ತುಮಕೂರು: ನಗರದಲ್ಲಿ 4.50 ಕೋಟಿ ರೂ.ವೆಚ್ಚದಲ್ಲಿ ಎಸ್ಸಿಪಿ/ಟಿಎಸ್ಸ್‍ಪಿ ಕಾಮಗಾರಿ

ತುಮಕೂರು:       ತುಮಕೂರು ನಗರದಲ್ಲಿ ಲೋಕೋಪಯೋಗಿ ಇಲಾಖೆಯ ಸುಮಾರು 4.50 ಕೋಟಿ ರೂಗಳಲ್ಲಿ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿ ಸಿಸಿ ರಸ್ತೆ, ಚರಂಡಿ ಹಾಗೂ ಇನ್ನಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.       ನಗರದ 26ನೇ ವಾರ್ಡಿನ ಆಶೋಕ ನಗರದ 9ನೇ ಅಡ್ಡರಸ್ತೆಯಲ್ಲಿ ನಿರ್ಮಿಸಿರುವ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಯನ್ನು ಪಿಡಬ್ಲ್ಯುಡಿ ಅಧಿಕಾರಿಗಳೊಂದಿಗೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು,ನಗರದ ಸತ್ಯಮಂಗಲ, ಮಂಜುನಾಥ ನಗರ,ಗಿರಿನಗರ, ಅಶೋಕ ನಗರ,ಸರಸ್ವತಿಪುರಂಗಳಲ್ಲಿ ಸಿಸಿ ರಸ್ತೆ,ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.ಸರಸ್ವತಿಪುರಂ ಮತ್ತು ಅಶೋಕನಗರದ ಮುಖ್ಯ ರಸ್ತೆಗಳು ಚನ್ನಾಗಿದ್ದರೂ ಒಳಗಡೆ ಇರುವ ರಸ್ತೆಗಳು,ಅಲ್ಲಿರುವ ಜನರು ಇನ್ನೂ ಕೊಳಗೇರಿ ರೀತಿ ಯಲ್ಲಿಯೇ ವಾಸ ಮಾಡುತ್ತಿದ್ದಾರೆ.ಹಾಗಾಗಿ ಕೆಲವು ವಾರ್ಡುಗಳನ್ನು ಹೊರತು ಪಡಿಸಿ ಉಳಿದಂತೆ 35 ವಾರ್ಡು ಗಳಿಗೂ ಎಸ್ಸಿಪಿ ಹಣವನ್ನು ವಿನಿಯೋಗಿಸಲಾಗಿದೆ ಎಂದರು.       ಕೇಂದ್ರ…

ಮುಂದೆ ಓದಿ...

ಮಾಡಿ ಇಡೀ ದಿನ ರೈತರೊಂದಿಗೆ ಸಂವಾದ ನಡೆಸಿ-ಕೃಷಿ ಸಚಿವ ಬಿ.ಸಿ.ಪಾಟೀಲ್

ಗುಬ್ಬಿ:      ಹವಾಗುಣಕ್ಕೆ ತಕ್ಕ ಬೇಸಾಯ ಮಾಡುವ ಬಗ್ಗೆ ಪ್ರತಿ ಜಿಲ್ಲೆಯಲ್ಲಿ ಒಂದು ಗ್ರಾಮ ಆಯ್ಕೆ ಮಾಡಿ ಇಡೀ ದಿನ ರೈತರೊಂದಿಗೆ ಸಂವಾದ ನಡೆಸಿ ಕೃಷಿ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಪ್ರವಾಸ ಆರಂಭಿಸಿ ಮಂಡ್ಯ ಮತ್ತು ಕೋಲಾರ ಜಿಲ್ಲೆ ಪ್ರವಾಸ ಮುಗಿಸಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.       ತಾಲ್ಲೂಕಿನ ಸಿ.ಎಸ್.ಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಕೃಷಿ ಸಂಪರ್ಕ ಕೇಂದ್ರ ನೂತನ ಕಟ್ಟಡ ಉದ್ಘಾಟನೆ ಮತ್ತು ಏಳು ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಅಧ್ಯಕ್ಷರು. ಉಪಾಧ್ಯಕ್ಷರು, ಸದಸ್ಯರಿಗೆ ಸನ್ಮಾನ ಹಾಗೂ ಬಿಜೆಪಿ ಕಾರ್ಯರ್ತರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಹಿರಿಯರ ಆಲೋಚನೆಗಳು ಇಂದಿಗೂ ಪ್ರಸ್ತುತವಾಗಿದೆ. ನೀರಿನ ಲಭ್ಯತೆ ಜತೆಗೆ ಮಣ್ಣಿನ ಗುಣ ಅರಿತು ಬೇಸಾಯ ಮಾಡುವ ಕಲೆ ನಮ್ಮ ಹಿಂದಿನ ಸಂಪ್ರದಾಯದಲ್ಲಿ ಅಡಗಿದೆ. ಇಂತಹ ಸಂದರ್ಭದಲ್ಲಿ ಇಸ್ರೇಲ್ ಮಾದರಿ ಕೃಷಿ ನಮಗೆ ಅವಶ್ಯವಿಲ್ಲ…

ಮುಂದೆ ಓದಿ...

