ಗುಬ್ಬಿ: ಗ್ರಾ.ಪಂ.ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರ ತೀರ್ಮಾನ!!

ಗುಬ್ಬಿ:       ಮೂಲಭೂತ ಸೌಲಭ್ಯ ಒದಗಿಸುವ ಅಭಿವೃದ್ಧಿ ಕೆಲಸಗಳೇ ಮರೀಚಿಕೆಯಾದ ಹಿನ್ನಲೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಮತ ಬಹಿಷ್ಕರಿಸಲು ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜವರೇಗೌಡನಪಾಳ್ಯ ಗ್ರಾಮಸ್ಥರು ಒಕ್ಕರಲಿನ ತೀರ್ಮಾನಕ್ಕೆ ನಿಂತಿದ್ದಾರೆ.       ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಬ್ಯಾಡಗೆರೆ ಕ್ಷೇತ್ರಕ್ಕೆ ಒಳಪಟ್ಟ ಮೂರು ಗ್ರಾಮಗಳಿಂದ ಒಟ್ಟು 700 ಮತದಾರರಿದ್ದಾರೆ. ಪಂಚಾಯಿತಿ ನಿಯಮಾನುಸಾರ ಈ ಕ್ಷೇತ್ರ ಎರಡು ಸದಸ್ಯತ್ವ ಪಡೆಯಬೇಕಿದೆ. ಈ ಬಗ್ಗೆ ಕಳೆದ 5 ವರ್ಷದ ಹಿಂದೆಯೇ ಪ್ರಸ್ತಾಪ ಮಾಡಿ ಮತದಾನ ಬಹಿಷ್ಕಾರದ ಪ್ರತಿಭಟನೆ ನಡೆಸಲಾಗಿತ್ತು. ಯಾವುದೇ ಮೂಲ ಸವಲತ್ತು ಪಡೆಯಲು ಬಹಿಷ್ಕಾರದ ಅಸ್ತ್ರ ಬಳಸಬೇಕಿದೆ. ಚುನಾವಣಾ ಸಂದರ್ಭದಲ್ಲಿ ಮಾತ್ರವೇ ಒಂದಿಷ್ಟು ಕೆಲಸ ಮಾಡಿಕೊಡುವ ಅಧಿಕಾರಿಗಳು ಪ್ರತಿಭಟನೆಗೆ ಮಾತ್ರ ಬೆಲೆ ನೀಡುತ್ತಿದ್ದಾರೆ. ಮೌಖಿಕ ಚರ್ಚೆ ಮಾಡಿದರೆ ವರ್ಷನಾಗಟ್ಟಲೇ ಯಾವ ಕೆಲಸ ಮಾಡಿಕೊಡುವುದಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.  …

ಮುಂದೆ ಓದಿ...

ತುಮಕೂರು : ಸಾವಿರ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ!!

ತುಮಕೂರು :       ಜಿಲ್ಲೆಯಲ್ಲಿ ಇಂದು 119 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1110 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ಇಂದು ತುಮಕೂರು-49, ಮಧುಗಿರಿ-9, ಗುಬ್ಬಿ-01, ತಿಪಟೂರಿನಲ್ಲಿ -09 , ಕುಣಿಗಲ್ -08, ತುರುವೇಕೆರೆ-05, ಚಿಕ್ಕನಾಯಕನಹಳ್ಳಿ-13, ಕೊರಟಗೆರೆ-08, ಪಾವಗಡ-13, ಶಿರಾ -03 ಸೇರಿದಂತೆ ಒಟ್ಟು 119 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.      ಜಿಲ್ಲಾಸ್ಪತ್ರೆಯಿಂದ 43 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 595 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.      ಜಿಲ್ಲೆಯಲ್ಲಿ ಒಟ್ಟು 473 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 42 ಮಂದಿ ಸಾವನ್ನಪ್ಪಿದ್ದು, ಶುಕ್ರವಾರ-04 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ಮುಂದೆ ಓದಿ...