ಸಬ್‍ರಿಜಿಸ್ಟ್ರಾರ್ ಕಛೇರಿಯ ಲೋಪ ಸರಿಪಡಿಸುವಂತೆ ಸಿಎಂಗೆ ಸೊಗಡು ಶಿವಣ್ಣ ಪತ್ರ

ತುಮಕೂರು:       ತುಮಕೂರು ತಾಲ್ಲೂಕಿನ (ಸಬ್ ರಿಜಿಸ್ಟ್ರಾರ್) ಉಪನೋಂದಣಾಧಿಕಾರಿಗಳ ಕಛೇರಿಯ ನಿರ್ವಹಣೆಯಲ್ಲಿರುವ ಲೋಪದಿಂದ ಸರ್ಕಾರಕ್ಕೆ ನಷ್ಟವಾಗುತ್ತಿದ್ದು, ಸರ್ಕಾರದ ಗಮನಹರಿಸಬೇಕೆಂದು ಮನವಿ ಮಾಡಿದ್ದಾರೆ.       ತುಮಕೂರು ತಾಲ್ಲೂಕಿನಲ್ಲಿನ (ಸಬ್‍ರಿಜಿಸ್ಟ್ರಾರ್) ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ 3 ಜನ ಸಬ್‍ರಿಜಿಸ್ಟ್ರಾರ್‍ಗಳು ಇರುವುದು ಸರಿಯಷ್ಟೆ. ಆದರೆ ಈ 3 ಸಬ್‍ರಿಜಿಸ್ಟ್ರಾರ್‍ಗಳಲ್ಲಿ ಒಬ್ಬರು ಶ್ರೀರಾಘವೇಂದ್ರ ಎಂಬುವುವರು ಮಾರ್ಚ್ ತಿಂಗಳಿನಿಂದ ಕರ್ತವ್ಯಕ್ಕೆ ಹಾಜರಾಗಿಲ್ಲ. ಪ್ರತಿಯೊಬ್ಬ ಅಧಿಕಾರಿಗಳಿಗೆ ಡಿಜಿಟಲ್ ಸಿಗ್ನೇಚರ್ ಸಾಧನವನ್ನು ನೀಡಿದ್ದು. ಮೇ20ರವರಿಗೂ ಇದನ್ನು ನವೀಕರಿಸಿಕೊಂಡಲ್ಲ ಎಂಬ ವಿಷಯವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.       ತುಮಕೂರು ತಾಲ್ಲೂಕಿನಲ್ಲಿ ಸುಮಾರು 3000-4000ರಷ್ಟು ಜನ ಋಣಭಾರ ದೃಡೀಕರಣ ಪತ್ರಕ್ಕೆ ಮನವಿಸಲ್ಲಿಸಿದ್ದು. ಸಾಫ್ಟ್‍ವೇರ್ ಸರಿಯಿಲ್ಲ, ಡಿಜಿಟಲ್ ಕೀ ಇಲ್ಲ ಎಂದು ಹೇಳುತ್ತಾ ಸುಮಾರು 4 ತಿಂಗಳ ಹಿಂದಿನಿಂದಲೂ ಇ.ಸಿ. ಕೊಡುತ್ತಿಲ್ಲ. ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಕಳೆದ ಒಂದು ವಾರದಿಂದ ಪ್ರಾರಂಭ ಮಾಡಿರುತ್ತಾರೆ. ಡಿಜಿಟಲ್…

ಮುಂದೆ ಓದಿ...

ಬೇಡಿಕೆ ಇಲ್ಲದೇ ತಿಪ್ಪೆ ಪಾಲಾದ ಜರ್ಬೇರಾ-ಕಾರ್ನೇಷನ್ ಹೂ!!

