ಚಿಕ್ಕನಾಯಕನಹಳ್ಳಿ: ಬೆಂಗಳೂರಿಗೆ ಬಂದ ವ್ಯಕ್ತಿ ಮೃತ : ಜನರಲ್ಲಿ ಆತಂಕ!!

ಚಿಕ್ಕನಾಯಕನಹಳ್ಳಿ:       ತಾಲ್ಲೂಕಿನ ಮೂಲದ ವೃದ್ಧನೊಬ್ಬ ಬೆಂಗಳೂರಿನಿಂದ ಸ್ವಂತ ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದು, ನಂತರ ಗ್ರಾಮಕ್ಕೆ ಪ್ರವೇಶನೀಡದ ಕಾರಣ ಬೆಂಗಳೂರಿಗೆ ಹಿಂತಿರುಗುವ ಸಂದರ್ಭದಲ್ಲಿ ಮರಣಹೊಂದಿದ್ದಾನೆ ಎಂಬ ಸುದ್ದಿಯಿಂದ ಗ್ರಾಮಗಳಲ್ಲಿ ಆತಂಕ ಮನೆಮಾಡಿದೆ.        ತಾಲ್ಲೂಕಿನ ಕುಪ್ಪೂರು ಪಂಚಾಯಿತಿಯ ದಿಬ್ಬದಹಳ್ಳಿಯ ಮೂಲದ ರಾಜಣ್ಣ(65) ಎಂಬುವರು ಬೆಂಗಳೂರಿನಲ್ಲಿ ತಮ್ಮ ಮಕ್ಕಳ ಮನೆಯಲ್ಲಿದ್ದರು. ಈಚೆಗೆ ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾದ ಕಾರಣಕ್ಕೆ ಊರಿನಲ್ಲಿರುವ ಸಂಬಂಧಿಕರ ಮನೆಯಲ್ಲಿ ಕೆಲವು ಸಮಯ ಇರಲು ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು. ಬುಧವಾರ ಬೆಂಗಳೂರಿನಿಂದ ಚಿ.ನಾ. ಹಳ್ಳಿಗೆ ಬಂದು, ಇಲ್ಲಿಂದ ದಿಬ್ಬದಹಳ್ಳಿಗೆ ತೆರಳಲು ವಾಹನವಿರದ ಕಾರಣ ನಡೆದುಕೊಂಡೆ ಪಯಣಬೆಳೆಸಿದರು. ಆದರೆ ಊರಿನ ಸಮೀಪದ ಕುರುಬಳ್ಳಿಗೆ ಬಂದಾಗ ವಿಷಯತಿಳಿದ ಈತನ ನೆಂಟರು ಇವರನ್ನು ತಮ್ಮ ಮನೆಗೆ ಬರುವುದಕ್ಕೆ ಅಸಮ್ಮತಿ ವ್ಯಕ್ತವಾದ ಹಿನ್ನಲೆಯಲ್ಲಿ ಕುರುಬರಳ್ಳಿಯ ತಂಗುದಾಣದಲ್ಲಿಯೇ ವಿಶ್ರಾಂತಿ ಪಡೆದರು.        ಈ ಸಮಯದಲ್ಲಿ ಈ…

ಮುಂದೆ ಓದಿ...

ರೈಲ್ವೆ ಖಾಸಗೀಕರಣ ವಿರುದ್ಧ ಸಿಐಟಿಯು ಪ್ರತಿಭಟನೆ

ತುಮಕೂರು:       ರೈಲ್ವೆ ಖಾಸಗೀಕರಣದ ಭಾಗವಾಗಿ 109 ರೈಲುಗಳನ್ನು ಖಾಸಗಿಯವರಿಗೆ ವಹಿಸಲು ತೀರ್ಮಾನ ಕೈಗೊಂಡಿರುವ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಹಾಗೂ ರೈತಪರ-ಜನಪರ ಸಂಘಟನೆಗಳ ಮುಖಂಡರು ತುಮಕೂರಿನ ರೈಲ್ವೆ ನಿಲ್ದಾಣದ ಎದುರು ಜುಲೈ 17ರಂದು ಬೆಳಗ್ಗೆ ಪ್ರತಿಭಟನೆ ನಡೆಸಿದರು.       ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ 175 ವರ್ಷ ಹಳೆಯದಾದ 2 ಲಕ್ಷ ಕೋಟಿ ಆಸ್ತಿಯುಳ್ಳ 13 ಸಾವಿರ ಪ್ಯಾಸೆಂಜರ್ ಟ್ರೈನ್‍ಗಳನ್ನು ಓಡಿಸುವ ಬಡಜನರ ಸಾರಿಗೆ ಸಾಧನವಾದ ಜನತೆಯ ತೆರಿಗೆಯಲ್ಲಿ ಕಟ್ಟಲ್ಪಟ್ಟ ರೈಲ್ವೆಯನ್ನು ಖಾಸಗೀಕರಣ ಮಾಡುವ ಕ್ರಮ ದೇಶವಿರೋಧಿಯಾದುದು ಎಂದು ಆರೋಪಿಸಿದರು. ಇದನ್ನು ಜನಪರ ಸಂಘಟನೆಗಳು ವಿರೋಧಿಸಬೇಕು ಎಂದರು.        ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಉಮೇಶ್ ಬಡವರ ರಥ ರೈಲ್ವೆ ಖಾಸಗೀಕರಣ ಮಾಡಬಾರದು. ಬಿಜೆಪಿ…

ಮುಂದೆ ಓದಿ...

ತುಮಕೂರು : 18 ಮಂದಿಗೆ ಕೊರೋನಾ ಸೋಂಕು ದೃಢ!!

ತುಮಕೂರು:       ಜಿಲ್ಲೆಯಲ್ಲಿ 18 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 630ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.      ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 7, ಚಿಕ್ಕನಾಯಕನಹಳ್ಳಿ-5, ಕುಣಿಗಲ್-3 ಮಂದಿ ಹಾಗೂ ತಿಪಟೂರು, ಗುಬ್ಬಿ, ತುರುವೇಕೆರೆ ತಾಲೂಕಿನಲ್ಲಿ ತಲಾ ಒಬ್ಬರು ಸೇರಿದಂತೆ ಒಟ್ಟು 18 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.       ಜಿಲ್ಲಾಸ್ಪತ್ರೆಯಿಂದ 45 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 267 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 345 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 18 ಮಂದಿ ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮುಂದೆ ಓದಿ...