ಪಿಂಚಣಿಗೆ ಆಧಾರ್ ಕಡ್ಡಾಯ : ಕಂದಾಯ ಸಚಿವ ಆರ್.ಅಶೋಕ್

ತುಮಕೂರು:       ಮಿನಿವಿಧಾನಸೌಧವು ಬಡ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವಂತಹ ಸೌಧವಾಗಬೇಕು ಎಂದು ಕಂದಾಯ ಸಚಿವ ಆರ್.ಅಶೋಕ ಅವರು ತಿಳಿಸಿದರು.       ಶಿರಾ ತಾಲೂಕಿನಲ್ಲಿ ನೂತನ ಮಿನಿ ವಿಧಾನಸೌಧ ಉದ್ಘಾಟಿಸಿ ಮಾತನಾಡಿದ ಅವರು, ಶಿರಾ ತಾಲೂಕಿನಲ್ಲಿ ಸುಮಾರು 11 ಎಕರೆ ಜಾಗದಲ್ಲಿ ಸುಮಾರು 9.85 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಜನರ ಸೇವೆ ಮಾಡದೇ ದರ್ಪ ತೋರುವ ಅಧಿಕಾರಿಗಳನ್ನು ಮುಲಾಜಿಲ್ಲದೇ ಅಮಾನತುಗೊಳಿಸಲಾಗುವುದು. ಸರ್ಕಾರದ ಕೆಲಸ ದೇವರ ಕೆಲಸವಿದ್ದಂತೆ, ಬಡ ಜನರ ಕಷ್ಟಗಳಿಗೆ ಸ್ಪಂದಿಸಿ, ಜನರು ಅನಾವಶ್ಯಕವಾಗಿ ಓಡಾಡುವುದನ್ನು ತಪ್ಪಿಸುವುದೇ ನಮ್ಮ ಉದ್ದೇಶ ಎಂದು ಅವರು ತಿಳಿಸಿದರು.       ಇನ್ನು ಮುಂದೆ ವೃದ್ಧಾಪ್ಯ ವೇತನ ಪಡೆಯಲು ಅನುಕೂಲವಾಗುವಂತೆ ನೂತನ ಯೋಜನೆಯನ್ನು ಜಾರಿಗೊಳಿಸಲಾಗುವುದು. 60 ವರ್ಷ ಪೂರ್ಣಗೊಂಡ ವೃದ್ಧ/ವೃದ್ಧೆಯ ಆಧಾರ್ ಕಾರ್ಡ್ ದಾಖಲೆಯ ಮೇಲೆ 60 ವರ್ಷ ತುಂಬಿದ ಬಗ್ಗೆ…

ಮುಂದೆ ಓದಿ...

