ತುಮಕೂರು : ನಿವೇಶನ ಕೊರತೆಯಿಂದ ನಿರ್ಮಾಣವಾಗದಿರುವ ಅಂಗನವಾಡಿ ಕೇಂದ್ರಗಳ ಪಟ್ಟಿ ತಯಾರಿಸಿ

 ತುಮಕೂರು :        ತುಮಕೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಿವೇಶನ ಕೊರತೆಯಿಂದ ನಿರ್ಮಾಣವಾಗದಿರುವ ಅಂಗನವಾಡಿ ಕೇಂದ್ರಗಳ ಪಟ್ಟಿ ತಯಾರಿಸಿ ಎಂದು ಉಪವಿಭಾಗಾಧಿಕಾರಿ ಅಜಯ್ ಅವರು ಸಿಡಿಪಿಒಗಳಿಗೆ ಸೂಚಿಸಿದರು.       ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೋಷಣ್ ಅಭಿಯಾನ ಒಗ್ಗೂಡಿಸುವಿಕೆ ತ್ರೈಮಾಸಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಗಳಿಗೆ ಪೋಷಣ್ ಅಭಿಯಾನ ಯೋಜನೆಯಡಿ ಸರಬರಾಜುಗೊಂಡಿರುವ ಅಳತೆ ಮಾಪನಗಳ ಉಪಯೋಗಗಳು, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗಿರುವ ಸ್ಮಾರ್ಟ್‍ಫೋನ್‍ಗಳ ಬಗ್ಗೆ, ಪೂರಕ ಪೌಷ್ಠಿಕ ಆಹಾರ ವಿತರಣೆಯ ಬಗ್ಗೆ ಹಾಗೂ ಇನ್‍ಕ್ರಿಮೆಂಟಲ್ ಲರ್ನಿಂಗ್ ಅಪ್ರೊಚ್() ತರಬೇತಿಗಳ ಬಗ್ಗೆ ಚರ್ಚಿಸಲಾಯಿತು. ಮಕ್ಕಳ ಪೌಷ್ಠಿಕ ಮಟ್ಟವನ್ನು ಕೇಂದ್ರವಾರು ಪಟ್ಟಿ ಮಾಡಿ ಪ್ರತಿ ಮಾಹೆ ದಾಖಲಿಸುವಂತೆ ಅವರು ತಿಳಿಸಿದರು.       ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರು, ಅಂಗನವಾಡಿ ಕಟ್ಟಡಗಳು ಮತ್ತು ಶೌಚಾಲಯಗಳ ಲಭ್ಯತೆ, ಅಲಭ್ಯತೆ ಮತ್ತು…

ಮುಂದೆ ಓದಿ...

ಗ್ರಾಪಂ ಅಧ್ಯಕ್ಷರಿಗೆ ಇರುವ ಅಧಿಕಾರ ಪ್ರಧಾನಿಗೂ ಇಲ್ಲ : ಬಿ.ಸುರೇಶ್‍ಗೌಡ

ತುಮಕೂರು :       ತಾಲೂಕಿನ ಅರಕೆರೆ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ವನಜಾಕ್ಷಮ್ಮ, ಉಪಾಧ್ಯಕ್ಷರಾಗಿ ಪ್ರೇಮಕುಮಾರಿ ಅವರುಗಳು ಆಯ್ಕೆಯಾಗಿದ್ದಾರೆ.       ತುಮಕೂರು ನಗರಕ್ಕೆ ಹೊಂದಿಕೊಂಡಂತೆ ಇರುವ ಅರಕೆರೆ ಗ್ರಾಮಪಂಚಾ ಯಿತಿಯಲ್ಲಿ ಒಟ್ಟು 18 ಜನ ಸದಸ್ಯರಿದ್ದು,ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಅರಕೆರೆ ಒಂದನೇ ವಾರ್ಡಿನ ಸದಸ್ಯೆ ವನಜಾಕ್ಷಮ್ಮ 14 ಸದಸ್ಯರ ಬೆಂಬಲದೊಂದಿಗೆ ಆಯ್ಕೆಯಾದರೆ,ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಹೊಸಹಳ್ಳಿ ಕ್ಷೇತ್ರದ ಪ್ರೇಮಕುಮಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.       ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವನಜಾಕ್ಷಮ್ಮ,ತುಮಕೂರು ನಗರಕ್ಕೆ ಹತ್ತಿರದಲ್ಲಿರುವ ಅರಕೆರೆ ಗ್ರಾಮಪಂಚಾಯಿತಿಯನ್ನು ಮಾದರಿ ಗ್ರಾಮಪಂಚಾಯಿತಿಯಾಗಿ ರೂಪಿಸಬೇಕೆಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.  …

ಮುಂದೆ ಓದಿ...