ರಾಗಿ ನೋಂದಣಿ ಕೇಂದ್ರದಲ್ಲಿ ಹೇಳೋರಿಲ್ಲ ಕೇಳೋರಿಲ್ಲ

ಹುಳಿಯಾರು:       ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವ ಸಲುವಾಗಿ ಹುಳಿಯಾರು ಎಪಿಎಂಸಿಯಲ್ಲಿ ತೆರೆಯಲಾಗಿದ್ದ ಕಛೇರಿ ಬೀಗ ಜಡಿದು ವಾರಗಳಾಗಿದ್ದು ಹೆಸರು ನೋಂದಣಿಗೆ ಬರುವ ರೈತರಿಗೆ ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತ್ತಾಗಿದ್ದು ನಿತ್ಯ ರೈತರು ಅಲೆಯುವುದು ಮಾತ್ರ ತಪ್ಪಿಲ್ಲ.       ಮಾರುಕಟ್ಟೆಯಲ್ಲಿ ರಾಗಿ ಬೆಲೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ರೈತರ ನೆರವಿಗಾಗಿ ಧಾವಿಸಿರುವ ಸರ್ಕಾರ ಕ್ವಿಂಟಲ್ ರಾಗಿಗೆ 3295 ರೂ. ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ನಿರ್ಧರಿಸಿತ್ತು. ಪರಿಣಾಮ ಹುಳಿಯಾರು ಎಪಿಎಂಸಿಯಲ್ಲಿ ರೈತರ ನೋಂದಣಿಗಾಗಿ ಕಛೇರಿಯನ್ನೂ ತೆರದು ನೋಂದಣಿಗೆ ಸಿಬ್ಬಂದಿಯನ್ನೂ ಸಹ ನೇಮಿಸಿತ್ತು. ಆದರೆ ಡಿ.28 ರಿಂದ ನೋಂದಣಿ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದ್ದ ಜಿಲ್ಲಾಡಳಿತ ವಾರ ಕಳೆದರೂ ಹುಳಿಯಾರಿನಲ್ಲಿ ಮಾತ್ರ ಇನ್ನೂ ನೋಂದಣಿ ಪ್ರಕ್ರಿಯೆ ಆರಂಭಿಸಿಲ್ಲ.       ಜಿಲ್ಲಾಡಳಿತ ಮಾತು ನಂಬಿ ನೋಂದಣಿಗಾಗಿ ಕಳೆದ ವಾರ ಆಗಮಿಸಿದ್ದ ರೈತರಿಗೆ ಸೋಮವಾರದಿಂದ ನೋಂದಣಿ…

ಮುಂದೆ ಓದಿ...

ಮಧುಗಿರಿಯ 30 ಗ್ರಾಮಪಂಚಾಯಿತಿಗಳು ಕಾಂಗ್ರೆಸ್ ವಶ : ಕೆ.ಎನ್.ರಾಜಣ್ಣ

ಮಧುಗಿರಿ:       ಈ ಬಾರಿ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದ 33 ಗ್ರಾ.ಪಂ ಗಳಲ್ಲಿ 30 ಗ್ರಾ.ಪಂ ಗಳು ಕೈ ವಶವಾಗಿವೆ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ತಿಳಿಸಿದರು.       ಪಟ್ಟಣದ ಅವರ ಸ್ವಗೃಹದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಟ್ಟು ಕ್ಷೇತ್ರದ 525 ಗ್ರಾ.ಪಂ ಸದಸ್ಯರಲ್ಲಿ 363 ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ. ತಾಲೂಕಿನ 615 ಸದಸ್ಯರ ಪೈಕಿ 423 ಸದಸ್ಯರು ಕಾಂಗ್ರೆಸ್ ನವರು ಆಯ್ಕೆಯಾಗಿದ್ದಾರೆ ಕ್ಷೇತ್ರದಲ್ಲಿ ಬಿಜೆಪಿಯ ಏಕೈಕ ಸದಸ್ಯ ಆಯ್ಕೆಯಾಗುವ ಮೂಲಕ ತಾಲೂಕಿನ ಮತದಾರರು ಬಿಜೆಪಿಗೆ ನೆಲೆಯಿಲ್ಲವೆಂದು ಸಾಬೀತು ಮಾಡಿದ್ದಾರೆ. ಈ ಚುನಾವಣೆಯಲ್ಲಿ ಯುವಕ-ಯುವತಿಯರು, ಪದವೀಧರರು ಹೆಚ್ಚು ಆಯ್ಕೆಯಾಗಿರುವುದು ಸಂತಸ ತಂದಿದೆ. ಕೋವಿಡ್-19 ನಿಯಮಗಳು ಸಡಿಲಗೊಂಡ ನಂತರ ಕಾಂಗ್ರೆಸ್ ಬೆಂಬಲಿತ ಗೆದ್ದವರನ್ನೂ-ಸೋತವರನ್ನೂ ಒಂದೇ ವೇದಿಕೆಯಲ್ಲಿ 10 ಸಾವಿರ…