ಡಿಸಿಸಿ ಬ್ಯಾಂಕ್‍ ನಿರ್ದೇಶಕರಾಗಿ ಬಿ.ನಾಗೇಶ್ ಬಾಬು ಆಯ್ಕೆ

ಮಧುಗಿರಿ:       ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತಕ್ಕೆ ಮಧುಗಿರಿಯ ಕಾಂಗ್ರೆಸ್ಸಿನ ಮುಖಂಡರಾಗಿರುವ ತುಮುಲ್ ಮಾಜಿ ಅಧ್ಯಕ್ಷ ಬಿ.ನಾಗೇಶ್ ಬಾಬು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪ್ರಥಮ ಬಾರಿಗೆ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಪ್ರವೇಶ ಪಡೆದಿದ್ದಾರೆ.       ಬಿ.ನಾಗೇಶ್ ಬಾಬು ತುಮುಲ್ ಗೆ ಮೂರು ಬಾರಿ ನಿರ್ದೇಶಕರಾಗಿ ಚುನಾಯಿತರಾಗಿ ಒಂದು ಬಾರಿ ಅಧ್ಯಕ್ಷರೂ ಸಹ ಆಗಿದ್ದರು. ಕೆ.ಎಂ.ಎಫ್ ನಿರ್ದೇಶಕರಾಗಿದ್ದರು. ಈ ಹಿಂದೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಎರಡು ಬಾರಿ ಸ್ಪರ್ದಿಸಿ ಸೋತಿದ್ದರು. ಬಿ.ನಾಗೇಶ್ ಬಾಬು ಆಯ್ಕೆಯಾಗಿರುವ ಕ್ಷೇತ್ರದಿಂದ ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೊಂಡವಾಡಿ ಚಂದ್ರಶೇಖರ್ ಆಯ್ಕೆಯಾಗಿ ಉಪಾಧ್ಯಕ್ಷರೂ ಸಹ ಆಗಿದ್ದರು ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಬಿ.ನಾಗೇಶ್ ಬಾಬು ಜೆ.ಡಿಎಸ್ ತೊರೆದು ಕೆ.ಎನ್ ರಾಜಣ್ಣನವರ ನಾಯಕತ್ವದಡಿ ಕಾಂಗ್ರೆಸ್ ಸೇರಿದ ನಂತರ ಡಿಸಿಸಿ ಬ್ಯಾಂಕ್…

ಮುಂದೆ ಓದಿ...

ನಗರದಲ್ಲಿ 2500 ಮನೆಗಳ ನಿರ್ಮಾಣಕ್ಕೆ ಆಸ್ತು : ಜ್ಯೋತಿಗಣೇಶ್

  ತುಮಕೂರು:      ತುಮಕೂರು ನಗರಕ್ಕೆ ಸುಮಾರು 2500 ಮನೆಗಳನ್ನು ವಸತಿ ಇಲಾಖೆಯಿಂದ ನೀಡಿದ್ದು,ಈಗ ನೇಮಕವಾಗಿರುವ ಆಶ್ರಯ ಸಮಿತಿಯ ಸದಸ್ಯರು ಅದಷ್ಟು ಶೀಘ್ರವಾಗಿ ಫಲಾನುಭವಿಗಳನ್ನು ಗುರುತಿಸಿ,ಜಾಗ ಗೊತ್ತು ಮಾಡಿ,ಸಮಿತಿಗೆ ಪಟ್ಟಿ ನೀಡುವಂತೆ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.        ನಗರದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದವತಿಯಿಂದ ತುಮಕೂರು ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಗೆ ನೇಮಕವಾಗಿ ಸದಸ್ಯರುಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು, ನಗರದಲ್ಲಿ ಸುಮಾರು 22 ಸಾವಿರ ಜನರು ಮನೆಗಳಿಗಾಗಿ ಅರ್ಜಿ ಸಲ್ಲಿಸಿದ್ದು, ಇವರಲ್ಲಿ ಅರ್ಧದಷ್ಟು ಪುನಾರಾವರ್ತನೆಯಾಗಿರುವ ಸಾಧ್ಯತೆ ಇದೆ. ಹಾಗಾಗಿ ಮೊದಲು ಪಟ್ಟಿಯನ್ನು ಪರೀಷಕ್ಕರಿಸಿ, ಆರ್ಹರಿಗೆ ಮನೆಗಳು ತಲುಪುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸಮಿತಿಯ ಸದಸ್ಯರು ಜಾತ್ಯಾತೀತ, ಧರ್ಮಾತೀತರಾಗಿ ನಡೆದುಕೊಳ್ಳುವಂತೆ ಸಲಹೆ ನೀಡಿದರು.       ವಸತಿ ಇಲಾಖೆಯಿಂದ ರಾಜೀವ್‍ಗಾಂಧಿ ಹೌಸಿಂಗ್ ಸ್ಕಿಂ ಅಡಿಯಲ್ಲಿ ಮಂಜೂರಾಗಿರುವ 2500 ಮನೆಗಳ…

ಮುಂದೆ ಓದಿ...