ಮಧುಗಿರಿ : ಶತಕದತ್ತ ಕೊರೊನಾ ಸೋಂಕಿತರ ಸಂಖ್ಯೆ!!

ಮಧುಗಿರಿ:      ತಾಲೂಕಿನಲ್ಲಿ ಕರೊನಾ ಕಾಟ ಮುಂದುವರೆದಿದ್ದು ಶುಕ್ರವಾರವೂ ಸಹ ಎಂಟು ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಇಲ್ಲಿಯವರೆಗೂ 84ಮಂದಿಗೆ ಸೋಂಕು ದೃಢಪಟ್ಟು ಶತಕದ ಹಂಚಿಗೆ ತಲುಪಿದೆ.      ಈ ಪೈಕಿ ಶುಕ್ರವಾರ ಒಬ್ಬರು ಅಸ್ಪತ್ರೆಯಿಂದ ಬಿಡುಗಡೆ ಯಾಗಿದ್ದು,ಇಲ್ಲಿಯವರೆಗೂ 84ಸೋಂಕಿತರಲ್ಲಿ 46 ಸೋಂಕಿತರು ಅಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ. ಒಬ್ಬರು ಮೃತಪಟ್ಟಿದ್ದು, 37ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.     ಶುಕ್ರವಾರದ ವರದಿ:       ತಾಲೂಕಿನ ರಂಗನಹಳ್ಳಿ ಗ್ರಾಮದ ಇಬ್ಬರಿಗೆ, ಮತ್ತು ಐ.ಡಿ.ಹಳ್ಳಿ ಹೋಬಳಿ ಹೊಸಇಟಕಲೋಟಿ,ದೊಡ್ಡೇರಿ ಹೋಬಳಿ ಎಂ.ಗೊಲ್ಲರಹಟ್ಟಿಯ ಯುವಕನೊಬ್ಬನಿಗೆ ಸೋಂಕು ತಗುಲಿದೆ. ಪಟ್ಟಣದ ಕೆ.ಹೆಚ್ ರಸ್ತೆಯ ದಿನಸಿ ಅಂಗಡಿಯ ದಂಪತಿಗಳಿಗೆ ಸೋಂಕು ತಗುಲಿದ್ದು ಆತಂಕ ಹೆಚ್ಚಾಗಿದೆ. ಸೋಂಕಿತರ ಸಂಖ್ಯೆ 84 ಕ್ಕೇರಿದ್ದು ಶತಕದ ಗಡಿ ಸಮೀಪಿಸಿದ್ದು ಸಹಜವಾಗಿ ಸಾರ್ವಜನಿಕರು ಗಾಬರಿಗೊಂಡಿದ್ದಾರೆ.        ಗುರುವಾರದ ವರದಿ:      ಗುರುವಾರದಂದು7ಸೋಂಕಿತರು ಪತ್ತೆಯಾಗಿದ್ದವು.ಪಟ್ಟಣದ ಪಿಎಲ್ಡಿ…

ಮುಂದೆ ಓದಿ...

ಮಧುಗಿರಿ : ಯುವಕನೊಂದಿಗೆ ಅಪ್ರಾಪ್ತೆ ಬಾಲಕಿ ವಿವಾಹ!!

ಮಧುಗಿರಿ:       ಅಪ್ರಾಪ್ತೆ ಬಾಲಕಿಯೊಬ್ಬಳಿಗೆ ಅದೇ ಗ್ರಾಮದ ಯುವಕನೊಂದಿಗೆ ವಿವಾಹ ವಾಗಿರುವ ಘಟನೆ ಗುರುವಾರ ನಡೆದಿದೆ.       ತಾಲ್ಲೂಕಿನ ಐ ಡಿ ಹಳ್ಳಿ ಹೋಬಳಿಯ ಹೂವಿನಹಳ್ಳಿ ಗ್ರಾಮದ ಪ್ರಾಪ್ತ ಯುವಕ ನೊಬ್ಬ ಅದೇ ಗ್ರಾಮದ ವಾಸಿ ಇತ್ತೀಚೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಕೊನೆಯ ವಿಷಯವನ್ನು ಬರೆಯಲು ಹೋಗಿದ್ದ ಬಾಲಕಿಯೊಬ್ಬಳು ಮನೆಗೆ ಹಿಂದಿರುಗದೆ ಅದೇ ಗ್ರಾಮದ ಯುವಕ ನೊಂದಿಗೆ ವಿವಾಹವಾಗಿದ್ದಾಳೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಸಿಡಿಪಿಓ ಇಲಾಖೆಯ ಅಧಿಕಾರಿ ಮಿಡಗೇಶಿ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹದಲ್ಲಿ ಭಾಗಿರುವವರ ವಿರುದ್ದ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

ಮುಂದೆ ಓದಿ...

