ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗಬೇಕು : ಬಿ.ಸುರೇಶ್ ಗೌಡ

ಮಧುಗಿರಿ:       ಪಕ್ಷದ ಪದಾಧಿಕಾರಿಗಳು ಕೇವಲ ವಿಸಿಟಿಂಗ್ ಕಾರ್ಡ್ ಗೆ ಸೀಮಿತವಾಗಿರದೆ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪುವಂತೆ ಮಾಡಿ ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗ ಬೇಕು ಎಂದು ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ಗೌಡ ಕರೆ ನೀಡಿದರು.      ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಲಯದಲ್ಲಿ ಬುಧವಾರ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಆಯ್ಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿ.ಎಸ್ ಬಸವರಾಜುರವನ್ನು ಬಹುಮತದಿಂದ ಇಲ್ಲಿನ ಮತದಾರರು ಆಯ್ಕೆ ಮಾಡಿದಂತೆ ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೂ ತಲುಪಿಸಿ ಜನರನ್ನು ಸಂಘಟನೆ ಮಾಡಬೇಕಾದ ಜವಾಬ್ದಾರಿ ಹೊಸ ಕಾರ್ಯಕರ್ತರದ್ದಾಗಿದೆ. ಪಕ್ಷ ಸಂಘಟನೆ ಮಾಡುವಾಗ ಹಿರಿಯ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡು ಅವರ ಮಾರ್ಗದರ್ಶನದಲ್ಲಿ ಮುಂದುವರೆಯಬೇಕು ಎಂದು…

ಮುಂದೆ ಓದಿ...

ಮೌಡ್ಯತೆ ತೊರೆದು ಭೀಮನ ಅಮಾವಾಸ್ಯೆಯಂದೇ ವಿವಾಹವಾದ ಜೋಡಿ!

ಮಧುಗಿರಿ:       ಪೋಷಕರ ವಿರೋಧದ ಹಿನ್ನೆಲೆಯಲ್ಲಿ ಪ್ರೇಮಿಗಳು ಜೋಡಿಯೊಂದು ಮೌಡ್ಯತೆ ತೊರೆದು ಭೀಮನ ಅಮಾವಾಸ್ಯೆಯಂದೇ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ವಾಲ್ಮೀಕಿ ಭಾವಚಿತ್ರದ ಎದುರು ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ಮಧುಗಿರಿಯಲ್ಲಿ ನಡೆದಿದೆ.       ಕೊರಟಗೆರೆ ತಾಲ್ಲೂಕಿನ ಚಿಂಪುಗಾನಹಳ್ಳಿ ಗ್ರಾಮದ ಯುವತಿ ಚಂದನಾ (18) ಹಾಗೂ ಅದೇ ಗ್ರಾಮದ 25 ವರ್ಷದ ಯುವಕ ಶ್ರೀಧರ್ ಕಳೆದ 6 ತಿಂಗಳಿನಿಂದ ಪರಸ್ಪರ ಪ್ರಿತಿಸುತ್ತಿದ್ದರು. ಇವರ ಪ್ರೀತಿಗೆ ಪೋಷಕರ ವಿರೋಧ ವ್ಯಕ್ತವಾದ ಹಿನ್ನೆಯಲ್ಲಿ ಮನೆ ಬಿಟ್ಟು ಓಡಿ ಹೋಗಿದ್ದ ಪ್ರೇಮಿಗಳು ರಕ್ಷಣೆ ಕೊಡುವಂತೆ ವೀಡಿಯೋ ಮೂಲಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದರು. ಬಳಿಕ ಜು20 ರ ಸೋಮವಾರ ಭೀಮನ ಅಮಾವಾಸ್ಯೆಯಂದು ಮೌಡ್ಯತೆ ತೊರೆದು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ವಾಲ್ಮಿಕಿ ಭಾವ ಚಿತ್ರದ ಎದುರೇ ಸಂವಿಧಾನ ಪೀಠಿಕೆಯನ್ನೇ ಮಾಂಗಲ್ಯ ಧಾರಣೆಯ ಮಂತ್ರವಾಗಿ…

ಮುಂದೆ ಓದಿ...

ಬೈರೇನಹಳ್ಳಿ ಸಪ್ತಗಿರಿ ವೈನ್ಸ್‍ನಲ್ಲಿ 2ನೇ ಸಲ ಕಳ್ಳತನ!!

