ಇತಿಹಾಸ ಪ್ರಸಿದ್ಧ ಗೂಳೂರು ಗಣೇಶ ಜಾತ್ರೆ ಜ.24-25 ಕ್ಕೆ ಮುಂದೂಡಿಕೆ

ತುಮಕೂರು:       ಅಕಾಲಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜ. 9 ಮತ್ತು 10 ನಡೆಯಬೇಕಿದ್ದ ಇತಿಹಾಸ ಪ್ರಸಿದ್ದ ಗೂಳೂರು ಗಣೇಶ ಜಾತ್ರೆಯನ್ನು ಮುಂದೂಡಲಾಗಿದೆ.       ಗೂಳೂರಿನ ಗಣೇಶ ದೇವಾಲಯದಲ್ಲಿಂದು ಗ್ರಾಮದ 18 ಕೋಮಿನ ಜನಾಂಗದವರು ಸಭೆ ಸೇರಿ ಅಕಾಲಿಕ ಮಳೆಯಾಗುತ್ತಿರುವುದರಿಂದ ಜಾತ್ರೆಗೆ ಅಡಚಣೆಯಾಗುತ್ತದೆ. ಹಾಗಾಗಿ ಮುಂಜಾಗ್ರತೆಯಾಗಿಯೇ ಜ. 23 ಮತ್ತು 24ಕ್ಕೆ ಜಾತ್ರೆಯನ್ನು ಮುಂದೂಡಲು ತೀರ್ಮಾನ ಕೈಗೊಂಡಿದ್ದಾರೆ.        ಈ ಬಾರಿಯ ಎರಡನೇ ಬಾರಿಗೆ ಗಣೇಶ ಜಾತ್ರೆಯನ್ನು ಮುಂದೂಡಲಾಗಿದೆ. ಗ್ರಾಮ ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಡಿಸೆಂಬರ್ ತಿಂಗಳಲ್ಲಿ ನಿಗದಿಯಾಗಿದ್ದ ಜಾತ್ರೆಯನ್ನು ಜನವರಿ 9 ಮತ್ತು 10ಕ್ಕೆ ಮುಂದೂಡಲಾಗಿತ್ತು. ಈಗ ಅಕಾಲಿಕ ಮಳೆಯಿಂದಾಗಿ ಮತ್ತೆ 2ನೇ ಬಾರಿಗೆ ಮುಂದಕ್ಕೆ ಹಾಕಲಾಗಿದೆ ಎಂದು ಗೂಳೂರು ಗಣೇಶ ಭಕ್ತಮಂಡಳಿಯ ಅಧ್ಯಕ್ಷರೂ ಆದ ಜಿ.ಪಂ. ಸದಸ್ಯ ಶಿವಕುಮಾರ್ ತಿಳಿಸಿದರು.    …

ಮುಂದೆ ಓದಿ...

