ಸಾಯುವ ಅನುಭವ ಪಡೆಯಲು ಟಿಕ್ ಟಾಕ್ : ಯುವಕ ಸಾವು!!

ಕೊರಟಗೆರೆ:       ಸಾವಿನ ದೃಶ್ಯ ಹಾಗೂ ಅನುಭವ ಪಡೆಯಲು ಯುವಕನೊಬ್ಬ ವಿಷ ಸೇವಿಸಿ ಸಾಯುವ ಮುನ್ನ ಟಿಕ್ ಟಾಕ್‍ನಲ್ಲಿ ವಿಡಿಯೋ ಮಾಡಿದ ಗೆಳೆಯರಿಗೆ ಕಳುಹಿಸಿ ಮೃತ ಪಟ್ಟ ಘಟನೆ ತಾಲೂಲೂಕಿನಲ್ಲಿ ನಡೆದಿದೆ.        ತಾಲೂಕಿನ ಗೌರಗಾನಹಳ್ಳಿ ಗ್ರಾಮದ ಧನಂಜಯ್ಯ(25) ಮೃತ ಪಟ್ಟ ಯುವಕನಾಗಿದ್ದು ಕಳೆದ ರಾತ್ರಿ ತಮ್ಮ ಜಮೀನಿನಲ್ಲಿ ಆತ್ಮಹತ್ಯೆ ಅನುಭವ ಪಡೆಯಲು ಪ್ರಯತ್ನಿಸುತ್ತಿದ್ದೆನೆ ಅದರ ಅನುಭವ ನನಗೆ ಬೇಕು ಅದನ್ನು ನೀವು ನೋಡಿ ಎಂದು ವಿಡಿಯೋ ಮಾಡಿದ ಯುವಕ ಆಹಾರ ಪದಾರ್ಥಗಳು ಕೆಡದಂತೆ ಇಡುವ ವಿಷಪೂರಿತ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಈ ವಿಡಿಯೋ ನೋಡಿದ ಗ್ರಾಮದ ಸ್ನೇಹಿತರು ತಕ್ಷಣ ಅವನನ್ನು ಚಿಕಿತ್ಸೆಗಾಗಿ ಕೊರಟಗೆರೆ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತ ಪಟ್ಟಿರುವ ಘಟನೆ ನಡೆದಿದೆ ಮೃತ ತಾಯಿಯೊಂದಿಗೆ ಇದ್ದು…

ಮುಂದೆ ಓದಿ...

ತುಮಕೂರು: 39.97 ಕೋಟಿ ವೆಚ್ಚದಲ್ಲಿ ಕಂಟ್ರೋಲ್ ಸೆಂಟರ್ ಕಾರ್ಯಾರಂಭ!!

ತುಮಕೂರು:       ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ನಗರದ ಎಸ್.ಪಿ ಕಛೇರಿ ಆವರಣದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಳ್ಳಲಾಗುತ್ತಿರುವ “ಇಂಟಿಗ್ರೇಟೆಡ್ ಸಿಟಿ ಮ್ಯಾನೇಜ್‍ಮೆಂಟ್ ಕಮಾಂಡ್ ಅಂಡ್ ಕಂಟ್ರೋಲ್ (Iಅಒಅಅ)ಸೆಂಟರ್”ನ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.       ನಂತರ ಜಿಲ್ಲಾ ಎಸ್‍ಪಿ ಕಛೇರಿ ಸಭಾಂಗಣದಲ್ಲಿ ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಕಲ್ಪಿಸುವ “ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಮ್” ತಂತ್ರಾಂಶಕ್ಕೆ ಚಾಲನೆ ನೀಡಿದರು.       ಐಸಿಎಂಸಿಸಿ ಸೆಂಟರ್ ಕಾರ್ಯಾಚರಣೆಯ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಭೂಬಾಲನ್ ಈಗಾಗಲೇ 39.97 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಕಂಟ್ರೋಲ್ ಸೆಂಟರ್ ಕಾರ್ಯಾರಂಭ ಮಾಡಲಾಗಿದ್ದು, ನಗರದ ವಿವಿಧ ಕಡೆ 80 ಸಿಸಿ ಟಿವಿ ಅಳವಡಿಕೆ ಮತ್ತು ಸರ್ವೆಲೆನ್ಸ್, ವೇರಿಯಬಲ್ ಮೆಸೇಜಿಂಗ್…

ಮುಂದೆ ಓದಿ...

ಸಮರ್ಪಕವಾಗಿ ಕಾರ್ಯನಿರ್ವಹಿಸದ ಇಂಜಿನಿಯರ್‍ಗಳ ಅಮಾನತ್ತಿಗೆ ಸಚಿವರ ಶಿಫಾರಸ್ಸು!

