ಚಿ.ನಾ.ಹಳ್ಳಿ ಕೊರೊನಾ ಸೋಂಕು ಪ್ರಕರಣ : ಸ್ಥಳಕ್ಕೆ ಡಿಸಿ ಭೇಟಿ

ಚಿಕ್ಕನಾಯಕನಹಳ್ಳಿ:       ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾದ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಸೂಕ್ತ ಸಲಹೆ ನೀಡಿದರು.       ಪಟ್ಟಣದ ಹೊಸಬೀದಿ ಬಳಿಯ ಹಿರಿಯಣ್ಣನ ಹಟ್ಟಿವಾಸಿ ಮಹಿಳೆಯೊಬ್ಬರಿಗೆ ಕೊರೊನಾ ಧೃಡಪಟ್ಟ ಹಿನ್ನಲೆಯಲ್ಲಿ ಈ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿತ್ತು. ಸದರಿ ಸ್ಥಳಕ್ಕೆ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಭೇಟಿ ನೀಡಿ ಸ್ಥಳಪರೀಶೀಲಿಸಿದರು. ನಂತರ ತಹಸೀಲ್ದಾರ್, ಆರೋಗ್ಯ ಸಿಬ್ಬಂದಿ, ಪುರಸಭಾ ಅಧಿಕಾರಿವರ್ಗ ಹಾಗೂ ಪೊಲೀಸ್ ಸಿಬ್ಬಂದಿಗೆ ಹಲವು ನಿರ್ದೇಶನ ನೀಡಿದರು.      ಮೊದಲ ಪ್ರಕರಣದಿಂದ ಪಟ್ಟಣದ ಜನತೆ ಭಯಭೀತಗೊಂಡಿರುವ ಹಿನ್ನಲೆಯಲ್ಲಿ ಜನರಿಗೆ ಸೂಕ್ತ ತಿಳುವಳಿಕೆ ಅಗತ್ಯವಿದೆ, ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಜಾಗ್ರತೆ ಹಾಗೂ ರಕ್ಷಣಾತ್ಮಕ ಕ್ರಮಗಳ ಬಗ್ಗೆ ತಿಳುವಳಿಕೆ ನೀಡುವ ಮೂಲಕ ಜನರನ್ನು ಭಯ ಹಾಗೂ ಭೀತಿಯಿಂದ ಮುಕ್ತಗೊಳಿಸಬೇಕಿದೆ ಎಂದರು.       ಈವರೆಗೂ ಸೋಂಕಿತ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿರುವ 16 ಮಂದಿಯ ಗಂಟಲುದ್ರವವನ್ನು…

ಮುಂದೆ ಓದಿ...

ತುಮಕೂರು : ಬಿಜೆಪಿಯ ಜಿಲ್ಲಾಧ್ಯಕ್ಷರಾಗಿ ಬಿ.ಸುರೇಶ್‍ಗೌಡ!

ತುಮಕೂರು:       ತುಮಕೂರು ಜಿಲ್ಲೆ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾಗಿ ಮಾಜಿ ಶಾಸಕ ಬಿ.ಸುರೇಶ್‍ಗೌಡರನ್ನು ಆಯ್ಕೆ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆದೇಶ ಹೊರಡಿಸಿರುತ್ತಾರೆ.        ನೂತನ ಜಿಲ್ಲಾಧ್ಯಕ್ಷ ಸ್ಥಾನದ ಸಾರಥ್ಯವನ್ನು ವಹಿಸಿಕೊಳ್ಳಲು ಸನ್ನದ್ಧರಾಗಿರುವ ಬಿ.ಸುರೇಶ್‍ಗೌಡ ಹಿಂದೆ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಎರಡು ಬಾರಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ. ಒಂದು ಬಾರಿ ಮೈಸೂರು ಪೇಪರ್ ಮಿಲ್ಸ್‍ನ (ನಿಗಮ-ಮಂಡಳಿ) ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರ ಸುರೇಶ್‍ಗೌಡರು. ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಜಿಲ್ಲಾಧ್ಯಕ್ಷರಾಗಿ ಎರಡನೇ ಬಾರಿ ಮರು ನೇಮಕಗೊಂಡಿರುತ್ತಾರೆ. ಇವರ ಆಯ್ಕೆಯನ್ನು ಕಂಡು ಅವರ ಅಭಿಮಾನಿ ಬಳಗ ಸಂಭ್ರಮಿಸಿದೆ.

ಮುಂದೆ ಓದಿ...

ಜೂ.25ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ : ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ತುಮಕೂರು:       ಜಿಲ್ಲೆಯಲ್ಲಿ ಜೂನ್ 25 ರಿಂದ ಜುಲೈ 4ರವರೆಗೆ ತುಮಕೂರು(ದ) ಶೈಕ್ಷಣಿಕ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆ ಸೇರಿದಂತೆ ಒಟ್ಟು 144 ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.       ಪರೀಕ್ಷೆಗೆ 37306 ವಿದ್ಯಾರ್ಥಿಗಳು ನೋಂದಣಿ: ತುಮಕೂರು ಶೈಕ್ಷಣಿಕ ಜಿಲ್ಲೆಯ 23783 ಹಾಗೂ ಮಧುಗಿರಿಯ 13523 ಸೇರಿದಂತೆ ಒಟ್ಟು 37306 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ. ಈ ಪೈಕಿ ಜಿಲ್ಲೆಯ 20329 ಬಾಲಕರು ಹಾಗೂ 16977 ಬಾಲಕಿಯರಿದ್ದು, ಇವರಲ್ಲಿ 34366(ಪ್ರಥಮ ಪ್ರಯತ್ನ), 2082(ಪುನರಾವರ್ತಿತ), 587(ಖಾಸಗಿ), 204(ಖಾಸಗಿ ಪುನರಾವರ್ತಿತ), 67(ಪುನರಾವರ್ತಿತ ಹಳೆಯ) ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೋವಿಡ್-19ರ ಹಿನ್ನೆಲೆಯಲ್ಲಿ ಸುರಕ್ಷತೆಯೊಂದಿಗೆ ಪರೀಕ್ಷೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.       144 ಪರೀಕ್ಷಾ ಕೇಂದ್ರ : ವಿದ್ಯಾರ್ಥಿಗಳ ಸುರಕ್ಷತಾ…

ಮುಂದೆ ಓದಿ...