ಮಧುಗಿರಿ : ನೆಪಮಾತ್ರಕ್ಕೆ ಅಳವಡಿಸಿದಂತಿದೆ ಹೈಮಾಸ್ಟ್ ದೀಪ

ಮಧುಗಿರಿ:       ಪಟ್ಟಣದಲ್ಲಿ ವಾರದ ಸಂತೆ ನಡೆಯುವ ಲಾಲ್ ಬಹುದ್ದರ್ ಶಾಸ್ತ್ರಿ ಮೈದಾನದಲ್ಲಿ ಪುರಸಭೆ ವತಿಯಿಂದ ಅಳವಡಿಸಿರುವ ಹೈಮಾಸ್ಟ್ ದೀಪ ಉರಿಯದೆ ನೆಪಮಾತ್ರಕ್ಕೆ ಅಳವಡಿಸಿದಂತೆ ಕಾಣುತ್ತಿದೆ.       ಪ್ರತಿ ಬುಧವಾರದಂದು ನಡೆಯುವ ಸಂತೆಯಲ್ಲಿ ಹೂವು ಹಣ್ಣು ತರಕಾರಿ ದಿನಬಳಕೆ ವಸ್ತುಗಳು ಮಾರಾಟ ನಡೆಯುತ್ತದೆ. ಸಂತೆ ಮೈದಾನದ ಮಧ್ಯಭಾಗದಲ್ಲಿ ಹೈಮಾಸ್ ದೀಪ ಅಳವಡಿಸಿ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಇಲ್ಲಿವರೆಗೂ ಉರಿದಿರುವ ಉದಾಹರಣೆಗಳೇ ಇಲ್ಲ ದಂತಾಗಿದೆ.      ಸಂತೆಯಲ್ಲಿ ತರಕಾರಿ ಕೊಳ್ಳಲು ಬಹುತೇಕ ಮಹಿಳೆಯರು ಆಗಮಿಸುವುದನ್ನು ಕಾಣಬಹುದಾಗಿದೆ. ಕತ್ತಲಿನಲ್ಲೇ ವ್ಯಾಪಾರ ಮಾಡಲು ಅಸಾಧ್ಯವಾಗಿದೆ.       ಪುರಸಭೆಗೆ ಲಕ್ಷಾಂತರ ರೂ ಆದಾಯ ನೀಡುವ ಸಂತೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಬಯಲೇ ಶೌಚಾಲಯವಾಗಿದೆ ,ಈ ಮೈದಾನ ಮುಂಚೆ ರಾಷ್ಟ್ರೀಯ ಹಬ್ಬಗಳ ಆಚರಣೆ ನಡೆಯುತ್ತಿತ್ತು. ಇಂದಿಗೂ ರಾಷ್ಟ್ರಧ್ವಜ ನಾಡಧ್ವಜ ಹಾರಿಸುವ ಧ್ವಜಸ್ತಂಭ…

ಮುಂದೆ ಓದಿ...

ಜೆ.ಸಿಪುರ ಕೆರೆಗೆ ನೀರು ಹರಿಸುವ ಕಾಮಗಾರಿಗೆ ಜೆ.ಸಿ.ಎಂ ಶಂಕುಸ್ಥಾಪನೆ

ತುಮಕೂರು :       ಹೇಮಾವತಿಯ ತುಮಕೂರು ಶಾಖಾ ನಾಲೆಯಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ.ಸಿ.ಪುರ ಕೆರೆಗೆ ಕುಡಿಯುವ ನೀರು ಒದಗಿಸುವ 9.9 ಕೋಟಿ ರೂ ವೆಚ್ಚದ ಪೈಪ್ ಲೈನ್ ಕಾಮಗಾರಿಗೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು.       ಕೆ.ಬಿ.ಕ್ರಾಸ್ ನಿಂದ ತುರುವೇಕೆರೆ ರಸ್ತೆಯ ಕುಂದೂರು ಸಮೀಪವಿರುವ ಹೇಮಾವತಿ ಮುಖ್ಯನಾಲೆಯ ಬಳಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು, ಈಗಿರುವ ಪೈಪ್ ಲೈನ್ ನಲ್ಲಿ ನಾಲ್ಕು ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗದೇ ಇರುವುದರಿಂದ ಕುಡಿಯುವ ನೀರಿಗಾಗಿ ಪ್ರತ್ಯೇಕವಾಗಿ ಜೆ ಸಿ ಪುರ ಕೆರೆಗೆ ಪೈಪ್ ಲೈನ್ ಅಳವಡಿಸಲಾಗುತ್ತಿದೆ ಎಂದರು.       ಈ ಕಾಮಗಾರಿ ಐದಾರು ತಿಂಗಳಿನಲ್ಲಿ ಪೂರ್ಣಗೊಂಡು, ಮುಂದಿನ ಸೀಜನ್ ನಲ್ಲಿ ನೀರು ಕೊಡಲು ಅನುಕೂಲವಾಗುತ್ತದೆ ಎಂದು…

ಮುಂದೆ ಓದಿ...