ಎಂ.ಟಿ.ಕೃಷ್ಣಪ್ಪ ಹಿಂದೂ-ಮುಸಲ್ಮಾನರ ನಡುವೆ ಬೆಂಕಿ ಹಚ್ಚುತ್ತಿದ್ದಾರೆ – ಆರೋಪ!!

ತುರುವೇಕೆರೆ:       ನನಗೂ ಹಾಗೂ ನಮ್ಮ ಗ್ರಾಮದ ಉಮರ್ ಎಂಬುವವರಿಗೂ ನಡೆದ ಜಮೀನು ವಿವಾದದ ಪ್ರಕರಣದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಜೆಡಿಎಸ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹಿಂದೂ ಮುಸಲ್ಮಾನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು ನಾಗಲಾಪುರದ ಮಂಜುನಾಥ್ ಆರೋಪಿಸಿದರು.       ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಗ್ರಾಮದಲ್ಲಿ ನಮ್ಮ ತಾತನವರ ಕಾಲದಿಂದಲೂ ಉಳಿಮೆ ಮಾಡುತ್ತಿದ್ದ ಜಮೀನನ್ನು ಅಕ್ರಮವಾಗಿ ಮುಸಲ್ಮಾನ್ ಜನಾಂಗದ ಉಮರ್ ಎಂಬುವವರು ಉಳಿಮೆ ಮಾಡಲು ಮುಂದಾದಾ, ತಡೆಯಲು ಹೋದ ನನ್ನ ಮೇಲೆ ಟ್ರಾಕ್ಟರ್ ಹರಿಸಲು ಪ್ರಯತ್ನಿಸಿದರು ತಕ್ಷಣ ನಾನು ಪಕ್ಕಕ್ಕೆ ಬಿದ್ದೆ ಆದರೂ ಟ್ರಾಕ್ಟರ್‍ನ ನೇಗಿಲು ನನ್ನ ತೊಡೆ ಹಾಗೂ ಕೈಗೆ ತಾಕಿ ರಕ್ತಸ್ರಾವ ಉಂಟಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ, ಆದರೆ ಅಷ್ಟರೊಳಗಾಗಲೇ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನ ಸಹಾಯದಿಂದ ಪೋಲೀಸ್…

ಮುಂದೆ ಓದಿ...

ಮುಖ್ಯಮಂತ್ರಿಗಳೇ ನೇಕಾರರ ಜೀವ ಉಳಿಸಿ : ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್

ತುಮಕೂರು:       ದೇಶದಲ್ಲಿ ಕೊರೊನಾ ಮಹಾಮಾರಿಯಿಂದಾಗಿ ಲಕ್ಷಾಂತರ ಜನರು ಸಾವೀಗೀಡಾಗುತ್ತಿವುದು ದುರದೃಷ್ಟಕರ ಸಂಗತಿ. ಇಂತಹ ಸಂದರ್ಭದಲ್ಲಿ ನೇಕಾರಿಕೆಯನ್ನೆ ನಂಬಿ ಬದುಕುತ್ತಿದ್ದವರ ಬದುಕು ದುಸ್ಥಿರವಾಗಿದೆ ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪರವರು ನೇಕಾರರತ್ತ ಗಮನಹರಿಸಬೇಕೆಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಅಧ್ಯಕ್ಷ ಹಾಗೂ ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ್ ಮನವಿ ಮಾಡಿದ್ದಾರೆ.        ನಿನ್ನೆ ಬೆಳಿಗ್ಗೆ ಬೆಂಗಳೂರು ಯಲಹಂಕ ಕೋಗಿಲು ಅಗ್ರಹಾರದ ನೇಕಾರರ ಕಾಲೋನಿಯ ಲಕ್ಷ್ಮೀಪತಿ (60) ವರ್ಷದ ಬಡ ನೇಕಾರ ಕೊರೋನಾ ಖಾಯಿಲೆ ಹಾಗೂ ಮಾಡಿದ ಸಾಲ ತೀರಿಸಲಾಗದೆ ಶುಕ್ರವಾರ ಬೆಳಿಗ್ಗೆ ನೇಕಾರಿಕೆ ಮಾಡುತ್ತಿರುವ ಜಾಗದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.       ಅನೇಕ ಬಾರಿ ತಮಗೆ ಹಾಗೂ ಜವಳಿ ಮಂತ್ರಿಗಳಿಗೆ ನೇಕಾರರ ಸಮಸ್ಯೆಗಳನ್ನು ಬಗೆಹರಿಸಲು ಪತ್ರ ನೀಡಿದ್ದೂ ಇದುವರೆವಿಗೂ ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬಗಳಿಗೆ ಪರಿಹಾರ ನೀಡಿರುವುದಿಲ್ಲ. ಹಾಗೂ…

ಮುಂದೆ ಓದಿ...

