ತುಮಕೂರು :ಆರೋಗ್ಯ ಇಲಾಖೆಯ ಸಿಬ್ಬಂದಿಗೆ ವಕ್ಕರಿಸಿದ ಕೊರೊನಾ

 ತುಮಕೂರು :       ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರಿಗೆ ಕೊರೊನಾ ವಕ್ಕರಿಸಿದೆ.       ಸೋಂಕಿತ ವ್ಯಕ್ತಿ ಡಿಎಚ್‍ಓ ಕಛೇರಿಯಲ್ಲಿ ತಾಂತ್ರಿಕ ಸಿಬ್ಬಂಧಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,  ಈತನು 2 ಖಾಸಗಿ ಲ್ಯಾಬ್‍ಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ.  ಸೋಂಕಿತನ 2 ಲ್ಯಾಬ್‍ಗಳು ಮತ್ತು ಈತನ ಮನೆಯ ಏರಿಯಾವನ್ನು ಸೀಲ್‍ಡೌನ್ ಮಾಡಲು ತಯಾರಿ ನಡೆಯುತ್ತಿದೆ.       ಈತ ಡಿಎಚ್‍ಓ ಕಛೇರಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಸದರಿ ಕಛೇರಿಯಲ್ಲಿದ್ದ ಅಧಿಕಾರಿಗಳು ನೌಕರರು ಮತ್ತು ಸಿಬ್ಬಂಧಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.       ಈತನೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಪತ್ತೆಹಚ್ಚುವಿಕೆಗೆ ಡಿಎಚ್‍ಓ ಕಛೇರಿಯ ಸಿಬ್ಬಂಧಿಯೇ ದಿಗ್ಭ್ರಮೆಗೊಳಗಾಗಿದ್ದು, ಅಂತೂ ಇಂತು ಜಿಲ್ಲೆಯ ಆರೋಗ್ಯ ಇಲಾಖೆಯನ್ನೇ ಬಿಡದ ಕೊರೊನಾ ನಂಟು ಇನ್ಯಾರನ್ನ ಬಿಟ್ಟೀತು ಎಂಬುದು ಹಲವರ ಪ್ರಶ್ನೆಯಾಗಿದೆ.  

ಮುಂದೆ ಓದಿ...

ತುಮಕೂರು : ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ; ಇಂದು 15 ಸೋಂಕಿತರು ಪತ್ತೆ!!

ತುಮಕೂರು :       ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಂದು ಒಂದೇ ದಿನ 15 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಜಿಲ್ಲೆಯ ಬಹುತೇಕ ಎಲ್ಲಾ ತಾಲ್ಲೂಕುಗಳಲ್ಲಿ ಕೊರೊನಾ ರುದ್ರ ನರ್ತನ ಮಾಡುತ್ತಿದ್ದು, ಶಿರಾ, ಮಧುಗಿರಿ,ಪಾವಗಡ, ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ ಸೇರಿದಂತೆ ಎಲ್ಲೆಡೆ ಕೊರೊನಾ ಸೋಂಕು ರೌದ್ರ ನರ್ತನ ಮಾಡುತ್ತಿದೆ.      ಗ್ರಾಮೀಣ ಪ್ರದೇಶದ ಜನತೆಯನ್ನ ಬಿಟ್ಟು ಬಿಡದಂತೆ ಕಾಡುತ್ತಿರುವ ಕೊರೊನಾ ಸೋಂಕು ಯಾವುದೇ ರೀತಿಯಲ್ಲಿ ಯಾರಿಂದ ಯಾರಿಗೆ ಸುಳಿವು ನೀಡದೇ ಎಲ್ಲರಲ್ಲೂ ಆವರಿಸುತ್ತಿದೆ. ತಾಲ್ಲೂಕುವಾರು ಸೋಂಕಿತರ ವಿವರ : ಶಿರಾ-3 ತುಮಕೂರು-4 ತಿಪಟೂರು-1 ಚಿಕ್ಕನಾಯಕನಹಳ್ಳಿ-1 ಪಾವಗಡ-4 ಗುಬ್ಬಿ-1 ಮಧುಗಿರಿ-1        ಸಮುದಾಯ ಮಟ್ಟದಲ್ಲಿ ಹಬ್ಬುತ್ತಿರುವ ಸೋಂಕು ಎಲ್ಲಿ ಇಡೀ ಜಿಲ್ಲೆಯನ್ನೇ ಆಹುತಿ ಪಡೆದುಕೊಳ್ಳುತ್ತದೆಯೋ ಎಂಬ ಭಯದ ವಾತಾವರಣ ಜಿಲ್ಲೆಯ ಜನರಲ್ಲಿ ಕಾಡುತ್ತಿದ್ದು, ಗ್ರಾಮೀಣ ಜನತೆ ನೆಮ್ಮದಿಯ ಜೀವನ ಸಾಗಿಸುವುದು ದುಸ್ಸಾಹಸವಾಗಿದೆ.…

ಮುಂದೆ ಓದಿ...

