ಅಕ್ರಮ ಮದ್ಯ ಮಾರಾಟಗಾರನ ವಿರುದ್ದ ಸಿಡಿದೆದ್ದ ಮಹಿಳೆಯರು!!

 ಚಿಕ್ಕನಾಯಕನಹಳ್ಳಿ:       ಮದ್ಯವನ್ನು ಕಳ್ಳಹಾದಿಯಲ್ಲಿ ಗ್ರಾಮಕ್ಕೆ ತಂದು ಅಕ್ರಮವಾಗಿ ಮಾರುತ್ತಿದ್ದ ಕೃತ್ಯವನ್ನು ಮಾಲು ಸಮೇತ ಬಯಲಿಗೆಳೆದು ಕಾನೂನುಕ್ರಮ ಕೈಗೊಳ್ಳುವಂತೆ ತಾಲ್ಲೂಕಿನ ಜಾಣೇಹಾರ್ ಗ್ರಾಮದ ಮಹಿಳೆಯರು ದೂರು ಸಲ್ಲಿಸಿದ್ದಾರೆ.       ತಾಲ್ಲೂಕಿನ ಕಂದಿಕೆರೆ ಹೋಬಳಿ ಜಾಣೆಹಾರ್ ಗ್ರಾಮ ಹಿಂದುಳಿದ ಪ್ರದೇಶವಾಗಿದ್ದು, ಈ ಗ್ರಾಮದಲ್ಲಿ ಈಹಿಂದೆ ಧರ್ಮಲಿಂಗಯ್ಯ ಎಂಬುವನು ಅಕ್ರಮವಾಗಿ ಮದ್ಯಮಾರಾಟ ಮಾಡಿ ಗ್ರಾಮದ ಸ್ವಾಸ್ಥ್ಯಕ್ಕೆ ಧಕ್ಕೆಯನ್ನು ತಂದಿದ್ದನು. ಇದನ್ನು ಮನಗಂಡು ಗ್ರಾಮದ ಸ್ವಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮದ ಮಹಿಳೆಯರು ಪ್ರತಿಭಟನೆ ಮಾಡಿ ದೂರುನೀಡಿ ಮದ್ಯಮಾರಾಟವನ್ನು ತಡೆಹಿಡಿದಿದ್ದರು.       ಆದರೆ ಆದೇ ವ್ಯಕ್ತಿ ಮತ್ತೆ ಈಚೆಗೆ ಸರಿರಾತ್ರಿಯಲ್ಲಿ ಗ್ರಾಮದ ಬೇಲಿಗಳಲ್ಲಿ ಮದ್ಯದ ದಾಸ್ತಾನನ್ನು ಬಚ್ಚಿಟ್ಟು, ನಂತರ ಗುಟ್ಟಾಗೆ ಬೀದಿಬದಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟವನ್ನು ಮತ್ತೆ ಆರಂಭಿಸಿದ್ದನು. ಈ ವಿದ್ಯಮಾನವನ್ನರಿತ ಗ್ರಾಮದ ಮಹಿಳೆಯರು ಕಳೆದ ಸೋಮವಾರ ರಾತ್ರಿ 11 ಗಂಟೆಗೆ ಹೊಂಚುಹಾಕಿ…

ಮುಂದೆ ಓದಿ...

ಚಿಕ್ಕನಾಯಕನಹಳ್ಳಿ : ಸೀಲ್‍ಡೌನ್‍ಗೆ ಪ್ರತಿರೋಧ : ಜಿಲ್ಲಾಧಿಕಾರಿಗಳ ಎಚ್ಚರಿಕೆ!!

