ತುಮಕೂರು: ಇತ್ತೀಚಗೆ ನಡೆದ ಗ್ರಾಮಪಂಚಾಯಿತಿ ಚುನಾವಣೆ ಮತ ಎಣಿಕೆ ನಡೆದ ಸರಕಾರಿ ಸಮುದಾಯ ಪಾಲಿಟ್ನಕಿಕ್ ಕಾಲೇಜು, ಚುನಾವಣಾ ಮತ ಎಣಿಕೆ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಸಂಪೂರ್ಣವಾಗಿ ಹಾಳಾಗಿದ್ದು, ಮಕ್ಕಳ ಹಿತದೃಷ್ಟಿಯಿಂದ ತಕ್ಷಣವೇ ಜಿಲ್ಲಾಡಳಿತ ದುರಸ್ತಿ ಮಾಡಿಸಿಕೊಡುವಂತೆ ವಿಧಾನಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಒತ್ತಾಯಿಸಿದ್ದಾರೆ. ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮಕ್ಕಳು, ಪೋಷಕರ ದೂರಿನ ಮೇರೆಗೆ ಇಂದು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚುನಾವಣೆ ಸಿಬ್ಬಂದಿ ತಮ್ಮ ಅನುಕೂಲಕ್ಕೆ ತಕ್ಕಂತೆ ವಿದ್ಯುತ್ ಸಂಪರ್ಕ,ಇಂಟರ್ನೆಟ್ ಸಂಪರ್ಕ ಪಡೆಯಲು ಇಡೀ ಕಾಲೇಜಿನ ವಿದ್ಯುತ್ ಸಂಪರ್ಕ ಜಾಲಕ್ಕೆ ಧಕ್ಕೆ ತಂದಿದ್ದಾರೆ. ಅಲ್ಲಲ್ಲಿ ವಿದ್ಯುತ್ ತಂತಿಗಳು ನೇತಾಡುತಿದ್ದ, ಯಾವ ಕ್ಷಣದಲ್ಲಾದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಅಲ್ಲದೆ ಮತ ಪೆಟ್ಟಿಗೆ ದಾಸ್ತಾನು ಇರಿಸಿದ್ದ ಕೊಠಡಿಯ ಕಿಟಿಕಿಗಳಿಗೆ ಅಳವಡಿಸಿದ್ದ ಪ್ಲೇವುಡ್ ಶೀಟ್ಗಳನ್ನು ತೆಗೆದಿಲ್ಲ.ಇದರಿಂದ…
ಮುಂದೆ ಓದಿ...Day: February 1, 2021
ಯಳನಾಡು ಕಾಚನಕಟ್ಟೆ ಬಳಿ ಮತ್ತೊಂದು ಚಿರತೆ ಸೆರೆ
ಹುಳಿಯಾರು : ಬುಕ್ಕಾಪಟ್ಟಣ ಅರಣ್ಯ ವಲಯ ವ್ಯಾಪ್ತಿಯ ಹುಳಿಯಾರು ಹೋಬಳಿ ಯಳನಾಡು ಸಮೀಪದ ಕಾಚನಕಟ್ಟೆ ಗಂಗಮ್ಮನ ಕೆರೆ ಬಳಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಭಾನುವಾರ ಚಿರತೆಯೊಂದು ಸೆರೆಯಾಗಿದೆ. ಈ ಚಿರತೆ ಇದೇ ಸ್ಥಳದಲ್ಲಿ ಸೆರೆಯಾದ 3 ನೇ ಚಿರತೆಯಾಗಿದೆ. ಕಾಚನಕಟ್ಟೆಯಲ್ಲಿ ಚಿರತೆಯ ಕಾಟ ಹೆಚ್ಚಾಗಿದ್ದು ನಾಯಿ, ಕುರಿ ಸೇರಿದಂತೆ ಸಾಕು ಪ್ರಾಣಿಗಳನ್ನು ಹಿಡಿದು ತಿನ್ನುತ್ತಿದೆ. ಇದರಿಂದ ಇಲ್ಲಿನ ನಿವಾಸಿಗಳು ಹಾಗೂ ದಾರಿಹೋಕರಿಗೆ ಆತಂಕ ಹಾಗೂ ಭಯದ ವಾತಾವರಣವಿದೆ. ಹಾಗಾಗಿ ಈ ವನ್ಯ ಪ್ರಾಣಿಯು ದಿನ ನಿತ್ಯ ಓಡಾಡುವ ಜಾಗದಲ್ಲಿ ಪಂಜರ (ಬೋನು) ವನ್ನಿಟ್ಟು ಸೆರೆ ಹಿಡಿಯಲು ಕ್ರಮವಹಿಸುವಂತೆ ಗ್ರಾಮಸ್ಥರ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂಧಿಸಿದ ಅರಣ್ಯ ಇಲಾಖೆಯವರು ಕಳೆದ 3 ತಿಂಗಳ ಹಿಂದೆ ಪಂಜರವನ್ನಿಟ್ಟು ಒಂದು ಚಿರತೆ ಸೆರೆ ಹಿಡಿದಿದ್ದರು. ನಂತರ ಮತ್ತೊಂದು ಚಿರತೆ ಗ್ರಾಮಸ್ಥರಿಗೆ…
ಮುಂದೆ ಓದಿ...ಸ್ಮಾರ್ಟಸಿಟಿ ಯೋಜನೆಯ ಕಾಮಗಾರಿಗಳಿಗೆ ಸಾರ್ವಜನಿಕರು ಸಹಕರಿಸಿ : ಜಿ.ಬಿ.ಜೋತಿಗಣೇಶ್
ತುಮಕೂರು : ನಗರದ ಅಭಿವೃದ್ದಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಸ್ಮಾರ್ಟಸಿಟಿ ಯೋಜನೆಯ ಎಲ್ಲಾ ಕಾಮಗಾರಿಗಳು 2022ರ ಮಾರ್ಚ್ ಒಳಗೆ ಪೂರ್ಣಗೊಳ್ಳಬೇಕಾಗಿದ್ದು, ತ್ವರಿತವಾಗಿ ಕಾಮಗಾರಿ ನಡೆಯುವ ವೇಳೆ ಸಣ್ಣಪುಟ್ಟ ತೊಂದರೆಗಳಾದರೆ ಸಾರ್ವಜನಿಕರು ಕಾರ್ಮಿಕರೊಂದಿಗೆ ವ್ಯಾಜ್ಯಕ್ಕೆ ನಿಲ್ಲದೆ ಸಹಕರಿಸುವಂತೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ. ನಗರದ 26ನೇ ವಾರ್ಡಿನ ಸಿಎಂಸಿ ಕಂಪ್ಯೂಟರ್ ಕಲಿಕಾ ಕೇಂದ್ರದಲ್ಲಿ ನಾಗರಿಕರ ಹಿತರಕ್ಷಣಾ ಸಮಿತಿಯ ಸದಸ್ಯರು ಅಹವಾಲು ಸ್ವೀಕರಿಸಿ ಮಾತನಾಡುತಿದ್ದ ಅವರು,ಸ್ಮಾರ್ಟ್ಸಿಟಿ ಯೋಜನೆ ನಾನು ಶಾಸಕನಾಗುವ ಮೊದಲೇ ಆರಂಭವಾಗಿದ್ದ ಯೋಜನೆ,ಆದರೆ ಈ ಹಿಂದಿನವರು ಕೇವಲ 7-8 ವಾರ್ಡುಗಳಿಗೆ ಸಿಮೀತ ಮಾಡಿದ್ದ ಅಭಿವೃದ್ದಿ ಕಾಮಗಾರಿಗಳನ್ನು ಕೆಲ ಬದಲಾವಣೆಗಳೊಂದಿಗೆ ಇಡೀ ನಗರಕ್ಕೆ ದೊರೆಯುವಂತೆ ಮಾಡಿದೆ.ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.ಇದರ ಫಲವಾಗಿ ಸರಕಾರಿ ಜೂನಿಯರ್ ಕಾಲೇಜು, ಎಂಪ್ರೆಸ್ ಮಹಿಳಾ ಪದವಿಪೂರ್ವ ಕಾಲೇಜು, ಶಿರಾಗೇಟ್ನ ಸರಕಾರಿ ಶಾಲೆ,ಹಳೆಯ…
ಮುಂದೆ ಓದಿ...