ಗುಬ್ಬಿ : ವಿಷ ಸೇವಿಸುವ ಹಂತಕ್ಕೆ ತಲುಪಿದ ಭೂಮಿ ಕಳೆದುಕೊಂಡು ರೈತರು!!

ಗುಬ್ಬಿ :      ತಾಲ್ಲೂಕಿನ ಸೋಮಲಾಪುರದ ರೈತರು ಭೂಮಿಯನ್ನು ಕಳೆದುಕೊಂಡು ನೀರನ್ನು ಕಾಣದೇ ಹತಾಶರಾಗಿ ವಿಷ ಸೇವಿಸುವ ಹಂತಕ್ಕೆ ತಲುಪಿದ್ದು ವಿಷಾದನೀಯ.       ಹೇಮಾವತಿ ಕಾಲುವೆ 15ಸಿ ಒಂದರಲ್ಲಿ ಉಪಕಾಲುವೆಗಳ ಮುಖಾಂತರ ಸುಮಾರು 10-15 ಹಳ್ಳಿಗಳಿಗೆ ಕುಡಿಯುವ ನೀರಿಗೆ ಸರಬರಾಜು ಮಾಡುವ ಈ ಕಾಲುವೆಯು ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ಕಾಲುವೆಯ ಮೇಲ್ಭಾಗದಲ್ಲಿದ್ದ ಮಣ್ಣು ಕಾಲುವೆಗೆ ಬಿದ್ದು ಇಡೀ ಕಾಲುವೆಯು ಮುಚ್ಚಿದ್ದು ಪೈಪ್‍ಲೈನ್ ಮಾಡಿದ್ದು ಯಾವ ಪುರುಷಾರ್ಥಕ್ಕೆ ಎಂದು ಸ್ಥಳಿಯ ಮುಖಂಡರು ದೂರಿದ್ದಾರೆ.       ಪ್ರತಿ ವರ್ಷವೂ 3-4 ಲಕ್ಷ ರೂ. ಖರ್ಚು ಮಾಡಿ ಬಿದ್ದಂತಹ ಮಣ್ಣನ್ನು ಮೇಲಕ್ಕೆ ತೆಗೆದು ಕಾಲುವೆಯನ್ನು ದುರಸ್ತಿ ಮಾಡುತ್ತಿದ್ದೇವೆ ಎಂದು ರೈತರುಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಲುವೆಯನ್ನು ದುರಸ್ತಿ ಮಾಡದೇ ಹೋದಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.       ಈ…

ಮುಂದೆ ಓದಿ...

SSLC ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ

ತುಮಕೂರು:      ಜೂ.25 ರಿಂದ ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೆಪಿಸಿಸಿ ವಕ್ತಾರರಾದ ಮುರಳೀಧರ ಹಾಲಪ್ಪ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಮಾಡಿದರು.      ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಗೆ ಸೋಮವಾರ ಕಾಂಗ್ರೆಸ್ ಮುಖಂಡರು ಹಾಗೂ ವಿದ್ಯಾರ್ಥಿಗಳ ಪೋಷಕರೊಂದಿಗೆ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಿದ ಅವರು, ರಾಜ್ಯದಲ್ಲಿ 2,879 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಕೊರೋನ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಒಂದು ರೀತಿಯ ಭಯದ ವಾತಾವರಣವಿದೆ. ಹೀಗಾಗಿ ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.       ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದಾಗ ಕೇಂದ್ರದ ಸ್ವಚ್ಚತೆ, ಶೌಚಾಲಯ, ಕುಡಿಯುವ…

ಮುಂದೆ ಓದಿ...

ಚಿಕ್ಕನಾಯಕನಹಳ್ಳಿ : ಶಾರ್ಟ್ ಸಕ್ರ್ಯೂಟ್‍ನಿಂದ ಹೊತ್ತಿ ಉರಿದ ಓಮ್ನಿ!!

