ಸರ್ಕಾರದ 20ಲಕ್ಷ ಅನುದಾನ : 10 ಸಾವಿರ ಮಾಸ್ಕ್ ಎಲ್ಲಿ..? – ಪರಂ ಆಗ್ರಹ!!

ಕೊರಟಗೆರೆ:       ಕರುನಾಡಿನ ಮುಖ್ಯಮಂತ್ರಿ ಕ್ವಾರೈಂಟೆನ್‍ಗೆ ಹೋಗಿದ್ದಾರೆ. ಆರೋಗ್ಯ ಸಚಿವರು ದೇವರೇ ಗತಿ ಅಂತಾ ಹೇಳ್ತಿದ್ದಾರೇ.. ಕೊರೊನಾ ವಿಚಾರವಾಗಿ ಒಬ್ಬೊಬ್ಬ ಸಚಿವ ಒಂದೊಂದು ರೀತಿಯ ವಿಭಿನ್ನ ಹೇಳಿಕೆ ನೀಡ್ತಿದ್ದಾರೇ.. ಕರ್ನಾಟಕದ ಜನರ ಆರೋಗ್ಯ ಪರಿಸ್ಥಿತಿ ಅರಿಯಲು ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಡಾ.ಜಿ.ಪರಮೇಶ್ವರ್ ಆರೋಪ ಮಾಡಿದರು.       ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆಯ ಸಭಾಂಗಣದಲ್ಲಿ ಇತ್ತೀಚಿಗೆ ಏರ್ಪಡಿಸಲಾಗಿದ್ದ ಕೊರೊನಾ ಹರಡುವಿಕೆ ತಡೆಯುವ ತುರ್ತುಸಭೆಯಲ್ಲಿ ಅಧಿಕಾರಿಗಳ ಚರ್ಚಿಸಿ ನಂತರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.       ಕೊರೊನಾ ಹರಡುವಿಕೆ ತಡೆಯಲು ಕರ್ನಾಟಕ ಸರಕಾರದ ಸಮರ್ಪಕ ಮಾರ್ಗದರ್ಶನ ಇಲ್ಲದೇ ತುಮಕೂರು ಜಿಲ್ಲಾಡಳಿತ ಮತ್ತು ಕೊರಟಗೆರೆ ಕೊರೊನಾ ಆಡಳಿತ ಯಂತ್ರ ನಿಷ್ಕ್ರೀಯವಾಗಿದೆ. ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆಯ ಸಚಿವರ ವಿಭಿನ್ನ ರೀತಿಯ ಹೇಳಿಕೆಯಿಂದ ಕೊರೊನಾ ಸಿಲ್‍ಡೌನ್, ಲಾಕ್‍ಡೌನ್ ಮತ್ತು ಕ್ವಾರೈಂಟೆನ್‍ಗೆ ಬೆಲೆಯೇ…

ಮುಂದೆ ಓದಿ...

ವೈದ್ಯಸ್ನೇಹಿ ಪೋರ್ಟ್‍ಬಲ್ ಐಸಿಯು ಕಂ ಐಸೋಲೇಷನ್ ವಾರ್ಡ್!!

ತುಮಕೂರು:       ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಹೆದರುತ್ತಿರುವ ಇಂದಿನ ದಿನಗಳಲ್ಲಿ ಶ್ರೇಯಸ್ ಎನರ್ಜಿ ಅಂಡ್ ಟೆಕ್ನಾಲಜಿಸ್ ಪ್ರವೈಟ್ ಲಿ ಕಂಪನಿಯವರು ಅಭಿವೃದ್ದಿ ಪಡಿಸಿರುವ ಸ್ಥಳಾಂತರಿಸಬಹುದಾದ ಐಸಿಯು ಜೊತೆಗಿನ ಐಸೋಲೇಷನ್ ವಾರ್ಡು ಅತ್ಯಂತ ಉಪಯುಕ್ತವಾಗಲಿದ್ದು, ಇದು ರೋಗಿಗಳ ಚಿಕಿತ್ಸೆಗೆ ಬಳಕೆಗೆ ಬರುವಂತಾ ಗಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀಶ್ರೀಸಿದ್ದಲಿಂಗಸ್ವಾಮೀಜಿ ತಿಳಿಸಿದ್ದಾರೆ.       ಸಿದ್ದಗಂಗಾ ಕ್ಷೇತ್ರದಲ್ಲಿ ಶ್ರೇಯಸ್ ಎನರ್ಜಿ ಅಂಡ್ ಟೆಕ್ನಾಲಜಿಸ್ ಪ್ರವೈಟ್ ಲಿ ಕಂಪನಿಯವರಾದ ಮಂಜುನಾಥ್ ಮತ್ತು ಶ್ರೇಯಸ್ ಅವರು ಅಭಿವೃದ್ಧಿಪಡಿಸಿರುವ ಪೋರ್ಟಬಲ್ ಐಸೋಲೇಷನ್ ಕಂ ಐಸಿಯು ವಾರ್ಡು ಯೋಜನೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕಂಪನಿಯವರು ಹೇಳುವಂತೆ ಅತ್ಯಂತ ಅಧುನಿಕ ತಂತ್ರಜ್ಞಾನವನ್ನು ಬಳಸಿ, ಅತ್ಯಂತ ಗಂಭೀರ ಸ್ಥಿತಿಯಲ್ಲಿರುವ ಕೋವಿಡ್-19 ರೋಗಿಗಳನ್ನು ವೈದ್ಯರು ತಮಗೆ ಯಾವುದೇ ಸೋಂಕು ಹರಡದ ರೀತಿ ಚಿಕಿತ್ಸೆ ಮಾಡಬಹುದಾಗಿದೆ.       ಈಗಾಗಲೇ ಸರಕಾರದ…

