ತುಮಕೂರು : ಸ್ಮಾರ್ಟ್‍ಸಿಟಿ ಮುಖ್ಯಸ್ಥ ಭೂಬಾಲನ್ ವರ್ಗಾವಣೆಗೆ ಬೇಸರ!!

ತುಮಕೂರು:       ತುಮಕೂರು ನಗರ ಹಾಗೂ 15ನೇ ವಾರ್ಡ್‍ನ ಅಭಿವೃದ್ಧಿಗೆ ಶ್ರಮಿಸಿದ್ದ ಪಾಲಿಕೆ ಆಯುಕ್ತರು ಹಾಗೂ ಸ್ಮಾರ್ಟ್‍ಸಿಟಿ ಮುಖ್ಯಸ್ಥರಾಗಿದ್ದ ಭೂಬಾಲನ್ ಅವರು ಬಾಗಲಕೋಟೆ ಸಿಇಒ ಆಗಿ ವರ್ಗಾವಣೆಗೊಂಡಿರುವುದು ಬೇಸರದ ಸಂಗತಿ, ಇನ್ನು ಸ್ವಲ್ಪ ಕಾಲ ತುಮಕೂರಿನಲ್ಲಿ ಉಳಿದುಕೊಂಡಿದ್ದರೆ ತುಮಕೂರು ನಗರ ಸ್ಮಾರ್ಟ್ ಆಗುತ್ತಿತ್ತು ಎಂದು 15ನೇ ವಾರ್ಡ್ ಪಾಲಿಕೆ ಸದಸ್ಯ ಗಿರಿಜಾ ಧನಿಯಾಕುಮಾರ್ ತಿಳಿಸಿದ್ದಾರೆ.       ವರ್ಗಾವಣೆಗೊಂಡಿರುವ ಆಯುಕ್ತರಾದ ಭೂಬಾಲನ್ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, 15ನೇ ವಾರ್ಡ್‍ನ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದ್ದ ಭೂಬಾಲನ್ ಅವರು, ಪಾರ್ಕ್ ಅಭಿವೃದ್ಧಿ ಹಾಗೂ 30 ವರ್ಷಗಳಿಂದ ಹದಗೆಟ್ಟಿದ್ದ ರೈಲ್ವೆಸ್ಟೇಷನ್ ರಸ್ತೆಯನ್ನು ಅಭಿವೃದ್ಧಿಪಡಿಸಲು ಸಹಕಾರ ನೀಡಿದ್ದರು, ರಾಯಗಾಲುವೆಯನ್ನು ತೆರವುಗೊಳಿಸಿ ಸ್ಲಾಬ್ ಹಾಕುವ ಕಾರ್ಯಕ್ಕೂ ಚಾಲನೆ ನೀಡಿದ್ದರು.       ಜನರಿಗಾಗಿ ಕೆಲಸ ಮಾಡುತ್ತಿದ್ದ ಭೂಬಾಲನ್ ಅವರು ಬಾಗಲಕೋಟೆ ಸಿಇಒ ಆಗಿ ವರ್ಗಾವಣೆಗೊಂಡಿದ್ದು,…

ಮುಂದೆ ಓದಿ...

ಮನೆ ಮುಂದೆ ಚಿರತೆ ಪ್ರತ್ಯಕ್ಷ : ಆತಂಕದಲ್ಲಿ ಜನತೆ!!

ತುಮಕೂರು:       ನಗರದ ಸಿರಾಗೇಟ್ ಸಮೀಪದ ಅರಳಿಮರದ ಪಾಳ್ಯದ ರಸ್ತೆ ಸಮೀಪದ ಮನೆಯೊಂದರ ಮುಂಭಾಗ ಚಿರತೆ ಪ್ರತ್ಯಕ್ಷವಾಗಿ ಈ ಭಾಗದಲ್ಲಿ ಜನರಲ್ಲಿ ತೀವ್ರ ಭಯ ಭೀತಿ ಮೂಡಿಸಿದ ಘಟನೆ ಮುಂಜಾನೆ ನಡೆದಿದೆ.       ನಗರದ ಅರಳೀಮರದ ರಸ್ತೆಯ ಸಮೀಪ ವಾಸವಾಗಿರುವ ಜಗದೀಶ್ ಎಂಬುವರು ನಂದಿನಿ ಬೂತ್ ನಡೆಸುತ್ತಿದ್ದು. ಇವರು ಎಂದಿನಂತೆ ಮುಂಜಾನೆ 4.30ಕ್ಕೆ ನಂದಿನಿ ಬೂತ್‍ಗೆ ತೆರಳಲು ಮನೆಯಿಂದ ಹೊರಗೆ ಬಂದಿದ್ದಾರೆ. ಮನೆಯ ಮುಂಭಾಗದಲ್ಲಿ ನಾಯಿ ಮಾದರಿಯಲ್ಲಿ ಚಿರತೆ ಮಲಗಿದೆ. ಇದನ್ನು ಗಮನಿಸದೆ ಮನೆಯ ಕಾಂಪೌಂಡ್ ಗೇಟ್‍ನಿಂದ ಹೊರಗೆ ಬಂದ ಜಗದೀಶ್ ಅವರನ್ನು ಕಂಡ ಚಿರತೆ ಘರ್ಜಿಸಿದೆ.       ಚಿರತೆಯ ಘರ್ಜನೆ ಕೇಳಿದ ಜಗದೀಶ್ ಭಯದಿಂದ ಮನೆಯ ಒಳಗೆ ಓಡಿ ಹೋಗಿದ್ದಾರೆ. ತಕ್ಷಣ ಮನೆಯವರೆಲ್ಲಾ ಗೇಟ್ ಒಳಭಾಗದಿಂದಲೇ ಚಿರತೆಯನ್ನು ನೋಡಿದ್ದಾರೆ.  ನಂತರ ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಈ…

ಮುಂದೆ ಓದಿ...

