ಕೃಷಿ ಇಲಾಖೆಯ ರೈತ ಅನುವುಗಾರರ ಸೇವೆ ಮುಂದುವರೆಸಿ ಒತ್ತಾಯ

ಚಿಕ್ಕನಾಯಕನಹಳ್ಳಿ:       ಕೃಷಿ ಇಲಾಖೆಯಲ್ಲಿ ರೈತ ಅನುವುಗಾರರ ಸೇವೆಯನ್ನು ಮುಂದುವರೆಸಿ, ಮಾಸಿಕ ರೂ.ಹತ್ತು ಸಾವಿರ ಗೌರವಧನ ನೀಡಬೇಕೆಂದು ರೈತ ಅನುವುಗಾರರ ಸಂಘ ಒತ್ತಾಯಿಸಿದೆ.       ಈ ಹಿಂದೆ ಬಿ.ಎಸ್. ಯಡಿಯೂರಪ್ಪನವರ ಸರ್ಕಾರದಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಳ್ಳಿಗಳ ಪ್ರತಿಯೊಬ್ಬ ರೈತರಿಗೂ ತಾಂತ್ರಿಕ ಮಾಹಿತಿಗಳನ್ನು ನೀಡಲು, ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ರೈತ ಅನುವುಗಾರರ ಸೇವೆಯನ್ನು ನೇಮಕ ಮಾಡಲಾಗಿತ್ತು. ಇಲಾಖೆ ಹಾಗೂ ರೈತರ ನಡುವೆ ಭೂಚೇತನ ಯೋಜನೆಯಡಿ ಪ್ರತಿ 500 ಹೆಕ್ಟರ್ ಗೆ ಒಬ್ಬರಂತೆ ನೇಮಕಮಾಡಲಾಗಿತ್ತು. ರಾಜ್ಯದಾದ್ಯಂತ ಇಂತಹ 6000 ರೈತ ಅನುವುಗಾರರು ( ತಾಂತ್ರಿಕ ಉತ್ತೇಜಕರು) ಸೇವೆಯಲ್ಲಿದ್ದರು. ಕಳೆದ 12 ವರ್ಷಗಳಿಂದ ಕೃಷಿ ಇಲಾಖೆಯನ್ನೆ ನಂಬಿ ಬದುಕುತ್ತಿದ್ದರು. ಆದರೆ ಈಗ ಇವರ ಸೇವೆಯನ್ನು ಪರಿಗಣಿಸುತ್ತಿಲ್ಲ. ಸರ್ಕಾರವನ್ನೆ ನಂಬಿರುವ ಅನುವುಗಾರರ ಸೇವೆಯನ್ನು…

ಮುಂದೆ ಓದಿ...

ಕೊರೊನಾ ನಿಯಂತ್ರಣದಲ್ಲಿ ತುಮಕೂರು ಪೊಲೀಸ್ ಕಾರ್ಯ ಶ್ಲಾಘನೀಯ – ಗೃಹ ಸಚಿವ

 ತುಮಕೂರು:       ತುಮಕೂರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಜಿಲ್ಲಾ ಪೊಲೀಸ್ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸ್ ಇಲಾಖೆಯಲ್ಲಿ ಹಂತ ಹಂತವಾಗಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಗೃಹ ಸಚಿವರ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.         ತುಮಕೂರು ಜಿಲ್ಲೆಯು ಬೆಂಗಳೂರಿಗೆ ಹತ್ತಿರವಿರುವ ಜಿಲ್ಲೆಯಾಗಿರುವುದರಿಂದ ಇಲ್ಲಿ ಕೋವಿಡ್-19 ನಿಯಂತ್ರಣ ದೊಡ್ಡ ಸವಾಲಾಗಿತ್ತು. ಕೊರೊನಾ ನಿಯಂತ್ರಣ ಸಮಯದಲ್ಲಿ ತುಮಕೂರು ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ವೀಕ್ಷಿಸಿದ್ದೇನೆ. ಕೋವಿಡ್-19 ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಂಟೈನ್ಮೆಂಟ್ ವಲಯ, ಚೆಕ್‍ಪೋಸ್ಟ್ ನಿರ್ವಹಣೆ, ಕ್ವಾರೆಂಟೈನ್ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಕಡಿಮೆಯಿದ್ದು, ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.       ಲಾಕ್‍ಡೌನ್ ಸಮಯದಲ್ಲಿ ಅಪರಾಧ…

ಮುಂದೆ ಓದಿ...