ಕೊರಟಗೆರೆ:       ಕೃಷಿ ಸಚಿವರ ಸಹಾಯವಾಣಿಯು ಫಲ ನೀಡಲಿಲ್ಲ. ತೋಟಗಾರಿಕೆ ಇಲಾಖೆಯಿಂದ ಸ್ಪಂದನೆಯೇ ಸಿಕ್ಕಿಲ್ಲ. ಕಂದಾಯ ಇಲಾಖೆಯು ಅಂತರ್‍ಜಿಲ್ಲಾ ಪಾಸ್ ನೀಡಲಿಲ್ಲ. ತುಮಕೂರು ಜಿಲ್ಲಾಡಳಿತ ರೈತನ ಮನವಿಗೆ ಕ್ಯಾರೇ ಎನ್ನದ ಪರಿಣಾಮ ಪಾಲಿಹೌಸ್‍ನಲ್ಲಿ ಬೆಳೆದಿರುವ ಕೋಟ್ಯಾಂತರ ರೂ ಮೌಲ್ಯದ ಹತ್ತಾರು ಬಗೆಯ ಜರ್ಬೇರಾ ಮತ್ತು ಕಾರ್ನೇಷನ್ ಹೂಗಳಿಗೆ ಮಾರುಕಟ್ಟೆ, ವಹಿವಾಟು ಹಾಗೂ ಬೇಡಿಕೆ ಇಲ್ಲದೇ ತಿಪ್ಪೆಗೆ ಕಸವಾಗಿರುವ ಘಟನೆ ನಡೆದಿದೆ.       ಕಲ್ಪತರುನಾಡು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದ ಹೂವು ಬೆಳೆಗಾರ ಗಿರೀಶ್ ಎಂಬಾತ ತನ್ನ 10ಎಕರೇ ಜಮೀನಿನಲ್ಲಿ 5ಕೋಟಿಗೂ ಅಧಿಕ ಬಂಡವಾಳ ಹೂಡಿಕೆ ಮಾಡಿ ಪಾಲಿಹೌಸ್ ನಿರ್ಮಾಣ ಮಾಡಿದ್ದಾರೆ. ಶುಭ ಸಮಾರಂಭದ ವೇದಿಕೆ ಮತ್ತು ದೇವಾಲಯದ ಅಲಂಕಾರಕ್ಕೆ ಬಳಕೆಯಾಗುವ ಡಿಸೈನ್ ಹೂವು ಕೊರೊನಾ ಲಾಕ್‍ಡೌನ್ ಸಂಕಷ್ಟದಿಂದ ರೈತನಿಗೆ 80ಲಕ್ಷಕ್ಕೂ ಅಧಿಕ ರೂ ನಷ್ಟವಾಗಿದೆ.      …

ಮುಂದೆ ಓದಿ...

