ಗುಬ್ಬಿ: ಕೋವಿಡ್-19 ಕೇರ್ ಸೆಂಟರ್‍ಗೆ ಜಿಲ್ಲಾಧಿಕಾರಿ ಭೇಟಿ!!

ಗುಬ್ಬಿ:      ಕೋವಿಡ್-19 ವೈರಸ್ ಸೋಂಕಿತರ ಚಿಕಿತ್ಸೆಗೆ ತಾಲ್ಲೂಕಿನ ಕಳ್ಳಿಪಾಳ್ಯದ ಬಳಿಯ ಓಂ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಸಿದ್ದಪಡಿಸಲಾದ ಐಸ್ಯೂಲೇಷನ್ ಹಾಸಿಗೆಗಳ ಕೋವಿಡ್-19 ಕೇರ್ ಸೆಂಟರ್‍ಗೆ ಗುರುವಾರ ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.       ತಾಲ್ಲೂಕಿನ ಗಡಿಭಾಗ ಕಳ್ಳಿಪಾಳ್ಯ ಸಮೀಪ ಹೆದ್ದಾರಿ ಬದಿಯಲ್ಲಿರುವ ಓಂ ಪ್ಯಾಲೇಸ್‍ನಲ್ಲಿನ ಎಲ್ಲಾ ವ್ಯವಸ್ಥೆಯನ್ನು ಅವಲೋಕಿಸಿದ ಜಿಲ್ಲಾಧಿಕಾರಿಗಳು ಕಾಂಪೌಂಡ್‍ನಲ್ಲಿ ಮೂರು ಶೆಡ್ ನಿರ್ಮಿಸಿ ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳನ್ನು ಉಳಿಸಿಕೊಳ್ಳಲು ವ್ಯವಸ್ಥೆ ಮಾಡಿರುವ ಬಗ್ಗೆ ಪರಿಶೀಲಿಸಿದರು. ಚಿಕಿತ್ಸೆಗೆ ಬರುವ ರೋಗಿಗಳಿಗೆ ಪೌಷ್ಠಿಕ ಆಹಾರ ನೀಡಲು ಸೂಚಿಸಲಾಗಿದೆ. ಊಟ ಮತ್ತು ತಿಂಡಿಗಳ ತಯಾರಿಕೆಗೆ ಗುಣಮಟ್ಟದ ಪದಾರ್ಥ ಬಳಕೆ ಮತ್ತು ಪೌಷ್ಠಿಕಾಂಶದ ತರಕಾರಿ ಬಳಕೆಗೆ ಸೂಚಿಸಿ ಇಡೀ ಕಲ್ಯಾಣ ಮಂಟಪವನ್ನು ಸ್ಯಾನಿಟೈಜರ್ ಮಾಡಲು ಆದೇಶಿಸಿದರು.        ಈ ಕಲ್ಯಾಣ ಮಂಟಪವನ್ನು ಕೇರ್ ಸೆಂಟರ್ ಬಳಕೆಗೆ…

ಮುಂದೆ ಓದಿ...

ತುಮಕೂರು :  ಇಂದು 14 ಮಂದಿಗೆ ಕೊರೊನಾ ದೃಢ!!   

