ಗುಬ್ಬಿ : ಮದುವೆ ಊಟ ಸೇವಿಸಿ 16 ಮಂದಿ ಅಸ್ವಸ್ಥ!!

ಗುಬ್ಬಿ:       ಮದುವೆ ಊಟ ಸೇವಿಸಿದ್ದ 16 ಮಂದಿ ವಾಂತಿ ಬೇದಿಯಿಂದ ಅಸ್ವಸ್ಥರಾಗಿರುವ ಘಟನೆ ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ.       ಗ್ರಾಮದಲ್ಲೇ ನಡೆದ ಸರಳ ಮದುವೆಯಲ್ಲಿ ಊಟ ತಿಂಡಿ ಸೇವಿಸಿ ನೀರು ಕುಡಿದವರಿಗೆ ಈ ರೀತಿಯ ಸಮಸ್ಯೆಯಾಗಿದ್ದು ವಾಂತಿ ಬೇದಿಯಿಂದ ಅಸ್ವಸ್ಥರಾಗಿದ್ದರು. ಈ ಪೈಕಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಮದಲ್ಲಿನ ಶುಧ್ದ ಕುಡಿಯುವ ನೀರಿನ ಘಟಕ ಕೆಟ್ಟುಹೋಗಿದ್ದು ಟ್ಯಾಂಕರ್‍ನಿಂದ ಮದುವೆಗೆ ಬಳಸಿದ ನೀರು ಈ ಸಮಸ್ಯೆಗೆ ಕಾರಣವಾಗಿರಬಹುದೆಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೊರೋನಾ ರೋಗ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಜನ ಸೇರಿಸಿಕೊಂಡು ಮದುವೆ ಮಾಡುವುದು ಸಾಮಾಜಿಕ ಅಂತರ ಕಾಪಾಡದಿರುವುದು, ಶುಧ್ದಕುಡಿಯುವ ನೀರು ಬಳಕೆ ಮಾಡದಿರುವುದು ಈ ರೀತಿಯ ಸಮಸ್ಯೆಗೆ ಕಾರಣವಾಗುತ್ತಿರುವ ಬಗ್ಗೆ ತಿಳಿಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ ಅವರ ನೇತೃತ್ವದ ತಂಡ ಅಸ್ವಸ್ಥಗೊಂಡಿದ್ದವರಿಗೆ ಸೂಕ್ತ ಚಿಕಿತ್ಸೆ ನೀಡಿದರು.…

ಮುಂದೆ ಓದಿ...

ಮಧುಗಿರಿ : ವ್ಯಕ್ತಿಗೆ ಕರೋನಾ ವೈರಸ್ ದೃಢ ; ಗ್ರಾಮ ಸೀಲ್ ಡೌನ್!!

ಮಧುಗಿರಿ:       ತಾಲ್ಲೂಕಿನ ಕುಪ್ಪಾಚಾರಿರೊಪ್ಪ (ಕೆ.ಸಿ. ರೊಪ್ಪ)ದಲ್ಲಿ ವ್ಯಕ್ತಿಯೊಬ್ಬನಿಗೆ ಕೋರನ ಸೋಂಕು ದೃಢಪಟ್ಟಿದ್ದು ಈತ ಗೌರಿಬಿದನೂರು ತಾಲ್ಲೂಕಿನ ಅಲಿಪುರಕ್ಕೆ ಹೋಗಿ ಬಂದಿದ್ದೇನೆ ಎಂದು ತಿಳಿದು ಬಂದಿದೆ.      ಜೂನ್ ಒಂಬತ್ತು ರಂದು ಈತನಿಗೆ ಜ್ವರ ಕಾಣಿಸಿಕೊಂಡಿದ್ದು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ ,ನಂತರ ಈತನ ಗಂಟಲಿನ ದ್ರವವನ್ನು ಪಡೆಯಲಾಗಿದ್ದು ಜೂನ್ ಹನ್ನೊಂದು ರಂದು ಬೆಳಿಗ್ಗೆ ಕೋರನ ಪಾಸಿಟಿವ್ ಇರುವುದು ಪರೀಕ್ಷೆಯಿಂದ ತಿಳಿದು ಬಂದಿದೆ. ಈತನ ಕುಟುಂಬದ ಆರು ಜನ ಸದಸ್ಯರನ್ನು ಸಮೀಪದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಹೌಸ್ ಕ್ವಾರಂಟೈನ್ ಮಾಡಲಾಗಿದೆ.ಇತನನ್ನು ತುಮಕೂರಿಗೆ ಚಿಕಿತ್ಸೆ ಗೆ ಕಳುಹಿಸಲಾಗಿದೆ.       ಕೊಪ್ಪಚಾರಿರೊಪ್ಪಕ್ಕೆ ಉಪವಿಭಾಧಿಕಾರಿ ಡಾ. ಕೆ. ನಂದಿನಿ ದೇವಿ, ಡಿವೈಎಸ್ಪಿ ಎಂ. ಪ್ರವೀಣ್ ,ತಹಶೀಲ್ದಾರ್ ಡಾ.ಜಿ. ವಿಶ್ವನಾಥ್ , ಪುರಸಭಾ ಮುಖ್ಯಾಧಿಕಾರಿ ಅಮರನಾರಾಯಣ ಹಾಗೂ ಆರೋಗ್ಯಾ ಧಿಕಾರಿ ಬಾಲಾಜಿ ತಾಲ್ಲೂಕು ವೈದ್ಯಾಧಿಕಾರಿ…

ಮುಂದೆ ಓದಿ...

ಮಧುಗಿರಿ : ಕೆ.ಸಿ.ರೊಪ್ಪ ಕೊರೊನಾ ಕೇಸ್ ಪತ್ತೆ : ಸಿಇಓ ಪರಿಶೀಲನೆ!!

ಮಧುಗಿರಿ :       ಮಧುಗಿರಿ ತಾಲ್ಲೂಕು ಡಿ.ವಿ.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಸಿ.ರೊಪ್ಪ ಗ್ರಾಮದ ವ್ಯಕ್ತಿಗೆ ಕೊರೊನಾ ಸೋಂಕು ದೃಡಪಟ್ಟಿದ್ದು, ಸದರಿ ಗ್ರಾಮವನ್ನು ಕಂಟೈನ್‍ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಇಂದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.       ಗ್ರಾಮದಲ್ಲಿ 70 ವಾಸದ ಮನೆಗಳಿದ್ದು, 334 ಜನಸಂಖ್ಯೆ ಹೊಂದಿದ್ದು ಪೂರ್ಣ ಗ್ರಾಮವನ್ನು ಬಫರ್ ಜೋನ್‍ ಆಗಿ ಪರಿವರ್ತಿಸಲಾಗಿದೆ. ಸದರಿ ಗ್ರಾಮವನ್ನು ಪರಿವೀಕ್ಷಣೆ ಮಾಡಿದ ಸಿಇಓ ಅವರು ಗ್ರಾಮದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿ ಹಾಜರಿದ್ದ ಆರೋಗ್ಯ, ಕಂದಾಯ ಮತ್ತು ಪಂಚಾಯಿತಿ ಇಲಾಖೆ ಅಧಿಕಾರಿಗಳು ಮತ್ತು ನೌಕರರಿಗೆ ಅಗತ್ಯ ಸೂಚನೆಗಳನ್ನು ನೀಡಿದರು.       ಸೋಂಕಿತ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತ ವ್ಯಕ್ತಿಗಳನ್ನು ಗುರುತಿಸಿ ಕ್ವಾರಂಟೈನ್ ಮಾಡಲು…

ಮುಂದೆ ಓದಿ...

