ಪಶು ಇಲಾಖೆಯಿಂದ ಮಧುಗಿರಿಯಲ್ಲಿ ಗ್ರಾಮವಾಸ್ತವ್ಯ

ಮಧುಗಿರಿ :       ರೈತರ ಮನೆ ಬಾಗಿಲಿಗೆ ತೆರಳಿ ನೇರವಾಗಿ ಜಾನುವಾರುಗಳ ಸಮಸ್ಯೆಗೆ ಸ್ಪಂದಿಸಿ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ವಿನೂತನ ಕಾರ್ಯಕ್ರಮ ಪಶು ಸಂಗೋಪನಾ ಇಲಾಖೆಯ ಈ ಗ್ರಾಮ ವಾಸ್ತವ್ಯ ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ರೆ.ಮಾ.ನಾಗಭೂಷಣ್ ಎಂದು ತಿಳಿಸಿದರು.       ತಾಲೂಕಿನ ಮರಬಳ್ಳಿ-ರಂಗನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಾಲೂಕಿನ ಪ್ರಥಮ ಕಾರ್ಯಕ್ರಮ ಇದಾಗಿದ್ದು ಗ್ರಾಮದ ಪಶು ಸಾಕಣೆ, ರಕ್ಷಣೆ ಹಾಗೂ ಆರೋಗ್ಯದ ಬಗ್ಗೆ ಅರಿವನ್ನು ಮೂಡಿಸುವುದರ ಜೊತೆಗೆ,ಜಾನುವಾರುಗಳ ಆರೋಗ್ಯ ಅಭಿವೃದ್ಧಿ ಬಗ್ಗೆ ರೈತರಿಗೆ ಮಾಹಿತಿ ನೀಡಿದರು, ಇಂತಹ ಗ್ರಾಮ ವಾಸ್ತವ್ಯವನ್ನು 15 ದಿನಗಳಿಗೊಮ್ಮೆ ಪ್ರತಿ ಗ್ರಾಮದಲ್ಲೂ ನಡೆಸುತ್ತೇವೆ ಎಂದು ಡಾ.ನಾಗಭೂಷಣ್ ತಿಳಿಸಿದರು.       ಇದೇ ಸಂದರ್ಭದಲ್ಲಿ ಸುಮಾರು 10 ಜಾನುವಾರುಗಳಿಗೆ ಬಂಜೆತನಕ್ಕೆ ಚಿಕಿತ್ಸೆ, 4 ಕ್ಕೆ ಗರ್ಭ…

ಮುಂದೆ ಓದಿ...

ಚಿರತೆ ಪ್ರತ್ಯಕ್ಷ : ಭೀತಿಯಲ್ಲಿ ರೈತರು

ಕೊಡಿಗೇನಹಳ್ಳಿ:       ಜಯಮಂಗಲಿ ಕೃಷ್ಣ ಮೃಗ ವನ್ಯಧಾಮದ ವ್ಯಾಪ್ತಿಯಲ್ಲಿ ಕಳೆದ 10 ದಿನಗಳಿಂದ ಸಂಜೆ ಹೊತ್ತಿನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗುತ್ತಿದ್ದು ಈ ಭಾಗದ ರೈತರಲ್ಲಿ ಆತಂಕ ಸೃಷ್ಟಿಸಿದೆ.       ಹೋಬಳಿಯ ಮೈದನಹಳ್ಳಿ ವನ್ಯಧಾಮದ ಗಡಿಯಲ್ಲಿರುವ ದೊಡ್ಡೇನಹಳ್ಳಿ ಸರ್ವೆ ನಂ 9, 11, 12 ವ್ಯಾಪ್ತಿಯಲ್ಲಿ ನಾಯಿಗಳು ಹಾಗೂ ಜಿಂಕೆಗಳ ಮೇಲೆ ದಾಳಿ ಮಾಡುತ್ತಿದ್ದು, ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸಂಜೀವರಾಯಪ್ಪ ಎಂಬುವವರ ಹಸು ಮೇಲೆ ದಾಳಿ ಮಾಡಿದ್ದು, ರಮೇಶ ಎಂಬುವವರ ಸುಮಾರು 2 ಕುರಿಗಳನ್ನು ಹೊತ್ತೋಯ್ದದ ಘಟನೆ ನಡೆದಿದೆ.       ಹೊಲಗಳಲ್ಲಿ ಸಾಕಿದ್ದ ನಾಯಿಗಳನ್ನು ಎಳೆದೊಯ್ಯುತಿದ್ದು, ಜಾನುವಾರುಗಳ ಮೇಲೆ ಎರಗುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳಾದ ರಾಜಣ್ಣ, ಶಾಂತರಾಜು, ಸುರೇಶ್. ಎನ್ ಕೆ. ಗಂಗಯ್ಯ, ವಿಜಿ ಕುಮಾರ್ ಆರೋಪಿಸಿದ್ದಾರೆ.       ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು ಮಧುಗಿರಿ ರೇಂಜರ್…

ಮುಂದೆ ಓದಿ...

ಕಾಂಗ್ರೆಸ್ ಮುನ್ನಡೆಸಲು ಡಿ.ಕೆ.ಶಿವಕುಮಾರ್ ಸಮರ್ಥರು : ಆರ್.ರಾಜೇಂದ್ರ

ತುಮಕೂರು:        ಕೋವಿಡ್-19 ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸಲು ಕಷ್ಯ ಸಾಧ್ಯ. ಹಾಗಾಗಿ ಪದಗ್ರಹಣ ಸಮಾರಂಭವನ್ನು ಪ್ರತಿಯೊಬ್ಬ ಕಾರ್ಯಕರ್ತರು ವೀಕ್ಷಿಸಲು ಅನುವಾಗುವಂತೆ ಜಿಲ್ಲೆಯ ಎಲ್ಲ ಪಂಚಾಯ್ತಿ ಮಟ್ಟದಲ್ಲಿ ಮತ್ತು ವಾರ್ಡ್‍ಗಳ ವ್ಯಾಪ್ತಿಯಲ್ಲಿ ಎಲ್.ಇ.ಡಿ. ಅಳವಡಿಸಲಾಗುವುದು ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್. ರಾಜೇಂದ್ರ ಹೇಳಿದರು.        ನಗರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.       ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ಸಮರ್ಥ ಹಾಗೂ ದಕ್ಷ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಆಯ್ಕೆಯಾಗಿರುವುದು ಪಕ್ಷಕ್ಕೆ ದೊಡ್ಡ ಶಕ್ತಿಯನ್ನು ತಂದಿದೆ. ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ಯುವಕರನ್ನು…

ಮುಂದೆ ಓದಿ...