ಚಿಕ್ಕನಾಯಕನಹಳ್ಳಿ:       ಸೀಲ್‍ಡೌನ್‍ಗೆ ಪ್ರತಿರೋಧ ಒಡ್ಡಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಕೋವಿಡ್ ನಿಯಂತ್ರಣದ ಹೋರಾಟಕ್ಕೆ ಸಹಕರಿಸಿದ್ದವರ ಮೇಲೆ ಕಾನೂನುಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.       ತಾಲ್ಲೂಕಿನ ಗೋಡೆಕೆರೆಹಟ್ಟಿಯಲ್ಲಿ ಈವರೆಗೆ 15 ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಸೋಂಕಿತರನ್ನು ಕ್ವಾರಂಟೈನ್‍ಗೆ ಒಳಪಡಿಸಲು ಮುಂದಾದ ತಾಲ್ಲೂಕು ಆಡಳಿತಕ್ಕೆ ಸ್ಥಳೀಯರು ಪ್ರತಿರೋಧ ಒಡ್ಡಿ ತಹಸೀಲ್ದಾರ್ ರರನ್ನು ಸೇರಿದಂತೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಅವಾಚ್ಯಶಬ್ದಗಳಿಂದ ನಿಂದಿಸಿದ್ದರು ಹಾಗೂ ಸೀಲ್‍ಡೌನ್ ಮಾಡಲಾಗಿದ್ದ ವ್ಯವಸ್ಥೆಯನ್ನು ಕಿತ್ತುಹಾಕಿದ್ದರು.       ಈಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಗೋಡೆಕೆರೆಹಟ್ಟಿಗೆ ಭೇಟಿ ನೀಡಿ ಸ್ಥಳೀಯರಿಗೆ ಪರಿಸ್ಥಿತಿಯ ಮನವರಿಕೆ ಮಾಡಿದರು.       ಹಾಗೂ ಕೊರೊನಾ ಹೋರಾಟದಲ್ಲಿ ಶ್ರಮಿಸುತ್ತಿರುವ ಸರ್ಕಾರಿ ಇಲಾಖೆಗಲ ಸಿಬ್ಬಂದಿಯ ರಕ್ಷಣೆ ನನ್ನ ಹೊಣೆಗಾರಿಕೆಯಾಗಿದ್ದು, ಈ ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ಮೇಲೆ ನಿಧ್ರ್ಯಾಕ್ಷಣ್ಯಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ…

ಮುಂದೆ ಓದಿ...

ಬೆಳೆ ಸಮೀಕ್ಷೆ ಮಾಡಿದ ಪಿಆರ್‍ಗಳಿಗೆ ಹಣ ನೀಡದ ಕೃಷಿ ಇಲಾಖೆ

ಮಧುಗಿರಿ:       ಮುಂಗಾರು ಹಂಗಾಮಿನಲ್ಲಿ ಮೂಬೈಲ್ ಆಫ್ ಮೂಲಕ ಜಿಐಎಸ್ ಮತ್ತು ಜಿಪಿಎಸ್ ಬಳಸಿ ಮುಂಗಾರು ಬೆಳೆ ಸಮೀಕ್ಷೆ ಮಾಡಿದ ಕೆಲ ಪಿಆರ್‍ಗಳಿಗೆ ಹಣ ನೀಡಿಲ್ಲಾ ಎಂದು ಬೆಳೆ ಸಮೀಕ್ಷೆ ಮಾಡಿದ ಪಿಆರ್‍ಗಳು ಆರೋಪಿಸಿದ್ದಾರೆ.       ಮಧುಗಿರಿಯ ವ್ಯಾಪ್ತಿಯಲ್ಲಿ ಕಳೆದ ವರ್ಷ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯ ನೇತೃತ್ವದಲ್ಲಿ ಖಾಸಗಿ ವ್ಯಕ್ತಿಗಳಿಂದ ಮೊಬೈಲ್ ಆಪ್ ಮೂಲಕ ಮುಂಗಾರು ಹಾಗು ಹಿಂಗಾರು ಬೆಳೆ ಸಮೀಕ್ಷೆ ಕೈಗೊಳ್ಳಲಾಗಿತ್ತು.       ಖಾಸಗಿ ಪಿಆರ್‍ಗಳು ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಂಡು ಪ್ರತಿ ಸರ್ವೆ ನಂಬರ್‍ನ ಎಲ್ಲಾ ಫ್ಲಾಟ್‍ಗಳ ತೆರಳಿ ಬೆಳೆ ಇದ್ದರೆ ಬೆಳೆಯ ಮಾಹಿತಿಯನ್ನು ಫೋಟೋ ಸಹಿತ ಅಪ್ಲೋಡ್ ಮಾಡಿದ್ದಾರೆ, ಇದರಿಂದ ಎಲ್ಲಿ ಮತ್ತು ಯಾವ ಬೆಳೆ ಬೆಳೆಯಲಾಗಿದೆ ಎಂಬ ಮಾಹಿತಿಯೊಂದಿಗೆ ಸಮೀಕ್ಷೆಯಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಬಗ್ಗೆ…

ಮುಂದೆ ಓದಿ...

