ಫೆ.20ರಂದು ಜಿಲ್ಲಾಧಿಕಾರಿ ಹಾಗೂ ಎಸಿ, ತಹಶೀಲ್ದಾರರುಗಳ ಗ್ರಾಮ ವಾಸ್ತವ್ಯ

ತುಮಕೂರು  :       ಕಂದಾಯ ಇಲಾಖೆಯ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದಡಿ ಫೆಬ್ರವರಿ 20ರ 3ನೇ ಶನಿವಾರದಂದು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಲಕ್ಷ್ಮಿಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ ಅವರು ವಾಸ್ತವ್ಯ ಮಾಡಿ ಗ್ರಾಮದಲ್ಲಿನ ರೈತರ ಜಮೀನುಗಳ ಪಹಣಿ ಲೋಪದೋಷ, ಪಿಂಚಣಿ, ರೇಷನ್ ಕಾರ್ಡ್, ಮತ್ತಿತರ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ.       ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಜಿಲ್ಲೆಯ ತಹಶೀಲ್ದಾರರುಗಳಿಗೆ ಹಾಗೂ ಉಪವಿಭಾಗಾಧಿಕಾರಿಗಳಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಅವರು, ಸರ್ಕಾರದ ಸುತ್ತೋಲೆಯನ್ವಯ ಮುಂಬರುವ ಫೆಬ್ರವರಿ 20ರಂದು ಹಾಗೂ ಪ್ರತಿ ತಿಂಗಳ 3ನೇ ಶನಿವಾರದಂದು ಕೈಗೊಳ್ಳಬೇಕಾಗಿರುವ ಗ್ರಾಮಭೇಟಿ ಹಾಗೂ ಹಳ್ಳಿ ವಾಸ್ತವ್ಯದ ಬಗ್ಗೆ ನಿರ್ದೇಶನ ನೀಡಿದರು.        ಫೆಬ್ರವರಿ 20ರಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿರುವ ಜಿಲ್ಲಾಧಿಕಾರಿಗಳ ಗ್ರಾಮ ಭೇಟಿಯಲ್ಲಿ ಮಧುಗಿರಿ ಉಪವಿಭಾಗಾಧಿಕಾರಿ, ಮಧುಗಿರಿ ತಾಲ್ಲೂಕಿನ ತಹಶೀಲ್ದಾರ್, ಕೃಷಿ, ತೋಟಗಾರಿಗೆ,…

ಮುಂದೆ ಓದಿ...

ಅರಣ್ಯಾಧಿಕಾರಿಗಳಿಂದಲೇ ಅರಣ್ಯ ನಾಶ : ಗ್ರಾಪಂ ಸದಸ್ಯ ಆರೋಪ

ಹುಳಿಯಾರು :        ದಸೂಡಿ ಸಮೀಪದ ರಾಮಪ್ಪನಕೆರೆ ಸುತ್ತಮುತ್ತಲ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯವರೆ ಬೆಳಸಿದ್ದ ಮರಗಳನ್ನು ಅರಣ್ಯಾಧಿಕಾರಿಗಳೇ ಕಡಿದು ಅದೇ ಸ್ಥಳದಲ್ಲಿ ಪುನಃ ಅರಣ್ಯೀಕರಣ ಮಾಡಲು ಹೊರಟಿದ್ದಾರೆ ಎಂದು ಗಾಣಧಾಳು ಗ್ರಾಮ ಪಂಚಾಯಿತಿ ಸದಸ್ಯ ಗುರುವಾಪುರ ಶ್ರೀನಿವಾಸ್ ಆರೋಪಿಸಿದ್ದಾರೆ.       ಬುಕ್ಕಾಪಟ್ಟಣ ವಲಯ ಅರಣ್ಯ ಪ್ರದೇಶಕ್ಕೆ ಸೇರಿದ ದಸೂಡಿ ಸರ್ಕಾರಿ ಸರ್ವೆ ನಂಬರ್ 100, 101, 104, 106 ರಲ್ಲಿ ಸುಮಾರು 290 ಎಕರೆ ಅರಣ್ಯ ಪ್ರದೇಶದಲ್ಲಿ ಈ ಹಿಂದೆ ಜಾಣೆ, ಕಮರ ಸೇರಿದಂತೆ ಅನೇಕ ಗಿಡಗಳನ್ನು ಅರಣ್ಯ ಇಲಾಖೆಯವರೆ ನೆಟ್ಟು ಐದಾರು ವರ್ಷ ಟ್ಯಾಂಕರ್‍ಗಳಲ್ಲಿ ನೀರುಣಿಸಿ ಬೆಳೆಸಿದ್ದರು. ಈಗ ಈ ಎಲ್ಲಾ ಮರಗಳು ಹೆಮ್ಮರವಾಗಿ ಬೆಳೆದು ಪ್ರಾಣಿ ಪಕ್ಷಿಗಳಿಗೆ ನೆರಳು, ಹಣ್ಣು ನೀಡುತ್ತಿರುವ ಸಂದರ್ಭದಲ್ಲಿ ನಿರ್ಧಾಕ್ಷ್ಯಿಣ್ಯವಾಗಿ ಕಡಿದು ಧರೆಗುರುಳಿಸುತ್ತಿದ್ದಾರೆ ಎಂದು ದೂರಿದ್ದಾರೆ. ಮುಂಬೈ, ಕರ್ನಾಟಕ ಹಾಗೂ…