ಚಿಕ್ಕನಾಯಕನಹಳ್ಳಿ:       ಇಂಜಿನ್‍ಲ್ಲಿ ಶಾರ್ಟ್ ಸಕ್ರ್ಯಟ್ ನಿಂದಾಗಿ ಒಮ್ನಿಕಾರೊಂದು ಮಾರ್ಗಮಧ್ಯದಲ್ಲಿ ಹೊತ್ತಿ ಉರಿದ ಘಟನೆ ಶೆಟ್ಟಿಕೆರೆ ಬಳಿ ನಡೆದಿದೆ.       ಚಿಕ್ಕನಾಯಕನಹಳ್ಳಿ – ತಿಪಟೂರಿನ ಮಾರ್ಗದ ನಡುವೆ ಶೆಟ್ಟಿಕೆರೆ ಬಳಿ ಚಲಿಸುತ್ತಿದ್ದ ಮಾರುತಿ ಒಮ್ನಿಯ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿದ ಪರಿಣಾಮ ಚಲಿಸುತ್ತಿದ್ದಾಗಲೇ ಹೊತ್ತಿ ಉರಿಯಿತು. ಈ ಸಂದರ್ಭದಲ್ಲಿ ವಾಹನದಲ್ಲಿದ್ದವರು ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.       ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ವಾಹನ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ವಾಹನ ಭಾಗಶಃ ಸುಟ್ಟುಹೋಗಿದ್ದು ಸುಮಾರು ರೂ.3 ಲಕ್ಷರೂ ನಷ್ಟ ಸಂಭವಿಸಿದೆ. ವಾಹನ ಶೆಟ್ಟಿಕೆರೆಯ ಲೋಕೇಶ್ ಎಂಬುವರದ್ದಾಗಿದ್ದು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯಲ್ಲಿ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕದಳದ ಜ್ಞಾನಮೂರ್ತಿ ತಂಡ ಕಾರ್ಯನಿರ್ವಹಸಿದರು.

ಮುಂದೆ ಓದಿ...

ಮುಸುಕಿನ ಜೋಳ ಬೆಳೆದ ರೈತರಿಗೆ 5 ಸಾವಿರ ರೂ. ಆರ್ಥಿಕ ನೆರವು

ತುಮಕೂರು :        ಸರ್ಕಾರದ ಆದೇಶದಂತೆ ಕೋವಿಡ್-19 ಲಾಕ್‍ಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೊಳಗಾಗಿರುವ ಮುಸುಕಿನ ಜೋಳ ಬೆಳೆದ ರೈತರಿಗೆ ಬೆಳೆ ಪರಿಹಾರವಾಗಿ 5ಸಾವಿರ ರೂ.ಗಳ ಆರ್ಥಿಕ ನೆರವು ನೀಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚನ ತಿಳಿಸಿದ್ದಾರೆ.       ಲಾಕ್‍ಡೌನ್‍ನಿಂದ ಮುಸುಕಿನ ಜೋಳಕ್ಕೆ ಬೇಡಿಕೆ ಇಲ್ಲದಂತಾಗಿ 2019-20ನೇ ಸಾಲಿನಲ್ಲಿ ಮುಸುಕಿನ ಜೋಳ ಬೆಳೆದು ಸಂಕಷ್ಠಕ್ಕೊಳಗಾಗಿರುವ ರೈತರಿಗೆ ಅಲ್ಪಾವಧಿ ಆರ್ಥಿಕ ನೆರವು ನೀಡಲು ಸರ್ಕಾರ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ 2019-20ನೇ ಸಾಲಿನಲ್ಲಿ ಮುಸುಕಿನ ಜೋಳ ಬೆಳೆದ ರೈತರಿಗೆ ಬೆಳೆ ಸಮೀಕ್ಷೆಯ ತಂತ್ರಾಂಶದಲ್ಲಿ ಈಗ ದಾಖಲಾಗಿರುವ ಬೆಳೆ ವಿವರಗಳ ಆಧಾರದ ಮೇರೆಗೆ ಬೆಳೆ ಪರಿಹಾರವನ್ನು ಪಾವತಿಸಲಾಗುವುದು.       ಬೆಳೆ ಸಮೀಕ್ಷೆಯಲ್ಲಿರುವಂತೆ ಮುಸುಕಿನ ಜೋಳದ ಬೆಳೆಗಾರರ ಪಟ್ಟಿಯನ್ನು ಗ್ರಾಮ ಪಂಚಾಯಿತಿ, ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಕಛೇರಿಯ ನಾಮಫಲಕಗಳಲ್ಲಿ ಪ್ರದರ್ಶಿಸಲಾಗುವುದು. ಬೆಳೆ ಪರಿಹಾರವನ್ನು…

ಮುಂದೆ ಓದಿ...

