ಬಂಕ್‍ನಲ್ಲಿ ಪೆಟ್ರೋಲ್ ಕದ್ದ ಮಾಜಿ ಶಾಸಕ ಕೃಷ್ಣಪ್ಪ : ಮಸಾಲೆ ಜಯರಾಮ್

ಗುಬ್ಬಿ:       ನಾನು ಕಷ್ಟಪಟ್ಟು ದುಡಿದವ, ನನ್ನ ಶ್ರಮ ನನ್ನ ಜೊತೆ ಇದೆ. ಶ್ರಮಪಟ್ಟು ನಡೆಸಿದ ಉದ್ದಿಮೆಯೇ ಇಂದು ನನ್ನ ಜೀವನ ರೂಪಿಸಿದೆ. ಆಗಾಗಿ ನನಗೆ ಒಂದು ವೃತ್ತಿ ಎಂಬುದು ಇದೆ. ಆದರೆ, ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡಿ ಅಲ್ಲಿಯೇ ಪೆಟ್ರೋಲ್ ಕದ್ದ ಮಾಜಿ ಶಾಸಕ ಕೃಷ್ಣಪ್ಪರ ವೃತ್ತಿ ಜೀವನ ಎಂತಹದು ಎಂದು ಜನಕ್ಕೆ ತಿಳಿದಿದೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಲೇವಡಿ ಮಾಡಿದರು.       ತಾಲ್ಲೂಕಿನ ಸಿ.ಎಸ್.ಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, 15 ವರ್ಷಗಳಿಂದ ಜನಪರ ಕೆಲಸ ಮಾಡದೇ ಈಚೆಗೆ ನಾನು ಮಾಡಿದ ಅಭಿವೃದ್ಧಿ ಕೆಲಸವನ್ನು ನನ್ನದು ಎಂದು ಬಿಂಬಿಸಿಕೊಳ್ಳಲು ಮುಂದಾದ ಮಾಜಿ ಶಾಸಕ ಕೃಷ್ಣಪ್ಪ ದಲ್ಲಾಳಿ ಕೆಲಸವನ್ನು ಮಾಡಿ ಗುತ್ತಿಗೆದಾರರನ್ನು ಸುಲಿಗೆ ಮಾಡಿದ್ದು ಒಪನ್ ಸೀಕ್ರೇಟ್. ನನ್ನ ಬಗ್ಗೆ ಮಾತನಾಡುವ ಮುನ್ನ ಜವಾಬ್ದಾರಿ ಸ್ಥಾನದಲ್ಲಿದ್ದು ಹರಿದ ಬಾಯಿಗೆ…

ಮುಂದೆ ಓದಿ...

ಕೊರೊನಾ ಸೋಂಕಿತರ ಹೆಚ್ಚಳ : ಅಂಗಡಿ ವ್ಯಾಪಾರಸ್ಥರ ಸ್ವಯಂ ಘೋಷಿತ ರಜೆ

ಮಧುಗಿರಿ:       ತಾಲ್ಲೂಕಿನಲ್ಲಿ ಒಂದೊಂದೇ ಕಂಟಕಗಳು ಜನತೆಗೆ ಸಂಕಟವನ್ನು ತಂದಿಟ್ಟಿದ್ದು, ಗುರುವಾರ ಒಂದು ಪ್ರಕರಣ ಧೃಢವಾಗಿದೆ. ಇತ್ತೀಚಿಗೆ ತುಮಕೂರಿನಲ್ಲಿ ಕರೊನಾ ಸೋಂಕಿನಿಂದ ಮಧುಗಿರಿ ಮೂಲದ ಟೈಲರ್ ಒಬ್ಬರು ಮೃತಪಟ್ಟಿದ್ದರು .       ಅವರ ಸಂಪರ್ಕದ ವ್ಯಕ್ತಿಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಪಟ್ಟಣದ ಕೆ.ಹೆಚ್ ರಸ್ತೆಯಲ್ಲಿರುವ ಮೆಡಿಕಲ್ ಸ್ಟೋರ್ ನ 56ವರ್ಷದ ವ್ಯಕ್ತಿಗೆ ಕರೊನಾ ಸೋಂಕು ತಗುಲಿದೆ. ಈ ವ್ಯಕ್ತಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಇದನ್ನು ಸರಿಯಾಗಿ ಪಾಲಿಸಿರಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆತ ವಾಸವಿದ್ದ ಜಾಮಿಯಾ ಮಸೀದಿ ಮುಂಭಾಗದ ರಸ್ತೆ ಏರಿಯಾವನ್ನು ಸೀಲ್ ಡೌನ್ ಮಾಡಲಾಗಿದೆ.       ಸೋಂಕಿತನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ವಿಶ್ವನಾಥ್, ತಾಲೂಕು ಆರೋಗ್ಯಾಧಿಕಾರಿ ರಮೇಶ್ ಬಾಬು, ಪಿಎಸ್ಸೈ ಕಾಂತರಾಜು ಭೇಟಿ ನೀಡಿದ್ದರು.  ಬುಧವಾರ 4 ಪ್ರಕರಣ :  …

