ಹುಳಿಯಾರು: ವರ್ಷ ಕಳೆದರೂ ಪಾವತಿಯಾಗದ ರಾಗಿ ಹಣ

ಹುಳಿಯಾರು:       ಜನವರಿ 16 ರಿಂದ ಪ್ರಸಕ್ತ ಸಾಲಿನ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಆದರೆ ಕಳೆದ ವರ್ಷ ಖರೀದಿಸಿದ್ದ ರಾಗಿಗೆ ಹಣ ನೀಡದೆ ಸತಾಯಿಸುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.      ಹೌದು ಕಳೆದ ವರ್ಷ ಸರ್ಕಾರ 3150 ರೂ. ಬೆಂಬಲ ಬೆಲೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ರೈತರಿಂದ 50850 ಕ್ವಿಂಟಲ್ ರಾಗಿ ಖರೀದಿಸಿತ್ತು. ಇದರ ಬಾಬ್ತು ಹಣವನ್ನು ಕೊವಿಡ್ ಸಂದರ್ಭದಲ್ಲಿ ಪಾವತಿಸಿ ಸಂಕಷ್ಟದಲ್ಲಿದ್ದ ರೈತರಿಗೆ ನೆರವಾಗಿತ್ತು. ಉಳಿದ ರೈತರಿಗೆ ನಂತರದ ದಿನಗಳಲ್ಲಿ ಪಾವತಿಸಿತ್ತು. ಆದರೆ ಇವರಲ್ಲಿ 18 ಮಂದಿ ರೈತರಿಗೆ ಮಾತ್ರ ಹಣ ಪಾವತಿ ಮಾಡದೆ ನಿರ್ಲಕ್ಷ್ಯಿಸಿತ್ತು. ಪರಿಣಾಮ ವರ್ಷದಿಂದ ಈ ರೈತರು ತಮ್ಮ ಪಾಲಿನ ಹಣಕ್ಕಾಗಿ ಅಲೆಯುವಂತ್ತಾಗಿದೆ.        ಹಣ ಪಾವತಿಯಾಗದ ರೈತರ ಅಕೌಂಟ್ ಮತ್ತು ಆಧಾರ್ ಕಾರ್ಡ್ ಮ್ಯಾಚ್ ಆಗದೆ ಪೇಮೆಂಟ್…

ಮುಂದೆ ಓದಿ...

ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣಕ್ಕಿರುವ ನಿಯಮಗಳನ್ನು ಸಡಿಲಗೊಳಿಸಿ

 ತುಮಕೂರು :        ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣಕ್ಕೆ ಇರುವ ನಿಯಮಗಳನ್ನು ಸಡಿಲಗೊಳಿಸಬೇಕು. ಈ ಮೂಲಕ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.       ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಗೊಳಿಸದಿದ್ದರೆ ಮಕ್ಕಳ ಶಿಕ್ಷಣಕ್ಕೆ ತುಂಬಾ ತೊಂದರೆಯಾಗಲಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದರು.         ಸಿದ್ದಗಂಗಾ ಮಠದಲ್ಲಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ತಮ್ಮನ್ನು ಭೇಟಿ ಮಾಡಿ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರದ ಜತೆ ಜತೆಯಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಅಷ್ಟೇ ಮಹತ್ವಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ನಾಡಿನ ಶೈಕ್ಷಣಿಕ ಪ್ರಗತಿಗೆ ಖಾಸಗಿ…

ಮುಂದೆ ಓದಿ...

ಹುಳಿಯಾರು :  ಲಾರಿ ಡಿಕ್ಕಿ ; ರೈತ ಸಾವು!!

ಹುಳಿಯಾರು :        ಟಿವಿಎಸ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟಿವಿಎಸ್ ಸವಾರ ರೈತನೋರ್ವ ಸಾವನ್ನಪ್ಪಿದ ಘಟನೆ ಹುಳಿಯಾರು ಸಮೀಪದ ಮುಕ್ತಿಧಾಮದ ಬಳಿ ಜರುಗಿದೆ.       ಅಪಘಾತದಲ್ಲಿ ಮೃತನಾದ ದುರ್ಧೈವಿಯನ್ನು ಹುಳಿಯಾರು ಹೋಬಳಿಯ ಕುರಿಹಟ್ಟಿಯ ಮೈಲಾರಪ್ಪ (51) ಎಂದು ಗುರುತಿಸಲಾಗಿದೆ. ಇವರು ಹುಳಿಯಾರಿನಿಂದ ಮಾರ್ನಿಂಗ್ ಮಾರ್ಕೆಟ್‍ನಲ್ಲಿ ಟಮೋಟೊ ಮಾರಿಕೊಂಡು ಸ್ವಗ್ರಾಮ ಕುರಿಹಟ್ಟಿಗೆ ಹಿಂದಿರುಗುವಾಗ ಹಿರಿಯೂರು ಮಾರ್ಗವಾಗಿ ಬಂದ ತಮಿಳುನಾಡು ಮೂಲಕ ಲಾರಿ ಡಿಕ್ಕಿ ಹೊಡೆದು ಆತನ ಎರಡೂ ಕಾಲಿನ ಮೇಲೆ ಹರಿದಿದೆ.       ಪರಿಣಾಮ ರೈತ ಮೈಲಾರಪ್ಪನ ಎರಡೂ ಕಾಲುಗಳು ನಜ್ಜುಗುಜ್ಜಾಗಿ ತೀರ್ವ ರಕ್ತಸ್ತ್ರಾವ ಆಗಿದೆ. ದಾರಿಹೋಕರು ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ನಂತರ ಕುಟುಂಬ ವರ್ಗದವರು ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.       ಲಾರಿ ಚಾಲಕ…

ಮುಂದೆ ಓದಿ...