ಅಂತೂ ಇಂತೂ ಗ್ರಾಮ ಪಂಚಾಯಿತಿ ಎಲೆಕ್ಷನ್ ಬಂದೇ ಬಿಡ್ತು

ಕೊರಟಗೆರೆ:        ಕೊರೋನಾ ಕಾರಣಕ್ಕೆ ಆಗುತೋ…ಇಲ್ಲವೋ…ಎಂದು ಅನುಮಾನ ಮೂಡಿಸಿದ್ದ ಗ್ರಾಮ ಪಂಚಾಯಿತಿಚುನಾವಣೆ ದಿನಾಂಕ ನಿಗಧಿಯಾಗಿ ಗ್ರಾಮಗಳ ಅಭಿವೃದ್ದಿ ಮಂತ್ರಪಟಿಸುತ್ತಿರುವ ಮತದಾರಉತ್ತಮಅಭ್ಯರ್ಥಿಗಳ ಹುಡುಕಾಟದಲ್ಲಿತೊಡಗಿರುವುದುಕಂಡು ಬಂದಿತು.       ಬಹು ನಿರೀಕ್ಷಿತ ಗ್ರಾಮಪಂಚಾಯಿತಿ ಚುನಾವಣೆಗೆ ಮೂಹೂರ್ತ ನಿಗಧಿಯಾಗಿದ್ದು, 2ಹಂತಗಳಲ್ಲಿ ಚುನಾವಣೆ ನಡೆಸಲು ರಾಜ್ಯಚುನಾವಣೆ ಆಯೋಗ ನಿರ್ಧರಿಸಿದ್ದು, ಮೊದಲ ಹಂತದಲ್ಲಿಯೇ ಕೊರಟಗೆರೆ ತಾಲ್ಲೂಕಿನ 24ಗ್ರಾಮಪಂಚಾಯಿತಿಗಳಲ್ಲಿ ಆಕಾಂಕ್ಷಿ ಅಭ್ಯರ್ಥಿಗಳು ಈಗಾಗಲೇ ಪ್ರಚಾರಕಿಳಿದು ನಮ್ಮ ಎದುರಾಳಿ ಪ್ರತಿಸ್ಫರ್ಧಿಯಾರು ಎಂಬ ಗೊಂದಲದಲ್ಲಿಯೇಚುನಾವಣೆಯ ಕಾವು ಗರಿಗೇದರಿದೆ.       ತಾಲ್ಲೂಕಿನ4ಹೋಬಳಿಗಳಲ್ಲಿ 24 ಗ್ರಾಮಪಂಚಾಯಿತಿಗಳನ್ನ ಒಳಗೊಂಡಿದ್ದು, 175 ಮತಗಟ್ಟೆಗಳನ್ನು ಹೊಂದಿದ್ದು,ಅದರಲ್ಲಿ64,037ಪುರುಷಮತದಾರರು, 63,527ಮಹಿಳಾಮತದಾರರು ಹಾಗೂ ಇತರೆ 17ಮತದಾರರಿದ್ದು, ಹೊಸ ಸೇರ್ಪಡೆ ಪ್ರಕ್ರಿಯೆ ನಡೆಯುತ್ತಿದ್ದುಇನ್ನೂ ಹೆಚ್ಚಿನ ಮತಗಳು ಪಟ್ಟಿಯಲ್ಲಿ ಸೇರಲಿವೆ. ಮತದಾರ ಪಟ್ಟಿಯಲ್ಲಿತಮ್ಮ ಹೆಸರುಗಳನ್ನು ಸೇರಿಸಲುಆಯಾ ಗ್ರಾಮಗಳ ಬಿ.ಎಲ್.ಓ ಗಳನ್ನು ಸಂರ್ಪಕಿಸಬಹುದಾಗಿದೆ.       ರಾಜ್ಯಚುನಾವಣಾಆಯೋಗ ಗ್ರಾಮಪಂಚಾಯಿತಿಗಳಚುನಾವಣೆಯನ್ನು ಡಿ.22 ಮತ್ತು ಡಿ.27ಕ್ಕೆ ದಿನಾಂಕವನ್ನು ನಿಗಧಿಮಾಡಿ…

ಮುಂದೆ ಓದಿ...