ಮುಂದೆ ಓದಿ...

ತುಮಕೂರು : ಗೋಡೆಕೆರೆಯ ಮೇಕೆಗಳಿಗೆ ಕೊರೊನಾ ಇಲ್ಲ!

ತುಮಕೂರು:      ಪ್ರಯೋಗಾಲಯಕ್ಕೆ ಕಳುಹಿಸಿದ್ದ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆಯ ಗೊಲ್ಲರಹಟ್ಟಿಯ ಮೇಕೆಗಳ ವರದಿಗಳು ನೆಗೆಟಿವ್ ಬಂದಿದ್ದು, ಕುರಿಗಾಹಿಗಳು ಹಾಗೂ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲವೆಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ: ಕೆ.ಜಿ. ನಂದೀಶ್ ಅವರು ತಿಳಿಸಿದ್ದಾರೆ.       ಕುರಿಗಾಹಿಯೊಬ್ಬನಿಗೆ ಕೊರೋನಾ ಸೋಂಕು ಧೃಡಪಟ್ಟಿರುವುದರಿಂದ ಅಕ್ಕ-ಪಕ್ಕದ ಗ್ರಾಮಸ್ಥರಲ್ಲಿ ಆತಂಕವಾಗಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಕುರಿಗಾಹಿಗೆ ಸೇರಿದ್ದ 40 ರಿಂದ 45 ಮೇಕೆಗಳಲ್ಲಿ ಹಾಗೂ ಪಕ್ಕದ ರೈತರ ಮೇಕೆಗಳ ಪೈಕಿ 10 ಹೆಚ್ಚು ಮೇಕೆಗಳ ಗಂಟಲು ದ್ರವವನ್ನು ಸಂಗ್ರಹಿಸಿ, ಬೆಂಗಳೂರಿನ I H B ಗೆ 5 ಮಾದರಿ ಹಾಗೂ ಭೂಪಾಲ್ ಲ್ಯಾಬ್‍ಗೆ 5 ಮಾದರಿ ಕಳುಹಿಸಿಕೊಡಲಾಗಿತ್ತು. ಬೆಂಗಳೂರಿನ ಲ್ಯಾಬ್‍ನಿಂದ ವರದಿ ನೆಗೆಟಿವ್ ಎಂದು ಬಂದಿದೆ.       ಪ್ರಪಂಚದಲ್ಲಿ ಇಲ್ಲಿಯವರೆಗೂ ಕೂಡ ಕುರಿ ಮತ್ತು…

ಮುಂದೆ ಓದಿ...

ಪಾವಗಡ : ಟೆಂಡರ್‍ನಲ್ಲಿ ಅವ್ಯವಹಾರ ; ರೈತರಿಂದ ಮೀನುಗಾರಿಕೆ ಇಲಾಖೆಗೆ ಮುತ್ತಿಗೆ!

