ತುಮಕೂರು : ಸೆ.19 ಕೊವಿಡ್-19 ಪರೀಕ್ಷಾ ಪ್ರಯೋಗಾಲಯ ಆರಂಭ!!

ತುಮಕೂರು:      ರಾಷ್ಟ್ರದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಸಾಹೇ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆಯಲ್ಲಿ ‘ಕೊವೀಡ್ 19 ಪರಿಕ್ಷಾ ಪ್ರಯೋಗಾಲಯದ ಆರಂಭವನ್ನು ರಾಜ್ಯದ ವೈದ್ಯಕೀಯ ಸಚಿವ ಡಾ.ಸುಧಾಕರ್ ಸೆ. 19 ರಂದು ನೇರವೇರಿಸಲಿದ್ದಾರೆ.       ನಗರದ ಸಮೀಪದ ಆಗಲಕೋಟೆಯಲ್ಲಿರುವ ಆಸ್ಪತ್ರೆಯಲ್ಲಿ ವಿಶೇಷ ಘಟಕವನ್ಮ್ನ ಸೆ.19ದಂದು ಬೆಳಿಗ್ಗೆ ಬೆಳಿಗ್ಗೆ 11ಕ್ಕೆ ಉದ್ಗಾಟನೆಗೊಳ್ಳಲಿರುವ ಕಾರ್ಯಕ್ರಮದಲ್ಲಿ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ,  ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಡಾ.ಜಿ.ಎಸ್. ಆನಂದ್, ಸಾಹೇ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಬಾಲಕೃಷ್ಣ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ , ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಸರ್ಜನ್ ಡಾ. ವೀರಭದ್ರಯ್ಯ, ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ…

ಮುಂದೆ ಓದಿ...

ರಂಗಾಪುರ ಸಮೀಪ ತುಮಕೂರು ವಿವಿಗೆ 15 ಎಕರೆ ಜಾಗ

ತುಮಕೂರು:        ತೆಂಗು ಉತ್ಪನ್ನಗಳ ಮೌಲ್ಯವರ್ಧನೆ ನಿಟ್ಟಿನಲ್ಲಿ ತಿಪಟೂರಿನಲ್ಲಿ ವಿಶೇಷ ಕೋರ್ಸ್ ಆರಂಭಿಸಲು ತುಮಕೂರು ವಿವಿ ಚಿಂತನೆ ನಡೆಸಿದೆ. ತಿಪಟೂರು ಹೊರವಲಯದ ರಂಗಾಪುರ ಹೊಸಳ್ಳಿ ಸರ್ವೇ ನಂ28ರಲ್ಲಿ ಸರ್ಕಾರ ವಿವಿಗೆ ನೀಡಿರುವ 15 ಎಕರೆ ಭೂಮಿ ಸರ್ವೇ ವೇಳೆ ಸಿಂಡಿಕೇಟ್ ಸದಸ್ಯ ರಾಜು ಈ ಬಗ್ಗೆ ಮಾಹಿತಿ ನೀಡಿದರು. ತಿಪಟೂರು ಸೇರಿ ತೆಂಗು ಸೀಮೆಯ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲು ಸರ್ಕಾರ ಭೂಮಿ ನೀಡಿದ್ದು, ಸದುಪಯೋಗ ಮಾಡಿಕೊಳ್ಳುವ ಹೊಣೆ ವಿವಿ ಮೇಲಿದೆ ಎಂದರು.        ಇದರ ಮೊದಲ ಹಂತವಾಗಿ ಭೂಮಿ ಭದ್ರಪಡಿಸಿಕೊಳ್ಳುವ ಕಾರ್ಯಕ್ಕೆ ಈಗ ಚಾಲನೆ ನೀಡಲಾಗಿದ್ದು, ಭವಿಷ್ಯದಲ್ಲಿ ವಿವಿ ಆಂತರಿಕ ಸಂಪನ್ಮೂಲ ಹಾಗೂ ಸರ್ಕಾರದ ವಿಶೇಷ ಅನುದಾನ ಬಳಸಿಕೊಂಡು ಕ್ಯಾಂಪಸ್ ನಿರ್ಮಿಸುವ ಕನಸಿದೆ ಎಂದರು. ಸಿಂಡಿಕೇಟ್ ಸದಸ್ಯ ಟಿ.ಎಸ್.ಸುನೀಲ್‍ಪ್ರಸಾದ್ ಮಾತನಾಡಿ, ವಿವಿಗೆ ಸಂಬಂಧಪಟ್ಟ ಭೂಮಿ ತಿಪಟೂರು ಹಾಗೂ ಶಿರಾ ತಾಲೂಕಿನಲ್ಲಿದ್ದು, ಈ…

ಮುಂದೆ ಓದಿ...