ತುಮಕೂರು:       ಗ್ರಾಮೀಣ ಪ್ರದೇಶಗಳಲ್ಲಿ ಜನ-ಜಾನವಾರುಗಳ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಇಂಜಿನಿಯರ್‍ಗಳನ್ನು ಅಮಾನತ್ತು ಮಾಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಜಿಲ್ಲಾ ಪಂಚಾಯತ್ ಸಿಇಓ ಶುಭಾ ಕಲ್ಯಾಣ್ ಅವರಿಗೆ ಕಡಕ್ ನಿರ್ದೇಶನ ನೀಡಿದರು.       ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ಜರುಗಿದ ಮುಂದುವರೆದ ಕೆಡಿಪಿ ಸಭೆ ಅಧ್ಯಕ್ಷತೆವಹಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ, ಆಹಾರ ಮತ್ತು ನಾಗರಿಕ ಸರಬರಾಜು, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ-206, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ, ಮೀನುಗಾರಿಕೆ, ಜವಳಿ ಮತ್ತು ಕೈಮಗ್ಗ, ರೇಷ್ಮೆ, ಕೃಷಿ ಮಾರುಕಟ್ಟೆ, ಡಿಸಿಸಿ ಬ್ಯಾಂಕ್, ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಳು, ಅಬಕಾರಿ, ಜಿಲ್ಲಾ ಉದ್ಯೋಗ ವಿನಿಮಯ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ, ಕಾರ್ಮಿಕ, ಕೆ.ಎಸ್.ಆರ್.ಟಿ.ಸಿ., ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಇಂಜಿನಿಯರುಗಳು…

ಮುಂದೆ ಓದಿ...

ಚಿರಂಜೀವಿ ಸರ್ಜಾ ವಿಧಿವಶ : ಕಂಬನಿ ಮಿಡಿದ ಮಧುಗಿರಿ ಜನತೆ

ಮಧುಗಿರಿ:       ಚಿತ್ರನಟ ಚಿರಂಜೀವಿ ಸರ್ಜಾ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿರುವುದಕ್ಕೆ ತಾಲೂಕಿನ ಜನತೆ ಕಂಬನಿ ಮಿಡಿದಿದ್ದಾರೆ. ಪ್ರತೀ ವರ್ಷವೂ ಜಾತ್ರೆ ಬರುತ್ತಿದ್ದರು : ಪ್ರತೀ ವರ್ಷ ಮಾರ್ಚ್ ಮಾಹೆಯಲ್ಲಿ ನಡೆಯುತ್ತಿದ್ದ ಜಾತ್ರಾ ಉತ್ಸವಕ್ಕೆ ಒಂದು ದಿನ ಮುಂಚಿತವಾಗಿ ಅರ್ಜುನ್ ಸರ್ಜಾ, ದೃವ ಸರ್ಜಾ ಕುಟುಂಬ ಸಮೇತ ಚಿರಂಜೀವಿ ಸರ್ಜಾ ಆಗಮಿಸಿ ಜಾತ್ರಾ ಉತ್ಸವಗಳಲ್ಲಿ ಭಾಗವಹಿಸುತ್ತಿದ್ದರು. ಈ ವರ್ಷವೂ ಮಾರ್ಚಿ. 9 ರಂದು ನಡೆದ ಜಾತ್ರಾ ಉತ್ಸವದಲ್ಲಿ ಪತ್ನಿ ಮೇಘನಾ ರಾಜ್ ರೊಂದಿಗೆ ಭಾಗವಹಿಸಿದ್ದರು. ಭಾವುಕರಾದ ಅಜ್ಜಿ :       ಜಕ್ಕೇನಹಳ್ಳಿ ದೇವಸ್ಥಾನ ನೇತೃತ್ವವನ್ನು ವಹಿಸಿ ಕೊಂಡಿರುವ ಚಿರಂಜೀವಿ ಸರ್ಜಾ ಅಜ್ಜಿ ಲಕ್ಷ್ಮೀ ದೇವಮ್ಮ ಜಕ್ಕೇನಹಳ್ಳಿಯಲ್ಲಿ ವಾಸವಾಗಿದ್ದು, ಮೊಮ್ಮೊಗನ ಸಾವಿನ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಇಷ್ಟು ದಿನ ಬೆಂಗಳೂರಿನಲ್ಲಿ ನೆಲೆಸಿದ್ದ ಇವರು ಜೂ. 8 ರಂದು ಸರ್ಕಾರ…

ಮುಂದೆ ಓದಿ...