ಪರಿಹಾರದ ಹಣ ನೀಡುವಂತೆ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ರೈತರು

ಮಧುಗಿರಿ :        ಮಧುಗಿರಿ ಪಟ್ಟಣದಲ್ಲಿ ಹಾದುಹೋಗಿರುವ ಕೆಶಿಪ್ ಬೈಪಾಸ್ ರಸ್ತೆಗೆ ರೈತರು ತಡೆ ಗೋಡೆ ರೀತಿಯಲ್ಲಿ ಅಡ್ಡಹಾಕಿ ಪರಿಹಾರ ಹಣ ಬಿಡುಗಡೆಗಾಗಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ       ಪಟ್ಟಣದ ಸಾಲುಮರದ ತಿಮ್ಮಕ್ಕ ಉದ್ಯಾನವನ ದಿಂದ ಆರಂಭಗೊಳ್ಳುವ ಬೈಪಾಸ್ ರಸ್ತೆಯ ಬಸವನಹಳ್ಳಿ ಸಮೀಪ ಇರುವ ಕೆಎಸ್ ಆರ್ ಟಿಸಿ ಡಿಪೋ ವರೆಗೂ ಇದೆ. ಮಧುಗಿರಿ ಹಿಂದೂಪುರ ರಸ್ತೆಗೆ ಹೊಂದಿಕೊಂಡಿರುವ ಬೈಪಾಸ್ ರಸ್ತೆಯಲ್ಲಿ ಕಳೆದ 4ದಿನಗಳಿಂದ ಕಲ್ಲಿನ ಗುಂಡುಗಳನ್ನು ಹಾಕಿದ್ದಾರೆ. ಇನ್ನೊಂದು ರಸ್ತೆಗೆ ಮಣ್ಣಿನಿಂದ ತುಂಬಿ ಬೈಪಾಸ್ ರಸ್ತೆಯನ್ನು ಬಂದ್ ಮಾಡಲಾಗಿದೆ.       ಹಿಂದೂಪುರ ರಸ್ತೆ ಮತ್ತು ಬಸವನಹಳ್ಳಿ ರಸ್ತೆ ನಾಲ್ವರು ರೈತರಿಗೆ ಮತ್ತು ಗೌರಿಬಿದನೂರು ಹಿಂದೂಪುರ ರಸ್ತೆಯಲ್ಲಿ ನ ನಾಲ್ವರು ರೈತರಿಗೆ ಸರಕಾರದಿಂದ ಇಲ್ಲಿಯವರೆಗೂ ಸೂಕ್ತ ಪರಿಹಾರ ಹಣ ನೀಡಿಲ್ಲ. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಈ 8ರೈತರಿಗೆ ಕೆಶಿಪ್…

ಮುಂದೆ ಓದಿ...