227 ಕೋಟಿ ರೂಗಳ 5641 ವಿವಿಧ ಅಭಿವೃದ್ಧಿ ಕಾಮಗಾರಿಗಳು ಪೂರ್ಣ

ಮಧುಗಿರಿ:       ಉಪವಿಭಾಗದ ಲೋಕೋಪಯೋಗಿ ವಿಭಾಗ ವ್ಯಾಪ್ತಿಯಲ್ಲಿ 2019-20 ನೇ ಸಾಲಿನಲ್ಲಿ ಒಟ್ಟು 227 ಕೋಟಿ ರೂಗಳ 5641 ವಿವಿಧ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೆಲವು ಪ್ರಗತಿಯಲ್ಲಿವೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.       ಪಟ್ಟಣದ ಸಿರಾಗೇಟ್‍ನಲ್ಲಿ ಶುಕ್ರವಾರ ನೂತನ ಲೋಕೋಪಯೋಗಿ ವಿಭಾಗೀಯ ಕಚೇರಿ ಉದ್ಘಾಟಿಸಿ ಮಾತನಾಡಿದರು. 2020-21 ನೇ ಸಾಲಿನಲ್ಲಿ ಬಜೆಟ್‍ನಲ್ಲಿ ಇವುಗಳ ದುರಸ್ತಿ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಿ ತುರ್ತು ದುರಸ್ಥಿಗಾಗಿ 750 ಕೋಟಿ ಬಿಡುಗಡೆ ಮಾಡಿ ಕೆಲಸ ಕೈಗೆತ್ತಿಕೊಂಡಿದ್ದು, ಬಜೆಟ್ ಅನುಮೋದನೆಗೆ ಹೋಗುವ ಸಮಯದಲ್ಲಿ ಮಾರ್ಚ್‍ನಲ್ಲಿ ಕರೊನಾ ಹಾವಳಿಯಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಸಮಸ್ಯೆಗೆ ಸಿಲುಕಿದ್ದರಿಂದ ಕಾಮಗಾರಿಗಳ ಪ್ರಗತಿಗೆ ಹಿನ್ನಡೆಯಾಗಿದೆ.       ಲಾಕ್‍ಡೌನ್ ವೇಳೆಯಲ್ಲಿ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಮರಳಿರುವುದರಿಂದ ಹೊರ ರಾಜ್ಯದ ಕಾರ್ಮಿಕರ ಕೊರತೆಯೂ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಕಾರ್ಮಿಕರ…

ಮುಂದೆ ಓದಿ...

ಮಧುಗಿರಿ : ಮದುವೆಗೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ!!

ಮಧುಗಿರಿ:       ಪಟ್ಟಣದ ಬೈಪಾಸ್ ರಸ್ತೆಯ ಲ್ಲಿರುವ ಬಿಜವರ ಸಮೀಪ ವೃತ್ತದಲ್ಲಿ ಮದುವೆಗೆಂದು ಆಗಮಿಸಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಹಾಗೂ ಮೊಬೈಲನ್ನು ಕಸಿದು ನಾಲ್ವರು ಮದ್ಯಪ್ರಿಯರು ಪರಾರಿಯಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.       ಕಲ್ಕೆರೆ ಗ್ರಾಮದ ನರಸಿಂಹ ಮೂರ್ತಿ ಎಂಬುವರು ಟಿವಿಎಸ್ ಎಕ್ಸೆಲ್ ನಲ್ಲಿ ಬಿಜವರದಲ್ಲಿರುವ ವೀರಾಂಜನೇಯಸ್ವಾಮಿ ದೇವಾಯದಲ್ಲಿ ನಡೆಯುತ್ತಿದ್ದ ಮದುವೆ ಎಂದು ಆಗಮಿಸುತ್ತಿದ್ದ ವೇಳೆ ನಾಲ್ವರು ಮದ್ಯಪ್ರಿಯರು ರಾತ್ರಿ ಒಂಬತ್ತು ಗಂಟೆಗೆ ಇವರ ಮೇಲೆ ಕಲ್ಲಿನಿಂದ ಮುಖಕ್ಕೆ ಹೊಡೆದು ಮೊಬೈಲನ್ನು ಕಸಿದು ಜೊತೆಗೆ ದ್ವಿಚಕ್ರ ವಾಹನವನ್ನು ಸಹ ಜಖಂ ಮಾಡಿದ್ದಾರೆ. ಈ ಬಗ್ಗೆ ಮಧುಗಿರಿ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.   “ದ್ವಿಚಕ್ರವಾಹನ ಸವಾರ ಸಾವು’ :       ಮಧುಗಿರಿ ತಾಲ್ಲೂಕು ದೊಡ್ಡಯಲ್ಲೂರು ಗ್ರಾಮದ ಸೇತುವೆ ಬಳಿ ದ್ವಿಚಕ್ರ ವಾಹನದಿಂದ ಬಿದ್ದ ವ್ಯಕ್ತಿಯೊಬ್ಬರು…

