ರೈತರ ಒಪ್ಪಿಗೆಯೇ ಪಡೆಯದೇ ಕೃಷಿಭೂಮಿ ಭೂಸ್ವಾಧೀನ

ಕೊರಟಗೆರೆ:       ದೇವರಾಯನದುರ್ಗ ಸಮೀಪದ ಇತಿಹಾಸವುಳ್ಳ ಜರಿಬೆಟ್ಟ ವನ್ಯಜೀವಿಗಳ ಆವಾಸಸ್ಥಾನ. ಪಿತ್ರಾರ್ಜಿತ ಆಸ್ತಿಯನ್ನು ಭೂಸ್ವಾಧೀನ ಮಾಡಿಕೊಳ್ಳಲು ರೈತರ ಒಪ್ಪಿಗೆ ಇಲ್ಲದೇ ಅನಧಿಕೃತವಾಗಿ ಭೂಸ್ವಾಧೀನ ಪೂರ್ಣಗೊಂಡಿದೆ. ಖಾಸಗಿ ಕಂಪನಿ ನೀಡುವ ಚಿಲ್ಲರೇ ಕಾಸು ನಮಗೆ ಬೇಡ. ನಮಗೆ ನಮ್ಮ ಕೃಷಿ ಭೂಮಿಯೇ ಸಾಕು. ನಾವು ನಮ್ಮ ಪ್ರಾಣವನ್ನು ಬೇಕಾದರೇ ಬಿಡ್ತೀವಿ. ಆದರೆ ನಮ್ಮ ಕೃಷಿ ಭೂಮಿಯನ್ನು ಮಾತ್ರ ಬಿಡೆವು ಎಂಬುದು ರೈತರ ಮನದಾಳದ ನೋವಾಗಿದೆ.       ಕಲ್ಪತರು ನಾಡು ತುಮಕೂರು ಗ್ರಾಮಾಂತರ ಮತ್ತು ಕೊರಟಗೆರೆ ಕ್ಷೇತ್ರದ ನಡುವಿನ ತಂಗನಹಳ್ಳಿ ಜರಿಬೆಟ್ಟದಲ್ಲಿ ಗಣಿಗಾರಿಕೆ ನಡೆಸಲು 49ಎಕರೇ ಕೃಷಿ ಜಮೀನು ಭೂಸ್ವಾಧೀನಕ್ಕಾಗಿ ಕಳೆದ 2ವರ್ಷದಿಂದ ವಿವಿಧ ರೀತಿಯ ಕಸರತ್ತು ನಡೆಯುತ್ತಿದೆ. ಎತ್ತಿನಹೊಳೆಗೆ ಜಮೀನು ಹೋಗಲಿದೆ. ಜಮೀನು ಅಭಿವೃದ್ಧಿ ಪಡಿಸಿ ಕೊಳವೆಬಾವಿ ಹಾಕಿಸುತ್ತೇವೆ. ಕೃಷಿಗೆ ಸಹಾಯ ಮಾಡ್ತೇವೆ ಎಂದು ಲಕ್ಷಾಂತರ ರೂ ಹಣದ ಆಸೆ ತೋರಿಸಿ ಕೃಷಿ…

ಮುಂದೆ ಓದಿ...

