ಮಾಸ್ಕ್ ಧರಿಸಿದವರಿಗೆ ಮಾತ್ರ ಪಶು ಆಹಾರದ ವಸ್ತುಗಳ ವಿತರಣೆ

ಮಧುಗಿರಿ:       ಕರೋನದ ವೈರಸ್ ಹರಡದಂತೆ ಸರ್ಕಾರ ಲಾಕ್ ಡೌನ್, ಸೀಲ್ ಡೌನ್ ಮತ್ತಿತರರ ಕ್ರಮ ಕೈಗೊಳ್ಳುತ್ತಿದ್ದರೂ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ನಿಯಂತ್ರಿಸುವ ಅಂದರೆ ಚೈನ್ ಬ್ರೇಕ್ ಮಾಡಲು ನಾನಾ ಪ್ರಯತ್ನಗಳು ನಡೆಯುತ್ತಲೇ ಇದೆ.      ಮಧುಗಿರಿ ಪಟ್ಟಣದ ವಿಆರ್ ಎಸ್ ಟಿ ರಸ್ತೆಯಲ್ಲಿನ ಅಮೃತ ಟ್ರೇಡರ್ಸ್ ನ ಪಶು ಆಹಾರ ಮಳಿಗೆಯವರು ಮಾತ್ರ ಮಾರ್ಚ್ ಇಪ್ಪತ್ತನಾಲ್ಕು ರಿಂದ ಇಲ್ಲಿಯವರೆಗೂ ಸಾಮಾಜಿಕ ಅಂತರ ,ಮಾಸ್ಕ್ ಧರಿಸಿದವರಿಗೆ ಮಾತ್ರ ಪಶು ಆಹಾರದ ವಸ್ತುಗಳನ್ನು ನೀಡುತ್ತಿರುವುದು ಕಾಣಬಹುದು.ಇವರ ವ್ಯಾಪಾರ ಶೈಲಿ ವ್ಯಾಪಾರಸ್ಥರಿಗೆ ಮಾದರಿಯಾಗಿದೆ.       ಕೊರೋನಾದಿಂದ ದೂರ ಉಳಿಯಲು ಇವರು ಅಂಗಡಿ ಸುತ್ತಲೂ ಸೀಲ್ಡ್ ಮಾದರಿಯಲ್ಲಿ ಅಡ್ಡ ಪಟ್ಟಿಗಳನ್ನು ಕಟ್ಟಿಕೊಂಡು ರೈತರೇ ಗ್ರಾಹಕರಾಗಿರುವುದರಿಂದ ರೈತರ ಕ್ಷೇಮಕ್ಕಾಗಿ ಸ್ಯಾನಿಟೈಸರ್ ಮಾಡಿ ನಂತರ ವ್ಯಾಪಾರ ಮಾಡುತ್ತಾರೆ. ಇವರಲ್ಲಿ ನಾಲ್ವರು ಕೆಲಸ ಮಾಡುತ್ತಿದ್ದು, ಅವರ ಆರೋಗ್ಯದ ದೃಷ್ಟಿಯನ್ನು…

ಮುಂದೆ ಓದಿ...

ತುಮಕೂರು : 37 ಮಂದಿಗೆ ಕೋವಿಡ್-19 ಸೋಂಕು!!

ತುಮಕೂರು:       ಜಿಲ್ಲೆಯಲ್ಲಿ ಇಂದು 37 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 813 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 20, ಪಾವಗಡ-03, ಗುಬ್ಬಿ-3, ಕುಣಿಗಲ್-02 ಮಧುಗಿರಿ-1, ಶಿರಾ-06, ತಿಪಟೂರು-02 ಮಂದಿ ತಾಲೂಕಿನಲ್ಲಿ ಒಟ್ಟು 78 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.      ಜಿಲ್ಲಾಸ್ಪತ್ರೆಯಿಂದ 25 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 436 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.      ಜಿಲ್ಲೆಯಲ್ಲಿ ಒಟ್ಟು 349 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 28 ಸಾವನ್ನಪ್ಪಿದ್ದು, ಮಂಗಳವಾರ-02 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮುಂದೆ ಓದಿ...

ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ!!

ತುಮಕೂರು:       ತುಮಕೂರು ಗ್ರಾಮಾಂತರ ಹಾಲಿ ಜೆಡಿಎಸ್‍ನ ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ಜುಲೈ 18,2020 ರಂದು ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.       2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಕಲಿ ವಿಮಾ ಪಾಲಿಸಿಗಳನ್ನ ಸ್ವತಃ ತಯಾರು ಮಾಡಿ ಆ ಕ್ಷೇತ್ರದ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ವಿತರಿಸಿರುವ ಆರೋಪ ಕುರಿತು ಮೊಕದ್ದಮೆ ದಾಖಲು ಮಾಡಲಾಗಿದೆ.        2018 ರ ಚುನಾವಣೆಯ ಸಂದರ್ಭದಲ್ಲಿ ಕರ್ತವ್ಯ ನಿರತ ಚುನಾವಣಾ ಅಧಿಕಾರಿಗಳು ನಕಲಿ ಬಾಂಡ್ ಹಂಚಿಕೆ ಮಾಡುತ್ತಿದ್ದ ಜೆಡಿಎಸ್‍ನ ಮುಖಂಡೆ ಗೌರಮ್ಮ ಎನ್ನುವವರಿಂದ ಬಾಂಡ್‍ಗಳನ್ನು ವಶಪಡಿಸಿಕೊಂಡು ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಆ ಸಮಯದಲ್ಲಿಯೇ ದೂರು ದಾಖಲು ಮಾಡಲಾಗಿತ್ತು. ನಂತರ ತನಿಖೆಯ ಹಂತದಲ್ಲಿರುವಾಗ ಉಚ್ಛಾ ನ್ಯಾಯಾಲಯದಲ್ಲಿ ತನಿಖೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಪ್ರಥಮ ವರ್ತಮಾನ ವರದಿಯನ್ನ ರದ್ದುಗೊಳಿಸುವಂತೆ ಆರೋಪಿತರ ಪರವಾಗಿ ಉಚ್ಛಾನ್ಯಾಯಾಲಯದಲ್ಲಿ ಮನವಿ ಮಾಡಿ ಮಾನ್ಯ ಉಚ್ಛಾನ್ಯಾಯಾಲ…

ಮುಂದೆ ಓದಿ...