ಆಸ್ತಿ ಸಮೀಕ್ಷೆಯನ್ನು ಪಂಚತಂತ್ರದಲ್ಲಿ ಅಳವಡಿಸಲು ಸೂಚನೆ

 ತುಮಕೂರು :        ಜಿಲ್ಲೆಯ ಎಲ್ಲಾ 330 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ಮ್ಯಾನ್ಯುಯಲ್ ಸಮೀಕ್ಷೆ ಮಾಡುವ ಮೂಲಕ ಬರುವ ಫೆಬ್ರುವರಿ 15ರೊಳಗಾಗಿ ಪಂಚತಂತ್ರದಲ್ಲಿ ಅಳವಡಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವಂತೆ ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಸೂಚಿಸಿದರು.       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳ ಸಮೀಕ್ಷೆ ಮತ್ತು ಆಸ್ತಿ ತೆರಿಗೆ ಪರಿಷ್ಕರಣೆ ಕುರಿತು ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಪರಿಶೀಲನಾ ಸಭೆ ಹಾಗೂ ತರಬೇತಿ ಕಾರ್ಯಗಾರವನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರವು 2019-20ರ ಆಯವ್ಯಯದಲ್ಲಿ ಮ್ಯಾನ್ಯುಯಲ್ ಸಮೀಕ್ಷೆಗೆ ಅನುಮೋದನೆ ನೀಡಿದ್ದು, ಕಳೆದ ವರ್ಷ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅಡಗೂರು ಗ್ರಾಮ ಪಂಚಾಯತ್‍ನಲ್ಲಿ ಪ್ರಾಯೋಗಿಕವಾಗಿ ಮ್ಯಾನ್ಯುಯಲ್ ಸಮೀಕ್ಷೆಯ…

ಮುಂದೆ ಓದಿ...

ಶೋಷಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದು ಸರ್ಕಾರಗಳ ಜವಾಬ್ದಾರಿ

ಕೊರಟಗೆರೆ:       ಶೋಷಿತ ಸಮಾಜ ಗಳನ್ನು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಕೊಂಡೊಯ್ಯಬೇಕಾಗಿರುವುದು ಸರ್ಕಾರ ಗಳ ಜವಾಬ್ದಾರಿ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ.ಜಿ ಪರಮೇಶ್ವರ್ ತಿಳಿಸಿದರು.       ಅವರು ಪಟ್ಟಣದಲ್ಲಿ ಕೊರಟಗೆರೆ ತಾಲ್ಲೂಕು ಸವಿತಾಸಮಾಜದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಸಮಾಜದಲ್ಲಿ ಕಡಿಮೆ ಜನಸಂಖ್ಯೆ ಹೊಂದಿರು ಶೋಷಿತವರ್ಗಗಳಿಗೆ ಯಾವುದೇ ಸರ್ಕಾರವಿದ್ದರು ಸಹ ಅವುಗಳಿಗೆ ಸಮಾಜಿಕ ನ್ಯಾಯವನ್ನು ಒದಗಿಸಬೇಕು. ತಾವು ಉಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸವಿತಾ ಸಮಾಜಕ್ಕೆ ನಿಗಮ ಮಂಡಳಿಯನ್ನು ಮಾಡಲಾಯಿತು. ಹಾಗೂ ಸವಿತಾ ಸಮಾಜದ ನಾಯಕರಾದ ಎಂ.ಸಿ ವೇಣುಗೋಪಾಲ್‍ರವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಪಕ್ಷವು ಮಾಡಿತು. ಸವಿತಾ ಸಮಾಜವು ಸಹ ಸಮಾಜಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಶೋಷಿತ ವರ್ಗಗಳಲ್ಲಿ ಸಹ ಒಂದಾಗಿದೆ. ಇಂತಹ ಸಮಾಜಗಳಿಗೆ ಪೂರ್ಣಪ್ರಮಾಣದ ಮುಖ್ಯ ವಾಹಿನಿಗೆ ತರುವ ಯೋಜನೆಗಳನ್ನು ಸರ್ಕಾರಗಳು ಕೈಗೊಳ್ಳಬೇಕಿದೆ. ಸವಿತಾಸಮಾಜದ…

ಮುಂದೆ ಓದಿ...

ಮುಂಜಾಗ್ರತ ಕ್ರಮವಹಿಸಿ ಐತಿಹಾಸಿಕ ಶ್ರೀ ದಂಡಿನಮಾರಮ್ಮ ಜಾತ್ರೆ ನಡೆಸಿ

ಮಧುಗಿರಿ :       ಮಾರ್ಚ್ 2020 ರಲ್ಲಿ ಐತಿಹಾಸಿಕ ಶ್ರೀ ದಂಡಿನ ಮಾರ ಮ್ಮನ ಜಾತ್ರೆಯ ವೇಳೆ ಕರೋನಾ ಕಾರಣ ದಿಂದಾಗಿ ಉತ್ಸವ ಮೂರ್ತಿಯನ್ನು ಗುಡಿದುಂಬಿಸುವಲ್ಲಿ ಸಾಧ್ಯವಾಗದ ಕಾರಣ ಪ್ರಸ್ತುತ ಧಾರ್ಮಿಕ ಚಟುವಟಿಕೆಗಳ ನ್ನು ನಡೆಸಿ ಜನ ಸಂದಣೆ ಸೇರದಂತೆ ಗುಡಿದುಂಬಿಸಲು ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಸೋಮಪ್ಪ ಕಡಕೋಳ ತಿಳಿಸಿದರು.       ಮಂಗಳವಾರದಂದು ಪುರಸಭಾ ಸದಸ್ಯರುಗಳ ನಿಯೋಗ 2021 ರ ಜಾತ್ರೆ ಸಮೀಪಿಸುತ್ತಿದ್ದು, ಉತ್ಸವ ಮೂರ್ತಿ ದೇವಸ್ಥಾನದಲ್ಲಿಯೇ ಇರುವುದರಿಂದ ಊರ ಪ್ರವೇಶದ ನಂತರವಷ್ಟೆ ಜಾತ್ರೆ ನಡೆಸಲು ಸಾಧ್ಯ ಇದಕ್ಕೂ ಮುನ್ನ ಚಿನಕವಜ್ರ ಗ್ರಾಮಕ್ಕೆ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಮಡಲಕ್ಕಿ ತುಂಬಿಸಿಕೊಂಡ ನಂತರ ಗುಡಿದುಂಬಿಸಬೇಕೆಂದು ಜಾತ್ರೆಯ ನಿಯಮಗಳನ್ನು ಉಪವಿಭಾಗಾಧಿಕಾರಿಗಳಿಗೆ ವಿವರಿಸಿದರು.       ಕರೋನಾ ಹರಡದಂತೆ ಮುನ್ನಚರಿಕೆ ಕ್ರಮಕೈಗೊಂಡು ಜಾತ್ರೆಯ ಉತ್ಸವ ಸಮಿತಿಯವರು, ಅರ್ಚಕರುಗಳ ಸಲಹೆಗಳನ್ನು…

ಮುಂದೆ ಓದಿ...