ಚಿಕ್ಕನಾಯಕನಹಳ್ಳಿ : ಗಾಳಿ ಮಳೆಗೆ ಹಾರಿದ ಶೀಟುಗಳು : ಅಪಾರ ನಷ್ಟ!!

ಚಿಕ್ಕನಾಯಕನಹಳ್ಳಿ:       ಕಳೆದೆರಡು ದಿನಗಳಿಂದ ತಾಲ್ಲೂಕಿನ ಹಲವೆಡೆ ಸುರಿದ ಮಳೆಗಾಳಿಗೆ ಮರಗಿಡ ಹಾಗೂ ಮನೆಗಳ ಹೆಂಚು ಹಾಗೂ ಶೀಟುಗಳು ಹಾರಿಹೋಗಿ ಅಪಾರಪ್ರಮಾಣದ ನಷ್ಟವುಂಟಾಗಿದೆ       ಕಳೆದೆರಡು ದಿನಗಳಿಂದ ಸಂಜೆ ಮಳೆ ಹಾಗೂ ಗಾಳಿಯರಭಸ ಜೋರಾಗಿದ್ದು ಗಾಳಯ ಹೊಡೆತಕ್ಕೆ ಹಲವು ಮರಗಳು ಉರುಳಿಬಿದ್ದಿವೆ. ತಾಲ್ಲೂಕಿನ ಶೆಟ್ಟಿಕೆರೆ ಹಾಗೂ ಹಂದನಕೆರೆ ಹೋಬಳಿಗಳಲ್ಲಿ ಸಾಕಷ್ಟು ಹಾನಿ ಮಾಡಿದ್ದು ಈ ಭಾಗದ ಹಲವು ತೋಟದಲ್ಲಿ ತೆಂಗು, ಅಡಿಕೆ, ಮಾವು, ಹಲಸುಮರಗಳು ನೆಲಕ್ಕೊರಗಿವೆ. ರಸ್ತೆಬದಿಯ ಮರಗಳುಸಹ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಹಲವೆಡೆ ವಾಹನ ಸಂಚಾರಕ್ಕೆ ತೊಡಕಾಯಿತು. ತಾಲ್ಲೂಕಿನ ಮೇಲನಹಳ್ಳಿ, ಶ್ಯಾವಿಗೆಹಳ್ಳಿ, ಹಾಲುದೇವರಹಟ್ಟಿ, ಸಾವಸೆಟ್ಟಿಹಳ್ಳಿಗಳಲ್ಲಿ ಹಲವು ಮನೆಗಳ ಹೆಂಚು ಮತ್ತು ಸಿಮೆಂಟ್ ಶೀಷ್‍ಗಳು ಮಳೆ ಗಾಳಿಯ ಹೊಡೆತಕ್ಕೆ ಹಾರಿಹೋಗಿದ್ದು ಅಪಾರ ನಷ್ಟ ಸಂಭವಿಸಿದೆ. ಈಗಾಗಲೇ ಕಂದಾಯ ಇಲಾಖೆಯಿಂದ ಮಳೆ ಹಾಗೂ ಗಾಳಿಯಿಂದ ತಾಲ್ಲೂಕಿನಲ್ಲಿ ಆಗಿರುವ ಹಾನಿಯ ಬಗ್ಗೆ ಮಹಜರ್…

ಮುಂದೆ ಓದಿ...

ಅಂತರ್ಜಲ ಹೆಚ್ಚಿಸುವ ಮೂಲಕ ಪ್ರಕೃತಿ ಉಳಿಸಿ : ಸಚಿವ ಕೆ.ಎಸ್.ಈಶ್ವರಪ್ಪ

ತುಮಕೂರು:       ಭೂಮಿಯ ಮೇಲೆ ಮಾನವನ ಅತಿಕ್ರಮಣದಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿದ್ದು, ಮಳೆಯ ನೀರು ಹರಿದು ಹೋಗುವುದನ್ನು ನಿಲ್ಲಿಸಿ ಭೂಮಿಯಲ್ಲಿ ಹಿಂಗಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಕೆಲಸ ಆಗಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.        ಅವರು ಜಿಲ್ಲಾ ಪಂಚಾಯತ್ ಆವರಣದ ಕುಂಚಿಟಿಗರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಅಂತರ್ಜಲ ಚೇತನ ಕಾರ್ಯಕ್ರಮವನ್ನು ಉದ್ಥಾಟಿಸಿ ಅವರು ಮಾತನಾಡಿದರು.       ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸುವ ಮೂಲಕ 30 ವರ್ಷಗಳ ಹಿಂದಿನ ಪರಿಸರ ಮತ್ತು ಪ್ರಕೃತಿಯನ್ನು ಉಳಿಸಿ ಮತ್ತು ಬೆಳೆಸುವ ಕಾರ್ಯವನ್ನು ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸಹಯೋಗದಲ್ಲಿ ಮನ್ರೆಗಾ ಯೋಜನೆಯಡಿಯಲ್ಲಿ ಕಾರ್ಯ ಪ್ರವೃತ್ತರಾಗಿ ಅಂತರ್ಜಲವನ್ನು ಹೆಚ್ಚಿಸುವ ಕಾರ್ಯ ಮಾಡಬೇಕಾಗಿದೆ. ಅದಕ್ಕಾಗಿ ಪ್ರಧಾನ ಮಂತ್ರಿ ನರೇಗಾ ಯೋಜನೆಯಡಿ 1861 ಕೋಟಿ…

ಮುಂದೆ ಓದಿ...

ತುಮಕೂರು : ಇಂದು 2 ಹೊಸ ಕರೋನಾ ವೈರಸ್ ಪಾಸಿಟಿವ್ ಪ್ರಕರಣ

ತುಮಕೂರು:       ಜಿಲ್ಲೆಯಲ್ಲಿ ಇಂದು 2 ಹೊಸ ಕರೋನಾ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ನಾಗೇಂದ್ರಪ್ಪ ನವರು ತಿಳಿಸಿದ್ದಾರೆ.           30 ವರ್ಷದ ಓರ್ವ ವ್ಯಕ್ತಿ P-2771 ದೆಹಲಿಯಿಂದ ಪಾವಗಡಕ್ಕೆ ಬಂದಿದ್ದು ಅಲ್ಲಿಯೇ ಕ್ವಾರಂಟೈನ್ ಮಾಡಲಾಗಿತ್ತು. 22 ವರ್ಷದ ವ್ಯಕ್ತಿ P-2771 ಕುಣಿಗಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇಬ್ಬರ ಗಂಟಲು ದ್ರವದ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಇಂದು ವರದಿ ಬಂದಿದ್ದು, ಇಬ್ಬರಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.       ಪ್ರಸ್ತುತ ಸೋಂಕಿತರನ್ನು ತುಮಕೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ನಾಗೇಂದ್ರಪ್ಪ ನವರು ತಿಳಿಸಿದ್ದಾರೆ.    

ಮುಂದೆ ಓದಿ...