ಹುಳಿಯಾರು : ಬೆಂಕಿಗಾಹುತಿ ತೋಟದ ಮನೆ

ಹುಳಿಯಾರು:      ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಗ್ರಾಮದ ಎಚ್.ಎಸ್. ಅನಂದಮೂರ್ತಿ ಅವರಿಗೆ ಸೇರಿದ ತೋಟದ ಮನೆಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.       ಹೆಂಚಿನ ಮನೆಯಲ್ಲಿದ್ದ 23 ಸಾವಿರ ಕೊಬ್ಬರಿ, ಮನೆ ನಿರ್ಮಾಣಕ್ಕೆ ಇಟ್ಟಿದ್ದ ಬೇವಿನ ಮುಟ್ಟುಗಳು ಸೇರಿದಂತೆ ಅಗತ್ಯ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ. ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಹಂದನಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಂದೆ ಓದಿ...

KSRTC ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ

 ತುಮಕೂರು :        ಕೆಎಸ್ಸಾರ್ಟಿಸಿ ಸಿಬ್ಬಂದಿಗಳು ನೇತ್ರ ಮತ್ತು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್ ಬಸವರಾಜು ಸಲಹೆ ನೀಡಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ತುಮಕೂರು ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ನೇತ್ರ ಹಾಗೂ ಆರೋಗ್ಯ ತಪಾಸಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.      ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ (ದಿ:18-01-2021 ರಿಂದ ದಿ:17-02-2021 ರವರೆಗೆ)“ರಸ್ತೆ ಸುರಕ್ಷತೆ-ಜೀವನ ರಕ್ಷೆ”“( Sadak Suraksha-Jeevan Raksha )” ಹಾಗೂ ಇಂಧನ ಉಳಿತಾಯ ಮಾಸಿಕ (16-01-2021 ರಿಂದ 15-02-2021 ರವರೆಗೆ) ಆಚರಣೆ ಮಾಡಿ ಅಪಘಾತಗಳನ್ನು ಕಡಿಮೆಗೊಳಿಸುವ ಅನೇಕ ಕಾರ್ಯಕ್ರಮ, ಶಿಬಿರಗಳನ್ನು ಘಟಕಮಟ್ಟದಲ್ಲಿ ನಡೆಸಲಾಗಿದೆ ಎಂದು ತಿಳಿಸಿದರು.      ದ್ವಿಚಕ್ರ ವಾಹನ ಸವಾರರು/ ಪಾದಚಾರಿಗಳ ನಡುವೆ ಹೆಚ್ಚಿನ ಅಪಘಾತ ಸಂಭವಿಸುತ್ತಿದ್ದು, ಸಂಸ್ಥೆಯ ಚಾಲಕರು ರಸ್ತೆಯಲ್ಲಿ ಸಂಚರಿಸುವ ಪಾದಚಾರಿ…

ಮುಂದೆ ಓದಿ...

ಜಾತಿ ಮೀಸಲಾತಿ ಬಗ್ಗೆ ನಡೆದಿರುವ ಹೋರಾಟಗಳಿಗೆ ಬಿಜೆಪಿ ಕಾರಣ

ಗುಬ್ಬಿ:       ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಜಾತಿಗೊಂದು ನಿಗಮ ರಚನೆಯ ಭರವಸೆ ನೀಡಿದ್ದರ ಫಲ ಎಲ್ಲಾ ಜನಾಂಗಗಳೂ ಮೀಸಲಾತಿ ಹೋರಾಟ ಆರಂಭಿಸಿವೆ. ಜಾತಿ ಮೀಸಲಾತಿ ಬಗ್ಗೆ ನಡೆದಿರುವ ಹೋರಾಟಗಳಿಗೆ ನೇರ ಬಿಜೆಪಿ ಸರ್ಕಾರ ಕಾರಣ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ನೇರ ವಾಗ್ಧಾಳಿ ನಡೆಸಿದರು.      ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರ್ಗಗಳ ಸೇರ್ಪಡೆಗೆ ಒಂದೊಂದೇ ಜಾತಿಗಳು ಹೋರಾಟಕ್ಕೆ ಮುಂದಾಗಿದೆ. ಬೇಡಜಂಗಮ, ಕುರುಬ ಸಮುದಾಯ ಹಾಗೂ ಪಂಚಮಸಾಲಿ ಲಿಂಗಾಯಿತ ಸಮಾಜ ಕೂಡಾ ಪಾದಯಾತ್ರೆ ಮೂಲಕ ಹೋರಾಟ ನಡೆಸಿದೆ. ಈ ಹೋರಾಟಕ್ಕೆ ಬಿಜೆಪಿ ಸರ್ಕಾರದ ಮಾತುಗಳೇ ಕಾರಣ. ಹೀಗೆ ನಡೆದಂತೆ ನಮ್ಮ ಸಮಾಜ ಎತ್ತ ಸಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.      ಸರ್ವ ತ್ಯಾಗ ಮಾಡಿದ ಸ್ವಾಮೀಜಿಗಳು ಒಂದು ಜಾತಿಗೆ ಮೀಸಲಾಗಿ ಹೋರಾಟ ಮಾಡುವುದು ಸರಿಯಲ್ಲ.…

ಮುಂದೆ ಓದಿ...