ತುಮಕೂರು : 59 ಮಂದಿಗೆ ಕೋವಿಡ್-19 ಸೋಂಕು!!

ತುಮಕೂರು :       ಜಿಲ್ಲೆಯಲ್ಲಿ ಇಂದು 59 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 991 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ಇಂದು ತುಮಕೂರು-22, ಮಧುಗಿರಿ-8, ಗುಬ್ಬಿ ಹಾಗೂ ತಿಪಟೂರಿನಲ್ಲಿ ತಲಾ 7, ಕುಣಿಗಲ್ ಹಾಗೂ ತುರುವೇಕೆರೆಯಲ್ಲಿ ತಲಾ 5, ಚಿಕ್ಕನಾಯಕನಹಳ್ಳಿ-2, ಕೊರಟಗೆರೆ, ಪಾವಗಡ ಹಾಗೂ ಶಿರಾ ತಲಾ 1 ಸೇರಿದಂತೆ ಒಟ್ಟು 67 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.      ಜಿಲ್ಲಾಸ್ಪತ್ರೆಯಿಂದ 35 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 523 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.      ಜಿಲ್ಲೆಯಲ್ಲಿ ಒಟ್ಟು 430 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 38 ಮಂದಿ ಸಾವನ್ನಪ್ಪಿದ್ದು, ಶುಕ್ರವಾರ-03 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ಮುಂದೆ ಓದಿ...

ತುಮಕೂರು : ಸುವರ್ಣ ಭವನಕ್ಕೆ ನುಗ್ಗಿದ ಮಳೆನೀರು!!

ತುಮಕೂರು:       ಗುರುವಾರ ಸಂಜೆ ಸುರಿದ ಮಳೆಗೆ ತುಮಕೂರಿನ ಅಮಾನಿಕೆರೆ ಸಮೀಪವಿರುವ ಕನ್ನಡ ಭವನದ ಸುವರ್ಣ ಭವನಕ್ಕೆ ಮಳೆನೀರು ನುಗ್ಗಿ ಪೀಠೋಪಕರಣಗಳು ಮತ್ತು ನೂರಾರು ಬಂಡಲ್ ಹಳೆಯ ಪೇಪರ್ ನೀರಿನಲ್ಲಿ ಮುಳುಗಿ ಹೋಗಿದೆ.       ಸ್ಮಾರ್ಟ್‍ಸಿಟಿ ಅಸಮರ್ಪಕ ಕಾಮಗಾರಿಗಳು ಅರ್ಧಕ್ಕೆ ನಿಂತುಹೋಗಿದ್ದು ಸುವರ್ಣಭವನಕ್ಕೆ ನೀರು ನುಗ್ಗಲು ಕಾರಣ. ಈ ಸಮಸ್ಯೆಯನ್ನು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಸ್ಮಾರ್ಟ್‍ಸಿಟಿ ಇಂಜಿನಿಯರ್ ಗಮನಕ್ಕೆ ತಂದರೂ ನೀರು ಹೊರಹಾಕಿಸಲು ಕ್ರಮ ಕೈಗೊಳ್ಳಲಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ.ಹ.ರಮಾಕುಮಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.       ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಮುಖ್ಯಾಧಿಕಾರಿ ಮಹಲಿಂಗಪ್ಪ ಅವರನ್ನು ಸಂಪರ್ಕಿಸಿ ಸುವರ್ಣ ಸಭಾ ಭವನದಲ್ಲಿರುವ ಮಳೆ ನೀರು ಹೊರಹಾಕಿಕೊಡುವಂತೆ ಮನವಿ ಮಾಡಲಾಯಿತು. 2 ಅಗ್ನಿಶಾಮಕ ವಾಹನಗಳು ಮತ್ತು 10 ಸಿಬ್ಬಂದಿ ಬಂದು ಸಭಾಭವನದಲ್ಲಿ ತುಂಬಿಕೊಂಡಿದ್ದ ನೀರನ್ನು ಪಂಪ್…

ಮುಂದೆ ಓದಿ...