ತಿಪಟೂರು : ತಾಲ್ಲೂಕು ದಂಡಾಧಿಕಾರಿ ಕಚೇರಿಗೆ ಕನ್ನ: ಶ್ರೀಗಂಧ ಕಳವು!!

ತಿಪಟೂರು:        ತಾಲ್ಲೂಕು ದಂಡಾಧಿಕಾರಿ ಕಚೇರಿ ಆವರಣದಲ್ಲಿದ್ದ ಲಕ್ಷಾಂತರ ಬೆಲೆ ಬಾಳುವ ಶ್ರೀಂಗಂಧದ ಮರಗಳನ್ನ ರಾತ್ರೋರಾತ್ರಿ ಕಳ್ಳ ಕದೀಮರು ಕಡಿದು‌ ಸಾಗಿಸಿದ್ದಾರೆ. ತಿಪಟೂರು ತಾಲ್ಲೂಕು ದಂಡಾಧಿಕಾರಿ ಕಚೇರಿ ಆವರಣದಲ್ಲಿದ್ದ ಮೂರು ಮರಗಳನ್ನ ಕಳವು ಮಾಡಿದ್ದಾರೆ.       ಮಂಗಳವಾರ ರಾತ್ರಿ ಘಟನೆ ನಡೆದಿದ್ದು ರಾತ್ರಿ ಕಾವಲು ಪಾಳಿಯಲ್ಲಿದ್ದ ಗ್ರಾಮ ಸಹಾಯಕ ಬೆಳಗೆದ್ದು ನೋಡಿದಾಗ ಪ್ರಕರಣ ಬಯಲಿಗೆ ಬಂದಿದೆ. ಕಚೇರಿ ಹಿಂಬಾಗದ ಗೇಟ್ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಆವರಣದಲ್ಲಿದ್ದ ಮೂರು ಮರಗಳನ್ನ ಕಡಿದು ಸಾಗಿಸಿದ್ದಾರೆ.       ವಿಪರ್ಯಾಸ ಅಂದರೆ ತಾಲ್ಲೂಕು ಕಚೇರಿ ಕಾಂಪೌಂಡ್ ಗೆ ಹೊಂದಿಕೊಂಡಂತೆ ಗ್ರಾಮಾಂತರ ಪೊಲೀಸ್ ಠಾಣೆ ಇದ್ದರೂ ಕಳ್ಳರು ಧೈರ್ಯವಾಗಿ ಕಳ್ಳತನ ಮಾಡಿದ್ದಾರೆ‌. ಜೊತೆಗೆ ರಾತ್ರಿ ಕಾವಲು ಸಿಬ್ಬಂದಿ ಒಳಗೆ ಇದ್ದರೂ ಬೀಗ ಮುರಿದು ಒಳಗೆ ನುಗ್ಗಿರುವ ಕಳ್ಳರು ಮರ ಕಡಿದು ಸಾಗಿಸಿದ್ರು ರಾತ್ರಿ ಪಾಳಿ…

ಮುಂದೆ ಓದಿ...

ಶಿರಾ : ಬಾಲಕನಿಗೆ ಸೋಂಕು, ಮತ್ತೊಂದು ಕೊರೊನಾ ಪಾಸಿಟಿವ್!!

ಶಿರಾ :       ಜಿಲ್ಲೆಯಲ್ಲಿ ಗುರುವಾರ ಮತ್ತೊಂದು ಕೋವಿಡ್ 19 ಪಾಸಿಟಿವ್ ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 58ಕ್ಕೆ ಏರಿದೆ. ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ 15 ವರ್ಷದ ಬಾಲಕನಿಗೆ (ಟಿಎಂಕೆ 58) ಸೋಂಕು ಕಂಡು ಬಂದಿದೆ.        ಈತ ಜೂನ್ 24 ರಂದು ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ನೀಡಿದ್ದನ್ನು, ಅದನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಂದು ಸೋಂಕು ದೃಢಪಟ್ಟಿದೆ. ಈತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.       ಈತನ ತಾಯಿ ಆಂಧ್ರಪ್ರದೇಶದ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡಿದ್ದು, ಅವರಿಗೂ ಕೋವಿಡ್ 19 ಪಾಸಿಟಿವ್ ಬಂದಿದೆ. ಆಕೆ ಆಂಧ್ರಪ್ರದೇಶದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.       ಸೋಂಕಿತ ಬಾಲಕನು ಜೂನ್ 22 ರಂದು ತಂದೆಯೊಂದಿಗೆ ಆಂಧ್ರಪ್ರದೇಶದ ರಾಯದುರ್ಗ ತಾಲೂಕಿನಿಂದ ಬಸ್ ನಲ್ಲಿ…

ಮುಂದೆ ಓದಿ...