ಚಿಕ್ಕನಾಯಕನಹಳ್ಳಿ: ದನ ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ

ಚಿಕ್ಕನಾಯಕನಹಳ್ಳಿ:       ಚಿರತೆ ದಾಳಿಗೆ ವ್ಯಕ್ತಿಯೊಬ್ಬನಿಗೆ ತೀವ್ರಗಾಯಗಳಾದ ಘಟನೆ ತಾಲ್ಲೂಕಿನ ಮದನಮಡು ಗ್ರಾಮ ಬಳಿ ವರದಿಯಾಗಿದೆ.       ತಾಲ್ಲೂಕಿನ ಕಂದಿಕೆರೆ ಹೋಬಳಿ ಮದನಮಡು ಗ್ರಾಮದ ಸೀಡ್ಯಕೆರೆ ಬಳಿ ಬುಧವಾರ ಮಧ್ಯಾಹ್ನ 12ಗಂಟೆ ಸಮಯದಲ್ಲಿ ತನ್ನ ಮೇಕೆ, ಕುರಿ ಹಾಗೂ ದನಗಳನ್ನು ಮೇಯಿಸುತ್ತಿದ್ದ ಮೂಡ್ಲಯ್ಯನ ಮೇಲೆ ಚಿರತೆದಾಳಿ ಮಾಡಿದಾಗ ಆತನು ತನ್ನಲ್ಲಿದ್ದ ಮಚ್ಚಿನಿಂದ ಎದುರಿಸಿದಾಗ ಬೆದರಿ ಓಡಿಹೋಗಿದ್ದ ಚಿರತೆ ತಕ್ಷಣವೇ ಹೊಂಚುಹಾಕಿ ಮತ್ತೆ ಆತನ ಮೇಲೆರಗಿದ ಪರಿಣಾಮ ಆತನ ತಲೆಯ ಹಿಂಭಾಗ ಮತ್ತು ತಲೆಯ ಮೇಲೆ ಹಾಗೂ ಕಿವಿಗಳಿಗೆ ತೀವ್ರ ಗಾಯವಾಗಿದೆ.       ಈತನ ಕಿರುಚಾಟಕ್ಕೆ ಅಕ್ಕಪಕ್ಕದ ತೋಟದವರು ಬರುವುದನ್ನು ಕಂಡು ಚಿರತೆ ಓಡಿಹೋಗಿದೆ. ತೀವ್ರವಾಗಿ ಗಾಯಗೊಂಡ ಮದನಮಡು ವಾಸಿ ಮೂಡ್ಲಯ್ಯನಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.       ಈ ಭಾಗದಲ್ಲಿ ಚಿರತೆಹಾವಳಿ ಆಗಾಗ್ಗೆ ಕಂಡುಬಂದಿದ್ದು…

ಮುಂದೆ ಓದಿ...

ತುಮಕೂರು: ಕೊರೊನಾ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆ!!

ತುಮಕೂರು:       ಮುಂಬೈನಿಂದ ವಾಪಾಸ್ಸಾಗಿರುವ 58 ವರ್ಷದ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.       ನಗರದ ಖಾದರ್ ನಗರದ ನಿವಾಸಿಯಾದ 58 ವರ್ಷದ ವ್ಯಕ್ತಿ ಲಾರಿ ಚಾಲಕನಾಗಿದ್ದು, ಮುಂಬೈನಿಂದ ವಾಪಾಸ್ಸಾಗಿ ಮನೆಯಲ್ಲಿದ್ದ ಇವರನ್ನ ಪತ್ತೆಹಚ್ಚಿ ಕ್ವಾರೆಂಟೈನ್ ಮಾಡಲಾಗಿತ್ತು. ಗುರುವಾರ ಆತನ ಪರೀಕ್ಷಾ ವರದಿ ಬಂದಿದ್ದು ಪಾಸಿಟೀವ್ ಇರುವುದು ದೃಡಪಟ್ಟಿದೆ. ಸೋಂಕಿತ ವ್ಯಕ್ತಿ ಪಿ 1561 ಎಂದು ಗುರುತಿಸಲಾಗಿದ್ದು, ವ್ಯಕ್ತಿ ವಾಸವಿರುವ ಖಾದರ್ ನಗರವನ್ನ ಕಂಟೆನ್‍ಮೆಂಟ್ ಝೋನ್ ಗಿ ಪರಿವರ್ತಿಸಲಾಗಿದೆ. ಸೋಂಕಿತನ ಜೊತೆ ಹೆಂಡತಿ ಮಕ್ಕಳು ಮನೆಯಲ್ಲಿಯೇ ಇದ್ದು ಆವರನ್ನು ಕೂಡ ಕ್ವಾರೆಂಟೈನ್‍ನಲ್ಲಿ ಇಡಲಾಗಿದೆ.       ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 16 ಸೋಂಕಿತರು ಪತ್ತೆಯಾಗಿದ್ದು 5 ಜನರು ಗುಣ ಮುಖರಾಗಿದ್ದಾರೆ ಇಬ್ಬರು ಮೃತಪಟ್ಟಿದ್ದಾರೆ. 9 ಜನರು ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ…

ಮುಂದೆ ಓದಿ...