ಮುಂದೆ ಓದಿ...

ಸಮಗ್ರ ನಗರ ನಿರ್ವಹಣೆ-ಕಮ್ಯಾಂಡ್ ಕಂಟ್ರೋಲ್ ಸೆಂಟರ್’ಗೆ ನಗರಾಭಿವೃದ್ಧಿ ಸಚಿವರಿಂದ ಚಾಲನೆ

ತುಮಕೂರು :        ಸ್ಮಾರ್ಟ್‍ಸಿಟಿಯ ಪ್ರಮುಖ ಯೋಜನೆಯಾದ ಸಮಗ್ರ ನಗರ ನಿರ್ವಹಣೆ, ಕಮ್ಯಾಂಡ್ ಮತ್ತು ಕಂಟ್ರೋಲ್ ಸೆಂಟರ್‍ನ ಪ್ರಮುಖ ಅಂಶಗಳಾದ ಪರಿಸರ ನಿಗಾವಣೆ ವೆರಿಯಬಲ್ ಮೆಸೆಜಿಂಗ್ ಸಿಸ್ಟಮ್ ಹಾಗೂ ಇ-ಚಲನ್ ಸಿಸ್ಟಮ್‍ಗೆ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ಅವರು ಚಾಲನೆ ನೀಡಿದರು.      ತುಮಕೂರು ನಗರದಾದ್ಯಂತ 5 ಸ್ಥಳಗಳಾದ ಎಸ್‍ಐಟಿ ಕಾಲೇಜು, ಶಿವಕುಮಾರ ಸ್ವಾಮೀಜಿ ವೃತ್ತ, ಕಾಲ್ಟೆಕ್ಸ್ ವೃತ್ತ, ಸೈನ್ಸ್ ಥೀಮ್ ಪಾರ್ಕ್ ಆವರಣದಲ್ಲಿ ಮತ್ತು ಪೊಲೂಷಿಯನ್ ಕಂಟ್ರೋಲ್ ರೂಂ ಬಳಿ ಪರಿಸರ ಮಾಪಕಗಳನ್ನು ಅಳವಡಿಸಲಾಗಿದ್ದು, ಇದು ಧೂಳಿನ ಕಣಗಳಾದ 10, 2.5, ಹವಾಮಾನ ಬದಲಾವಣೆ, ಓಜೋನ್, ಶಬ್ದಮಾಲಿನ್ಯ, ಉಷ್ಣತೆ, ಸಲ್ಫರ್ ಡೈ ಆಕ್ಸೈಡ್, ನೈಟ್ರೋಜನ್ ಡೈ ಆಕ್ಸೈಡ್ ನಂತಹ ಇತರೆ ಹವಾಮಾನ ಗುಣಮಟ್ಟವನ್ನು ದಾಖಲಿಸುವುದರ ಮೂಲಕ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವಂತೆ ವೀಕ್ಷಣಾ ಪರದೆಗಳನ್ನು ಹೊಂದಿದೆ. ಈ ಸೌಲಭ್ಯವನ್ನು ‘ಸ್ಮಾರ್ಟ್…

ಮುಂದೆ ಓದಿ...