ರಾಜ್ಯವೊಂದರಲ್ಲೇ ಶೇ.22ರಷ್ಟು ಮಂದಿ ತಂಬಾಕು ಚಟಕ್ಕೆ-ಆತಂಕ

 ತುಮಕೂರು:       ಕರ್ನಾಟಕ ರಾಜ್ಯವೊಂದರಲ್ಲೇ ಶೇ.22.8ರಷ್ಟು ಮಂದಿ ತಂಬಾಕು ಚಟಕ್ಕೆ ದಾಸರಾಗಿದ್ದಾರೆ ಎಂದು ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (IPಊ)ನ ಡಾ. ಚಂದ್ರಶೇಖರ್ ಕೊಟಗಿ ಆತಂಕ ವ್ಯಕ್ತಪಡಿಸಿದರು.      ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (IPಊ), ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರ ಸಹಯೋಗದಲ್ಲಿ ಕುಣಿಗಲ್ ತಾಲೂಕಿನಲ್ಲಿಂದು ವಿವಿಧ ಶಾಲೆಗಳ ಮುಖ್ಯೋಪಧ್ಯಾಯರು ಹಾಗು ಕ್ಲಸ್ಟರ್ ಸಂಪನ್ಮೂಲ ಅಧಿಕಾರಿಗಳಿಗಾಗಿ “ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ” ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು.       ತಂಬಾಕು ದುಷ್ಚಟಕ್ಕೆ ವಯಸ್ಕರಲ್ಲದೆ ಮಕ್ಕಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ದಾಸರಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳ ಸುತ್ತಮುತ್ತಲ ಪ್ರದೇಶಗಳನ್ನು ತಂಬಾಕು ಮುಕ್ತ ಗೊಳಿಸುವ ಉದ್ದೇಶದಿಂದ ಹಾಗೂ ಭವಿಷ್ಯದ ಯುವಜನತೆಯನ್ನು ಈ ದುಷ್ಚಟದಿಂದ ದೂರವಿಡಲು ಐಪಿಎಚ್ ಸಂಸ್ಥೆಯು ತುಮಕೂರು ಜಿಲ್ಲೆಯನ್ನು ಆಯ್ದುಕೊಂಡು…

ಮುಂದೆ ಓದಿ...

ರಾಷ್ಟ್ರೀಯ ಪೆÇ್ಲೀರೋಸಿಸ್ ತಡೆ, ನಿಯಂತ್ರಣ ಕಾರ್ಯಕ್ರಮ

ತುಮಕೂರು :       ನಗರದಲ್ಲಿಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮತ್ತು ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ, ದಂತ ವೈದ್ಯಕೀಯ ಕಾಲೇಜು ತುಮಕೂರು ಇವರ ಸಂಯುಕ್ತ ಆಶ್ರದಲ್ಲಿ ರಾಷ್ಟ್ರೀಯ ಪ್ಲೋರೋಸಿಸ್ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ನಾಗಾರ್ಜುನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.       ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಕುಲಪತಿಗಳಾದ ಡಾ.ಜಿ.ಪರಮೇಶ್ವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ಲೋರೋಸಿಸ್ ನಿಂದ ಆಗುವ ತೊಂದರೆಗಳನ್ನ ತಡೆಗಟ್ಟವಲ್ಲಿ ಮತ್ತು ನೀಡಲಾಗುವ ಚಿಕಿತ್ಸೆಯ ಜೊತೆಯಲ್ಲಿ ಇನ್ನಿತರ ದುಷ್ಪರಿಣಾಮಗಳ ಕುರಿತಾದ ಸಂಶೋಧನೆಗಳು ಹೆಚ್ಚು ಹೆಚ್ಚು ನಡೆಯಬೇಕೆಂದರು.       ದಂತ ಪ್ಲೋರೋಸಿಸ್ ಕುರಿತಾಗಿ ಡಾ.ಭರತೇಶ್, ಮೂಳೆಗಳ ಪೆÇ್ಲೀರೋಸಿಸ್ ಕುರಿತಾಗಿ ಡಾ.ರವಿಕುಮಾರ್, ಪ್ಲೋರೋಸಿಸ್ ನಿಯಂತ್ರಣದ ಕ್ರಮಗಳ ಕುರಿತಾಗಿ ಡಾ.ಚೇಲುವೆಗೌಡ, ರಾಷ್ಟ್ರೀಯ ಪ್ಲೋರೋಸಿಸ್ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿನ ತುಮಕೂರು…

ಮುಂದೆ ಓದಿ...

ಇಲಾಖಾವಾರು ಬಿಡುಗಡೆಯಾಗಿರುವ ಅನುದಾನವನ್ನು ಮಾರ್ಚ್ ಒಳಗೆ ಖರ್ಚು ಮಾಡಿ: ಜಿ.ಪಂ.ಅಧ್ಯಕ್ಷೆ

 ತುಮಕೂರು :       ಅಕ್ಷರ ದಾಸೋಹ, ಸಾರ್ವಜನಿಕ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಮಾರ್ಚ್ ಮಾಹೆಯೊಳಗೆ ಖರ್ಚು ಮಾಡುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಸೂಚಿಸಿದರು.       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಇಲಾಖೆಗಳಿಗೆ ಸರ್ಕಾರ ನೀಡಿರುವ ಅನುದಾನವನ್ನು ವ್ಯರ್ಥ ಮಾಡದೇ, ಜಿಲ್ಲಾ ಪಂಚಾಯತ್ ಅನುಮೋದನೆ ನೀಡಿರುವ ಕಾಮಗಾರಿಗಳನ್ನು ಕೈಗೊಂಡು ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.       ಕೋವಿಡ್-19 ನಂತರ ಶಾಲೆ ಆರಂಭವಾದ ಮೇಲೆ ಶಾಲೆಯ ವಾತಾವರಣ, ಮಕ್ಕಳು ಮತ್ತು ಪೋಷಕರ ಅಭಿಪ್ರಾಯಗಳ ಬಗ್ಗೆ ಡಿಡಿಪಿಐಗಳಿಗೆ ಪ್ರಶ್ನಿಸಿದಾಗ ಇದಕ್ಕೆ ಉತ್ತರಿಸಿದ ಡಿಡಿಪಿಐಗಳು, ಶಾಲೆ ಆರಂಭವಾದಗಿನಿಂದ ಶೇ.70ರಷ್ಟು ಹಾಜರಾತಿಯಿದ್ದು, ಮಕ್ಕಳು ಉತ್ಸುಕರಾಗಿಯೇ…

ಮುಂದೆ ಓದಿ...