ಪಾವಗಡ:      ಪಾವಗಡ ತಾಲ್ಲೂಕು ಕಸಬಾ ಹೋಬಳಿ ಬ್ಯಾಡನೂರು ಗ್ರಾಮದ ಶ್ರೀ ಶಂಕರಲಿಂಗಕೆರೆಯನ್ನು ಬಹಿರಂಗ ಹರಾಜು ಹಾಕದೇ ಮೀನುಗಾರಿಕಾ ಇಲಾಖೆ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಅವ್ಯವಹಾರ ಎಸಗಿದ್ದಾರೆ ಎಂದು ಅರೋಪಿಸಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಸಂಘದ ವತಿಯಿಂದ ಶುಕ್ರವಾರ ಪಟ್ಟಣದ ಮೀನುಗಾರಿಕಾ ಇಲಾಖೆಗೆ ಮುತ್ತಿಗೆ ಹಾಕಿ ಅಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿದೆ.        ಮುತ್ತಿಗೆಯ ನೇತೃತ್ವವನ್ನು ವಹಿಸಿದ್ದ ತಾಲ್ಲೂಕು ರೈತ ಮತ್ತು ಹಸಿರುಸೇನೆ ಸಂಘದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಬ್ಯಾಡನೂರು ಗ್ರಾಮದ ಶ್ರೀಶಂಕರಲಿಂಗನ ಕೆರೆಯನ್ನು 2014-15 ನೇ ಸಾಲಿನಲ್ಲಿ ಸಂಚಪ್ಪ ಎನ್ನುವರಿಗೆ ಮೀನು ಸಾಕಿ ಮಾರಾಟ ಮಾಡಲು ಟೆಂಡರ್ ನೀಡಿ ಇಲ್ಲಿಗೆ ಐದು ವರ್ಷವಾಗಿತ್ತು, 2019- ರಿಂದ 2020 ರವರೆಗೂ ಪುನಃ ಅವರಿಗೆ ರೀನಿವಲ್ ನೀಡಲಾಗಿತ್ತು. ಅದರೆ ಹೀಗ 2020-21 ನೇ ಸಾಲಿಗೆ ಮತ್ತೆ ಸಂಚಪ್ಪನಿಗೆ ರಿನೆವಲ್ ಮಾಡಲಾಗಿದೆ. ಕರೋನಾ ಲಾಕ್…

ಮುಂದೆ ಓದಿ...

ತುಮಕೂರು : ಜಿಲ್ಲೆಯಲ್ಲಿ 208 ಕ್ಕೇರಿದ ಕೊರೊನಾ ಪಾಸಿಟೀವ್!!

ತುಮಕೂರು:       ತುಮಕೂರು ಜಿಲ್ಲೆಯಲ್ಲಿ 3.7.2020ರ ಸಂಜೆಯ ವರದಿಯ ಪ್ರಕಾರ ಶುಕ್ರವಾರ ಒಂದೇ ದಿನ 25 ಪ್ರಕರಣಗಳು ಕೋವಿಡ್ – 19 ಸೋಂಕಿನಿಂದ ದೃಢಪಟ್ಟಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು, ಕೋವಿಡ್-19 ಸೋಂಕು ಆರಂಭವಾದ ದಿನದಿಂದ ಇಂದಿನವರೆಗೆ 208 ಪ್ರಕರಣಗಳು ಪತ್ತೆಯಾಗಿದ್ದು, ಅವುಗಳ ಪೈಕಿ ಐಸಿಯುನಲ್ಲಿ 4 ಪ್ರಕರಣಗಳು ದಾಖಲಾಗಿದ್ದು, 141 ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿ ಚಿಕಿತ್ಸಾ ಹಂತದಲ್ಲಿವೆ.        ಆಸ್ಪತ್ರೆಯಿಂದ 60 ಪ್ರಕರಣಗಳು ಬಿಡುಗಡೆ ಹೊಂದಿದು ಶುಕ್ರವಾರದಂದು 11 ಪ್ರಕರಣಗಳು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ಇದುವರೆವಿಗೂ 7 ಜನ ಕೋವಿಡ್ ಸೋಂಕಿತ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಇದುವರೆಗೂ ಒಟ್ಟು 19540 ಕಫದ ಮಾದರಿಯನ್ನು ಪರೀಕ್ಷಿಸಿದ್ದು, 15756 ಮಾದರಿಗಳು ನೆಗಿಟೀವ್ ಬಂದಿರುತ್ತವೆ. 1395 ಜನರನ್ನು ನಿಗಾವಣೆಯಲ್ಲಿ ಇರಿಸಲಾಗಿದೆ. 208 ಪ್ರಕರಣಗಳು ಕೋವಿಡ್-19 ಸೋಂಕಿ ತರೆಂದು ವರದಿ ದೃಢಪಟ್ಟಿದೆ.       ಶುಕ್ರವಾರ…

ಮುಂದೆ ಓದಿ...

ಕೊರಟಗೆರೆ ಇಓಗೆ ಸ್ಥಾನಿಕ ಕ್ವಾರಂಟೈನ್ ; ತಾಪಂ ಕಚೇರಿ ಸೀಲ್‍ಡೌನ್!!