 ಹುಳಿಯಾರು : ತಾಲೂಕಿನ ಇಬ್ಬರಿಗೆ ರಾಜ್ಯ ಶಿಕ್ಷಕಿ ಪ್ರಶಸ್ತಿ

 ಹುಳಿಯಾರು :        ಚಿಕ್ಕನಾಯಕನಹಳ್ಳಿ ತಾಲೂಕಿನ ಇಬ್ಬರು ಶಿಕ್ಷಕಿಯರಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ವತಿಯಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಲಾಯಿತು.       ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹುಳಿಯಾರು ಹೋಬಳಿಯ ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಚ್.ಡಿ.ತೇಜಾವತಿ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಹಾಗೂ ಹಂದನಕೆರೆ ಹೋಬಳಿಯ ಮಲ್ಲಿಗೆರೆ ಕ್ಲಷ್ಟರ್ ವ್ಯಾಪ್ತಿಯ ಬಂದ್ರೇಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಲಾವತಿ ಅವರಿಗೆ ‘ಗುರುಭೂಷಣ’ ರಾಜ್ಯ ಪ್ರಶಸ್ತಿ ನೀಡಲಾಯಿತು.       ಶಿಕ್ಷಕಿ ತೇಜಾವತಿ ಅವರು ಕತೆ, ಚುಟುಕು, ಗಜಲ್, ಕವಿತೆ, ಅಂಕಣಗಳನ್ನು ಕರ್ಮವೀರ, ಜನಮಿಡಿತ, ನಂದಿವಿಜಯ, ಕವಿವಾಣಿ, ಪಂಜು, ಶಾಲ್ನುಡಿ ಪತ್ರಿಕೆಗಳಲ್ಲಿ ಬರೆಯುತ್ತಿದ್ದಾರೆ. ‘ಕಾಲಚಕ್ರ’ ಮತ್ತು ‘ಮಿನುಗುವ ತಾರೆ’ ಎಂಬ ಎರಡು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಇದರ ಜತೆ ಕೊರೊನಾ ಸಮಯದಲ್ಲಿ…

ಮುಂದೆ ಓದಿ...

ಚಿದಾನಂದ ಎಂ.ಗೌಡರ ಗೆಲುವು ಜಿಲ್ಲೆಗೆ ಹೊಸ ಹುರುಪನ್ನು ನೀಡಿದೆ : ಜ್ಯೋತಿಗಣೇಶ್

ತುಮಕೂರು :       ಜಿಲ್ಲೆಗೆ ಈ ಬಾರಿಯ ವಿಧಾನ ಪರಿಷತ್ ಗೆಲುವು ಜಿಲ್ಲೆಯಲ್ಲಿ ಎಲ್ಲರಲ್ಲೂ ಹೊಸ ಹುರುಪನ್ನು ತಂದಿದೆ ಎಂದು ಶಾಸಕ ಜ್ಯೋತಿಗಣೇಶ್ ವಿಧಾನ ಪರಿಷತ್ ನೂತನ ಸದಸ್ಯರನ್ನು ಅಭಿನಂದಿಸಿ ತಿಳಿಸಿದರು.       ಪದವಿ ಪೂರ್ವ ಶಿಕ್ಷಣ ಇಲಾಖೆ ,ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ವತಿಯಿಂದ ಇಂದು ತುಮಕೂರು ನಗರದ ಜಿಲ್ಲಾ ಕನ್ನಡ ಭವನ ಸಭಾಭವನದಲ್ಲಿ ನೂತನ ವಿಧಾನಪರಿಷತ್ ಸದಸ್ಯರಾದ ಚಿದಾನಂದ ಎಂ.ಗೌಡ ರವರಿಗೆ ಅಭಿನಂದನ ಕಾರ್ಯಕ್ರಮ ಹಮ್ಮಿಕೂಳ್ಳಲಾಗಿತ್ತು.       ಇನ್ನು ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರು ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಸನ್ಮಾನ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮ ನಡೆಯಿತು. ಇನ್ನೂ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ತುಮಕೂರು ನಗರ ಶಾಸಕರಾದ ಜ್ಯೋತಿ ಗಣೇಶ್‍ರವರು ತುಮಕೂರು ಜಿಲ್ಲೆಗೆ ಈ ಬಾರಿಯ…

ಮುಂದೆ ಓದಿ...