ವಕ್ಫ್ ಆಡಳಿತ ಸಮಿತಿಗೆ ಚುನಾವಣೆ ನಡೆಸುವಂತೆ ಸದಸ್ಯರ ಒತ್ತಾಯ

ತುಮಕೂರು:       ಜಿಲ್ಲಾ ವಕ್ಫ್ ಸಮಿತಿಗೆ ನಿರ್ವಹಣಾ ಸಮಿತಿಯನ್ನು ರಾಜ್ಯ ವಕ್ಫ್ ಸಮಿತಿ ಏಕಪಕ್ಷೀಯವಾಗಿ ನೇಮಿಸಿರುವುದಕ್ಕೆ ಜಿಲ್ಲಾ ವಕ್ಫ್ ಸಮಿತಿ ಸದಸ್ಯರು ವಿರೋಧ ವ್ಯಕ್ತಪಡಿಸಿ, ವಕ್ಫ್ ಸಮಿತಿ ಆಡಳಿತಾಧಿಕಾರಿಯನ್ನು ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.        ವಕ್ಫ್ ಸಮಿತಿಗೆ ಚುನಾವಣೆ ನಡೆಸಲು ಸದಸ್ಯತ್ವ ಅಭಿಯಾನವನ್ನು ಬೈಲಾ ತಿದ್ದುಪಡಿ ಮಾಡಿ, ಜಿಲ್ಲೆಯಾದ್ಯಂತ ಸದಸ್ಯತ್ವ ನೋಂ ದಣಿಯನ್ನು ಮಾಡಲಾಗಿದ್ದು, ಈಗ ಬೈಲಾವನ್ನು ಉಲ್ಲಂಘಿಸಿ, ಮಾಜಿ ಶಾಸಕ ರಫೀಕ್ ಅಹ್ಮದ್ ಅವರ ಶಿಫಾರಸ್ಸಿನಂತೆ ನಿರ್ವಹಣಾ ಸಮಿತಿಯನ್ನು ನೇಮಕ ಮಾಡಲಾಗಿದೆ ಎಂದು ದೂರಿದ ಸದಸ್ಯರು ಜಿಲ್ಲಾ ವಕ್ಫ್ ಸಮಿತಿಯನ್ನು ಗಣನೆಗೆ ತೆಗೆದು ಕೊಳ್ಳದೇ ರಾಜ್ಯ ವಕ್ಫ್ ಸಮಿತಿ ನೇಮಿಸಿರುವ ನಿರ್ವಹಣಾ ಸಮಿತಿಗೆ ಅಧಿಕಾರವನ್ನು ನೀಡಬಾರದು ಎಂದು ಆಗ್ರಹಿಸಿದರು.       ಸದಸ್ಯರಿಗೆ ಗೊತ್ತಿಲ್ಲ: ಜಿಲ್ಲಾ ವಕ್ಫ್ ಸಮಿತಿಗೆ ನೇಮಕವಾಗಿರುವ ನಿರ್ವಹಣಾ ಸಮಿತಿಯಲ್ಲಿರುವ ಸದಸ್ಯರಿಗೆ ನೇಮಕವಾಗಿರುವ…

ಮುಂದೆ ಓದಿ...

ತುಮಕೂರು : ಸಿದ್ದಗಂಗಾ ಮಠದ ದ್ವಾರದಲ್ಲಿ ಕಲ್ಪಶುದ್ಧಿ ಸ್ಯಾನಿಟೈಸ್ ಘಟಕ

ತುಮಕೂರು:       ಕೊರೊನಾ ಮಹಾಮಾರಿಯಿಂದ ಪಾರಾಗುವ ಸಲುವಾಗಿ ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಸ್ಯಾನಿಟೈಜೇಶನ್, ಕಲ್ಪಶುದ್ಧಿ ಸ್ಯಾನಿಟರಿ ಘಟಕ (ಗೇಟ್ ವೇ)ವನ್ನು ಸ್ಥಾಪಿಸಲಾಗಿದೆ.       ಈ ಕಲ್ಪಶುದ್ಧಿ ಸ್ಯಾನಿಟರ್ ಘಟವನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಉದ್ಘಾಟಿಸಿದರು. ಸಂಜೀವಿನಿ ರಕ್ತನಿಧಿ ಕೇಂದ್ರದ ಅರುಣ್‍ಕುಮಾರ್ ಕೊಡುಗೆಯಾಗಿ ನೀಡಿರುವ ಸ್ಯಾನಿಟೈಸ್ ಗೇಟ್ ವೇಯನ್ನು ಎಸ್‍ಐಟಿ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿ ಚಿದಾನಂದ್ ಸ್ಥಾಪಿಸಿದ್ದು, ಮಠಕ್ಕೆ ಬರುವ ಭಕ್ತಾದಿಗಳಿಗೆ ಸ್ವಯಂ ಚಾಲಿತವಾಗಿ ಈ ಘಟಕದ ಉಪಕರಣ ಸ್ಯಾನಿಟೈಸ್ ಮಾಡಲಿದೆ.       ಈ ಘಟಕ ಉದ್ಘಾಟಿಸಿದ ನಂತರ ಮಾತನಾಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕ್ಯಾತ್ಸಂದ್ರದಿಂದ ಶ್ರೀಮಠಕ್ಕೆ ಪ್ರವೇಶ ಪಡೆಯುವ ವಸ್ತುಪ್ರದರ್ಶನದ ಮುಂಭಾಗದ ಗೇಟ್ ಬಳಿ ಈ ಸ್ಯಾನಿಟೈಸ್ ಗೇಟ್ ವೇ ಸ್ಥಾಪಿಸಲಾಗಿದೆ. ಈ ಬೂತ್‍ನಲ್ಲಿನ ಉಪಕರಣ ಮನುಷ್ಯನಿಗೆ ಸಂಪೂರ್ಣವಾಗಿ…

ಮುಂದೆ ಓದಿ...