ಕೊರಟಗೆರೆ:       ಕೊರೊನಾ ಮುಕ್ತವಾಗಿದ್ದ ಕೊರಟಗೆರೆ ಕ್ಷೇತ್ರದ ತಾಪಂ ಕಚೇರಿಯ ಸಿಬ್ಬಂದಿ ಸೇರಿ ಒಟ್ಟು 19 ಜನರಿಗೆ ಕೊರೊನಾ ಸೊಂಕು ಪ್ರಕರಣ ದೃಢಪಟ್ಟಿರುವ ಹಿನ್ನಲೆ ಗುರುವಾರ ಕೊರಟಗೆರೆಗೆ ಕರಾಳ ದಿನವಾಗಿದೆ. ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕದ ಜನರ ತನಿಖೆಗೆ ಆರೋಗ್ಯ ಮತ್ತು ಪೊಲೀಸ್ ಇಲಾಖೆಯಲ್ಲಿ ಜಂಟಿಯಾಗಿ ಕಾರ್ಯಚರಣೆ ನಡೆಸುತ್ತಿದೆ.       ಕೊರಟಗೆರೆ ಪಟ್ಟಣದ ತಾಪಂ ಕಚೇರಿಯ 39 ವರ್ಷದ ಸಿಬ್ಬಂದಿ, ಪಾತಗಾನಹಳ್ಳಿಯ 26 ವರ್ಷದ ಯುವಕ, ಎಲರಾಂಪುರದ 26ವರ್ಷದ ಮಹಿಳೆ, ಟಿ.ಗೊಲ್ಲಹಳ್ಳಿಯ 61ವರ್ಷದ ವೃದ್ಧ, ಕರೆಕಲ್ಲಹಟ್ಟಿ ತಾಂಡದ 32 ವರ್ಷದ ಮಹಿಳೆ, ಎನ್.ಜಿ.ಹಳ್ಳಿಯ 48ವರ್ಷದ ಪುರುಷ, ಗಟ್ಲಹಳ್ಳಿಯ 52ವರ್ಷದ ಪುರುಷ, ಕುರುಬರಪಾಳ್ಯದ 38ವರ್ಷದ ಪುರುಷ, ಎಂ.ಜಿ.ಗುಣಿಯ 33ವರ್ಷದ ಪುರುಷನಿಗೆ ಕೊರೊನಾ ಸೊಂಕು ದೃಡಪಟ್ಟಿದೆ.       ಜಂಪೇನಹಳ್ಳಿಯ 39ವರ್ಷದ ಪುರುಷ, ಎತ್ತಗಾನಹಳ್ಳಿಯ 78ವರ್ಷದ ವೃದ್ಧೆ, ಅಜ್ಜಿಹಳ್ಳಿ 23 ವರ್ಷದ…

ಮುಂದೆ ಓದಿ...

 ತುಮಕೂರು: SSLC ಹಿಂದಿ ಪರೀಕ್ಷೆಗೆ 695 ವಿದ್ಯಾರ್ಥಿಗಳು ಗೈರು!!

 ತುಮಕೂರು:       ಜಿಲ್ಲೆಯ ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಇಂದು ನಡೆದ ಎಸ್‍ಎಸ್‍ಎಲ್‍ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆಗೆ ನೋಂದಣಿಯಾಗಿದ್ದ 33608 ವಿದ್ಯಾರ್ಥಿಗಳ ಪೈಕಿ 32922 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 695 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.       ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆಯನ್ನು ಶಾಂತಿಯುತವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲಾಗಿದೆ. ಇಂದು ನಡೆದ ಪರೀಕ್ಷೆಯಲ್ಲಿ 165 ವಿದ್ಯಾರ್ಥಿಗಳು ಕಂಟೈನ್‍ಮೆಂಟ್ ಪ್ರದೇಶದಿಂದ ಬಂದು ಪರೀಕ್ಷೆ ಬರೆದಿದ್ದು, 16 ವಿದ್ಯಾರ್ಥಿಗಳು ಅನಾರೋಗ್ಯ ಕಾರಣದಿಂದ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ.         ಹಿಂದಿ ಭಾಷಾ ಪರೀಕ್ಷೆಗೆ ಖಾಸಗಿಯಾಗಿ ನೋಂದಣಿಯಾಗಿದ್ದ 585 ವಿದ್ಯಾರ್ಥಿಗಳ ಪೈಕಿ 448 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಉಳಿದಂತೆ 137 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ತುಮಕೂರು ಡಿಡಿಪಿಐ ಎಂ.ಆರ್. ಕಾಮಾಕ್ಷಿ ಹಾಗೂ ಮಧುಗಿರಿ ಡಿಡಿಪಿಐ…

ಮುಂದೆ ಓದಿ...