ಮಧುಗಿರಿ : ಮತ್ತೊಂದು ಕೊರೋನಾ ಪಾಸಿಟೀವ್

ಮಧುಗಿರಿ:       ಪಟ್ಟಣದ ಕೆಅರ್ ಬಡಾವಣೆಯ ಚಾಲಕರೊಬ್ಬರಿಗೆ ಪಾಸಿಟಿವ್ ಬಂದಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.       ಸೋಂಕಿನಿಂದ ಮೃತಪಟ್ಟ ಟೈಲರ್ ಬಳಿ ಬಟ್ಟೆ ಹಾಕಿದ್ದ ಗಿರಾಕಿಗಳು ಅನುಮಾನದ ಮೇರೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದು, ಜೊತೆಯಲ್ಲಿ ಬಂದಿದ್ದ ವಾಹನ ಚಾಲಕನಿಗೂ ಕರೋನಾ ಪರೀಕ್ಷೆ ಮಾಡಿಸಿದ್ದು, ವರದಿಯಲ್ಲಿ ಕರೋನಾ ಪಾಸಿಟೀವ್ ಎಂದು ಬಂದಿದೆ. ಟೈಲರ್ ಬಳಿ ಬಟ್ಟೆ ಹಾಕಿದ್ದ ಗಿರಾಕಿಗಳಿಗೆ ನೆಗೆಟೀವ್ ಬಂದಿದ್ದು, ಆದರೆ ಜೊತೆಯಲ್ಲಿ ಹೋಗಿದ್ದ ವಾಹನ ಚಾಲಕನಿಗೆ ಪಾಸಿಟೀವ್ ಬಂದಿದ್ದಾದರೂ ಹೇಗೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ. ಸೊಂಕಿತನೊಂದಿಗೆ ಸಂಪರ್ಕವೇ ಇಲ್ಲದ ವ್ಯಕ್ತಿಗೆ ಪಾಸಿಟೀವ್ ಬಂದಿರುವುದು ಸೋಂಕು ಸಾಮೂಹಿಕವಾಗಿ ಹರಡಲು ಆರಂಭಿಸಿದೆಯಾ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿರುವುದು ತಾಲೂಕು ಆಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.          ಗೂಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ…

ಮುಂದೆ ಓದಿ...

ಲಾಕ್‍ಡೌನ್‍ಗೆ ಮಧುಗಿರಿ ವ್ಯಾಪರಸ್ಥರಿಂದ ಸಂಪೂರ್ಣ ಬೆಂಬಲ

ಮಧುಗಿರಿ:       ಮಧುಗಿರಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಕೊರೊನಾ ವೈರಸ್ ಸಮುದಾಯಕ್ಕೆ ಹರಡುವುದನ್ನು ತಡೆಗಟ್ಟಲು ಸ್ವಯಂಪ್ರೇರಿತವಾಗಿ ಲಾಕ್‍ಡೌನ್‍ಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಮಧುಗಿರಿಯಲ್ಲಿ ವ್ಯಾಪಾರಸ್ಥರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.       ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮೆಡಿಕಲ್ ಶಾಪ್, ಆಸ್ಪತ್ರೆ, ಬೇಕರಿ ಮತ್ತು ಸಣ್ಣಪುಟ್ಟ ಹೋಟೆಲ್ ಗಳು ಮತ್ತು ಬ್ಯಾಂಕುಗಳು ಹೊರತುಪಡಿಸಿ ಎಲ್ಲಾ ವ್ಯಾಪಾರಸ್ಥರು ಈ ಲಾಕ್ಡ್ ಡೌನ್ ನ್ನು ಬೆಂಬಲಿಸಿದ್ದಾರೆ ಮಾಂಸದ ಅಂಗಡಿಗಳು ಸಹ ತೆರೆಯದೆ ಬೆಂಬಲಿಸಿದ್ದು ವಿಶೇಷವಾಗಿದೆ.       ಕೆಎಸ್‍ಆರ್‍ಟಿಸಿ ಬಸ್ ಗಳು ಮಾತ್ರ ಸಂಚರಿಸಿದವು. ಮಳೆ ಬಂದಿದ್ದ ಕಾರಣ ರೈತರು ಗ್ರಾಮಿಣಭಾಗದಿಂದ ಅಗಮಿಸಿ ಬಿತ್ತನೆ ಕೆಲಸಕ್ಕೆ ಬೇಕಾಗುವ ರಸಗೊಬ್ಬರಗಳನ್ನು ಖರೀದಿಸಲು ಗೊಬ್ಬರದ ಅಂಗಡಿ ಗಳ ಮುಂದೆ ಜಮಾಯಿಸಿದ್ದರು.       ಮಧುಗಿರಿ ಪಟ್ಟಣದಲ್ಲಿ ಕರೋನಾ ಸೋಂಕು ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಮೂರು…

ಮುಂದೆ ಓದಿ...