ಕೊರಟಗೆರೆ:       ಗುಡುಗು-ಮಿಂಚಿನ ನಡುವೆ ಬಿರುಗಾಳಿಯ ಮಳೆ ಬೀಳು ತ್ತಿರುವ ನಡುವೆಯೇ ಸೋಮವಾರ ಮಧ್ಯರಾತ್ರಿ ಕಳ್ಳರ ತಂಡ ಬೈರೇನಹಳ್ಳಿ ಮಧ್ಯದ ಅಂಗಡಿಯ ಬೀಗ ಮುರಿದು ಸುಮಾರು 2ಲಕ್ಷ 32ಸಾವಿರ ಮೌಲ್ಯದ 498 ಲೀಟರ್ ಮಧ್ಯ ಕಳ್ಳತನ ಮಾಡಿರುವ ಘಟನೆ ನಡೆದಿದೆ.       ತುಮಕೂರು ನಗರ ವಾಸಿಯಾದ ಸೀನಪ್ಪ ಮಾಲೀಕತ್ವದ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಬೈರೇನಹಳ್ಳಿಯ ಸಪ್ತಗಿರಿ ವೈನ್ಸ್‍ನಲ್ಲಿ ಕಳೆದ ವರ್ಷ ನಡೆದಿದ್ದ ಕಳ್ಳತನ ಮಾಸುವ ಮುನ್ನವೇ ಈಗ ಅದೇ ವೈನ್ಸ್‍ನಲ್ಲಿ ಮತ್ತೊಂದು ಸಲ ಕಳ್ಳತನ ನಡೆದು ಸಿಸಿಟಿವಿ ಸಮೇತ ಪರಾರಿ ಆಗಿದ್ದಾರೆ.       ಬೈರೇನಹಳ್ಳಿ ಗ್ರಾಮದ ಹೊರವಲಯದ ಸಪ್ತಗಿರಿ ವೈನ್ಸ್‍ನ ಮಾಲೀಕ ಮತ್ತು ವ್ಯವಸ್ಥಾಪಕನ ದಿವ್ಯನಿರ್ಲಕ್ಷ್ಯದಿಂದ ಕಳ್ಳತನ ನಡೆದಿದೆ. ಮೊದಲ ಸಲ ಕಳ್ಳತನ ನಡೆದಾಗ ಪೊಲೀಸ್ ಇಲಾಖೆ ಸಿಸಿಟಿವಿ ಮತ್ತು ಭದ್ರತೆಗಾಗಿ ಸೆಕ್ಯುರಿಟಿ…

ಮುಂದೆ ಓದಿ...

ತುಮಕೂರು : 51 ಮಂದಿಗೆ ಕೋವಿಡ್-19 ಸೋಂಕು!!

ತುಮಕೂರು :      ಜಿಲ್ಲೆಯಲ್ಲಿ ಇಂದು 51 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 864 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 23, ಪಾವಗಡ-05, ಗುಬ್ಬಿ-03, ಕುಣಿಗಲ್-07, ಮಧುಗಿರಿ-02, ಶಿರಾ-04, ತಿಪಟೂರು-03, ತುರುವೇಕೆರೆ-01, ಚಿಕ್ಕನಾಯಕನಹಳ್ಳಿ-03 ಮಂದಿ ತಾಲೂಕಿನಲ್ಲಿ ಒಟ್ಟು 51 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.      ಜಿಲ್ಲಾಸ್ಪತ್ರೆಯಿಂದ 48 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 485 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.      ಜಿಲ್ಲೆಯಲ್ಲಿ ಒಟ್ಟು 349 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 30 ಸಾವನ್ನಪ್ಪಿದ್ದು, ಬುಧವಾರ-02 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ಮುಂದೆ ಓದಿ...

ಸೀಲ್‍ಡೌನ್ ಪ್ರದೇಶದ ನಿವಾಸಿಗಳಿಗೆ ಬಗ್ಗೆ ನಿರ್ಲಕ್ಷ್ಯ!!

