ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾ.ಪಂ.ನೌಕರರ ಒತ್ತಾಯ

ತುಮಕೂರು:       ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮ ಪಂಚಾಯತಿ ನೌಕರರು ಜಿಲ್ಲಾ ಪಂಚಾಯತ್ ಕಚೇರಿಗೆ ಮನವಿ ಸಲ್ಲಿಸಿದರು.       ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಮೇಶ್ (ಉಪ ಕಾರ್ಯದರ್ಶಿ-2) ಮನವಿ ಸಲ್ಲಿಸಿದರು.       ಸರ್ಕಾರ ಕಳೆದ 2 ವರ್ಷಗಳಿಂದ ಗ್ರಾ.ಪಂ. ನೌಕರರ ವೇತನ ಪಾವತಿಗೆ ಬೇಕಾಗಿರುವ ಹಣವನ್ನು ಸರ್ಕಾರವೇ ಭರಿಸುವ ತೀರ್ಮಾನ ಮಾಡಿರುವುದು ಸ್ವಾಗತಾರ್ಹ. ರಾಜ್ಯದ 6025 ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 6500 ಸಿಬ್ಬಂದಿಗಳಿಗೆ ರೂ. 900 ಕೋಟಿ ರೂ. ಬೇಕಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 518 ಕೋಟಿ ರೂ. ಮಾತ್ರ ಮಂಜೂರಾತಿ ನೀಡಿದೆ. ಕಳೆದ 2 ವರ್ಷಗಳಿಂದ ಸಿಬ್ಬಂದಿ ವೇತನ ಬಾಕಿ ಉಳಿದಿದೆ. 3 ತಿಂಗಳಿಗೊಮ್ಮೆ ಬಿಡುಗಡೆಯಾದ ಕಂತಿನ ಹಣದಲ್ಲಿ 2 ತಿಂಗಳು ವೇತನಕ್ಕಾಗಿ ಮಾತ್ರ ಹಣ ಸಾಕಾಗುತ್ತದೆ. 2 ವರ್ಷಗಳಿಂದ…

ಮುಂದೆ ಓದಿ...

ಹೈಮಾಸ್ ದೀಪ ನೆಪಮಾತ್ರಕ್ಕೆ : ಕತ್ತಲೆಯಾದ ಮಧುಗಿರಿಯ ಗುರುವಡೇರಹಳ್ಳಿ

ಮಧುಗಿರಿ:       ಪುರಸಭೆ ವ್ಯಾಪ್ತಿಯಲ್ಲಿರುವ ‘ಹ್ಯೆಮಾಸ್ ದೀಪಗಳು’ತೋರ್ಪಡಿಕೆಗೆ ಅಥವಾ ನೆಪ ಮಾತ್ರಕ್ಕೆ ಅಳವಡಿಸಿದಂತೆ ಕಾಣುತ್ತಿದೆ. ದೀಪಗಳು ಉರಿಯದೇ ಕತ್ತಲೆ ಕೊಂಪೆಯಾಗಿ ವರ್ಷಗಳು ಕಳೆದರೂ ರಿಪೇರಿ ಮಾಡಿಸುವ ಗೋಜಿಗೆ ಹೋಗದೆ ಇರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.       18ನೇ ವಾರ್ಡಿನ ಗುರು ವಡೇರಹಳ್ಳಿಯ ಮಾಜಿ ಶಾಸಕ ಕೆ.ಎನ್.ರಾಜಣ್ಣನವರ ಸ್ವಗೃಹದ ಸಮೀಪವಿರುವ ಹೈಮಾಸ್ ದೀಪ ಉರಿದು ವರ್ಷಗಳೇ ಕಳೆದಿದೆ. ಸಮೀಪದಲ್ಲೇ ವೀರಾಂಜನೇಯ ದೇವಸ್ಥಾನವಿದ್ದು ಸಾವಿರಾರು ಭಕ್ತಾದಿಗಳು ಪೂಜೆಗೆ ಬರುತ್ತಾರೆ. ಕತ್ತಲೆಯಲ್ಲೇ ಓಡಬೇಕಾದ ಸ್ಥಿತಿಯಲ್ಲಿದೆ ಎಲ್ಲದಕ್ಕೂ ಕೊರೊನಾ ಕಾರಣದಿಂದ ರಿಪೇರಿ ಸಾಧ್ಯವಿಲ್ಲವೆನ್ನುವ ಪುರಸಭೆಯವರು ಒಂದು ವರ್ಷದಿಂದ ಉರಿಯದೇ ಇರುವುದಕ್ಕೆ ಕಾರಣವಾದರೂ ಏನು ಎಂದು ವಾರ್ಡಿನ ನಾಗರಿಕರು ಪ್ರಶ್ನಿಸುತ್ತಿದ್ದಾರೆ.ಈ ದೀಪ ಉರಿದರೆ ಎಪಿಎಂಸಿ ಹಿಂಭಾಗದ ರಸ್ತೆ, ಹಿಂದೂಪುರದ ರಸ್ತೆ, ಗುರು ವಡೆರಹಳ್ಳಿ ಸಂಪೂರ್ಣ ಬೆಳಕಿನಿಂದ ವಿಜೃಂಭಿಸುತ್ತದೆ. ಆದರೆ ಕತ್ತಲಲ್ಲೇ ಇರಬೇಕಾದಂತಹ ಪರಿಸ್ಥಿತಿಯಲ್ಲಿ ಇದೆ.  …

ಮುಂದೆ ಓದಿ...