ಮುಂದೆ ಓದಿ...

ಪೊಲೀಸ್ ಠಾಣೆಯಲ್ಲಿ ಜೂಜಾಟ : ಎಎಸ್‍ಐ ಸೇರಿದಂತೆ ನಾಲ್ವರ ಅಮಾನತು!!

ತುಮಕೂರು:       ಜನರಿಗೆ ನೀತಿ ಪಾಠ ಮಾಡುವ ಪೊಲೀಸರು ಠಾಣೆಯಲ್ಲಿ ಇಸ್ಪೀಟ್ ಆಟ ಆಡಿದರೆ ಹೇಗೆ…? ಕಾನೂನು ರಕ್ಷಕರೆ ಬಕ್ಷಕರಾದರೆ ಸಮಾಜದ ಗತಿ ಏನು…?ಅಂತಹದೂಂದು ಘಟನೆ ನಡೆದಿದೆ.       ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಮದ್ಯಪಾನ ಮಾಡಿ ಜೂಜಾಟ ನಡೆಸಿ ದುರ್ನಡತೆಯಿಂದ ನಡೆದುಕೊಂಡು ಇಲಾಖೆಗೆ ಕಳಂಕ ತಂದ ಹಿನ್ನೆಲೆಯಲ್ಲಿ ಎಎಸ್‍ಐ ಸೇರಿದಂತೆ ನಾಲ್ಕು ಜನ ಪೊಲಿಸ್‍ರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಕೋನಾ ವಂಶಿ ಕೃಷ್ಣರವರು ಅಮಾನತ್ ಮಾಡಿ ಆದೇಶ ಹೊರಡಿಸಿದ್ದಾರೆ.       ಎಎಸ್‍ಐ ರಾಮಚಂದ್ರಪ್ಪ, ಎಂ.ಸಿ.ಮಹೇಶ್,(ಎಸ್ ಬಿ ಡ್ಯೊಟಿ) ಚಲುವರಾಜು(ಠಾಣೆಯ ರೈಟರ್) ಸಂತೋಷ್ (ಜಿಲ್ಲಾ ಶಸತ್ರ ಮೀಸಲು ಪಡೆಯ ಹೈವೆ ಪ್ಯಾಟ್ರೋಲಿಂಗ್ ವಾಹನದ ಚಾಲಕ) ಇವರನ್ನು ಅಮಾನತ್ ಮಾಡಲಾಗಿದೆ. ಘಟನೆಯ ಸಂಬಂಧ ಇಲ್ಲಿನ ಸಬ್‍ಇನ್ಸ್‍ಪೆಕ್ಟರ್ ರಾಮಕೃಷ್ಣ ಅವರು ಎಸ್ಪಿಯವರ ಗಮನಕ್ಕೆ ತಂದಿದ್ದಾರೆ. ಅಗ ರಾಮಕೃಷ್ಣ ಅವರ ವಿರುದ್ಧ ಕೆಂಡಾಮಂಡಲರಾದ ಎಸ್ಪಿಯವರು…

ಮುಂದೆ ಓದಿ...