ಜೂನ್ 18 ಕ್ಕೆ ದ್ವಿತೀಯ ಪಿಯು ಇಂಗ್ಲೀಷ್ ಪರೀಕ್ಷೆ

ತುಮಕೂರು:      ಇದೇ ಜೂನ್ 18ರಂದು ನಡೆಯಲಿರುವ ದ್ವಿತೀಯ ಪಿಯುಸಿ ಇಂಗ್ಲೀಷ್ ವಿಷಯ ಪರೀಕ್ಷೆಯನ್ನು ಯಾವುದೇ ಲೋಪದೋಷಗಳಿಲ್ಲದೆ ನಡೆಸಬೇಕೆಂದು ಜಿಲ್ಲಾಧಿಕಾರಿ ಡಾ:ಕೆ.ರಾಕೇಶ್ ಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.       ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜರುಗಿದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕಳೆದ ಮಾರ್ಚ್ ಮಾಹೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆದಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಇಂಗ್ಲೀಷ್ ವಿಷಯ ಮಾತ್ರ ನಡೆಯದೆ ಬಾಕಿ ಉಳಿದಿತ್ತು. ಸರ್ಕಾರದ ನಿರ್ದೇಶನದಂತೆ ಇಂಗ್ಲೀಷ್ ವಿಷಯ ಪರೀಕ್ಷೆಯನ್ನು ಇದೇ ಜೂನ್ 18ರಂದು ನಡೆಸಲಾಗುವುದು. ಜಿಲ್ಲೆಯಲ್ಲಿ ಮಾರ್ಚ್ ಮಾಹೆಯಲ್ಲಿ ಸುಸೂತ್ರವಾಗಿ ಪರೀಕ್ಷೆ ನಡೆಸಿದಂತೆ ಜೂನ್ 18ರಂದು ಸಹ ಯಾವುದೇ ಲೋಪದೋಷಗಳಿಲ್ಲದೆ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಬೇಕೆಂದು ಅವರು ನಿರ್ದೇಶನ ನೀಡಿದರು.       ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಯಾಗದಂತೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಕೊಠಡಿಗೆ…

ಮುಂದೆ ಓದಿ...

ಪೊಲೀಸ್ ಇಲಾಖೆಯ ಗೃಹ ನಿರ್ಮಾಣಕ್ಕೆ 5 ಸಾವಿರ ಕೋಟಿ

ಕೊರಟಗೆರೆ:       ರಾಷ್ಟ್ರದಲ್ಲಿಯೇ ಅತಿಹೆಚ್ಚು ಪೊಲೀಸ್‍ಠಾಣೆ ಮತ್ತು ವಸತಿಗೃಹ ನಿರ್ಮಾಣ ಮಾಡುತ್ತಿರುವ ರಾಜ್ಯ ಕರ್ನಾಟಕ ಆಗಿದೆ ಎಂದು ಗೃಹಸಚಿವ ಬಸವರಾಜು ಬೊಮ್ಮಾಯಿ ತಿಳಿಸಿದರು       ಕೊರಟಗೆರೆ ಪಟ್ಟಣದ ಜನಸ್ನೇಹಿ ಪೊಲೀಸ್‍ಠಾಣೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬುಧವಾರ ಭಾಗವಹಿಸಿ ಮಾತನಾಡಿದರು.       ರಾಜ್ಯ ಸರಕಾರದ ಪ್ರಸ್ತುತ ಆಯವ್ಯಯದಲ್ಲಿ ಪೊಲೀಸ್ ಇಲಾಖೆಯ ಗೃಹ ನಿರ್ಮಾಣಕ್ಕೆ 5ಸಾವಿರ ಕೋಟಿ ಮೀಸಲಿಡಲಾಗಿದೆ. 2020ರಿಂದ 2025ರವರೆಗೆ ಶೇ.75ರಷ್ಟು ಗೃಹನಿರ್ಮಾಣ ದೂರದೃಷ್ಟಿ ಹೊಂದಲಾಗಿದೆ. ಪೊಲೀಸರ ಅನುಕೂಲತೆಗೆ ತಕ್ಕಂತೆ ಜನಸ್ನೇಹಿ ಪೊಲೀಸ್‍ಠಾಣೆಯನ್ನು ಆಧುನಿಕವಾಗಿ ನಿರ್ಮಾಣ ಮಾಡಲಾಗುತ್ತೀದೆ. ಇದರ ಉದ್ದೇಶ ಅಪರಾದ ಕಡಿಮೆಯಾಗಿ ಸಾಮಾನ್ಯ ಜನರಿಗೆ ನ್ಯಾಯ ಸಿಗುವಂತಾಗಬೇಕು ಎಂದರು.       ಮಾಜಿ ಕೇಂದ್ರಸಚಿವ ಮಲ್ಲಿಕಾರ್ಜುನ ಖರ್ಗೆಗೆ ಬೆದರಿಕೆ ಕರೆಯ ಬಗ್ಗೆ ಪರಿಶೀಲನೆ ನಡೆಸಲು ಐಜಿಗೆ ದೂರು ನೀಡಲಾಗಿದೆ. ದೂರಿನಂತೆ ತನಿಖೆಯನ್ನು ನಡೆಸಲಾಗುತ್ತದೆ. ಇದರ ಬಗ್ಗೆ…

