ಖಾಸಗಿ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳ ಬಾಡಿಗೆ ಮನ್ನಾಕ್ಕೆ ಆಗ್ರಹ

ತುಮಕೂರು:      ಕೊರೊನ ಲಾಕ್‍ಡೌನ್ ಮತ್ತು ಸ್ಮಾರ್ಟ್‍ಸಿಟಿ ಕಾಮಗಾರಿಯಿಂದಾಗಿ ಖಾಸಗಿ ಬಸ್ ನಿಲ್ದಾಣದಲ್ಲಿ ಕಳೆದ ಐದಾರು ತಿಂಗಳಿಂದ ಯಾವುದೇ ವ್ಯಾಪಾರ ವಹಿವಾಟು ನಡೆಯದೇ ಇರುವುದರಿಂದ ಮಾರ್ಚ್ ನಿಂದ ಆಗಸ್ಟ್ ತಿಂಗಳವರೆಗೆ ವಾಣಿಜ್ಯ ಮಳಿಗೆಗಳ ಬಾಡಿಗೆ ಮನ್ನಾ ಮಾಡುವಂತೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ.       ಹರಾಜಿನ ಮೂಲಕ ಮಳಿಗೆಗಳನ್ನು ಬಾಡಿಗೆ ಪಡೆದ ಕೆಲವೇ ದಿನಗಳಲ್ಲಿ ಕೊರೊನ ಸೋಂಕು ವ್ಯಾಪಿಸಿ ಲಾಕ್‍ಡೌನ್ ಹೇರಲಾಯಿತು. ಜೊತೆಗೆ ಸ್ಮಾರ್ಟ್‍ಸಿಟಿ ಯೋಜನೆಯಡಿ ಅಶೋಕ ರಸ್ತೆ ಮತ್ತು ಖಾಸಗಿ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದೆ.       ಹೀಗಾಗಿ ಖಾಸಗಿ ಬಸ್‍ಗಳ ಓಡಾಟವೂ ಇಲ್ಲವಾಗಿ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿತು. ಖಾಸಗಿ ಬಸ್ ನಿಲ್ದಾಣದಲ್ಲಿ ಇರುವ ಮಳಿಗೆಗಳಿಗೆ 10 ರಿಂದ 50 ಸಾವಿರ ರೂಪಾಯಿ ಬಾಡಿಗೆ ನಿಗದಿಪಡಿಸಿದೆ. ಬಾಡಿಗೆ ಪಡೆದ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿದ್ದರಿಂದ ವ್ಯಾಪಾರವನ್ನೇ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಆರು…

ಮುಂದೆ ಓದಿ...

