ತುಮಕೂರು : ಸ್ಮಾರ್ಟ್ ಸಿಟಿಗೆ ಸಾರ್ವಜನಿಕ ಸಂಪರ್ಕ ಅಧಿಕಾರಿ

ತುಮಕೂರು:        ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮತ್ತು ಮಾದ್ಯಮದವರಿಗೆ ಮಾಹಿತಿ ಮತ್ತು ಸ್ಪಷ್ಟತೆ ನೀಡಲು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಛೇರಿಯಲ್ಲಿ ಪ್ರಸ್ತುತ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ಎಸ್.ಬಿ ಅವರನ್ನು ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದ್ದು, ಸಹಾಯಕರಾಗಿ ಕಾರ್ಯನಿರ್ವಹಿಸಲು ಪ್ರಥಮ ದರ್ಜೆ ಕಾರ್ಯನಿರ್ವಾಹಕ ಸಹಾಯಕರಾಗಿರುವ ಆರ್.ಮನೋಹರ್ ಗೌಡ ಅವರಿಗೆ ಸೂಚಿಸಲಾಗಿದೆ. ಸ್ಮಾರ್ಟ್ ಸಿಟಿಯ ಯಾವುದೇ ರೀತಿಯ ಮಾಹಿತಿ ಪಡೆಯಲು ಮಂಜುನಾಥ್ ಎಸ್.ಬಿ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ, ಮೊ:9686375507. ಆರ್.ಮನೋಹರ್ ಗೌಡ, ಕಾರ್ಯನಿರ್ವಾಹಕ ಸಹಾಯಕರು(ಪ್ರಥಮ ದರ್ಜೆ) ಮೊ: 9916920418ಕ್ಕೆ ಸಂಪರ್ಕಿಸಬಹುದಾಗಿದೆ ಪ್ರಕಟಣೆ ತಿಳಿಸಿದೆ.  

ಮುಂದೆ ಓದಿ...

ಕೊರೊನ ಭೀತಿಯ ನಡುವೆಯೂ ಪಿಯುಸಿ ಇಂಗ್ಲೀಷ್ ಪರೀಕ್ಷೆಗೆ ವಿದ್ಯಾರ್ಥಿಗಳು ಸನ್ನದ್ಧ

ತುಮಕೂರು:       ಇಡೀ ವಿಶ್ವದಾದ್ಯಂತ ಕೊರೊನಾ ರಣಕಹಳೆ ಮೊಳಗಿದ್ದು ಕೋಟ್ಯಾಂತರ ಜನ ಈ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ದೇಶವು ಹೊರತಾಗಿಲ್ಲ. ಪ್ರತಿ ದಿನ ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಹೋಗುತ್ತಿದ್ದು, ದೇಶದ ಜನತೆಯ ಮೇಲೆ ವ್ಯತಿರೀಕ್ತ ಪರಿಣಾಮ ಬೀರುತ್ತಿದೆ. ಇನ್ನು ರಾಜ್ಯಾದ್ಯಂತ ಸೋಂಕಿತರು ಹೆಚ್ಚಾಗುತ್ತಿರುವ ಸಂಗತಿಗಳು ಪ್ರತಿದಿನ ಘಟಿಸುತ್ತಿವೆ. ಈ ನಡುವೆಯು ರಾಜ್ಯ ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆಯ ಉಳಿದಿದ್ದ ಇಂಗ್ಲೀಷ್ ಪರೀಕ್ಷೆಯನ್ನು ಮಾಡಲು ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಕಲ ಸಿದ್ಧತೆಗಳು ಹಾಗೂ ಹೆಚ್ಚೆರಿಕೆಯ ಕ್ರಮಗಳನ್ನು ಕೈಗೊಂಡಿದೆ. ಇನ್ನು ತುಮಕೂರು ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮಗೊಳ್ಳುವ ಮೂಲಕ ಪರೀಕ್ಷೆ ನಡೆಸಲು ಸಕಲ ಸಿದ್ಧತೆಗಳು ನಡೆಯಲಿದೆ. ನಗರದ ಎಂಪ್ರೆಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಇಂಗ್ಲೀಷ್ ವಿಷಯದ ಪರೀಕ್ಷೆಗಾಗಿ ಸಕಲ ಸಿದ್ದತೆಗಳು ಪೂರ್ಣಗೊಂಡಿದ್ದು, ಈ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 1306 ಜನ ವಿದ್ಯಾರ್ಥಿಗಳು…

ಮುಂದೆ ಓದಿ...