ಕೊರೊನಾ ಪಾಸಿಟಿವ್ : ಶಿರಾದ ಪಾರ್ಕ್ ಮೊಹಲ ಸೀಲ್!!

ಶಿರಾ:       ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಕಂಡು ಬಂದಿರುವುದರಿಂದ ಶಿರಾ ನಗರದ ಪಾರ್ಕ್ ಮೊಹಲಾ ನಾಲ್ಕನೇ ರಸ್ತೆಯನ್ನು ಸೀಲ್ ಡೌನ್ ಮಾಡಲು ತಾಲೂಕು ಅಡಳಿತ ನಿರ್ಧರಿಸಿದೆ.      ಕಳೆದ ರಾತ್ರಿಯೇ ಸುಮಾರು ಪೊಲೀಸರು ಆಗಮಿಸಿ ಕೊರೊನಾ ಸೋಂಕು ಇರುವ ವ್ಯಕ್ತಿಯನ್ನು ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಸುಮಾರು 9.30ರ ಸುಮಾರಿನಲ್ಲಿ ಸದರಿ ಪ್ರದೇಶಕ್ಕೆ ತೆರಳಿದ ಅಂಬುಲೆನ್ಸ್‍ಗಳು ಸೋಂಕಿತ ವ್ಯಕ್ತಿಯನ್ನು ವಾಹನದಲ್ಲಿ ಕರೆದುಕೊಂಡು ಹೋಗಿದ್ದು ಮತ್ತು ಅವರ ಕುಟುಂಬದ ಸದಸ್ಯರನ್ನು ಹೆಂಡತಿ ಮೂರು ಜನ ಮಕ್ಕಳು ಹಾಗೂ ಆತನ ತಮ್ಮನನ್ನು ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ.       ಸೋಂಕಿತ ವ್ಯಕ್ತಿಯ 40 ವರ್ಷ ತನ್ನ ಹೆಂಡತಿ ಮಕ್ಕಳನ್ನು ಹಿಂದುಪುರಕ್ಕೆ ಕರೆ ತರಲು ತೆರಳಿದ ಎಂದು ಹೇಳಲಾಗುತ್ತದೆ. ದಿನಾಂಕ 6 ರಂದು ಸ್ವಲ್ಪ ಜ್ವರ…

ಮುಂದೆ ಓದಿ...

ಚಿ.ನಾ.ಹಳ್ಳಿ 1.50 ಕೋಟಿ ರೂ ಅನುದಾನದ ಕ್ರಿಯಾಯೋಜನೆಗೆ ತಾ.ಪಂ.ಸಮ್ಮತಿ

ಚಿಕ್ಕನಾಯಕನಹಳ್ಳಿ:       15ನೇ ಹಣಕಾಸು ಯೋಜನೆಯ 1.50ಕೋಟಿ ರೂ.ಗಳ ಅನುದಾನದ ಕ್ರಿಯಾಯೋಜನೆ ತಯಾರಿಸಲು ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಸಮ್ಮತಿ ಸೂಚಿಸಲಾಯಿತು.       ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಶೇಷಸಭೆಯು ಕೆ.ಆರ್. ಚೇತನಗಂಗಾಧರ್ ಅಧ್ಯಕ್ಷತೆ ನಡೆಯಿತು. 15 ನೇ ಹಣಕಾಸು ಯೋಜನೆಯಡಿ ಬಿಡುಗಡೆಗೊಂಡ ಅನುದಾನದ ಕ್ರಿಯಾಯೋಜನೆ ತಯಾರಿಸಲು ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಅತಿಕ್‍ಫಾಷಾ ಮಾಹಿತಿ ನೀಡಿ 15 ನೇ ಹಣಕಾಸು ಯೋಜನೆಯಡಿ ತಾಲ್ಲೂಕಿಗೆ ರೂ.1.50 ಕೋಟಿ ಅನುದಾನ ಬಿಡುಗಡೆಯಾಗಿದೆ         ಇದರಲ್ಲಿ ಶೇ50 ನಿರ್ಭಂದಿತ ಹಾಗೂ ಶೇ.50 ಅನಿರ್ಭಂದಿತ ಅನುದಾನ ದಂತೆ ವಿಂಗಡಿಸಲಾಗಿದೆ. ಅನಿರ್ಭಂದಿತ ಅನುದಾನದಲ್ಲಿ ತ್ಯಾಜ್ಯನಿರ್ವಹಣೆ, ಜೈವಿಕಗೊಬ್ಬರ, ಸ್ವಚ್ಚತೆ, ಯೋಜನೆಗಳಂತಹ ಕೆಲಸಗಳಿಗೆ ಬಳಸಬೇಕು, ನಿರ್ಭಂದಿತ ಅನುದಾನದಲ್ಲಿ ನೀರಿನ ನಿರ್ವಹಣೆ, ಅಂತರ್ಜಲ ಅಭಿವೃದ್ದಿ, ಮಳೆ ನೀರು ಸಂರಕ್ಷಣೆ, ಶಾಲಾ, ಅಂಗನವಾಡಿ, ಆರೋಗ್ಯ ಕೇಂದ್ರ, ಕೊಟ್ಟಿಗೆ ಮುಂತಾದವುಗಳಿಗೆ ಬಳಸಬಹುದಾಗಿದೆ.…

ಮುಂದೆ ಓದಿ...