ತುಮಕೂರು:          ಜಿಲ್ಲೆಯಲ್ಲಿ ಗುರುವಾರ 14 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 333ಕ್ಕೆ ಏರಿಕೆಯಾಗಿದೆ ಎಂದು ಡಿ.ಹೆಚ್.ಓ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ನಿನ್ನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 1, ತುರುವೇಕೆರೆ-1 ತಿಪಟೂರು-3, ಹಾಗೂ ತುಮಕೂರು-9 ಸೇರಿ ಒಟ್ಟು 14 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ತಾಲ್ಲೂಕುವಾರು ಸೋಂಕಿತರ ವಿವರ : ತುಮಕೂರು – 9       ಮಹಾಲಕ್ಷ್ಮಿ ನಗರದ 30 ವರ್ಷದ ಗಂಡು, 28 ವರ್ಷದ ಹೆಣ್ಣು, ಬಿ ಜಿ ಪಾಳ್ಯ ಪ್ರಸನ್ನಕುಮಾರ ಬಡಾವಣೆಯ 47 ವರ್ಷದ ಗಂಡು, ಶೆಟ್ಟಿಹಳ್ಳಿ ಗೇಟ್ ಬಳಿಯ 46 ವರ್ಷದ ಗಂಡು, ದೇವನೂರು ಚರ್ಚ್ ಬಳಿಯ 64 ವರ್ಷದ ಗಂಡು, ಸಪ್ತಗಿರಿ ಬಡಾವಣೆಯ 47 ವರ್ಷದ ಗಂಡು, 40 ವರ್ಷದ ಗಂಡು, ಎಸ್ಐಟಿ 13ನೇ…

ಮುಂದೆ ಓದಿ...

ತಾ.ಪಂ.ಅಧ್ಯಕ್ಷರಾಗಿ ಕವಿತಾ ರಮೇಶ್ ಆಯ್ಕೆ : ಜೆಡಿಎಸ್ ಗೆ ಮುಖಭಂಗ!!

ತುಮಕೂರು:      ತುಮಕೂರು ತಾಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕವಿತಾ ರಮೇಶ್ ಅಧ್ಯಕ್ಷರಾಗಿ ಚುನಾವಣೆಯಲ್ಲಿ ಜಯಗಳಿಸಿರುತ್ತಾರೆ.       ಬಿಜೆಪಿ ಪಕ್ಷದಿಂದ 17 ಸದಸ್ಯ ಬಲವಿದ್ದು, ಜೆಡಿಎಸ್ 12 ಸದಸ್ಯರ ಬಲ, ಕಾಂಗ್ರೆಸ್ 1, ಇರುತ್ತಾರೆ. ಸ್ಪಷ್ಟ ಬಹುಮತವಿದ್ದ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಅನಾಯಾಸವಾಗಿ ಅಧ್ಯಕ್ಷಗಾದಿ ಏರಬಹುದೆಂಬ ಸಂತಸದಲ್ಲಿದ್ದರು, ಆದರೆ 12 ಸದಸ್ಯ ಬಲವಿದ್ದ ಜೆಡಿಎಸ್ ಕಾಂಗ್ರೆಸ್ ಒಬ್ಬರು ಸದಸ್ಯರ ವಿಶ್ವಾಸದೊಂದಿಗೆ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿ ಅಧ್ಯಕ್ಷಗಾದಿಗೇರಲು ಕಸರತ್ತು ನಡೆಸಿತ್ತು. ತಮ್ಮ ಬಲಿಯಿದ್ದ 13 ಸದಸ್ಯ ಬಲದ ಜೊತೆಗೆ ಬಿಜೆಪಿಯ ಇಬ್ಬರು ಸದಸ್ಯರನ್ನು ತಮ್ಮ ಕಡೆ ಸೆಳೆದುಕೊಂಡು ಮತ್ತೊಬ್ಬ ಬಿಜೆಪಿ ಸದಸ್ಯರನ್ನ ಗೈರು ಹಾಜರಿಪಡಿಸಿ ಅಧ್ಯಕ್ಷ ಸ್ಥಾನವನ್ನು ತಾನು ಪಡೆಯಬೇಕೆಂದು ಜೆಡಿಎಸ್‍ನ ಹಾಲಿ ಶಾಸಕ ಡಿ.ಸಿ.ಗೌರಿಶಂಖರ್ ಕಸರತ್ತು ನಡೆಸಿದ್ದರು. ಇಬ್ಬರು ಬಿಜೆಪಿ ಸದಸ್ಯರಾದ ಕೋರಾ ಎಸ್‍ಟಿ…

ಮುಂದೆ ಓದಿ...