ಅಪೌಷ್ಟಿಕತೆಯನ್ನು ದೂರ ಮಾಡಲು ಪೌಷ್ಟಿಕ ಕೈತೋಟಗಳನ್ನು ಬೆಳೆಸಿ : ನಟರಾಜ್ ಕರೆ

ತುಮಕೂರು:       ಅಪೌಷ್ಟಿಕತೆಯನ್ನು ದೂರ ಮಾಡಲು ಪೌಷ್ಟಿಕ ಕೈತೋಟಗಳನ್ನು ಬೆಳೆಸಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್ ರೈತ ಮಹಿಳೆಯರಿಗೆ ಕರೆ ನೀಡಿದರು.       “ರಾಷ್ಟ್ರೀಯ ಪೋಷಣ್ ಅಭಿಯಾನ} ಅಂಗವಾಗಿ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ), ಇಫ್ಕೊ(Iಈಈಅಔ) ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಇತ್ತೀಚೆಗೆ ಕೆವಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ “ಜಾಗೃತಿ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಪೌಷ್ಠಿಕತೆಯನ್ನು ದೂರ ಮಾಡಲು ತಮ್ಮ ಇಲಾಖೆಯಿಂದ ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸಿದರಲ್ಲದೆ ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಲು ಅಂಗನವಾಡಿ ಕಾರ್ಯಕತೆಯರು ಮನೆ-ಮನೆಗೆ ಭೇಟಿ ನೀಡಿ ಅರಿವು ಮೂಡಿಸುತ್ತಿದ್ದಾರೆ. ಕಾರ್ಯಕರ್ತೆಯರು ಮನೆಗೆ ಭೇಟಿ ನೀಡಿದಾಗ ಪೌಷ್ಟಿಕಯುಕ್ತ ಆಹಾರವನ್ನು ಸೇವಿಸಲು ನೀಡುವ ಸಲಹೆಗಳನ್ನು ಸಾರ್ವಜನಿಕರು ಪಾಲಿಸಬೇಕೆಂದು ಮನವಿ ಮಾಡಿದರು.       “ಕಾವೇರಿ…

ಮುಂದೆ ಓದಿ...

ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ದೇಶದ ಸಂಸ್ಕೃತಿಯ ಉಳಿವಿಗೆ ಅವಶ್ಯ

 ಗುಬ್ಬಿ:       ಕಳೆದ 34 ವರ್ಷದ ನಂತರ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಕೇಂದ್ರ ಸರ್ಕಾರದ ಚಿಂತನೆಯು ಭಾರತೀಯ ಪರಂಪರೆ, ಸಂಸ್ಕøತಿಯನ್ನು ಅಳವಡಿಸುವ ಪಠ್ಯಕ್ರಮವಾಗಿದೆ. ಯಾವ ಗೊಂದಲವಿಲ್ಲದೇ ಸ್ಥಳೀಯವಾಗಿಯೇ ಪಠ್ಯಕ್ರಮವನ್ನು ಜಾರಿಗೆ ತರಲು ಆಯಾ ರಾಜ್ಯ ಸರ್ಕಾರವು ಸ್ವತಂತ್ರವಾಗಿದೆ ಎಂದು ವಿದ್ಯಾಭಾರತಿ ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ ಜಿ.ಆರ್.ಜಗದೀಶ್ ತಿಳಿಸಿದರು.      ಪಟ್ಟಣದ ಶ್ರೀ ಚಿದಂಬರಾಶ್ರಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರ ಹೊಸ ಶಿಕ್ಷಣ ನೀತಿಯ ಬಗ್ಗೆ ಹಲವು ಗೊಂದಲ ಮೂಡಿದ್ದು ಏಕ ರೂಪ ಶಿಕ್ಷಣ ಎನ್ನುವುದನ್ನು ಮತ್ತೊಂದು ರೀತಿ ಬಿಂಬಿಸಲಾಗುತ್ತಿದೆ. ಏಕ ರೂಪ ಸಿದ್ದಾಂತ ಅಳವಡಿಸಿಕೊಳ್ಳಲು ಮಾತ್ರ ಸೂಚಿಸಲಾಗಿ ನಮ್ಮ ಭಾರತೀಯ ಶಿಕ್ಷಣಕ್ಕೆ ಮಹತ್ವ ನೀಡಲು ಈ ನೀತಿ ಮುಂದಾಗಿದೆ. ಮೆಕಾಲೆ ಆಂಗ್ಲ ಮಾದರಿಯಿಂದ ಹೊರ ಬಂದು ಉದ್ಯೋಗಾಧಾರಿತ ಶಿಕ್ಷಣವನ್ನು ಮೌಲ್ಯಾಧಾರಿತ ಶಿಕ್ಷಣವಾಗಿ ಮಾರ್ಪಡಿಸಿ ನಮ್ಮ ಪರಂಪರೆಯನ್ನು ಉಳಿಸುವ ಕೆಲಸ…

ಮುಂದೆ ಓದಿ...