ತುಮಕೂರು: ತುಮಕೂರು ನೂತನ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ಪಾಟೀಲ್ ಯಲ್ಲಾಗೌಡ ಶಿವನಗೌಡ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ಕುಮಾರ್ ಅವರಿಂದ ಪಾಟೀಲ್ ಯಲ್ಲಾಗೌಡ ಶಿವನಗೌಡ ಅವರು ಅಧಿಕಾರ ವಹಿಸಿಕೊಂಡರು. ನೂತನ ಜಿಲ್ಲಾಧಿಕಾರಿ ಪಾಟೀಲ್ ಯಲ್ಲಾಗೌಡ ಶಿವನಗೌಡ ಅವರು ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು. ನಂತರ ಜಿಲ್ಲಾಧಿಕಾರಿಗಳ ಕಚೇರಿ ತೆರಳಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ವಹಿಸಿಕೊಂಡ ನೂತನ ಜಿಲ್ಲಾಧಿಕಾರಿಗಳನ್ನು ನಿರ್ಗಮಿತ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ಕುಮಾರ್, ಉಪವಿಭಾಗಾಧಿಕಾರಿ ಅಜಯ್ ಅಭಿನಂದಿಸಿದರು.
ಮುಂದೆ ಓದಿ...Day: February 15, 2021
ಆಟದ ಮೈದಾನ ಉಳಿಸಿ ಕಟ್ಟಡ ನಿರ್ಮಾಣ : ಜಿಪಂ ಎಇಇ ಭರವಸೆ
ಹುಳಿಯಾರು: ಹುಳಿಯಾರು ಪಟ್ಟಣದಲ್ಲಿನ ಏಕೈಕ ಆಟದ ಮೈದಾನವಾಗಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನವನ್ನು ಉಳಿಸಿ ಶಾಲಾ ಕಟ್ಟಡದ ಕಾಮಗಾರಿ ನಿರ್ಮಾಣ ಮಾಡುವುದಾಗಿ ಜಿಲ್ಲಾ ಪಂಚಾಯ್ತಿ ಎಇಇ ರವಿಕುಮಾರ್ ಭರವಸೆ ನೀಡಿದ್ದಾರೆ. ಹುಳಿಯಾರು ಪಟ್ಟಣದ 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆಗೆ ಹೃದಯಭಾಗದಲ್ಲಿರುವ ಈ ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನ ಆಸರೆಯಾಗಿದೆ. ಅದ್ದೂರಿ ಸಾರ್ವಜನಿಕ ಕಾರ್ಯಕ್ರಮ, ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ, ಆರ್ಎಸ್ಎಸ್ ಶಾಖೆ ಸೇರಿದಂತೆ ಹಿರಿಯ ನಾಗರಿಕರ ವಾಕಿಂಗ್, ಸ್ಥಳಿಯ ಯುವಜನತೆಯ ಆಟ, ವ್ಯಾಯಾಮ ಎಲ್ಲವೂ ಇಲ್ಲಿ ನಡೆಯುತ್ತಿದೆ. ಆದರೆ ಈ ಆಟದ ಮೈದಾನದಲ್ಲೇ ಕರ್ನಾಟಕ ಪಬ್ಲಿಕ್ ಶಾಲೆಗೆ ನೂತನವಾಗಿ ಮಂಜೂರಾಗಿರುವ ಕಟ್ಟಡಗಳನ್ನು ಕಟ್ಟಲು ಗುತ್ತಿಗೆದಾರರು ಮುಂದಾಗಿದ್ದರು. ಕಟ್ಟಡದ ಮಾರ್ಕ್ ಮಾಡುವಾಗಲೇ ಸ್ಥಳಿಯರು ಮನವಿ ಮಾಡಿದ್ದರೂ ಕೇಳದೆ ಜೆಸಿಬಿ ಮೂಲಕ ಪಿಲ್ಲರ್ ಗುಂಡಿಗಳನ್ನು ಸಹ ತೆಗೆಸಿದರು. ಇದು…
ಮುಂದೆ ಓದಿ...ತುಮಕೂರು : ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿನೆ ; ಆರೋಪಿ ಅರೆಸ್ಟ್
ತುಮಕೂರು : ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದ ಆರೋಪಿಯ ಬಧಿಸಲಾಗಿದೆ. ಸೌಮ್ಯ ( ಲಾವಣ್ಯ ಗೌಡ) ಬೆಂಗಳೂರಿನ ಕಡಬಗಲಿಯ ಜನಪ್ರಿಯ ಲೇಔಟ್’ನ ಸೌಮ್ಯ ( ಲಾವಣ್ಯ ಗೌಡ) ಎಂಬ ಆರೋಪಿಯು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಆಗಾಗ್ಗೆ ಬಂದು ಹೋಗುತ್ತಾ ತಾನು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತೇನೆಂದು ನಂಬಿಸಿ ನಿರುದ್ಯೋಗಿ ಯುವಕ ಮತ್ತು ಯುವತಿಯರಾದ ಬೆಂಗಳೂರಿನ ವಾಸಿಗಳಾದ ರಶ್ಮಿ, ರಾಜೇಶ್, ತಿಮ್ಮರಾಜು ಮತ್ತು ಸಂದೀಪ್ ಕುಮಾರ್ ಎಂಬುವವರಿಗೆ ನಂಬಿಸಿ ಅದಕ್ಕೆ ಪೂರಕವೆಂಬಂತೆ ಜಿಲ್ಲಾಧಿಕಾರಿಗಳ ಸಭಾ ನಡವಳಿಯ ಒಂದು ಪುಸ್ತಕವನ್ನು ತೋರಿಸಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿ.ಸಿ, ಎ.ಡಿಸಿ, ಎ.ಸಿ ಮತ್ತು ಮುಜರಾಯಿ ಇಲಾಖೆಯ ನಿರ್ದೇಶಕರ ಆಪ್ತ ಸಹಾಯಕ ಹುದ್ದೆಗಳನ್ನು ಕೊಡಿಸುವುದಾಗಿ ಅವರುಗಳಿ೦ದ ಹಣ ಮತ್ತು ಮೂಲ ಆಂಕಪಟ್ಟಗಳನ್ನು ಪಡೆದು ಮೋಸ ಮಾಡಿದ್ದು, ಮೋಸ…
ಮುಂದೆ ಓದಿ...