ತುಮಕೂರು :  ಇಂದು 25 ಮಂದಿಗೆ ಕೊರೊನಾ ದೃಢ!!   

ತುಮಕೂರು :       ಜಿಲ್ಲೆಯಲ್ಲಿ ಗುರುವಾರ 25 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 453 ಕ್ಕೆ ಏರಿಕೆಯಾಗಿದೆ ಎಂದು ಡಿ.ಹೆಚ್.ಓ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ  ತಿಪಟೂರು-1,ಶಿರಾ-6, ಪಾವಗಡ-3, ಮಧುಗಿರಿ  – 1, ಗುಬ್ಬಿ- 1, ಕುಣಿಗಲ್-1ಹಾಗೂ ತುಮಕೂರು-12 ಸೇರಿ ಒಟ್ಟು 14 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.       ಇತ್ತೀಚೆಗೆ ಮಕ್ಕಳಿಗೆ ಕೊವಿಡ್ 19 ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಠಿಸಿದೆ. ತಂದೆ ತಾಯಿ ಗಳ ನಿರ್ಲಕ್ಷ್ಯದಿಂದ ಮಕ್ಕಳಿಗೆ ಕೊರೊನಾ ಸೊಂಕು ವ್ಯಾಪಿಸುತ್ತಿದೆ.

ಮುಂದೆ ಓದಿ...

ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಶಾಸಕ ಚಾಲನೆ

ತುಮಕೂರು:       ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ನಂ.32ರ ವ್ಯಾಪ್ತಿಯಲ್ಲಿನ ಸಂಕ್ರಾಂತಿ ಸ್ಟೋರ್ಸ್ ಹತ್ತಿರವಿರುವ ಮಧುವನ ಪಾರ್ಕ್‍ನಲ್ಲಿ ಸ್ಮಾರ್ಟ್‍ಸಿಟಿ ವತಿಯಿಂದ ಅಭಿವೃದ್ಧಿ ಕಾಮಗಾರಿಗೆ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಭೂಮಿ ಪೂಜೆ ನೆರವೇರಿಸಿದರು.       ಈ ಸಂಧರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಈ ಭಾಗದವರು ಸದರಿ ಪಾರ್ಕ್‍ನಲ್ಲಿ ಸರ್ಕಾರದ ಯಾವುದೇ ಹಣ ನಿರೀಕ್ಷಣೆ ಮಾಡದೇ, ಸ್ವತಃ ತಾವುಗಳೇ ಬೆಂಚು ಹಾಕುವುದು, ಮರಗಿಡಗಳನ್ನು ಬೆಳಸುವುದು ಹಾಗೂ ಇತರೆ ಅಭಿವೃದ್ಧಿ ಕೆಲಸಗಳನ್ನು ಸ್ಥಳೀಯ ನಾಗರೀಕ ಬಂಧುಗಳೇ ಮಾಡಿರುವುದು ಸಂತಸದ ವಿಷಯ. ಈ ಪಾರ್ಕ್‍ನ ಅಭಿವೃದ್ಧಿ ಕಾಮಗಾರಿಯೂ ರೂ.44.47 ಲಕ್ಷದ ವೆಚ್ಚದಲ್ಲಿ ಚೈನ್‍ಲಿಂಕ್ ಫೆನ್ಸಿಂಗ್ ಹಾಗೂ ಪಾರ್ಕ್ ಅಭಿವರದ್ಧಿಗೆ ಉಪಯೋಗವಾಗುವಂತೆ ಬೋರ್‍ವೆಲ್ ವ್ಯವಸ್ಥೆಯನ್ನು ಸಹ ಮಾಡಲಾಗುವುದು ಮತ್ತು ಪಾರ್ಕ್ ಒಳಗೆ ಪಾಥ್‍ವೇ, ಬೆಂಚುಗಳು, ಹೊಸದಾಗಿ ಎಲೆಕ್ಟ್ರಿಕಲ್ ಗಾರ್ಡನ್ ಲೈಟಿಂಗ್ ಹಾಗೂ ಪ್ಲಾಂಟೇಷನ್ ಮಾಡಲಾಗುವುದು, ಈ…

ಮುಂದೆ ಓದಿ...

ಕುಣಿಗಲ್‍ : ಚಿರತೆ ದಾಳಿಗೆ 4 ವರ್ಷದ ಮಗು ಬಲಿ!!

ಕುಣಿಗಲ್ :     4 ವರ್ಷ ಮಗುವಿನ ಮೇಲೆ ಚಿರತೆ ದಾಳಿ ಮಾಡಿ ಮಗುವನ್ನ ಕೊಂದು ಹಾಕಿರುವ ಘಟನೆ ಕುಣಿಗಲ್ ತಾಲೂಕು ಹುಲಿಯೂರು ದುರ್ಗ ಹೋಬಳಿ ರಾಜೇಂದ್ರ ಪುರ ಗ್ರಾಮದಲ್ಲಿ ನಡೆದಿದೆ.       ನಿನ್ನೆ ಮಧ್ಯಾಹ್ನ 12:30 ವೇಳೆಯಲ್ಲಿ ಸುಮಾರು 4 ವರ್ಷ ಮಗು ಮೇಲೆ ಚಿರತೆ ದಾಳಿ ಮಾಡಿ ಮಗುವನ್ನ ಕೊಂದು ಹಾಕಿದೆ.      ಮಧ್ಯಾಹ್ನ ತನ್ನ ತಾಯಿ ದೊಡ್ಡ ಈರಮ್ಮನ ಜೊತೆ ಬಟ್ಟೆ ತೊಳೆಯಲು ಹೋದಾಗ ದಾಳಿ ಮಾಡಿದೆ.

ಮುಂದೆ ಓದಿ...