ಸರಕಾರೇತರ ಸಂಸ್ಥೆಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಮಾದರಿ:ಜೋತಿಗಣೇಶ್

 ತುಮಕೂರು :       ಜನಪರ ಕಾರ್ಯಗಳಲ್ಲಿ ತೊಡಗಿರುವ ಸರಕಾರೇತರ ಸಂಸ್ಥೆಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮಾದರಿಯಾಗಿದೆ ಎಂದು ತುಮಕೂರು ನಗರ ಕ್ಷೇತ್ರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.       ತುಮಕೂರು ನಗರದ 26ನೇ ವಾರ್ಡಿನ ದೋಬಿಘಾಟ್ ರಸ್ತೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ನಗರಪಾಲಿಕೆ ಸಹಕಾರದಲ್ಲಿ ನಿರ್ಮಿಸಿರುವ ಶುದ್ದಗಂಗಾ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಸರಕಾರ ಮತ್ತು ಜನರ ನಡುವೆ ಕೊಂಡಿಯಾಗಿ ಕೆಲಸ ಮಾಡುವ ಮೂಲಕ ಸಾಕಷ್ಟು ಜನರಿಗೆ ಉಪಯುಕ್ತವಾಗಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀವಿರೇಂದ್ರ ಹೆಗಡೆ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.       ತುಮಕೂರು ನಗರಕ್ಕೆ ಸಾಕಷ್ಟು ಶುದ್ದ ಕುಡಿಯುವ ನೀರಿನ ಘಟಕಗಳ ಅಗತ್ಯವಿದೆ. ಆದ್ದರಿಂದ ನಾವುಗಳೆಲ್ಲರೂ ಒಗ್ಗೂಡಿ ಮತ್ತೊಮ್ಮೆ ಧರ್ಮಾಧಿಕಾರಿಗಳನ್ನು ಭೇಟಿ ಮಾಡಿ, ಹೆಚ್ಚಿನ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಲು ಮನವಿ…

ಮುಂದೆ ಓದಿ...

ಮಧುಗಿರಿ : ಸುವರ್ಣಗ್ರಾಮ ಯೋಜನೆಯಡಿ 50 ಲಕ್ಷ ವೆಚ್ಚದಲ್ಲಿ ಕಾಮಗಾರಿ

ಮಧುಗಿರಿ :       ದೊಡ್ಡೇರಿ ಹೋಬಳಿಯ ಗಡಿಗ್ರಾಮ ಸಜ್ಜೆಹೊಸಹಳ್ಳಿಯ ಸಕಲ ಅಭಿವೃದ್ಧಿಗಾಗಿ 50 ಲಕ್ಷ ವೆಚ್ಚದಲ್ಲಿ ಸುವರ್ಣಗ್ರಾಮ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಗುಣಮಟ್ಟದ ಕಾಮಗಾರಿಗೆ ಚಾಲನೆ ನೀಡಲಾಗಿದೆಯೆಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.       ತಾಲೂಕಿನ ದೊಡ್ಢೆರಿ ಹೋಬಳಿಯ ಸಜ್ಜೆಹೊಸಹಳ್ಳಿಯಲ್ಲಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಆಂದ್ರಗಡಿಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಈ ಸುವರ್ಣಗ್ರಾಮ ಯೋಜನೆಯನ್ನು ಅನುಷ್ಠಾನಗೊಳಿಸಿದ್ದೇವೆ. ಇದು ಹೆಚ್ಚುವರಿ ಅನುದಾನದಿಂದ ತಂದಿದ್ದು, 6 ಸಿಸಿ ರಸ್ತೆ, 6 ಚರಂಡಿ ಒಳಗೊಂಡ ಕಾಮಗಾರಿಯನ್ನು ಕೆಆರ್‍ಐಡಿಎಲ್ ಇಲಾಖೆಗೆ ನೀಡಿದ್ದು, ಗುಣಮಟ್ಟದ ಕಾಮಗಾರಿಯನ್ನು ಮಾಡಲು ಸೂಚಿಸಲಾಗಿದೆ. ಇದರೊಂದಿಗೆ ಈಗಾಗಲೇ 8 ಕೋಟಿ ವೆಚ್ಚದಲ್ಲಿ ಕವಣದಾಲ, ಪೂಜಾರಹಳ್ಳಿ, ಬಡವನಹಳ್ಳಿ ಬಳಿ ಸುವರ್ಣಮುಖಿ ನದಿಯ ಸೇತುವೆಯ ಎರಡೂ ಕಡೆ ಹಾಗೂ ತೆರಿಯೂರು ಗ್ರಾಮಗಳಲ್ಲಿ ಚೆಕ್‍ಡ್ಯಾಂ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಕೆಲವೇ ದಿನದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು…

ಮುಂದೆ ಓದಿ...