ಭಾನುವಾರವೂ ಶಾಲೆಗಳನ್ನು ತೆರೆದಿಟ್ಟು ಪಲ್ಸ್ ಪೋಲಿಯೋ ಹನಿ

ತುಮಕೂರು :       ಜಿಲ್ಲೆಯಲ್ಲಿ ಜನವರಿ 17ರಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ 211330 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ:ಕೆ.ರಾಕೇಶ್ ಕುಮಾರ್ ತಿಳಿಸಿದರು.        ತಮ್ಮ ಕಛೇರಿಯಲ್ಲಿ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೋವಿಡ್-19 ಮಾರ್ಗಸೂಚಿಯನ್ನು ಅನುಸರಿಸಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದರಲ್ಲದೆ, ಲಸಿಕಾ ಗುಣಮಟ್ಟವನ್ನು ಕಾಪಾಡಲು ಜನವರಿ 10 ರಿಂದ 20ರವರೆಗೆ ನಿರಂತರವಾಗಿ ವಿದ್ಯುತ್‍ಚ್ಛಕ್ತಿ ಸರಬರಾಜು ಮಾಡಬೇಕೆಂದು ಬೆಸ್ಕಾಂ ಅಧಿಕಾರಿಗೆ ನಿರ್ದೇಶನ ನೀಡಿದರು.        ಭಾನುವಾರವೂ ಸಹ ಶಾಲೆಗಳನ್ನು ತೆರೆದಿಟ್ಟು ಪಲ್ಸ್ ಪೋಲಿಯೋ ಕಾರ್ಯಕ್ರಮ ಕುರಿತು ಶಾಲಾ ಮಕ್ಕಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚಿಸಿದರು.  ಅಂಗನವಾಡಿ ಕೇಂದ್ರಗಳಲ್ಲಿಯೂ ಲಸಿಕಾ ಕೇಂದ್ರಗಳನ್ನು ತೆರೆಯಬೇಕು. ಮನೆ-ಮನೆಗೆ ಭೇಟಿ…

ಮುಂದೆ ಓದಿ...

ಜಿಲ್ಲೆಯ 7 ಕಡೆ ಕೋವಿಡ್ ಅಣುಕು ಲಸಿಕಾ ತಾಲೀಮು : ಡಾ.ಕೆ.ರಾಕೇಶ್‍ಕುಮಾರ್

ತುಮಕೂರು:       ಕೋವಿಡ್-19ಕ್ಕೆ ಲಸಿಕೆ ಲಭ್ಯವಾದಾಗ ಯಾವುದೇ ಲೋಪ, ಆತಂಕವಿಲ್ಲದಂತೆ ಲಸಿಕಾ ಅಭಿಯಾನವನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸರಕಾರದ ಮಾರ್ಗಸೂಚಿಯನ್ವಯ ಜಿಲ್ಲೆಯಲ್ಲಿ ಏಳು ಕಡೆ ಅಣುಕು ಲಸಿಕಾ ವಿತರಣಾ ತಾಲೀಮು ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ತಿಳಿಸಿದರು.       ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ಅಣುಕು ಲಸಿಕಾ ವಿತರಣಾ ತಾಲೀಮು(ಡ್ರೈರನ್) ಪೂರ್ವ ಸಿದ್ಧತೆಯನ್ನು ಪರಿಶೀಲಿಸಿ ಮಾತನಾಡಿದ ಅವರು, ಅಣುಕು ಲಸಿಕಾ ವಿತರಣೆಯಲ್ಲಿ ಬದಲಾವಣೆಗಳ ಅಂಶಗಳೇನಾದರೂ ಕಂಡುಬಂದಲ್ಲಿ ಅದನ್ನು ಸರಿಪಡಿಸುವ ಪ್ರಕ್ರಿಯೆ ಮಾಡಲಾಗುವುದು ಎಂದು ಹೇಳಿದರು. ಈಗಾಗಲೇ ಜಿಲ್ಲೆಯಲ್ಲಿ ಫೋಲಿಯೋ ಸೇರಿದಂತೆ ಅನೇಕ ಲಸಿಕಾ ಅಭಿಯಾನಗಳನ್ನು ವರ್ಷ ಪೂರ್ತಿ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಆದರೂ, ಕೋವಿಡ್-19ಕ್ಕೆ ಮೊದಲ ಬಾರಿ ಲಸಿಕಾ ಅಭಿಯಾನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಅಣುಕು ಲಸಿಕಾ ತಾಲೀಮು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಗೆ ಲಸಿಕೆ ತರಲು ಸಂಪೂರ್ಣ ಸಿದ್ಧತೆಯಾಗಿದೆಯಾ?, ಲಸಿಕೆ ಪಡೆದ ಫಲಾನುಭವಿ ವಿಶ್ರಾಂತಿ ಪಡೆದುಕೊಳ್ಳಲು…

ಮುಂದೆ ಓದಿ...