ತುಮಕೂರು: ಇಂದಿನಿಂದ ವಿತರಕರಿಂದ ಸ್ವಯಂಪ್ರೇರಿತ ಲಾಕ್‍ಡೌನ್!!

ತುಮಕೂರು:       ನಗರದಲ್ಲಿ ದಿನೇ ದಿನೇ ಕೊರೋನ ವೈರಸ್ ಸೋಂಕು ಹೆಚ್ಚುತ್ತಿರುವುದರಿಂದ ವಿತರಕರು ಹಾಗೂ ಸಿಬ್ಬಂದಿ ಹಿತದೃಷ್ಠಿಯಿಂದ ನಗರದಲ್ಲಿ ಒಂದು ವಾರಗಳ ಕಾಲ ಸ್ವಯಂ ಪ್ರೇರಿತ ಲಾಕ್‍ಡೌನ್ ಮಾಡಲು ನಿರ್ಧರಿಸಿ ತುಮಕೂರು ತಹಶೀಲ್ದಾರ್ ಮೋಹನ್‍ಕುಮಾರ್ ಅವರ ಮೂಲಕ ತುಮಕೂರು ವಿತರಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.         ಈ ಸಂದರ್ಭದಲ್ಲಿ ಮಾತನಾಡಿದ ತುಮಕೂರು ವಿತರಕರ ಸಂಘದ ಅಧ್ಯಕ್ಷ ನವೀನ್‍ಕುಮಾರ್, ಕೊರೋನ ವೈರಸ್ ನಮ್ಮ ದೇಶದಲ್ಲೇ ಅಲ್ಲ, ಇಡೀ ವಿಶ್ವಕ್ಕೇ ವ್ಯಾಪಿಸಿದೆ. ಕಳೆದ ಮಾರ್ಚ್ 24 ರಿಂದ ಮೂರು ತಿಂಗಳ ಕಾಲ ಕರ್ನಾಟಕ ರಾಜ್ಯಾದ್ಯಂತ ಲಾಕ್ ಡೌನ್ ಮಾಡಿದ್ದರೂ ಸಹ ಸೋಂಕು ಹೆಚ್ಚುತ್ತಲೇ ಇದೆ. ಇತ್ತೀಚೆಗೆ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಕೊರೋನ ವೈರಸ್ ನಿಂದ ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ ಈ ನಿಟ್ಟಿನಲ್ಲಿ ನಮ್ಮ ವಿತರಕರು ಮತ್ತು ಸಿಬ್ಬಂದಿ ವರ್ಗದ…

ಮುಂದೆ ಓದಿ...

ಚಿಕ್ಕನಾಯಕನಹಳ್ಳಿ : ಎಎಸ್‍ಐಗೆ ಸೋಂಕು!

ಚಿಕ್ಕನಾಯಕನಹಳ್ಳಿ :        ಚಿಕ್ಕನಾಯಕನಹಳ್ಳಿ ಠಾಣೆಯ 55 ವರ್ಷದ ಎಎಸ್‍ಐಗೆ ಸೋಂಕು ಕಾಣಿಸಿರುವ ಹಿನ್ನೆಲೆಯಲ್ಲಿ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ.        ಪಟ್ಟಣದ ಬೇಕರಿ ಮಾಲೀಕ, ಬ್ರಾಹ್ಮಣರ ಬೀದಿ ನಿವಾಸಿ 30 ವರ್ಷದ ವ್ಯಕ್ತಿ, ಪಟ್ಟಣದ 28ವರ್ಷದ ಯುವಕ, ಕಾಡೇನಹಳ್ಳಿಯ 38 ವರ್ಷದ ಮಹಿಳೆ, ಅರಸೀಕೆರೆ ಗಾರ್ಮೆಂಟ್ಸ್‍ಗೆ ಕೆಲಸಕ್ಕೆ ಹೋಗುತ್ತಿದ್ದ 22 ವರ್ಷದ ಹಂದನಕೆರೆ ಯುವತಿಗೂ ಸೋಂಕು ತಗುಲಿದೆ. ಅಂತ್ಯಸಂಸ್ಕಾರಕ್ಕೆ ಜಾಗ ಗುರುತಿಸಿ: ಈಗಾಗಲೇ ರಾಜ್ಯಸರ್ಕಾರ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕೋವಿಡ್-19 ತಡೆಗಟ್ಟುವ ಹಾಗೂ ಇದರಿಂದಾಗುವ ದುಷ್ಪರಿಣಾಮಗಳನ್ನು ನಿಯಂತ್ರಿಸುವ ಹೊಣೆ ನೀಡಿದೆ. ನಗರ ಸೇರಿ ತುಮಕೂರು ತಾಲೂಕಿನಲ್ಲಿ ಮೃತಪಡುತ್ತಿರುವ ಸಂಖ್ಯೆ ಹೆಚ್ಚಳವಾಗುತ್ತಿದ್ದು, ನರದಲ್ಲಿ ಎಲ್ಲ ಧರ್ಮಿಯರು ವಾಸವಿದ್ದು ಹತ್ತಿರವಾದ ಸೂಕ್ತ ಸ್ಥಳ ಗುರುತಿಸಿ ಸೋಂಕಿತ ಮೃತರ ಅಂತಿಮ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಶಾಸಕ ಡಾ.ಕೆ.ರಫೀಕ್ ಅಹ್ಮದ್ ಮನವಿ ಮಾಡಿದ್ದಾರೆ.

ಮುಂದೆ ಓದಿ...

ತುಮಕೂರು : ಶನಿವಾರ 23 ಮಂದಿಗೆ ಕೊರೊನಾ ಸೋಂಕು ದೃಢ!!

ತುಮಕೂರು:       ಜಿಲ್ಲೆಯಲ್ಲಿ 23 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 653ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.      ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 16, ಚಿಕ್ಕನಾಯಕನಹಳ್ಳಿ-1, ಕೊರಟಗೆರೆ-2 ಕುಣಿಗಲ್-3 ಮಂದಿ ಗುಬ್ಬಿ-1 ಒಟ್ಟು 23 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.       ಜಿಲ್ಲಾಸ್ಪತ್ರೆಯಿಂದ 20 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 287 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 346 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 20 ಮಂದಿ ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮುಂದೆ ಓದಿ...