ಪಶು ವೈದ್ಯರು ಹಳ್ಳಿಗಳಿಗೆ ತೆರಳಿ ಚಿಕಿತ್ಸೆ ನೀಡಿ: – ಸಚಿವ ಚವ್ಹಾಣ್

 ತುಮಕೂರು :       ಪಶು ವೈದ್ಯರು ಹಳ್ಳಿಗಳಿಗೆ ತೆರಳಿ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಮುಂದಾಗಿ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಬಿ ಚವ್ಹಾಣ್ ಅವರು ಪಶು ವೈಧ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.       ತುಮಕೂರು ನಗರದಲ್ಲಿರುವ ಪಶುಪಾಲನ ಮತ್ತು ಪಶು ವೈದ್ಯ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿಂದು ನಡೆದ ಇಲಾಖೆಯ ಪ್ರಗತಿ ಪರೀಶೀಲನಾ ಸಭೆ ನಡೆಸಿ ಮಾತನಾಡಿದ ಅವರು ವೈದ್ಯರು ಹಳ್ಳಿಗಳಿಗೂ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಪರಿಹರಿಸಿ, ಪಶು ಸಂಗೋಪನೆ ಇಲಾಖೆಯಲ್ಲಿನ ಪಶುವೈದ್ಯರು ಬರೀ ಕೇಂದ್ರ ಸ್ಥಾನದ ಕಛೇರಿಯಲ್ಲಿ ಕುಳಿತು ಕೊಳ್ಳದೇ ಹಳ್ಳಿಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು ಎಂದು ಅವರು ಹೇಳಿದರು.       ನಿತ್ಯ ಹಳ್ಳಿಗಳಿಗೆ ಭೇಟಿ ನೀಡಿದ ಕೆಲಸದ ಪೋಟೊ ಹಾಗೂ ವಿವರವನ್ನು ವಾಟ್ಸಾಪ್ ಮೂಲಕ ನನಗೆ ಕಳುಹಿಸಿ. ಸದ್ಯದಲ್ಲೆ…

ಮುಂದೆ ಓದಿ...

ತುಮಕೂರು : ಇಂದು ಮತ್ತೆ 16 ಮಂದಿಗೆ ಸೋಂಕು; ಒಂದು ಸಾವು!!

ತುಮಕೂರು :     ನಗರದಲ್ಲಿ ಇಂದು ಒಂದೇ ದಿನ 16 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 268 ಏರಿಕೆಯಾಗಿದೆ. ತಾಲ್ಲೂಕುವಾರು ಸೋಂಕಿತರ ವಿವರ : ತುಮಕೂರು -6 ಕೊರಟಗೆರೆ-4 ಪಾವಗಡ – 2 ಮಧುಗಿರಿ-2 ಚಿಕ್ಕನಾಯಕನಹಳ್ಳಿ-1 ಕುಣಿಗಲ್-1        ಇದರಲ್ಲಿ 65 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 194 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಕೊರೊನಾ ಸೋಂಕಿತರೊಬ್ಬರು ಇಂದು ಸಾವನ್ನಪ್ಪ್ಪಿದ್ದಾರೆ ಎಂದು  ಡಿಹೆಚ್ಒ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.  

ಮುಂದೆ ಓದಿ...

ಕೊರಟಗೆರೆ: ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ತುರ್ತು ಚಿಕಿತ್ಸಾ ಕೇಂದ್ರ

ಕೊರಟಗೆರೆ:       ಕೊರೊನಾ ಸೋಂಕಿತ ರೋಗಿಗಳಿಗೆ ಪೌಷ್ಟಿಕಾಂಶದ ಆಹಾರ, ಮೂಲಸೌಕರ್ಯ ಮತ್ತು ಸಮರ್ಪಕ ವೈದ್ಯಕೀಯ ಔಷಧಿ ಪೂರೈಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಹಗಲುರಾತ್ರಿ ಜಾಗೃತೆ ವಹಿಸಬೇಕಾಗಿದೆ ಕೊರಟಗೆರೆ ತಹಶೀಲ್ದಾರ್ ಮತ್ತು ತಾಲೂಕು ವೈದ್ಯಾಧಿಕಾರಿಗೆ ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಸೂಚನೆ ನೀಡಿದರು.       ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪ್ರತ್ಯೇಕ ಕೊವಿದ್ ತುರ್ತು ಚಿಕಿತ್ಸೆ ಕೇಂದ್ರ ಮತ್ತು ಕೊರೊನಾ ಸೊಂಕಿತ ರೋಗಿಗಳಿಗೆ ಮೂಲ ಸೌಲಭ್ಯದ ತುರ್ತುಸಭೆಯಲ್ಲಿ ಸರಕಾರಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.       ಆಡಳಿತ ವೈದ್ಯಾಧಿಕಾರಿ ಮತ್ತು ತಾಲೂಕು ವೈದ್ಯಾಧಿಕಾರಿ ಸಮನ್ವಯತೆ ಕಾಪಾಡಿಕೊಂಡು ಕೊರೊನಾ ರೋಗದ ವಿರುದ್ದ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಕೊರೊನಾ ರೋಗದ ವಿರುದ್ದ ಪ್ರತಿಯೊಂದು ಇಲಾಖೆಯ ಸಹಕಾರ ಅಗತ್ಯವಾಗಿ ಬೇಕಾಗಿದೆ. ತುರ್ತು ಪರಿಸ್ಥಿತಿಯಲ್ಲಿ ನಾವೇಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಣೆ ಮಾಡಬೇಕಾಗಿದೆ ಎಂದು ತಿಳಿಸಿದರು.…

ಮುಂದೆ ಓದಿ...