ಪರೀಕ್ಷೆ ಮುಗಿಯುವ ಮುನ್ನವೇ ಕಾಲ್ಕಿತ್ತ ಮೇಲ್ವಿಚಾರಕರು

ಮಧುಗಿರಿ :        ಪರಸ್ಪರ ಅಂತರ ಮಾಯ, ಮಾಸ್ಕ್ ಧರಿಸದೇ ಏಕಕಾಲಕ್ಕೆ ಗುಂಪಾಗಿ ಪರೀಕ್ಷಾ ಕೇಂದ್ರಗಳಿಂದ ಹೊರಬಂದ ವಿದ್ಯಾರ್ಥಿಗಳು, ಬಸ್ ಸೌಕರ್ಯವಿದ್ದರೂ ಕೆಲವೆಡೆ ವಿದ್ಯಾರ್ಥಿಗಳನ್ನು ಕುರಿಗಳಂತೆ ತುಂಬಿಕೊಂಡು ಸಾಗಿಸಿದ ಆಟೋ ಚಾಲಕರು ಇವು ಮಧುಗಿರಿಯಲ್ಲಿ ಗುರುವಾರ ನಡೆದ ಮೊದಲ ದಿನದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಂಡು ಬಂದ ದೃಶ್ಯಗಳು.         ಅಧಿಕಾರಿಗಳೇ ಮಾಯ: ಬೆಳಗ್ಗೆ ಪರೀಕ್ಷೆ ಆರಂಭಕ್ಕೂ ಮುನ್ನ ಕೇಂದ್ರಗಳಲ್ಲಿ ಕೆಲವೆಡೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳ ಕೊಠಡಿಗಳ ಸಂಖ್ಯೆಯನ್ನು ನೋಡಲು ಗುಂಪುಗೂಡಿದ್ದರಾದರೂ ಪೋಲೀಸರು ಆಗಮಿಸಿ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಚದುರಿಸಿದರು. ಪರೀಕ್ಷೆಗೂ ಮುನ್ನ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯ ದ್ವಾರಗಳಲ್ಲಿ ಪ್ರತೀ ವಿದ್ಯಾರ್ಥಿಗೂ ಥರ್ಮಲ್ ಸ್ಯಾನಿಂಗ್ ಮತ್ತು ಸ್ಯಾನಿಟೈಸಿಂಗ್ ಮಾಡಿ ಕೊಠಡಿಯೊಳಗೆ ಕಳುಹಿಸಿಕೊಡಲಾಗಿತ್ತು. ಆದರೆ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಿಕೊಡಬೇಕಾದರೆ ಇದ್ದ ಕಾಳಜಿ ಪರೀಕ್ಷೆ ಮುಗಿದ ನಂತರ ಇರಲಿಲ್ಲ. ವಿದ್ಯಾರ್ಥಿಗಳ ಜವಾಬ್ದಾರಿ…

ಮುಂದೆ ಓದಿ...

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಿಗೆ ಸಿಇಓ ಭೇಟಿ!!

ತುಮಕೂರು:       ನಗರದ ಸಿದ್ದಗಂಗಾ ಮಠ, ಎಂಪ್ರೆಸ್ ಹಾಗೂ ಸೆಂಟ್‍ಮೇರಿಸ್ ಶಾಲೆ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.         ಕೊರೊನಾ ಮಹಾಮಾರಿಯ ಭಯ, ಆತಂಕದ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು, ಜಿಲ್ಲೆಯ 144 ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದೆ.       ಬೆಳಿಗ್ಗೆ 8 ಗಂಟೆಯಿಂದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ್ದು, ಆರೋಗ್ಯ ಇಲಾಖೆ ವತಿಯಿಂದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಪರೀಕ್ಷಾ ಕೊಠಡಿಗಳಿಗೆ ತೆರಳಲು ಅವಕಾಶ ಮಾಡಿಕೊಡಲಾಯಿತು.       ತುಮಕೂರು ಶೈಕ್ಷಣಿಕ ಜಿಲ್ಲೆಯಿಂದ 23,782 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 13,523 ಮಕ್ಕಳು ಸೇರಿ ಒಟ್ಟು 37,306 ವಿದ್ಯಾರ್ಥಿಗಳು ಇಂದಿನಿಂದ ಆರಂಭವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ.ಜಿಲ್ಲೆಯ 144 ಪರೀಕ್ಷಾ ಕೇಂದ್ರಗಳಲ್ಲೂ…

