ಪಾವಗಡ : ಆಲಿಕಲ್ಲು ಮಳೆಗೆ ಉರಳಿದ ಮರಗಳು ; ಲಕ್ಷಾಂತರ ನಷ್ಟ!!

ಪಾವಗಡ :        ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಆಲಿಕಲ್ಲು ಸಹಿತ   ಮಳೆಗೆ ಬಹಳಷ್ಟು ಹಾನಿಉಂಟಾಗಿದೆ  ಪಟ್ಟಣದ ಕೇಲವಂದು ಕಡೆ ಮರಗಳು ಧರೆಗೆ ಉರುಳಿದ್ದು ಮರದ ಕೊಂಬೆ ಕಾರಿನ ಮೇಲೆ ಬಿದಗದು ಜಕಮ್ ಗೊಂಡಿದೆ.        ಇನ್ನೊಂದು ಕಡೆ  ರಸ್ತೆಗಳಲ್ಲಿ ನೀರು ನಿಂತು ಅಂಗಡಿ ಮುಂಗಟ್ಟುಗಳಲ್ಲಿ ನೀರು ತುಂಬಿರುವ ಘಟನೆ ಹಾಗೂ ಪಟ್ಟಣದ ಬನಶಂಕರಿ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ವಿದ್ಯುತ್ ತಂತಿಗಳು ಹಾನಿಕರವಾಗಿದೆ. ಚಳಕೆರೆ ಮುಖ್ಯರಸ್ತೆ ಇದ್ದಂತಹ ರೈತ ಹರೀಶ್ ತೋಟದಲ್ಲಿ ಬೆಳೆದಂತಹ ಪಪ್ಪಾಯ ಬೆಳೆ ಮಳೆಗೆ ಕೊಚ್ಚಿಹೋಗಿದೆ ಇದರಿಂದ ಸುಮಾರು ಏಳು ಲಕ್ಷ ನಷ್ಟ ಉಂಟಾಗಿದ್ದು ದಿಕ್ಕುತೋಚದಂತಾಗಿದೆ ಎನ್ನುತ್ತಾರೆ ಹರೀಶ್ .        ಬಹಳ ದಿನಗಳ ನಂತರ ಸುರಿದ ಮಳೆಗೆ ಬೃಹತ್ ಚರಂಡಿಗಳು ತುಂಬಿ ಹರಿಯುತ್ತಿವೆ ಕೇಲವಂದ ಮನೆಗಳಿಗೆ ಮಳೆನೀರು ಸಂಗ್ರಹ…

ಮುಂದೆ ಓದಿ...

ಪಡಿತರ ಚೀಟಿ ಇಲ್ಲದವರಿಗೆ ಜೂನ್ ತಿಂಗಳಲ್ಲಿ ಪಡಿತರ ವಿತರಣೆ

ತುಮಕೂರು :       ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಅಕ್ಕಿ ಮತ್ತು ಕಡಲೆಕಾಳನ್ನು ಜಿಲ್ಲೆಗೆ ಜೂನ್ ಮಾಹೆಗೆ ಆಯಾ ತಾಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಜಂಟಿ ನಿರ್ದೇಶಕ ಎಂ.ಶ್ರೀನಿವಾಸಯ್ಯ ಅವರ ತಿಳಿಸಿದ್ದಾರೆ.        ಆಯಾ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿರುವ ವಲಸಿಗರು ಮತ್ತು ಯಾವುದೇ ಪಡಿತರ ಚೀಟಿ ಹೊಂದಿಲ್ಲದೇ ಇರುವ ಕುಟುಂಬ ಸದಸ್ಯರು ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಮತ್ತು ಕಡಲೆಕಾಳನ್ನು ಪಡೆದುಕೊಳ್ಳಬಹುದು. ಮೇ ತಿಂಗಳಿನಲ್ಲಿ ಪಡಿತರ ಪಡೆದಿರುವವರು ಜೂನ್ ತಿಂಗಳಲ್ಲಿ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಮತ್ತು ಕುಟುಂಬಕ್ಕೆ 2 ಕೆ.ಜಿ ಕಡಲೆಕಾಳು ಮತ್ತು ಮೇ ತಿಂಗಳಿನಲ್ಲಿ ಪಡಿತರ ಪಡೆಯದೇ ಇರುವವರು ಮೇ ಮತ್ತು ಜೂನ್ 2 ತಿಂಗಳು ಸೇರಿ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ…

ಮುಂದೆ ಓದಿ...