‘ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ತ್ಯಜಿಸಬೇಕು’ – ಪಾಲಿಕೆ ಮೇಯರ್

ತುಮಕೂರು :        ಪ್ಲಾಸ್ಟಿಕ್ ಬಳಕೆ ಆರೋಗ್ಯಕ್ಕೆ ಹಾನಿಕರ. ಇದನ್ನು ಪ್ರತಿಯೊಬ್ಬರೂ ಅರಿತು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ತ್ಯಜಿಸಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ಫರೀದಾ ಬೇಗಂ ಹೇಳಿದರು.       ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಸಂಕಲ್ಪ ಫೌಂಡೇಶನ್ ಮತ್ತು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಹೋಟೆಲ್ ಆಹಾರ ವಿತರಣೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.       ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಹೋಟೆಲ್‍ನವರು, ಅಂಗಡಿಗಳ ವರ್ತಕರು ತಮ್ಮ ದಿನನಿತ್ಯ ವ್ಯಾಪಾರ ವಹಿವಾಟಿನಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ ಎಂದರು.      ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ಧ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ದಂಡ ಹಾಕಲಾಗುತ್ತಿದ್ದರೂ ದಂಡ…

ಮುಂದೆ ಓದಿ...

ರೈತ ವಿರೋಧಿ ಕಾಯ್ದೆಗಳನ್ನು ಕೈ ಬಿಡಲು ಆಗ್ರಹಿಸಿ ರೈತ ಸಂಘಟನೆಗಳ ಪ್ರತಿಭಟನೆ

ತುಮಕೂರು:        ರೈತ ವಿರೋಧಿ ಕಾಯ್ದೆಗಳನ್ನು ಕೈ ಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.       ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ಪ್ರೊ|| ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.       ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಮೆಳೇಕಲ್ಲಹಳ್ಳಿ ಯೋಗೀಶ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಜಾರಿಗೊಳಿಸಲು ಹೊರಟಿರುವುದು ಖಂಡನೀಯ ಎಂದರು.       ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಭೂಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ವಿದ್ಯುತ್ ಕಾಯ್ದೆ…

ಮುಂದೆ ಓದಿ...