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಸಂಖ್ಯೆ : ಜೆಸಿಎಂ ಆತಂಕ

ತುಮಕೂರು:       ಜಿಲ್ಲಾಡಳಿತದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದರೂ ಕೋವಿಡ್-19 ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಆತಂಕ ವ್ಯಕ್ತಪಡಿಸಿದರು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಈವರೆಗೆ ಒಟ್ಟು 252 ಕೋವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಭಾನುವಾರ ಒಂದೇ ದಿನದಲ್ಲಿ 31 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ.       ಇದುವರೆಗೆ ವರದಿಯಾದ 252 ಸೋಂಕಿತರ ಪೈಕಿ 61 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಉಳಿದಂತೆ 183 ಸಕ್ರಿಯ ಪ್ರಕರಣಗಳಿದ್ದು, 8 ಮಂದಿ ಮರಣ ಹೊಂದಿದ್ದಾರೆ. ಈವರೆಗೆ 20512 ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, 1395 ಜನರನ್ನು ನಿಗಾವಣೆಯಲ್ಲಿಡಲಾಗಿದೆ. ಈ ಪೈಕಿ 16879 ಮಾದರಿಗಳು ನೆಗೆಟಿವ್ ಪ್ರಕರಣವೆಂದು ವರದಿಯಾಗಿದೆ. ಪ್ರಸ್ತುತ 566 ಪ್ರಾಥಮಿಕ ಹಾಗೂ 829…

ಮುಂದೆ ಓದಿ...

ಚಿ.ನಾ.ಹಳ್ಳಿ : 8 ವರ್ಷದ ಬಾಲಕನಿಗೆ ಕೊರೊನಾ ದೃಢ!!

ಚಿಕ್ಕನಾಯಕನಹಳ್ಳಿ:       8 ವರ್ಷದ ಬಾಲಕೊನೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ತಾಲ್ಲೂಕಿನಲ್ಲಿ ಈವರೆಗೆ ಸೋಕಿತರ ಪ್ರಮಾಣ 10ಕ್ಕೇರಿದಂತಾಗಿದೆ.       ಕಳೆದ ವಾರ ಪಟ್ಟಣದ ಸಮೀಲದ ಕಾಡೇನಹಳ್ಳಿಯ 22ವರ್ಷದ ಯುವಕನೋರ್ವನಿಗೆ ಸೋಂಕು ದೃಢಪಟ್ಟಿದ್ದು ಸದರಿ ಯವಕನ ಸಮೀಪದ ಮನೆಯಲ್ಲಿನ 8 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಕಳೆದೆರಡು ದಿನದ ಹಿಂದೆ ಬಾಲಕನಿಗೆ ಜ್ವರಬಂದ ಹಿನ್ನಲೆಯಲ್ಲಿ ಗಂಟಲ ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಅದು ದೃಢಪಟ್ಟಿದೆ. ಬಾಲಕನ ಮನೆಯಲ್ಲಿ ತಂದೆ, ತಾಯಿ, ಅಜ್ಜ, ಅಜ್ಜಿ ವಾಸವಿದ್ದಾರೆ. ಈಗಾಗಲೇ ಈ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿತ್ತು. ಬಾಲಕನ್ನು ಪಟ್ಟಣದ ಆಸ್ಪತ್ರೆಯಲ್ಲಿ ಐಸೋಲೇಸನ್ ವಾರ್ಡ್‍ಗೆ ಸೇರಿಸಲಾಗಿದೆ. ಕುಟುಂಬದವರನ್ನು ಕ್ವಾರಂಟೈನ್‍ಗೊಳಪಡಿಸಲಾಗಿದೆ.       ಹೊರಗಿನಿಂದ ಬಂದವರ ಆತಂಕ: ರಾಜ್ಯದ ಬಹುತೇಕ ನಗರಗಳನ್ನು ಕೊರೊನಾ ಸೋಂಕಿತರ ಪ್ರಮಾಣ ವಿಪರೀತವಾಗಿ ಏರುತ್ತಿರುವುದರಿಂದ ನಗÀರಗಳಿಂದ ಗ್ರಾಮಗಳಿಗೆ ತಂಡೋಪತಂಡವಾಗಿ ಬರುತ್ತಿರುವುದು ಗಾಬರಿ ಹುಟ್ಟಿಸಿದೆ.…

ಮುಂದೆ ಓದಿ...