ಮಧುಗಿರಿಯಾದ್ಯಂತ ಸೋಮವಾರ ಭಾರೀ ಮಳೆ

ಮಧುಗಿರಿ:      “ಉಬ್ಬೆ ಮಳೆ ಬಂದರೆ ಉಬ್ಬಿಬ್ಬಿ ಕೊಂಡು ಬರುತ್ತದೆ’ ಎಂಬುದಕ್ಕೆ ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯ ಸಾಕ್ಷಿಯಾಗಿದೆ.      ಸೋಮವಾರ ರಾತ್ರಿ ಹತ್ತರಿಂದ ಪ್ರಾರಂಭವಾದ ಮಳೆ ಬೆಳಗಿನ ಜಾವದವರೆಗೂ ನಿಂತು ನಿಂತು ಬಂದ ಮಳೆಯಿಂದ ಹಲವು ಹಳ್ಳಗಳು ಮೈದುಂಬಿ ಹರಿದಿದೆ.       ತಾಲ್ಲೂಕಿನ ಗಡಿಭಾಗದಲ್ಲಿರುವ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿ ಕೆರೆ ಹಳ್ಳ ಮೈದುಂಬಿ ಹರಿದಿದ್ದು ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಹದ ಭೀತಿಯಂತೆ ಇಲ್ಲಿ ಅನುಭವ ಉಂಟಾಗಿದೆ. ಹಳ್ಳದ ನೀರು ಹೊಲ ಗದ್ದೆಗಳಿಗೆ ಹರಿದು ಬೆಳೆ ನಷ್ಟವಾಗಿದೆ, ರೆಡ್ಡಿಹಳ್ಳಿ ಕೆರೆಗೆ ಒಂದೇ ರಾತ್ರಿಯ ಮಳೆಯಿಂದಾಗಿ ಶೇ ಎಪ್ಪತ್ತರಷ್ಟು ಭಾಗ ಕೆರೆಗೆ ನೀರು ಹರಿದು ಬಂದಿದೆ. ವಾರ್ಷಿಕ ಬೆಳೆಗಳಿಗೆ ನಷ್ಟವಾಗಿದ್ದು ,ಹತ್ತಿ ಬೆಳೆಗೆ ತೊಂದರೆಯಾಗಿದೆ, ಶೇಂಗಾ ಬೆಳೆ ಒಣಗುವ ಸ್ಥಿತಿ ತಲುಪುತ್ತಿದ್ದರೂ ಅತಿವೃಷ್ಟಿಯ ರೀತಿಯಲ್ಲಿ ಬಿದ್ದ ಮಳೆಯಿಂದಾಗಿ ರೈತರು ಚಿಂತಕ್ರಾಂತರಾಗಿದ್ದಾರೆ.  …

ಮುಂದೆ ಓದಿ...

ತುಮಕೂರು : 192 ಮಂದಿಗೆ ಕೋವಿಡ್-19 ಸೋಂಕು ದೃಢ!!

ತುಮಕೂರು :       ಜಿಲ್ಲೆಯಲ್ಲಿ 192 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 95, ಪಾವಗಡ-22, ಕುಣಿಗಲ್-11, ಮಧುಗಿರಿ-10, ಕೊರಗಟಗೆರೆ-07, ತುರುವೇಕೆರೆ-09, ಶಿರಾ-10, ತಿಪಟೂರು-13, ಗುಬ್ಬಿ-07, ಚಿಕ್ಕನಾಯಕನಹಳ್ಳಿ-08 ಮಂದಿ ಸೇರಿ ತಾಲೂಕಿನಲ್ಲಿ ಒಟ್ಟು 192 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.   

ಮುಂದೆ ಓದಿ...

ಡ್ರಗ್ ದಂಧೆ ನಡೆಯುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ : ನಟ ಸುದೀಪ್

ತುಮಕೂರು:       ಕನ್ನಡ ಚಿತ್ರರಂಗದಲ್ಲಿ ಡ್ರಗ್ ದಂಧೆ ನಡೆಯುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ. ಅಂತೆ ಕಂತೆಗಳ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ನಟ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ.       ನಾನು ಕಳೆದ 24 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿದ್ದೇನೆ. ಆದರೆ ಚಿತ್ರರಂಗದಲ್ಲಿ ರೈಸ್, ದಾಲ್ ಕೇಳಿದ್ದೇನೆ. ಆದರೆ ಡ್ರಗ್ ಮಾಫಿಯಾ ಕೇಳೇ ಇಲ್ಲ ಎಂದರು.       ನಗರದ ಸಿದ್ದಗಂಗಾ ಮಠಕ್ಕೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಭೇಟಿ ನೀಡಿ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಚಿತ್ರರಂಗದಲ್ಲಿ ಡ್ರಗ್ ಮಾಫಿಯಾ ನಡೆಯುತ್ತಿದೆ ಎಂಬುದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಚಿತ್ರರಂಗವನ್ನು ಎಲ್ಲ ಹಿರಿಯ ಕಲಾವಿದರು ಸೇರಿ ಕಟ್ಟಿದ್ದಾರೆ. ಚಿಕ್ಕ ವಿಚಾರಕ್ಕೆ ಇಡೀ ಚಿತ್ರರಂಗಕ್ಕೆ ಕಳಂಕ ತರುವುದು ಸರಿಯಲ್ಲ ಎಂದರು.    …

ಮುಂದೆ ಓದಿ...