ಹೇಮಾವತಿ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ತಡೆಗೋಡೆ ನಿರ್ಮಿಸಿ

ತುರುವೇಕೆರೆ:      ಹೇಮಾವತಿಗೆ ನಾಲೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಗೆ ಅಕ್ಕಪಕ್ಕ ತಡೆಗೋಡೆ ಇಲ್ಲದಿರುವುರಿಂದ ಇಲ್ಲಿ ಓಡಾಡುವ ಪ್ರಾಣಕ್ಕೆ ಕುಂದುಂಡಾಗಲಿದೆ ಎಂದು ಕರ್ನಾಟಕ ವಿಜಯಸೇನೆಯ ತಾಲ್ಲೂಕು ಪದಾಧಿಕಾರಿಗಳು ಸ್ಥಳದಲ್ಲಿ ಹೇಮಾವತಿ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.       ತಾಲ್ಲೂಕಿನ ಅರೆಮಲ್ಲೇನಹಳ್ಳಿ ಮುಖ್ಯರಸ್ತೆಯಲ್ಲಿ ಹೆಡಗೀಹಳ್ಳಿ ಬಳಿ ಮುಖ್ಯರಸ್ತೆಗೆ ಅಡ್ಡಲಾಗಿ ಹಾದುಹೋಗಿರುವ ಎನ್‍ಬಿಸಿ ಹೇಮಾವತಿ ನಾಲಾವಲಯದಲ್ಲಿ ಇತ್ತೀಚೆಗಷ್ಟೇ ನಿರ್ಮಾಣಗೊಂಡಿದ್ದು ತಡೆಗೋಡೆ ಹಾಕದೆ ಸಾರ್ವಜನಿಕರಿಗೆ ಓಡಾಡಲು ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ಯಾವುದೇ ಸಂದರ್ಭದಲ್ಲಿಯಾದರೂ ಅಪಘಾತವಾಗುವ ಸಂಭವವಿದೆ. ನಾಲೆ ತುಂಬಾ ಆಳವಾಗಿದ್ದು ಯಾವುದೇ ಸಂದರ್ಭದಲ್ಲಿ ಅಪಾಯದ ಸಂಭವವಿದ್ದು ಕೂಡಲೇ ತಡೆಗೋಡೆ ನಿರ್ಮಾಣಮಾಡಿ ತದನಂತರ ಸಾರ್ವಜನಿಕರಿಗೆ ಸೇತುವೆ ಮೇಲೆ ಓಡಾಡಲು ಅನುವು ಮಾಡಿಕೊಡಲಿ. ಅದು ಬಿಟ್ಟು ತಡೆಗೋಡೆ ನಿರ್ಮಾಣ ಮಾಡದೆ ಓಡಾಡಲು ರಸ್ತೆ ತೆರವು ಮಾಡಿರುವುದು ಸರಿಯಲ್ಲ ಎಂದು ಇಂಜಿನಿಯರ್‍ನ್ನು ತರಾಟೆಗೆ ತೆಗೆದುಕೊಂಡರು.       ಕರ್ನಾಟಕ ವಿಜಯಸೇನೆಯ ತಾಲ್ಲೂಕು…

ಮುಂದೆ ಓದಿ...

ಬಚ್ಚಲುಗುಂಡಿ ನಿರ್ಮಾಣದಿಂದ ಆರೋಗ್ಯ ವೃದ್ಧಿ : ತಾ.ಪಂ.ಅಧ್ಯಕ್ಷೆ

ಗುಬ್ಬಿ :       ನೀರು ಇಂಗಿಸಿ ಅಂತರ್ಜಲ ವೃದ್ಧಿ ಮಾಡುವ ಯೋಜನೆಗಳಲ್ಲಿ ಬಚ್ಚಲುಗುಂಡಿ ಯೋಜನೆ ಕೂಡಾ ವಿಶೇಷ ಅಭಿಯಾನವಾಗಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 50 ಗುಂಡಿಗಳ ಕಾಮಗಾರಿ ನಡೆಸಲು ಸರ್ಕಾರ ಮುಂದಾಗಿದೆ. ಈ ವಿಶೇಷ ಅಭಿಯಾನ ಅನುಷ್ಠಾನಕ್ಕೆ ಸಮುದಾಯ ಸಹಕಾರ ನೀಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಅನುಸೂಯ ನರಸಿಂಹಮೂರ್ತಿ ತಿಳಿಸಿದರು.       ತಾಲ್ಲೂಕಿನ ಎಂ.ಎಚ್.ಪಟ್ಟಣ ಗ್ರಾಮದಲ್ಲಿ ಶುಕ್ರವಾರ ಸಾಂಕೇತಿಕವಾಗಿ ಆರಂಭವಾದ ಬಚ್ಚಲುಗುಂಡಿ ಅಭಿಯಾನ ಅನುಷ್ಠಾನಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಉದ್ಯೋಗ ಖಾತ್ರಿ ಯೋಜನೆಗೆ ಮರು ರೂಪ ನೀಡುತ್ತಿರುವ ಹಲವು ಯೋಜನೆಯಲ್ಲಿ ಈ ಬಚ್ಚಲುಗುಂಡಿ ಯೋಜನೆ ಕೂಡಾ ಒಂದಾಗಿದೆ. ಈ ಜತೆಯಲ್ಲಿ ಪೌಷ್ಠಿಕ ತೋಟ ನಿರ್ಮಾಣ, ಅಣಬೆ ಬೇಸಾಯ ಶೆಡ್ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ ಎಂದರು.       ಬಚ್ಚಲುಗುಂಡಿ ಕಾಮಗಾರಿಗೆ ಸರ್ಕಾರ 17 ಸಾವಿರ ರೂಗಳನ್ನು ಪಂಚಾಯಿತಿ…

ಮುಂದೆ ಓದಿ...