ಹೋಬಳಿ ಮಟ್ಟದ ಕಂದಾಯ ಅದಾಲತ್ ಕಾರ್ಯಕ್ರಮ ಆರಂಭ : ಶಾಸಕ ಎಸ್.ಆರ್.ಶ್ರೀನಿವಾಸ್

ಗುಬ್ಬಿ:       ಹೋಬಳಿ ಮಟ್ಟದಲ್ಲಿ ನಡೆಯುತ್ತಿದ್ದ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಶೀಘ್ರದಲ್ಲಿ ಮರಳಿ ಆರಂಭಿಸಿ ಕಚೇರಿಗೆ ಅಲೆದಾಡುವ ಮುಗ್ದ ಜನರ ಕೆಲಸವನ್ನು ಅವರ ಗ್ರಾಮಗಳಲ್ಲಿ ನಡೆಸಲಾಗುವುದು. ಈ ಕೆಲಸಕ್ಕೆ ಅಧಿಕಾರಿಗಳೊಟ್ಟಿಗೆ ಚರ್ಚಿಸಿರುವುದಾಗಿ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.       ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಶಾಸಕರ ನೂತನ ಹೈಟೆಕ್ ಕಾರ್ಯಾಲಯಕ್ಕೆ ಚಾಲನೆ ನೀಡಿ ತಾಲ್ಲೂಕಿನ 1800 ಮಂದಿ ಕರೋನಾ ವಾರಿಯರ್ಸ್‍ಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ಬಗರ್‍ಹುಕುಂ ಮಂಜೂರಾತಿಯಲ್ಲಿ ಈ ಹಿಂದೆ ನಡೆದಿದ್ದ ಭ್ರಷ್ಟಾಚಾರದ ಬಗ್ಗೆ ದೂರುಗಳಿದ್ದ ಕಾರಣ ಹೋಬಳಿ ಮಟ್ಟದಲ್ಲಿ ಅದಾಲತ್ ಮೂಲಕ ಅರ್ಹರನ್ನು ಗುರುತಿಸಿ ಮಂಜೂರು ಮಾಡಲಾಗುತ್ತಿದೆ. ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆದಿದ್ದಲ್ಲಿ ಕಾನೂನು ಕ್ರಮ ಜರುಗಿಸಿ ಅರ್ಹ ಫಲಾನುಭವಿಗಳಿಗೆ ಭೂಮಿ ನೀಡುವ ಕೆಲಸವನ್ನು ಖುದ್ದು ನಡೆಸುತ್ತೇನೆ ಎಂದು ಭರವಸೆ ನೀಡಿದರು.        ಕಳೆದ ಎಂಟು ತಿಂಗಳಿಂದ ಸಾರ್ವಜನಿಕರ ಭೇಟಿಗೆ…

ಮುಂದೆ ಓದಿ...

ಅನಾಥ ಮಗುವನ್ನು ಸಾಕುವವರಿಗೆ ಕಾನೂನಿನ ಮಾರ್ಗದರ್ಶನ ನೀಡಲು ಡೀಸಿ ಸೂಚನೆ

 ತುಮಕೂರು :        ಸಾರ್ವಜನಿಕವಾಗಿ ಕಂಡುಬರುವ ಅನಾಥ ಮಗುವನ್ನು ಕದ್ದು ಮುಚ್ಚಿ ಸಾಕುವವರಿಗೆ ಕಾನೂನಿನ ಮಾರ್ಗದರ್ಶನ ನೀಡಬೇಕೆಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.       ತಮ್ಮ ಕಚೇರಿಯಲ್ಲಿಂದು ಜರುಗಿದ ಮಕ್ಕಳ ಸಹಾಯವಾಣಿಯ(CAB-child Advisory Board) ಹಾಗೂ ಜಿಲ್ಲಾ ಮಟ್ಟದ ಮಕ್ಕಳ ರಕ್ಷಣಾ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಾ, ಸಾರ್ವಜನಿಕವಾಗಿ ಕಂಡುಬರುವ ಅನಾಥ ಮಕ್ಕಳನ್ನು ಕೆಲವು ಪೋಷಕರು ಕಾನೂನಿನ ಕಣ್ತಪ್ಪಿಸಿ ಪೋಷಿಸುತ್ತಿದ್ದಾರೆ. ಇಂಥವರಿಗೆ ಸಲಹೆ ನೀಡಿ ಕಾನೂನಾತ್ಮಕವಾಗಿ ಸಾಕಲು ಮಾರ್ಗದರ್ಶನ ನೀಡಬೇಕೆಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.       ಜಿಲ್ಲೆಯಲ್ಲಿ ತಡೆಹಿಡಿಯಲಾದ ಬಾಲ್ಯವಿವಾಹ ಪ್ರಕರಣದಲ್ಲಿ ಮಕ್ಕಳು ಹಾಗೂ ಪೋಷಕರು ಮನೆ ಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ. ಪ್ರಕರಣದ ಪರಿಶೀಲನೆಗಾಗಿ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನೆಯನ್ನು ಬಿಟ್ಟು ಹೋಗಿದ್ದರೆ ಎಲ್ಲಿಗೆ…

ಮುಂದೆ ಓದಿ...