ಲೋಪವಿಲ್ಲದ ದೊಡ್ಡೇನಹಳ್ಳಿ-ಹುಲ್ಲೇಕೆರೆವರೆಗೆ ರಸ್ತೆ ನಿರ್ಮಾಣ ಕಾಮಗಾರಿ!!

ತುರುವೇಕೆರೆ:       ದೊಡ್ಡೇನಹಳ್ಳಿಯಿಂದ ಹುಲ್ಲೇಕೆರೆಯವರೆಗೆ ನಿರ್ಮಾಣವಾಗಿರುವ ಡಾಂಬರು ರಸ್ತೆ ಉತ್ತಮ ಗುಣಮಟ್ಟದಿಂದ ಕೂಡಿದ್ದು, ಗುತ್ತಿಗೆದಾರರು ಸುಸಜ್ಜಿತವಾದ ರಸ್ತೆ ನಿರ್ಮಾಣಮಾಡಿದ್ದು, ಗ್ರಾಮಸ್ಥರುಗಳ ಪರವಾಗಿ ಅಭಿನಂಧಿಸುವುದಾಗಿ ರಾಮಡೀಹಳ್ಳಿ ಕಿರಣ್ ತಿಳಿಸಿದರು.       ತಾಲೂಕಿನ ದೊಡ್ಡೇನಹಳ್ಳಿಯಿಂದ ಹುಲ್ಲೇಕೆರೆಯವರೆಗೆ ನಿರ್ಮಾಣವಾಗಿರುವ ರಸ್ತೆ ಮಾರ್ಗ ಮಧ್ಯೆ ಮಾಚೇನಹಳ್ಳಿ ಸಮೀಪ ರಸ್ತೆ ಅಕ್ಕಪಕ್ಕದ ಗ್ರಾಮಸ್ಥರುಗಳೊಂದಿಗೆ ರಸ್ತೆ ಗುಣಮಟ್ಟ ಕುರಿತು ಪತ್ರಕರ್ತರೊಂದಿಗೆ ಗ್ರಾಮದ ಮುಖಂಡ ರಾಮಡೀಹಳ್ಳಿ ಕಿರಣ್ ಮಾತನಾಡಿದರು.      ಕಳೆದ ಹದಿನೈದು ವರ್ಷಗಳಿಂದ ಈ ಭಾಗದ ರಸ್ತೆ ಕಿತ್ತು ಆಳುದ್ದ ಗುಂಡಿ ಬಿದಿದ್ದರೂ ಜನಪ್ರತಿನಿಧಿಗಳಾದವರು ದಂಡಿನಶಿವರ ಭಾಗಕ್ಕೂ ನಮಗೂ ಸಂಬಂಧವಿಲ್ಲದವರಂತೆ ವರ್ತಿಸುತ್ತಿದ್ದರು, ಸನ್ಮಾನ್ಯ ಶಾಸಕರಾದ ಮಸಾಲ ಜಯರಾಮಣ್ಣನವರು ಶಾಸಕರದ ನಂತರ 1.50ಕೋಟಿ ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ, ಅದರೆ ಅವರ ಏಳಿಗೆ ಸಹಿಸದ ಕಿಡಿಗೇಡಿಯೊಬ್ಬ ರಸ್ತೆ ಗುಣಮಟ್ಟದ ಬಗ್ಗೆ ಸ್ಥಳೀಯ ಗ್ರಾಮಸ್ಥರುಗಳನ್ನು ಬಿಟ್ಟು ಬೇರೆಯೂರಿನ ಗ್ರಾಮಸ್ಥರೊಡಗೂಡಿ ರಸ್ತೆ…

ಮುಂದೆ ಓದಿ...

ತುಮಕೂರು : ರೈಲ್ವೆ ನಿಲ್ದಾಣ ರಸ್ತೆ ಒಂದು ತಿಂಗಳಲ್ಲಿ ಪೂರ್ಣ!!

ತುಮಕೂರು:        ನಗರದ ರೈಲ್ವೆ ನಿಲ್ದಾಣ ರಸ್ತೆಯ ಕಾಮಗಾರಿ ತ್ವರಿತಗತಿಯಿಂದ ನಡೆಯುತ್ತಿದ್ದು, ಮುಂದಿನ ಒಂದು ತಿಂಗಳಲ್ಲಿ ಮುಗಿಯುತಿದ್ದು, ಇದಕ್ಕಾಗಿ ಸಹಕರಿಸಿದ ನಗರದ ಶಾಸಕರು, ಪಾಲಿಕೆಯ ಆಯುಕ್ತರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ 15ನೇ ವಾರ್ಡಿನ ಕೌನ್ಸಿಲರ್ ಶ್ರೀಮತಿ ಗಿರಿಜಾ ಧನಿಯಕುಮಾರ್ ತಿಳಿಸಿದ್ದಾರೆ.       ರೈಲ್ವೆ ನಿಲ್ದಾಣದ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಯ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಐದು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ನಿಲ್ದಾಣದಿಂದ ಉಪ್ಪಾರಹಳ್ಳಿ ರೈಲ್ವೆ ಅಂಡರ್‍ಪಾಸ್, ಸೋಮೇಶ್ವರಪುರಂಗೆ ಸಂಪರ್ಕ ಕಲ್ಪಿಸವ ಸುಮಾರು 1.25ಕಿ.ಮಿ ರಸ್ತೆಯನ್ನು ಮೂರುವರೆ ಕೋಟಿ ರೂಪಾಯಿಗಳಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇಲ್ಲಿನ ನಾಗರಿಕರು ಮತ್ತು ಜನಪ್ರತಿನಿಧಿಗಳ ಕೋರಿಕೆಯ ಮೇರೆಗೆ ರಸ್ತೆ ಒತ್ತುವರಿಯನ್ನು ಸ್ವತಹಃ ಮನೆಯ ಮಾಲೀಕರುಗಳೇ ತೆರವುಗೊಳಿಸಿಕೊಂಡಿದ್ದು, ರಸ್ತೆ ಅಭಿವೃದ್ದಿಗೆ…

ಮುಂದೆ ಓದಿ...