ಮುಂದೆ ಓದಿ...

ತುಮಕೂರು : 78 ಮಂದಿಗೆ ಕೋವಿಡ್-19 ಸೋಂಕು ದೃಢ!!

ತುಮಕೂರು:       ಜಿಲ್ಲೆಯಲ್ಲಿ ಇಂದು 78 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 777 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 17, ಪಾವಗಡ-10 ಕುಣಿಗಲ್-24 ಮಧುಗಿರಿ-10, ಕೊರಗಟಗೆರೆ-08, ತುರುವೇಕೆರೆ-1, ಶಿರಾ-06, ತಿಪಟೂರು-02 ಮಂದಿ ತಾಲೂಕಿನಲ್ಲಿ ಒಟ್ಟು 78 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯಿಂದ 53 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 411 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.      ಜಿಲ್ಲೆಯಲ್ಲಿ ಒಟ್ಟು 341 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 26 ಸಾವನ್ನಪ್ಪಿದ್ದು, ಸೋಮುವಾರ-03 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮುಂದೆ ಓದಿ...

ಸೋಂಕಿತ ಅಧಿಕಾರಿಯ ಜೊತೆಯೇ ತಾ.ಪಂ. ಸಭೆ ನಡೆಸಿದ ಅಧಿಕಾರಿಗಳು

ಗುಬ್ಬಿ:       ಕೊರೊನಾ ತಡೆಗೆ ಸರ್ಕಾರವೇ ತಲೆ ಕೆಡಿಸಿಕೊಂಡು ಸರ್ಕಸ್ ಮಾಡುತ್ತಿದ್ದರೆ ಇತ್ತ ಜಿಲ್ಲಾ ಪಂಚಾಯತ್ ಉನ್ನತ ಅಧಿಕಾರಿಗಳು ಬೇಲಿಯೇ ಎದ್ದು ಹೊಲ ಮೇದಂತೆ ಎಂಬ ಗಾದೆಗೆ ತಕ್ಕನಾಗಿ ಕೊರೋನಾ ಸೋಂಕಿನ ಅಧಿಕಾರಿಯ ಸಂಪರ್ಕಿತ ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ತಮ್ಮ ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ.        ಇತ್ತೀಚೆಗೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಜಿಪಂ ಯೋಜನಾ ನಿರ್ದೇಶಕ ಮಹಮದ್ ಮುಬೀನ್ ಮತ್ತು ಸಹಾಯಕ ಯೋಜನಾ ನಿರ್ದೇಶಕ ಈಶ್ವರ್ ಪ್ರಸಾದ್ ತಮ್ಮ ಕರ್ತವ್ಯ ನಿಷ್ಠೆ ತೋರಲು ಮುಂದಾಗಿ ತಾವು ಹೋಂ ಕ್ವಾರೆಂಟೈನ್‍ನಲ್ಲಿರಬೇಕಿರುವ ಬಗ್ಗೆ ಮರೆತಿದ್ದಾರಾ ಅಥವಾ ನಮ್ಮನ್ನು ಯಾರು ಕೇಳುತ್ತಾರೆ ಎಂಬ ಬೇಜವಾಬ್ದಾರಿತನವಾ ಎಂಬುದು ಸಭೆಯಲ್ಲಿನ ಅಧಿಕಾರಿಗಳ ಮಧ್ಯೆ ಗುಸುಗುಸು ಚರ್ಚೆ ನಡೆದಿದೆ.    …

ಮುಂದೆ ಓದಿ...