ಸೀಲ್‍ಡೌನ್ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ!

ಗುಬ್ಬಿ:      ಸೀಲ್‍ಡೌನ್ ಪ್ರದೇಶದಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದಿಸುವ ಜತೆಗೆ ಕೊರೋನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರ ಬವಣೆ ಆಲಿಸುವ ಕೆಲಸ ಸೇವೆಗೆ ಅರ್ಥ ನೀಡಿದೆ ಎಂದು ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ ತಿಳಿಸಿದರು.       ತಾಲ್ಲೂಕಿನ ನಿಟ್ಟೂರು ಹೋಬಳಿ ದೊಡ್ಡಗುಣಿ ವಿಎಸ್‍ಎಸ್‍ಎನ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ವಿತರಿಸಲಾದ ದಿನಸಿ ಪದಾರ್ಥಗಳ ಕಿಟ್ ನೀಡಿ ಮಾತನಾಡಿದ ಅವರು ದೊಡ್ಡಗುಣಿ ಭಾಗದಲ್ಲಿ ಎರಡು ಕೊರೋನಾ ಪಾಸಿಟೀವ್ ಪ್ರಕರಣ ಪತ್ತೆಯಾಗಿತ್ತು. ಈ ಸಂದರ್ಭದಲ್ಲಿ ಈ ವಾರಿಯರ್ಸ್‍ಗಳ ಸೇವೆ ಸ್ಮರಣೀಯ. ಅವರ ಶ್ರಮದ ಫಲ ಮತ್ತೇ ಯಾವುದೇ ಪ್ರಕರಣ ಈ ಭಾಗದಲ್ಲಿ ಕಂಡಿಲ್ಲ ಎಂದು ಶ್ಲಾಘಿಸಿದರು.       ಕೊರೋನಾ ವೈರಸ್ ಗ್ರಾಮೀಣ ಭಾಗದಲ್ಲಿ ಕಾಡುತ್ತಿದೆ. ಮುಗ್ದ ಜನರ ಬದುಕಿನಲ್ಲಿ ಆವಾಂತರ ಹುಟ್ಟಿಸುವ ಈ ವೈರಾಣು ತಡೆಗೆ ಅಗತ್ಯ ಜಾಗೃತಿ ಕ್ರಮವನ್ನು ಸ್ವಯಂಪ್ರೇರಿತರಾಗಿ ಜನರು ಅನುಸರಿಸಬೇಕಿದೆ. ಈ ಸಂದರ್ಭದಲ್ಲಿ…

ಮುಂದೆ ಓದಿ...

ಪ.ಜಾತಿ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಎಸಿಗೆ ಮನವಿ!

ಮಧುಗಿರಿ:       ಪರಿಶಿಷ್ಟ ಜಾತಿಯವರು ಉಳುಮೆ ಮಾಡುತ್ತಿದ್ದ ಸಾಗುವಳಿ ಜಮೀನಿನಲ್ಲಿ ಪಣ್ಣೇನಹಳ್ಳಿ ಗ್ರಾಮದ ಅನ್ಯಕೋಮಿನ ಕೆಲವರು ದೌರ್ಜನ್ಯ ನಡೆಸಿದ್ದಾರೆಂದು ದಲಿತ ಮುಖಂಡರು ಆರೋಪಿಸಿ ಮಧುಗಿರಿ ಉಪವಿಭಾಗಧಿಕಾರಿ ಡಾ.ಕೆ.ನಂದಿನಿದೇವಿರವರಿಗೆ ಮನವಿ ಸಲ್ಲಿಸಿದರು.       ಪಟ್ಟಣದ ಉಪವಿಭಾಗಧಿಕಾರಿಗಳ ಕಛೇರಿ ಮುಂದೆ ಆಗಮಿಸಿದ ಕೊರಟಗೆರೆ ತಾಲೂಕಿನ ದಲಿತ ಮುಖಂಡರು ನಮ್ಮ ಬಡ ರೈತರಿಗೆ ಆನ್ಯಾಯವೆಸಗಿದ್ದು ತೊಗರಿಘಟ್ಟ ಗ್ರಾಮದ ನಮ್ಮ ಪರಿಶಿಷ್ಟ ಜಾತಿಯವರು ಇಲ್ಲಿಗೆ ಸುಮಾರು 30-40 ವರ್ಷಗಳಿಂದ ಸರ್ವೆ ನಂಬರ್ 24 ರಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದು ಸರ್ಕಾರಿ ನಿಯಮಾವಳಿಯಂತೆ 2017-18 ನೇ ಸಾಲಿನಲ್ಲಿ ಬಗರ್ ಹುಕ್ಕುಂ ಸಮಿತಿಯಿಂದ ಸುಮಾರು 15 ಕುಟುಂಬಗಳಿಗೆ ಸಾಗುವಳಿ ಪತ್ರಗಳನ್ನು ಕೊರಟಗೆರೆ ತಹಶಿಲ್ದಾರ್ ರವರು ನೀಡಿರುತ್ತಾರೆ.       ಇದರನ್ವವಾಗಿ ನಮ್ಮ ಬಡ ಕುಟುಂಬಗಳು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ದಲಿತರ ಜಮೀನುಗಳ…