 ಗುಬ್ಬಿ : ಒಂದೇ ತಾಸಿನಲ್ಲೇ ನಾಪತ್ತೆಯಾಗಿದ್ದ ಶವ ಪತ್ತೆ!!

 ಗುಬ್ಬಿ :       ನಾಪತ್ತೆಯಾಗಿದ್ದ ವ್ಯಕ್ತಿಯ ಹುಡುಕಾಟದಲ್ಲಿ ವಿಳಂಬ ಅನುಸರಿಸಿದ್ದ ಗುಬ್ಬಿ ಪೊಲೀಸ್ ಠಾಣೆಯ ಮುಂದೆ ಕೆಂಚನಹಳ್ಳಿ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿ ಎಚ್ಚೆತ್ತ ಪೊಲೀಸರು ತನಿಖೆ ಚುರುಕುಗೊಳಿಸಿ ಒಂದೇ ತಾಸಿನಲ್ಲೇ ನಾಪತ್ತೆ ವ್ಯಕ್ತಿ ಶವವಾಗಿರುವ ಮಾಹಿತಿ ಕಲೆ ಹಾಕಿ ಶವ ಕೂಡಾ ಪತ್ತೆ ಮಾಡಿದ ಘಟನೆ ಸೋಮವಾರ ನಡೆದಿದೆ.       ಕಳೆದ ಬುಧವಾರ ಬೆಳಿಗ್ಗೆ ಮನೆಯಿಂದ ಟೈರ್ ಖರೀದಿ ಮಾಡಿ ಬರುವುದಾಗಿ ಹೊರಟ ನಿಟ್ಟೂರು ಹೋಬಳಿ ಕೆಂಚನಹಳ್ಳಿಯ ಜೆಸಿಬಿ ಯಂತ್ರ ಆಪರೇಟರ್ ಲಕ್ಷೀರಾಜು(37) ನಂತರದಲ್ಲಿ ನಾಪತ್ತೆಯಾಗಿದ್ದರು.      ಈ ಸಂಬಂಧ ದೂರು ನೀಡಿದ ಲಕ್ಷ್ಮೀರಾಜು ಸಂಬಂಧಿಕರು ಕಿಡ್ನಾಪ್ ಆಗಿರುವ ಅನುಮಾನದ ಕೆಲ ವಿಚಾರವನ್ನು ಮೌಖಿಕವಾಗಿ ತಿಳಿಸಿದ್ದರೆನ್ನಲಾಗಿದೆ.       ಆದರೂ 6 ದಿನಗಳ ವಿಳಂಬ ಅನುರಿಸಿದ್ದ ಕಾರಣ ಸೋಮವಾರ ದಿಢೀರ್ ಠಾಣೆಗೆ ಮುತ್ತಿಗೆ ಹಾಕಿದ ಕೆಂಚನಹಳ್ಳಿ ಗ್ರಾಮಸ್ಥರು…

ಮುಂದೆ ಓದಿ...

ತುಮಕೂರು : ನಾಳೆ ಜಿ.ಪಂ. ವಿವಿಧ ಸ್ಥಾಯಿ ಸಮಿತಿ ಸದಸ್ಯರುಗಳ ಚುನಾವಣೆ!

 ತುಮಕೂರು:       ಜಿಲ್ಲಾ ಪಂಚಾಯತ್ ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು 3ನೇ ಅವಧಿಗೆ ಚುನಾವಣೆ ಮೂಲಕ ಆಯ್ಕೆ ಮಾಡುವ ಸಂಬಂಧ ಜೂನ್ 2ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6-30ರವರೆಗೆ ಸಮಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಿಗಧಿಪಡಿಸಲಾಗಿದೆ.       ಎಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರುಗಳು ಚುನಾವಣೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು ತಿಳಿಸಿದ್ದಾರೆ.

ಮುಂದೆ ಓದಿ...