ಮುಂದೆ ಓದಿ...

ಮಧುಗಿರಿ : ಸಿದ್ದಾಪುರ ಕೆರೆಯ ಅಭಿವೃದ್ಧಿ ಕೆಲಸದಲ್ಲಿ ಅಕ್ರಮ!

ಮಧುಗಿರಿ:       ತಾಲೂಕಿನ ಕಸಬಾ ಹೋಬಳಿ ಸಿದ್ದಾಪುರ ಗ್ರಾಮದ ಕೆರೆಯ ಅಭಿವೃದ್ಧಿ ಕೆಲಸದಲ್ಲಿ ಅಕ್ರಮವಾಗಿರುವ ಬಗ್ಗೆ ಸಿದ್ದಾಪುರ ಕೆರೆ ಹಿಂಭಾಗದಲ್ಲಿನ ಅಚ್ಚುಕಟ್ಟುದಾರರು ಪತ್ರಿಕಾ ಹೇಳಿಕೆಯಲ್ಲಿ ಅರೋಪಿಸಿದ್ದಾರೆ.      ಸಿದ್ದಾಪುರ ಕೆರೆಯನ್ನು ಸುಮಾರು ಹತ್ತು ತಿಂಗಳ ಹಿಂದೆಯ ಬಯಲುಸೀಮೆ ಅಭಿವೃದ್ಧಿ ಮಂಡಳಿ ಅನುದಾನದಿಂದ ಜಂಗಲ್ ಕ್ಲಿಯರ್ ಆಗಿದ್ದು ಪುನಹ ಜಂಗಲ್ ಕ್ಲಿಯರ್ ಮಾಡುವ ಆವಶ್ಯಕತೆ ಏನಿತ್ತು ,  ಸಿದ್ದಾಪುರ ಕೆರೆ ಏರಿಯು ಈ ಹಿಂದೆ ಮಂಗೆ ಬಿದ್ದು ಸುಮಾರು ಅಡಿಕೆ ತೋಟಗಳು ಹಾಳಾಗಿದ್ದು ಇದರಿಂದ ರೈತರಿಗೆ ಸುಮಾರು ನಷ್ಟವಾಗಿರುತ್ತದೆ.ಈ ಮಂಗೆಯನ್ನು ಸರ್ಕಾರದ ಕಡೆಯಿಂದ ಮುಚ್ಚಿ ರಿಪೇರಿ ಮಾಡಿ ಕೊಟ್ಟಿರುತ್ತಾರೆ. ಈ ರಿಪೇರಿ ಆದಂತಹ ಕೆರೆಯ ಏರಿಯ ಮೇಲೆಯ ಹೊಸ ಮಣ್ಣು ಹಾಕದೆ ಅದೇ ಏರಿಯ ಮಣ್ಣನ್ನು ಜೆಸಿಬಿ , ಮತ್ತು ಹಿಟಾಚಿ ಗಳಿಂದ ಕೆದಕಿ ಹೊಸ ಮಣ್ಣನ್ನು ತೋರಿಸಿರುತ್ತಾರೆ. ಇದರಿಂದ ಎರಿಯ ಕಟ್ಟಡ ಸಡಿಲವಾಗಿರುತ್ತದೆ.…

ಮುಂದೆ ಓದಿ...