ತುಮಕೂರು : 67 ಮಂದಿಗೆ ಕೋವಿಡ್-19 ಸೋಂಕು!!

    ತುಮಕೂರು :       ಜಿಲ್ಲೆಯಲ್ಲಿ ಇಂದು 67 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 931 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 26, ಪಾವಗಡ-06, ಗುಬ್ಬಿ-09, ಕುಣಿಗಲ್-05, ಮಧುಗಿರಿ-07, ಶಿರಾ-04, ತಿಪಟೂರು-02, ತುರುವೇಕೆರೆ-05, ಚಿಕ್ಕನಾಯಕನಹಳ್ಳಿ-02, ಕೊರಟಗೆರೆ-01 ಮಂದಿ ತಾಲೂಕಿನಲ್ಲಿ ಒಟ್ಟು 67 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.      ಜಿಲ್ಲಾಸ್ಪತ್ರೆಯಿಂದ 03 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 488 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.      ಜಿಲ್ಲೆಯಲ್ಲಿ ಒಟ್ಟು 408 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 35 ಸಾವನ್ನಪ್ಪಿದ್ದು, ಗುರುವಾರ-05 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ಮುಂದೆ ಓದಿ...

ಪಾವಗಡ :18-19 ನೇ ಶತಮಾನದ ನಾಣ್ಯಗಳು ಪತ್ತೆ!!

ಪಾವಗಡ:       ತಾಲ್ಲೂಕಿನ ನಿಡಗಲ್ ಹೋಬಳಿ ಗುಜ್ಜನಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಟಿ.ಎನ್.ಬೆಟ್ಟ ಗ್ರಾಮದ ತಿಮ್ಮಪ್ಪನ ಬೆಟ್ಟದ ತಪ್ಪಲಿನಲ್ಲಿರುವ ಸನಾತನ ಪುಷ್ಕರಣಿಯನ್ನು ಕಳೆದ ಒಂದು ವಾದದಿಂದ ಸ್ವಚ್ಛಮಾಡಲಾಗುತ್ತಿದೆ. ಇದರಲ್ಲಿ 18 ಮತ್ತು19 ನೇ ಶತಮಾನದ ನಾಣ್ಯಗಳು ದೊರೆತಿವೆ. ಈ ಅಪರೂಪದ ನಾಣ್ಯಗಳು ದೊರೆತಿರುವುದನ್ನು ಪೆಮ್ಮನಹಳ್ಳಿಯ ಗ್ರಾಮಸ್ಥರು ತಾಲ್ಲೂಕು ಆಡಳಿತದ ಗಮನಕ್ಕೆ ತಂದ ಕಾರಣ ಗುರುವಾರ ತಹಸಿಲ್ದರ್ ವರದರಾಜ್ ಅವರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.       ನಂತರ ಮಾತನಾಡುತ್ತಾ ಪುರಾತನ ಪುಷ್ಕರಣಿಯನ್ನು ಸ್ವಚ್ಛಗೊಳಿಸುವ ವೇಳೆ ಈ ಅಪರೂಪದ ನಾಣ್ಯಗಳು ದೊರೆತಿವೆ ಇವುಗಳನ್ನು ಗ್ರಾಮಸ್ಥರು ಸಂಗ್ರಹಿಸಿ ಶ್ರೀರಾಮನ ದೇವಸ್ಥಾನದಲ್ಲಿ ಇಟ್ಟಿದ್ದರು. ನಂತರ ಈ ಸಂಂಬಂಧ ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ಮಾರ್ಗದರ್ಶನದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.      ಈ ದೇವಸ್ಥಾನದ ಹತ್ತಿರ ಅನೇಕ ಮೂಲಭೂತ ಸೌಕರ್ಯಗಳ ಕೊರತೆ ಇರುವುದರಿಂದ…

ಮುಂದೆ ಓದಿ...