ಮುಂದೆ ಓದಿ...

ಕನ್ನಡ ವಿಷಯದ ಪರೀಕ್ಷೆಗೆ 88 ವಿದ್ಯಾರ್ಥಿಗಳು ಗೈರು!!

ಕೊರಟಗೆರೆ:        ಕೊರೊನಾ ರೋಗ ಹರಡುವಿಕೆ ಭಯದ ನಡುವೆಯು ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಕೊರಟಗೆರೆ ತಾಲೂಕಿನ 2226ಜನ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಅದರಲ್ಲಿ 62ಜನ ವಿದ್ಯಾರ್ಥಿಗಳು ಮತ್ತೊಂದು ಪರೀಕ್ಷಾ ಕೇಂದ್ರ ವರ್ಗಾವಣೆ ಆದರೆ 88ಜನ ವಿದ್ಯಾರ್ಥಿಗಳು ಗೈರುಹಾಜರಾತಿಗೆ ಕಾರಣವೇ ಇಲ್ಲದಾಗಿದೆ.       ಕೊರಟಗೆರೆ ತಾಲೂಕಿನಲ್ಲಿ ಒಟ್ಟು 12ಪರೀಕ್ಷಾ ಕೇಂದ್ರಗಳಿವೆ. ಪಟ್ಟಣದ ಪದವಿಪೂರ್ವ ಕಾಲೇಜು, ಕಾಳಿದಾಸ ಪ್ರೌಢಶಾಲೆ, ಬಾಲಕಿಯರ ಪ್ರೌಢಶಾಲೆ ಕೋಳಾಲ, ತೀತಾ, ಐ.ಕೆ.ಕಾಲೋನಿ, ಗೋಡ್ರಹಳ್ಳಿ, ಹೊಳವನಹಳ್ಳಿ, ಅಕ್ಕಿರಾಂಪುರ, ಬುಕ್ಕಾಪಟ್ಟಣ, ಮುಗ್ಗೊಂಡನಹಳ್ಳಿ ಮತ್ತು ತೋವಿನಕೆರೆ ಪ್ರೌಢಶಾಲೆಯಲ್ಲಿ 1076ಜನ ವಿದ್ಯಾರ್ಥಿಗಳು ದ್ವಿತೀಯ ಬಾಷೆಯ ಇಂಗ್ಲೀಷ್ ಪರೀಕ್ಷೆ ಬರೆದಿದ್ದಾರೆ.        ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳುವ 12ಪರೀಕ್ಷಾ ಕೇಂದ್ರಗಳಿಗೆ ಪ್ರತಿನಿತ್ಯ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತೀದೆ. ವಿದ್ಯಾರ್ಥಿಗಳ ಸುಗಮ ಸಂಚಾರಕ್ಕಾಗಿ 4ಹೋಬಳಿಗಳಿಗೆ ಕೆಎಸ್‍ಆರ್‍ಟಿಸಿ ಬಸ್ಸಿನ ಮಾರ್ಗ ಇದೆ. ಖಾಸಗಿ ಶಾಲೆಗಳ ಸಹಬಾಗಿತ್ವದಿಂದ ಶಿಕ್ಷಣಾ ಇಲಾಖೆಯು 12ಮಾರ್ಗದಲ್ಲಿ…

ಮುಂದೆ ಓದಿ...

ತುಮಕೂರು: ನಗರದಲ್ಲಿ ಅಪರಿಚಿತರಿಂದ ವ್ಯಕ್ತಿ ಮೇಲೆ ಹಲ್ಲೆ!!

