ಕೋಳಿ ಮಾಂಸದ ದರ, ಮಾರಟ ಎರಡೂ ಕುಸಿತ

 ಹುಳಿಯಾರು:       ಹಕ್ಕಿ ಜ್ವರ ಭೀತಿಯಿಂದಾಗಿ ಕೋಳಿ ಮಾಂಸದ ದರ ಹಾಗೂ ಮಾರಾಟ ಎರಡೂ ಸಹ ಕುಸಿತ ಕಂಡಿದ್ದು ಕೋಳಿ ವ್ಯಾಪಾರ ನಂಬಿ ಬದುಕು ಕಟ್ಟಿಕೊಂದಿದ್ದ ಕೋಳಿ ಅಂಗಡಿಯವರಿಗೆ ಆತಂಕ ಮನೆ ಮಾಡಿದೆ.       2020 ರ ಮಾರ್ಚಿ, ಏಪ್ರಿಲ್ ಮಾಹೆಯ ಕೊರೊನಾ ಲಾಕ್‍ಡೌನ್‍ನಿಂದಾಗಿ ಕೋಳಿ ವ್ಯಾಪಾರ ಇಲ್ದಾಗಿತ್ತು. ಮೇ, ಜೂನ್‍ನಲ್ಲಿ ಹಕ್ಕಿ ಜ್ವರ ವದಂತಿ ಹರಡಿ ತೋಚಿದ ದರಕ್ಕೆ ಕೋಳಿಗಳನ್ನು ಮಾರಿದ್ದರು. ಒಂದು ವರ್ಷದಲ್ಲಿ ಐದಾರು ತಿಂಗಳು ವ್ಯಾಪಾರ ಇಲ್ಲದೆ ಕಂಗಾಲಾಗಿದ್ದ ಕೋಳಿ ವ್ಯಾಪಾರಿಗಳಿಗೆ ಗ್ರಾಪಂ ಚುನಾವಣೆ ಚೇತರಿಕೆ ನೀಡಿತ್ತು.       ಆದರೆ ಈಗ ಮತ್ತೊಮ್ಮೆ ಹಕ್ಕಿ ಜ್ವರದ ಭೀತಿ ಕೋಳಿ ವ್ಯಾಪಾರಿಗಳನ್ನು ಕಂಗಾಲಾಗಿಸಿದೆ. ಹಕ್ಕಿ ಜ್ವರ ಭೀತಿಯಿಂದಾಗಿ ಕೋಳಿ ದರವು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಲಾಕ್‍ಡೌನ್ ತೆರವಾದ ನಂತರದ ದಿನಗಳಲ್ಲಿ 130 ರೂ ಇದ್ದ ಬಾಯ್ಲರ್…

ಮುಂದೆ ಓದಿ...

ಹುಳಿಯಾರು : ಯಳನಾಡು ಕಾಚನಕಟ್ಟೆ ಬಳಿ ಚಿರತೆ ಸೆರೆ

 ಹುಳಿಯಾರು  :        ಬುಕ್ಕಾಪಟ್ಟಣ ಅರಣ್ಯ ವಲಯ ವ್ಯಾಪ್ತಿಯ ಹುಳಿಯಾರು ಹೋಬಳಿ ಯಳನಾಡು ಸಮೀಪದ ಕಾಚನಕಟ್ಟೆ ಗಂಗಮ್ಮನ ಕೆರೆ ಬಳಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಶುಕ್ರವಾರ ರಾತ್ರಿ ಚಿರತೆಯೊಂದು ಸೆರೆಯಾಗಿದೆ.       ಕಾಚನಕಟ್ಟೆಯ ಗ್ರಾಮಸ್ಥರು ಬಹಳ ದಿನಗಳಿಂದಲೂ ಈ ಭಾಗದಲ್ಲಿ ಚಿರತೆಯೊಂದು ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದೆಯಲ್ಲದೆ ಸಾಕು ಪ್ರಾಣಿಗಳನ್ನು ಹಿಡಿದು ತಿನ್ನುತ್ತಿದೆ ಎಂದು ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದರು.       ಚಿರತೆಯ ಓಡಾಟದಿಂದ ಇಲ್ಲಿನ ನಿವಾಸಿಗಳು ಹಾಗೂ ದಾರಿಹೋಕರಿಗೆ ಆತಂಕ ಹಾಗೂ ಭಯದ ವಾತಾವರಣವಿದೆ. ಹಾಗಾಗಿ ಈ ವನ್ಯ ಪ್ರಾಣಿಯು ದಿನ ನಿತ್ಯ ಓಡಾಡುವ ಜಾಗದಲ್ಲಿ ಪಂಜರ (ಬೋನು) ವನ್ನಿಟ್ಟು ಸೆರೆ ಹಿಡಿಯಲು ಕ್ರಮವಹಿಸುವಂತೆ ಗ್ರಾಮಸ್ಥರ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂಧಿಸಿದ ಅರಣ್ಯ ಇಲಾಖೆಯವರು ಎರಡು ಕಡೆ ಪಂಜರವನ್ನಿಟ್ಟು ಚಿರತೆಯ ಚಲನವಲನ ಹಾಗೂ ಓಡಾಟದ ಬಗ್ಗೆ…

ಮುಂದೆ ಓದಿ...

ರಂಗಭೂಮಿ ಕಲೆ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದೆ

 ತುಮಕೂರು :        ಅನಕ್ಷರಸ್ಥರ ವಿಶ್ವವಿದ್ಯಾಲಯದಂತಿರುವ ರಂಗಭೂಮಿ ಕಲೆ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದೆ ಎಂದು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗಸ್ವಾಮೀಜಿ ತಿಳಿಸಿದರು.       ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ಕರ್ನಾಟಕ ನಾಟಕ ಅಕಾಡೆಮಿಯಿಂದ ಹಮ್ಮಿಕೊಂಡಿದ್ದ 2019-20ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಂಗಭೂಮಿ ಬಹುದೊಡ್ಡ ಮಾಧ್ಯಮವಾಗಿದ್ದು, ಬದುಕಿಗೆ ಶಿಕ್ಷಣ ಕೊಡುವಲ್ಲಿ ಮತ್ತು ಜೀವನವನ್ನು ವಿಕಾಸಗೊಳಿಸುವಲ್ಲಿ ಬಹಳ ಮಹತ್ತರ ಪಡೆದಿದೆ ಎಂದರು.       ಅರ್ಜಿ ಹಾಕಿ ಪ್ರಶಸ್ತಿ ಪಡೆದುಕೊಳ್ಳಬಾರದು, ಪ್ರಶ್ತಿಗಳೇ ನಮ್ಮ ಬಳಿಗೆ ಹುಡುಕಿಕೊಂಡು ಬಂದಾಗ ಆ ಪ್ರಶಸ್ತಿಯ ಗೌರವ ಹೆಚ್ವುತ್ತದೆ. ಆ ನಿಟ್ಟಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಉತ್ತಮ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.       ಕಲೆ ಮತ್ತು ಕಲಾವಿದರ ಬೆಳವಣಿಗೆಗೆ ನಾಟಕ ಅಕಾಡೆಮಿ ಮತ್ತು ಸರಕಾರ ಹೆಚ್ಚು…

ಮುಂದೆ ಓದಿ...