇ ಬಂಧಿಸಬೇಕು ಎಂದು ಆರೋಪಿಸಿದರು.       ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕೆಂದು ಪತ್ರ ಬರೆದಿರುವ ಕಾಂಗ್ರೆಸ್ ಮುಖಂಡರಾದ ಸಿ.ಎಂ.ಇಬ್ರಾಹಿಂ, ಜಮೀರ್ ಅಹಮದ್ ಮತ್ತು ಹ್ಯಾರೀಸ್ ಅವರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಬಂಧಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.       ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೊಗಡು ಶಿವಣ್ಣರವರು “ಜಮೀರ್, ಇಬ್ರಾಹಿಂ ಮತ್ತು ಹ್ಯಾರೀಸ್ ದೇಶ ವಿಭಜನೆಯ ಕೆಲಸಕ್ಕೆ ಮುಂದಾಗಿದ್ದಾರೆ. ಇಂತವರು ದೇಶಕ್ಕೆ ಅಪಾಯಕಾರಿಗಳಾಗಿದ್ದಾರೆ. ಇವರು ನಾಗರೀಕತೆಯ ರೂಪದಲ್ಲಿರುವ ಟೆರರಿಸ್ಟ್‍ಗಳು, ದೇಶದ್ರೋಹಿಗಳು. 70 ವರ್ಷಗಳಿಂದ ನಮ್ಮ ಸರ್ಕಾರಗಳು ನೀಡಿದ ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಂಡು ದೇಶಕ್ಕೆ ಕಂಟಕವಾಗಿದ್ದಾರೆ’’ ಎಂದರು.    …

ಮುಂದೆ ಓದಿ...

ಕೊರಟಗೆರೆ : ಅನೈತಿಕ ಸಂಬಂಧ ಯುವಕನ ಬರ್ಬರ ಕೊಲೆ

ಕೊರಟಗೆರೆ:       ಅನೈತಿಕ ಸಂಬಂಧದ ದ್ವೇಷದ ಶಂಕೆಯಿಂದ ಕಾರು ಚಾಲಕನ ಹೊಟ್ಟೆ ಮತ್ತು ಹೃದಯ ಭಾಗಕ್ಕೆ 9 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.       ತಾಲೂಕಿನ ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ಮಲ್ಲೇಶಪುರ ಗ್ರಾಮದ ಲೇ.ಹನುಮಂತರಾಯಪ್ಪನ ಮಗ ಗಿರೀಶ್ ಎಂಬಾತನೇ ಕೊಲೆಯಾದ ದುರ್ದೈವಿ. ಸೋಮವಾರ ಮಧ್ಯರಾತ್ರಿ ಮಲ್ಲೇಶಪುರದ ನಟರಾಜು ಮತ್ತು ಗಿರೀಶ್ ನಡುವೆ ಮುಖಾಮುಖಿ ಜಗಳ ನಡೆದಿದೆ.       ಕೊಲೆಯಾದ ಗಿರೀಶ್ ಮೂಲತಃ ಮಲ್ಲೇಶಪುರ ವಾಸಿ. ಪ್ರಸ್ತುತ ಬೆಂಗಳೂರು ನಗರದಲ್ಲಿ ಕಾರು ಚಾಲಕ. ಕೊರೊನಾ ಲಾಕ್‍ಡೌನ್ ಹಿನ್ನಲೆ ಸ್ವಗ್ರಾಮಕ್ಕೆ ಕಳೆದ 20ದಿನದ ಹಿಂದೆ ಆಗಮಿಸಿದ್ದಾನೆ. ಕೊಲೆ ಆರೋಪಿ ಪತ್ತೆಗಾಗಿ ತುಮಕೂರು ಶ್ವಾನದಳ ತಂಡ ಆಗಮಿಸಿ ಪರಿಶೀಲನೆ ತಪಾಸಣೆ ನಡೆಸಿದ್ದಾರೆ.       ಕೊಲೆಯಾದ ಸ್ಥಳಕ್ಕೆ ತುಮ ಕೂರು…

ಮುಂದೆ ಓದಿ...

ತುಮಕೂರು : ಕಲ್ಪತರು ನಾಡಲ್ಲಿ ಕೊರೋನಾ ರಣಕೇಕೆ

ತುಮಕೂರು:       ತುಮಕೂರು ಜಿಲ್ಲೆ ಕಲ್ಪತರು ನಾಡಲ್ಲಿ ಕೊರೋನಾ ರಣಕೇಕೆ ಆಕುತ್ತಿದ್ದು, ಬುಧವಾರ 4 ಕೊರೋನಾ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯ ಜನರನ್ನು ಭಯಭೀತರನ್ನಾಗಿ ಮಾಡಿದೆ.       ಇದೀಗ ಬಂದಿರುವ 4 ಸೋಂಕಿತರ ಪೈಕಿ ಇಬ್ಬರು ಮಹಿಳೆಯರು ಇಬ್ಬರು ಮಕ್ಕಳು ಎಂದು ತಿಳಿದುಬಂದಿದ್ದು, ತುರುವೇಕೆರೆ ತಾಲೂಕಿನ ಮಲ್ಲಘಟ್ಟ ಮೂಲದವರಲ್ಲಿ 3 ಸೋಂಕಿತರು. ಕೊರಟಗೆರೆ ಮೂಲದವರಲ್ಲಿ ಒಬ್ಬರು ಸೋಂಕಿತರು ಎಂದು ತಿಳಿದುಬಂದಿದ್ದು, ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಮುಂಬೈ ಸೋಂಕು ತಗುಲಿರುವ ವಿಷಯ ತಿಳಿದುಬಂದಿದೆ.       ಬುಧವಾರ ವರದಿ ಬಂದಿರುವ ಎಲ್ಲರೂ ಬಹಳಷ್ಟು ವರ್ಷಗಳಿಂದ ಮುಂಬೈನಲ್ಲಿ ವಾಸವಾಗಿದ್ದವರು. ಮುಂಬೈನಿಂದ ಕಾರಿನಲ್ಲಿ ಬಂದ 6 ಜನರಲ್ಲಿ ನಾಲ್ವರಿಗೆ ಕೋವಿಡ್-19 ಪಾಸಿಟೀವ್ ಪತ್ತೆಯಾಗಿದೆ. ಕಾರಿನಲ್ಲಿ ಆಗಮಿಸಿದ 6 ಜನರನ್ನ ಕ್ವಾರೆಂಟೈನ್ ಮಾಡಿ ತಪಾಸಣೆಗೆ ಒಳಪಡಿಸಲಾಗಿತ್ತು. ತಪಾಸಣೆ ವೇಳೆ 4 ಜನರಲ್ಲಿ ಸೋಂಕು ದೃಢಪಟ್ಟಿದೆ. ಉಳಿದ ಇಬ್ಬರು…

ಮುಂದೆ ಓದಿ...