ಮಧುಗಿರಿ : ಜೂ.12 ಎಪಿಎಂಸಿ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ!

ಮಧುಗಿರಿ:       ಇಲ್ಲಿನ ಎಪಿಎಂಸಿಗೆ ಕೃಷಿ ಕ್ಷೇತ್ರದಿಂದ ಆಯ್ಕೆಯಾಗಿರುವ ಯಾವುದೇ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮತ್ತು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಚುನಾವಣೆ ಪ್ರಕ್ರಿಯೆ ಜೂನ್ -12 ರಂದಿ ನಡೆಯಲಿದೆ.       ಈ ಎಪಿಎಂಸಿಯಲ್ಲಿ ಕೃಷಿ ಕ್ಷೇತ್ರದಿಂದ ಹನ್ನೊಂದು, ವರ್ತಕರ ಕ್ಷೇತ್ರದಿಂದ ಒಬ್ಬರು, ಟಿಎಪಿಸಿಎಂಎಸ್ ನಿಂದ ಒಬ್ಬರು ಹಾಗೂ ಕೆಒಎಫ್ ನಿಂದ ಒಬ್ಬರು ಸದಸ್ಯರು ಆಯ್ಕೆ ಯಾಗಿದ್ದು, ಚುನಾವಣೆಯಲ್ಲಿ ಹದಿನಾಲ್ಕು ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಇಬ್ಬರು ಸದಸ್ಯರು ಮಾತ್ರ ಜೆಡಿ ಎಸ್ ನಿಂದ ಆಯ್ಕೆಯಾಗಿದ್ದು ಉಳಿದವರೆಲ್ಲ ಕಾಂಗ್ರೆಸನ್ನು ಬೆಂಬಲಿಸಿರುವುದರಿಂದ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಸಿದ್ದಾಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ಚಿಕ್ಕ ರಂಗಪ್ಪನವರ ಮೃತಪಟ್ಟ ಹಿನ್ನೆಲೆಯಲ್ಲಿ ಹದಿಮೂರು ಸದಸ್ಯರು ಮತದಾನ ಮಾಡಬಹುದಾಗಿದೆ.       ಕಾಂಗ್ರೆಸ್ ಸದಸ್ಯರುಗಳು ಇಂತಿದ್ದಾರೆ: ಎಂ.ಬಿ .ಮರಿಯಣ್ಣ (ಮಧುಗಿರಿ) ಕೆ.ಬಿ. ರಾಜಕುಮಾರ್ (ಬ್ಯಾಲ್)…

ಮುಂದೆ ಓದಿ...

ಅತಂತ್ರ ಸ್ಥಿತಿಯಲ್ಲಿ ಅಡುಗೆ ಕೆಲಸಗಾರರ ಬದುಕು!

ಪಾವಗಡ:       ತಾಲ್ಲೂಕಿನ ಸಮಾಜಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ಅಧಾರದ ಮೇಲೆ ವಸತಿನಿಲಯಗಳಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಸುಮಾರು 60 ಅಡುಗೆ ಕೆಲಸಗಾರರು ಬದುಕು ಅಕ್ಷರಶಃ ಬೀದಿಗೆ ಬಂದು ತಲುಪಿದೆ, ಕಾರಣ ಕಳೆದ 1 ವರ್ಷದದಿಂದ ಇವರು ಮಾಡಿದ ಕೆಲಸಕ್ಕೆ ಸಮಾಜಕಲ್ಯಾಣ ಇಲಾಖೆ ಸಂಬಳ ನೀಡಿಲ್ಲಾ, ಇದರಿಂದ ಇವರು ಜೀವನ ಸಾಗಿಸುವುದು ದುಸ್ಥರವಾಗಿದೆ.       ಈ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಅನೇಕ ಬಾರಿ ಹೋರಾಟಗಳು ಮಾಡಿದ್ದರೂ ಸಹ ನಮ್ಮ ಮನವಿಗೆ ಇಲಾಖೆ ಕ್ಯಾರೆ ಎನ್ನುತ್ತಿಲ್ಲಾ ಎಂದು ಅಡುಗೆ ಸಹಾಯಕರು ಮಾಧ್ಯಮದ ಬಳಿ ಬುಧವಾರ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಅವಲತ್ತುಕೊಂಡಿದ್ದಾರೆ.       ಈ ವೇಳೆ ಸಂಘದ ಮುಖಂಡೆ ಪದ್ಮಾವತಿ ಮಾತನಾಡುತ್ತಾ, ಕಳೆದ ಮಾರ್ಚ 21 ರಿಂದ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ನಮ್ಮ ಸಂಸಾರ ನಿರ್ವಹಣೆಯಾಗದೇ ನಮ್ಮ…

ಮುಂದೆ ಓದಿ...