ಚಿಕ್ಕನಾಯಕನಹಳ್ಳಿ:       ಸೀಲ್‍ಡೌನ್ ಪ್ರದೇಶದಲ್ಲಿನ ನಿವಾಸಿಗಳಿಗೆ ಜೀವನೋಪಾಯದ ಅಗತ್ಯವಸ್ತು ಪೂರೈಸದೆ ನಿಲ್ರ್ಯಕ್ಷಿಸಲಾಗುತ್ತಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.       ಪಟ್ಟಣದ 10ನೇವಾರ್ಡ್‍ನ ಬ್ರಾಹ್ಮಣರಬೀದಿಯ ಪೂರ್ವದಿಕ್ಕಿನ ರಸ್ತೆಯನ್ನು ಕಳೆದೆರಡುದಿನದ ಹಿಂದೆ ಕೊರೊನಾ ಸೋಂಕು ಪತ್ತೆಯಾದ ಕಾರಣಕ್ಕೆ ಸೀಲ್‍ಡೌನ್ ಮಾಡಲಾಗಿತ್ತು.       ಆದರೆ ಸೀಲ್‍ಡೌನ್ ಆದ ನಂತರ ಅಲ್ಲಿರುವ ನಿವಾಸಿಗಳಿಗೆ ಜೀವನೋಪಾಯದ ಅಗತ್ಯವಸ್ತುಗಳನ್ನು ಸರಬರಾಜು ಮಾಡುವಲ್ಲಿ ಸ್ಥಳೀಯ ಪುರಸಭೆ ನಿಲ್ರ್ಯಕ್ಷವಹಿಸಿದ ಕಾರಣ ಕೆಲವರು ಸೀಲ್‍ಡೌನ್ ಪ್ರದೇಶದಿಂದ ಹೊರಕ್ಕೆ ತೆರಳಿ ತಮಗೆಬೇಕಾದ ದಿನಸಿ, ತರಕಾರಿ, ಔಷಧಿ, ಹಾಲು ಇತ್ಯಾದಿಗಳನ್ನು ತರಲಾರಂಭಿಸಿದರು.      ಈ ಓಡಾಟವನ್ನು ಗಮನಿಸಿದ ಕೆಲವರಿಂದ ದೂರುಹೋದ ಹಿನ್ನಲೆಯಲ್ಲಿ ಸ್ಥಳಕ್ಕೆ ತಹಸೀಲ್ದಾರ್ ಹಾಜರಾಗಿ ಸೀಲ್ಡೌನ್ ಪ್ರದೇಶದಲ್ಲಿರುವ ಜನರನ್ನುದ್ದೇಶಿಸಿ ಮಾತನಾಡಿ ನೀವು ಯಾವುದೇ ಕಾರಣಕ್ಕೆ ಹೊರಗೆಹೋಗುವ ಹಾಗಿಲ್ಲ, ನಿಮಗೇ ಏನಾದರೂ ಬೇಕಿದ್ದರೆ ಕಾವಲಿರುವ ಸಿಬ್ಬಂದಿಗಳಿಂದ ವಸ್ತುಗಳನ್ನು ತರಿಸಿಕೊಳ್ಳಬಹುದೆಂದರು. ಈ ಮಾತಿಗೆ ಪ್ರತಿಕ್ರಿಯೆ…

ಮುಂದೆ ಓದಿ...

ತುಮಕೂರು: ತಾ.ಪಂ.ಅಧ್ಯಕ್ಷೆ ಕವಿತಾ ರಮೇಶ್ ಅಧಿಕಾರ ಸ್ವೀಕಾರ

ತುಮಕೂರು:       ತುಮಕೂರು ತಾಲ್ಲೂಕು ಪಂಚಾಯಿತಿ ಕೊನೆಯ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕವಿತಾ ರಮೇಶ್ ಅವರು, ಬುಧವಾರ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಪ್ರಭಾರ ಅಧ್ಯಕ್ಷ ಶಾಂತಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು.       ತಾಪಂ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕವಿತಾ ರಮೇಶ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ತಾಲ್ಲೂಕು ಪಂಚಾಯಿತಿ ಎಲ್ಲಾ ಸದಸ್ಯರ ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಹೆಚ್ಚಿನ ಗಮನ ಹರಿಸುವೆ ಎಂದು ತಿಳಿಸಿದರು. ಕುಡಿಯುವ ನೀರಿಗೆ ಆಧ್ಯತೆ:       ತಾಲ್ಲೂಕು ಪಂಚಾಯಿತಿ ಕೊನೆಯ ಅವಧಿ 1 ವರ್ಷವಿದ್ದು, ಈ ಅವಧಿಯಲ್ಲಿ ತಾಲ್ಲೂಕಿನಾದ್ಯಂತ ಪ್ರವಾಸ ಮಾಡಿ, ತಾಲ್ಲೂಕಿನಲ್ಲಿ ಉದ್ಬವಿಸಿರುವ ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು, ಜೊತೆಗೆ ವಿವಿಧ ಅಭಿವೃದ್ದಿ ಕಾರ್ಯಗಳ ಬಗ್ಗೆಯೂ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡುವುದಾಗಿ ಹೇಳಿದರು. ಭ್ರಷ್ಟಾಚಾರ ನಿರ್ಮೂಲನೆ:  …

ಮುಂದೆ ಓದಿ...