ಚೆಕ್‍ಡ್ಯಾಂನ ತಡೆಗೋಡೆಯಿಂದ ದಲಿತರ ಜಮೀನಿಗೆ ತೊಂದರೆ !!

ತುರುವೇಕೆರೆ:       ತಾಲೂಕಿನ ಕುಣಿಕೇನಹಳ್ಳಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಚೆಕ್‍ಡ್ಯಾಂನ ತಡೆಗೋಡೆ ವ್ಯವಸ್ಥಿತ ಕ್ರಮದಲ್ಲಿ ನಿರ್ಮಿತವಾಗದೆ ದಲಿತರ ಜಮೀನಿಗೆ ತೊಂದರೆಯಾಗುತ್ತಿದ್ದು, ಜಮೀನನಲ್ಲಿನ ತೆಂಗಿನ ಮರಗಳು ಹಳ್ಳಕ್ಕೆ ಬೀಳುವ ಹಂತ ತಲಿಪಿದೆ ಎಂದು ತಾಲೂಕು ಡಿ.ಎಸ್.ಎಸ್.ಅಧ್ಯಕ್ಷ ಜಗಧೀಶ್ ಆರೋಪಿಸಿದರು.        ತಾಲೂಕಿನ ಕುಣಿಕೇನಹಳ್ಳಿ ಹಳ್ಳದಲ್ಲಿ ನಿರ್ಮಿತವಾಗಿರುವ ಚೆಕ್‍ಡ್ಯಾಂ ಸ್ಥಳ ಪರಿಶೀಲನೆಗೆ ಶುಕ್ರವಾರ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಆಗಮಿಸಿದ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಸದಸ್ಯರಿಗಳು ನ್ಯಾಯಕ್ಕಾಗಿ ಒತ್ತಾಯಿಸಿ ಅಳತೆ ಮಾಡುವುದನ್ನು ವಿರೋಧಿಸಿ ಪ್ರತಿಭಟನೆಗೆ ನಡೆಸಿದರು.         ತಾಲೂಕು ಡಿ.ಎಸ್.ಎಸ್.ಅಧ್ಯಕ್ಷ ಜಗಧೀಶ್ ಮಾತನಾಡಿ ಸ್ಥಳ ಪರಿಷೀಲನೆ ನೆಪದಲ್ಲಿ ಹಳ್ಳವನ್ನು ಅಳತೆ ಮಾಡಲು ಬಂದಿದ್ದಾರೆ, ಕಾಮಗಾರಿ ಮಾಡುವ ಮುನ್ನವೇ ಅಳತೆ ಮಾಡದೆ ತಮಗೆ ಬೇಕಾದ ಜಾಗದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಇದೀಗ ಅಳತೆ ಮಾಡಲು…

ಮುಂದೆ ಓದಿ...

ಕೊರಟಗೆರೆ : ಬ್ರಹ್ಮಸಂದ್ರ ಬಹುಗ್ರಾಮ ಯೋಜನೆಗೆ 10 ಕೋಟಿ ಅನುದಾನ!

ಕೊರಟಗೆರೆ:       ಬರಪೀಡಿತ ಬಯಲುಸೀಮೆ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆಗಳಿಂದ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರಕಾರ ನೀರಾವರಿ ಯೋಜನೆಗಳಿಗೆ ಆಧ್ಯತೆ ನೀಡಿ ಚಾಲ್ತಿಯಲ್ಲಿರುವ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಒತ್ತಾಯ ಮಾಡಿದರು.       ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಗ್ರಾಪಂ ವ್ಯಾಪ್ತಿಯ ಬ್ರಹ್ಮಸಂದ್ರ ಮತ್ತು ಸುತ್ತಮುತ್ತಲಿನ ಹತ್ತು ಗ್ರಾಮಗಳಿಗೆ ಶಾಶ್ವತ ಹಾಗೂ ಸುರಕ್ಷಿತ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಯೋಜನೆಯಡಿ ಸುಮಾರು 9ಕೋಟಿ 35ಲಕ್ಷ ವೆಚ್ಚದ ಕಾಮಗಾರಿಗೆ ಇತ್ತೀಚಿಗೆ ಚಾಲನೆ ನೀಡಿ ಮಾತನಾಡಿದರು.       ಬಯಲುಸೀಮೆ ಪ್ರದೇಶಕ್ಕೆ ನೀರಾವರಿ ಯೋಜನೆ ರೂಪಿಸುವ ನೀರಾವರಿ ತಜ್ಞ ಪರಮಶಿವಯ್ಯ ಪಾತ್ರ ಮಹತ್ವವಾಗಿದೆ. ಮಲೆನಾಡಿನ 400ಟಿಎಂಸಿ ನೇತ್ರಾವತಿ ನದಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿಯುವುದನ್ನು ತಡೆಗಟ್ಟಿ ನೀರಿಲ್ಲದೇ ಬರಡು ಭೂಮಿಯಾಗಿರುವ ಬಯಲು…

ಮುಂದೆ ಓದಿ...