ತುಮಕೂರು:       ತುಮಕೂರು ನಗರದ ಭಾರತಿನಗರದ ವಾಸಿ ನರಸಿಂಹಮೂರ್ತಿ ಎನ್ನುವವರ ಮೇಲೆ ಹಲ್ಲೆಯಾಗಿದ್ದು, ಯಾವುದೆ ರೀತಿಯ ಪ್ರಾಣಾಪಾಯವಿರುವುದಿಲ್ಲ ಎಂದು ತಿಳಿದುಬಂದಿದೆ.       ಹಲ್ಲೆಗೊಳಗಾದ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೊಳಗಾದ ನರಸಿಂಹ ಮೂರ್ತಿ ರವರು ಚಿಕ್ಕಪೇಟೆಯ ಬ್ರಾಹ್ಮಣರ ಬೀದಿಯಲ್ಲಿರುವ ರತ್ನಮ್ಮನವರ ಮನೆಯ ಒಳಗಿನಿಂದ ಆಚೆ ಬರುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ಅಪರಿಚಿತ ವ್ಯಕ್ತಿಗಳು ಮನೆಯ ಮುಂಬಾಗದಲ್ಲಿಯೇ ಹಲ್ಲೆ ಮಾಡಿರುವುದಾಗಿ ತಿಳಿದುಬಂದಿದೆ.       ಹಲ್ಲೆಗೊಳಗಾಗಿರುವ ನರಸಿಂಹ ಮೂರ್ತಿ ಮತ್ತು ಆತನ ಮಕ್ಕಳಿಬ್ಬರ ಮೇಲೆ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಮಕ್ಕಳನ್ನ ಹತ್ಯೆಗೈಯಲು 15 ದಿನದ ಹಿಂದೆ ಪುಂಡರ ಗುಂಪು ಪ್ರಯತ್ನ ನಡೆಸಿತ್ತು ಅವರ ಪ್ರಯತ್ನ ವಿಫಲವಾಗಿತ್ತು ಎನ್ನಲಾಗಿದೆ. ಮಕ್ಕಳಿಬ್ಬರು ಸದರಿ ಪ್ರಕರಣದಲ್ಲಿ ಜೈಲುಸೇರಿದ್ದರು. ಇವರು ಮತ್ತು ಇವರ ಕುಟುಂಬಕ್ಕೆ ಹಗೆತನ ಅತ್ಯಧಿಕವಾಗಿತ್ತು ಎನ್ನಲಾಗುತ್ತಿದೆ ಹಲ್ಲೆಯ ಸಂಬಂಧ ಜಿಲ್ಲಾ…

ಮುಂದೆ ಓದಿ...

ಕೊರೊನಾ ಭೀತಿ : ಪರೀಕ್ಷಾ ಕೇಂದ್ರದ ಹೊರಗೆ ನಿಂತಿರುವ ಪೋಷಕರು!!

ತುಮಕೂರು :       ಕೊರೊನಾ ಭೀತಿಯ ನಡುವೆಯೂ ರಾಜ್ಯದಲ್ಲಿ ವಿದ್ಯಾರ್ಥಿಗಳು ಎಸ್ಎಸ್ಎಲ್​ಸಿ ಪರೀಕ್ಷೆಆರಂಭವಾಗಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ.      ಅತ್ತ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಹೋಗಿದ್ದರೆ, ಇತ್ತ ಪೋಷಕರು ಗಾಬರಿಯಿಂದ ಹೊರಗಡೆಯೇ ನಿಂತು ಕಾಯುತ್ತಿರುವ ದೃಶ್ಯ ಜಿಲ್ಲೆಯಲ್ಲಿ ಕಂಡು ಬಂದಿತು.       ವಿದ್ಯಾರ್ಥಿಗಳು ಸುರಕ್ಷಿತವಾಗಿ ಪರೀಕ್ಷೆ ಬರೆಯಲಿದ್ದಾರೆ, ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ, ಪೋಷಕರು ಗಾಬರಿಯಾಗಬೇಡಿ ಎಂದು ಧ್ವನಿವರ್ಧಕದ ಮೂಲಕ ಪೊಲೀಸ್ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಹೇಳುತ್ತಿದ್ದರು.  

ಮುಂದೆ ಓದಿ...