ಡಿಕೆಶಿ ಪದಗ್ರಹಣ : ಯುವ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

ತುಮಕೂರು:       ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಕ್ಷಣವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ತುಮಕೂರು ನಗರದಲ್ಲಿ ಹಬ್ಬದಂತೆ ಆಚರಿಸಿದರು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಆರ್.ರಾಜೇಂದ್ರ ಅವರ ಸಹಯೋಗದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಶಶಿ ಹುಲಿಕುಂಟೆಮಠ್ ಮತ್ತು ರಾಜೇಶ್ ದೊಡ್ಮನೆ ಅವರು ನಗರದ ಕನ್ನಡ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಯುವಕರು ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭ ನೇರ ಪ್ರಸಾರದಲ್ಲಿ ವೀಕ್ಷಿಸಲು ಎಲ್‍ಇಡಿ ಸ್ಕ್ರೀನ್ ಆಯೋಜನೆ ಮಾಡಿದ್ದರು. ಸುಮಾರು 200ಕ್ಕೂ ಹೆಚ್ಚು ಯುವಕರು ಮತ್ತು ಸೇವಾದಳದ ಪದಾಧಿಕಾರಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ವೀಕ್ಷಣೆ ಮಾಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು.       ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಶಶಿ…

ಮುಂದೆ ಓದಿ...

ತುಮಕೂರಿನಲ್ಲಿ 183 ಕ್ಕೆ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ!!

ತುಮಕೂರು:       ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ 44 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 183ಕ್ಕೆ ಏರಿಕೆ ಆದಂತಾಗಿದೆ. ತಾಲ್ಲೂಕುವಾರು ಸೋಂಕಿತರ ವಿವರ : ತಿಪಟೂರು-5 ಚಿಕ್ಕನಾಯಕನಹಳ್ಳಿ-5  ತುರುವೇಕೆರೆ-1 ಗುಬ್ಬಿ-13 ಕೊರಟಗೆರೆ-17 ಕುಣಿಗಲ್-3       ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಂದು ಒಂದೇ ದಿನ 44 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಜಿಲ್ಲೆಯ  ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ, ಕೊರಟಗೆರೆ, ಕುಣಿಗಲ್ ತಾಲ್ಲೂಕುಗಳಲ್ಲಿ ಕೊರೊನಾ ರುದ್ರ ನರ್ತನ ಮಾಡುತ್ತಿದೆ.       ಲಾಕ್‍ಡೌನ್ ಸಡಿಲಿಕೆಯ ನಂತರ ಎಲ್ಲರೂ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದು, ಯಾರಿಗೆ ಯಾರಿಂದ ಸೋಂಕು ಹರಡುತ್ತಿದೆ ಎಂಬ ಅರಿವಿಲ್ಲ.       ಗ್ರಾಮೀಣ ಪ್ರದೇಶದ ಜನತೆಯನ್ನ ಬಿಟ್ಟು ಬಿಡದಂತೆ ಕಾಡುತ್ತಿರುವ ಕೊರೊನಾ ಸೋಂಕು ಯಾವುದೇ ರೀತಿಯಲ್ಲಿ ಯಾರಿಂದ ಯಾರಿಗೆ ಸುಳಿವು ನೀಡದೇ ಎಲ್ಲರಲ್ಲೂ ಆವರಿಸುತ್ತಿದೆ.    

ಮುಂದೆ ಓದಿ...

ತುಮಕೂರು : ಪರೀಕ್ಷಾ ಕೇಂದ್ರದಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ

ತುಮಕೂರು :         ರಾಜ್ಯದಲ್ಲಿ ಕೋವಿಡ್-19 ಸಂಕಷ್ಟದಲ್ಲಿಯೂ ಕೂಡ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಿದ್ದು, ಈ ಬಾರಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಎಸ್.ಸುರೇಶ್‍ಕುಮಾರ್ ಅವರು ತಿಳಿಸಿದರು.       ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ವಿವಿಧ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆಯ 5ನೇ ದಿನವಾದ ಇಂದು ಕನ್ನಡ ಭಾಷಾ ವಿಷಯವಿದ್ದು, ರಾಜ್ಯದಲ್ಲಿ ಈವರೆಗೆ ಶೇ.98ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇದೆ. ಪರೀಕ್ಷೆ ಆರಂಭವಾದ ದಿನದಿಂದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರಕ್ಕೆ ಭೇಟಿ ನೀಡಿದ್ದೇನೆ. ಇಂದು ತುಮಕೂರು ಜಿಲ್ಲೆಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದು ಅವರು ತಿಳಿಸಿದರು.       ಶಿಕ್ಷಣ ಇಲಾಖೆಯು…

ಮುಂದೆ ಓದಿ...