ಮುಂದೆ ಓದಿ...

ತುಮಕೂರು : ಇಂದು 15 ಮಂದಿಗೆ ಕೋವಿಡ್-19 ಸೋಂಕು ದೃಢ!!

 ತುಮಕೂರು :       ಜಿಲ್ಲೆಯಲ್ಲಿಂದು 15 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 612ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ಇಂದು ತುಮಕೂರು ತಾಲ್ಲೂಕಿನಲ್ಲಿ 12 ಮಂದಿ ಹಾಗೂ ತಿಪಟೂರು, ಶಿರಾ, ಗುಬ್ಬಿ ತಲಾ ಒಬ್ಬರು ಸೇರಿದಂತೆ ಒಟ್ಟು 15 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಅಲ್ಲದೆ ಓರ್ವ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ.       ಇಂದು ಜಿಲ್ಲಾಸ್ಪತ್ರೆಯಿಂದ 5 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 222 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 372 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 18 ಮಂದಿ ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮುಂದೆ ಓದಿ...

ಹೊರದೇಶದ ಹಾಲು ಉತ್ಪನ್ನಗಳ ಆಮದಿಗೆ ಅವಕಾಶ ಬೇಡ : ಸಚಿವ

ತುಮಕೂರು:       ಹೊರದೇಶಗಳಿಂದ ಕೇಂದ್ರ ಸರ್ಕಾರ ಹಾಲು ಉತ್ಪನ್ನಗಳ ತರಿಸಿಕೊಳ್ಳುವುದರಿಂದ ದೇಶೀಯ ಹಾಲು ಉತ್ಪಾದಕರಿಗೆ ತೊಂದರೆಯಾಗಲಿದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.       ತುಮಕೂರು ಹಾಲು ಒಕ್ಕೂಟಕ್ಕೆ ಭೇಟಿ ನೀಡಿದ ಸಚಿವರು, ಹಾಲು ಸಂಸ್ಕರಣಾ ಘಟಕದ ಪರಿಶೀಲನೆ ನಡೆಸಿ ಅವರು ಮಾತನಾಡಿದರು.       ಕೋವಿಡ್-19 ಸಾಂಕ್ರಾಮಿಕ ರೋಗದಿಂದ ನಂದಿನಿ ಹಾಲಿನ ಮಾರಾಟ ಗಣನೀಯವಾಗಿ ಕಡಿಮೆಯಾಗಿ ನಷ್ಟ ಉಂಟಾಗಿದೆ. ಮೈಸೂರು ಹಾಗೂ ತುಮಕೂರು ಹಾಲಿನ ಡೈರಿಗಳಿಗೆ ಭೇಟಿ ನೀಡಿದಾಗ ಇದೇ ಸಮಸ್ಯೆ ತಲೆದೋರಿದೆ. ಡೈರಿಯಲ್ಲಿ ತುಪ್ಪ ಹಾಗೂ ಹಾಲಿನ ಪುಡಿಯು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಿದ್ದು, ಹಾಗೆ ಉಳಿದಿದ್ದು ಮಾರಾಟವಾಗುತ್ತಿಲ್ಲ. ಈ ಕುರಿತು ಕೆಎಂಎಫ್ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಗೆಹರಿಸಲಾಗುವುದು ಎಂದರು.       ತುಮಕೂರು ಹಾಲು ಒಕ್ಕೂಟದಲ್ಲಿ 154…

ಮುಂದೆ ಓದಿ...