ಬುಗುಡನಹಳ್ಳಿ ಕೆರೆಯಿಂದ ಅಮಾನಿಕೆರೆಗೆ ಕುಡಿಯುವ ನೀರು

ತುಮಕೂರು:       ತುಮಕೂರು ನಗರದ ಜನಸಂಖ್ಯೆಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅವಶ್ಯಕವಾದ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ರವರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿರವರ ಸಹಯೋಗದೊಂದಿಗೆ ಬುಗುಡನಹಳ್ಳಿ ಕೆರೆಯಿಂದ ಅಮಾನಿಕೆರೆಗೆ ನೀರನ್ನು ತುಂಬಿಸಿ, ನಂತರ ತುಂಬಿದ ನೀರನ್ನು ಪಿ.ಎನ್.ಪಾಳ್ಯದಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ (WಖಿP) ಹಾಯಿಸಿ ಶುದ್ಧೀಕರಣ ನಂತರ ಕುಡಿಯುವ ನೀರಿಗೆ ನೀರು ಸರಬರಾಜು ಮಾಡಲು ಯೋಜನೆಯನ್ನು ತಯಾರಿಸಲಾಗಿದೆ. ಈ ಯೋಜನೆಯನ್ನು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅನುದಾನದಲ್ಲಿ ಎರಡು ಹಂತದಲ್ಲಿ ರೂ.32 ಕೋಟಿಗಳಿಗೆ ಟೆಂಡರ್ ಕರೆಯಲಾಗಿದ್ದು, ಯೋಜನೆಗಳು ಅನುಷ್ಟಾನ ಹಂತದಲ್ಲಿದೆ.       ಈ ಯೋಜನೆಯ ಮೊದಲ ಹಂತವಾದ ಬುಗುಡನಹಳ್ಳಿ ಕೆರೆಯಿಂದ ತುಮಕೂರು ಅಮಾನಿಕೆರೆಗೆ ನೀರು ತುಂಬುವ ಕಾಮಗಾರಿಯು ಮುಕ್ತಾಯಗೊಂಡಿದ್ದು, ದಿ:11.07.2020 ರಂದು ಪ್ರಾಯೋಗಿಕವಾಗಿ ನೀರನ್ನು ತುಂಬಿಸುವ ಪ್ರಕ್ರಿಯೆಯನ್ನು ಪರೀಕ್ಷಿಸಲಾಯಿತು. ಈ…

ಮುಂದೆ ಓದಿ...

ತುಮಕೂರು ಪೊಲೀಸ್ ಇಲಾಖೆಗೆ ಕೊರೊನಾ ಮಹಾಮಾರಿ

ತುಮಕೂರು: ‘       ತುಮಕೂರು ಜಿಲ್ಲೆಯ ಪೊಲೀಸ್ ಇಲಾಖೆಗೆ ಕೊರೊನಾ ಮಹಾಮಾರಿ ಬೆಂಬಿಡದೆ ಕಾಡುತ್ತಿದ್ದು, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರೊನಾ ಮಹಾಮಾರಿಯ ಅಬ್ಬರಕ್ಕೆ ತತ್ತರಿಸಿ ಹೋಗಿದ್ದಾರೆ.       ಜನಸಾಮಾನ್ಯರನ್ನ ಭಯಬೀತಗೊಳಿಸಿ ಜನರನ್ನು ದುರ್ಬಲ ಮಾಡುತ್ತಿದ್ದ ಕೊರೊನಾ ಸೋಂಕು ಹಲವರ ಪ್ರಾಣವನ್ನ ಆಹುತಿ ತೆಗೆದುಕೊಳ್ಳಲು ಆತುವರಿಯುತ್ತಿತ್ತು. ದುರ್ಬಲ ಮನಸ್ಸುಗಳು ಮಹಾಮಾರಿಯ ಆರ್ಭಟಕ್ಕೆ ಹೆದರಿ ಪ್ರಾಣ ತೆಜಿಸುವ ನಿರ್ಧಾರಕ್ಕೂ ಮುಂದಾಗುತ್ತಿದ್ದಂತ ದುರ್ಘಟನೆಗಳು ನಡೆಯುತ್ತಿತ್ತು.       ಕೊರೊನಾ ಸೋಂಕು ದೇಹದೊಳಗೆ ನುಸುಳುತ್ತಿದ್ದಂತೆ ಆತಂಕಗೊಂಡ ಜನತೆ ಮಾನಸಿಕ ದುರ್ಬಲಕ್ಕೊಳಗಾಗಿ ಚಿಕಿತ್ಸೆಗೆ ಸ್ಪಂಧಿಸದೆ ತಮ್ಮ ಆರೋಗ್ಯವನ್ನು ತಾವೇ ಬಲಿ ತೆಗೆದುಕೊಳ್ಳುವಂತಹ ಪ್ರಸಂಗಗಳು ಕೇಳಿಬರುತ್ತಿವೆ. ಆದರೆ, ಇಂತಹ ಪರಿಸ್ಥಿತಿ ಕೇವಲ ಸಾರ್ವಜನಿಕರಿಗಿದೆ ಎಂದು ಭಾವಿಸುವುದು ಬೇಡ. ಇಡೀ ವಿಶ್ವವನ್ನೇ ಆಹುತಿ ತೆಗೆದುಕೊಳ್ಳಲು ರಣಖೇಕೆ ಹಾಕುತ್ತಿದ್ದ ಕೊರೊನಾ ಸೋಂಕು, ಕೊರೊನಾ ವಾರಿಯರ್ಸ್‍ಗಳನ್ನು ಬಿಡುತ್ತಿಲ್ಲ.    …

ಮುಂದೆ ಓದಿ...