ಮುಂದೆ ಓದಿ...

‘ಪ್ರತಿ ವಿದ್ಯಾರ್ಥಿಯನ್ನು ತನ್ನ ಮಗು ಎಂದು ಭಾವಿಸಿ’-ಡಿಸಿ

ತುಮಕೂರು :       ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ 2020-21ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಶಿಕ್ಷಕರುಗಳಿಗೆ ಸೂಚಿಸಿದರು.       ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ಧ 2020-21ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗಾಗಿ ಪ್ರೌಢ ಶಾಲಾಶಿಕ್ಷಕರ ಪ್ರಗತಿ ಪರಿಶೀಲನಾ ಹಾಗೂ ಮಾರ್ಗದರ್ಶನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.        ಕಳೆದ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಯು 14ನೇ ಸ್ಥಾನದಲ್ಲಿದೆ. ಆದರೆ ಈ ಬಾರಿ ಉತ್ತಮ ಫಲಿತಾಂಶದೊಂದಿಗೆ ಜಿಲ್ಲೆಯನ್ನು ಉತ್ತಮ ಸ್ಥಾನಕ್ಕೇರಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ವಿದ್ಯಾರ್ಥಿಯನ್ನು ತನ್ನ ಮಗು ಎಂದು ಭಾವಿಸಿ, ಉತ್ತಮ ಮಾರ್ಗದರ್ಶನ ನೀಡಬೇಕು. ಕೋವಿಡ್-19ರ ಹಿನ್ನೆಲೆಯಲ್ಲಿ ಪಠ್ಯಗಳು ಕಡಿಮೆಯಾಗಿದ್ದು, ಪ್ರತಿ ಮಗುವು ಉತ್ತೀರ್ಣರಾಗುವಂತೆ ತಯಾರು ಮಾಡಬೇಕು ಎಂದರು.        ಪ್ರತಿಯೊಬ್ಬ ಮನುಷ್ಯನ…

ಮುಂದೆ ಓದಿ...

ತುಮಕೂರು : ಅಂತರ ರಾಜ್ಯ ಲಾರಿ ಕಳ್ಳರ ಬಂಧನ

ತುಮಕೂರು :       ರಾತ್ರಿ ವೇಳೆಯಲ್ಲಿ ಸಿರಾ ಟೌನ್, ಸಂತೇಪೇಟೆ ಸರ್ಕಾರಿ ಸ್ಕೂಲ್ ಮುಂಭಾಗ ಸಿರಾ- ತುಮಕೂರು ಎನ್.ಹೆಚ್-4 ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸುಮಾರು 11 ಲಕ್ಷ ರೂ ಮೌಲ್ಯದ KA-64 -3627 ನಂಬರಿನ 12 ಚಕ್ರದ ಅಶೋಕ್ ಲೈಲ್ಯಾಂಡ್ ಲಾರಿಯನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಪ್ರಕರಣ ದಾಖಲಿಸಿಲಾಗಿತ್ತು.       ಕಳವಾದ ಲಾರಿ ಮತ್ತು ಆರೋಪಿಗಳನ್ನು ಪತ್ತೆ ಮಾಡಲು ಶಿರಾ ಎಲ್ ಡಿ.ಎಸ್.ಪಿ. ಕುಮಾರಪ್ಪ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತಂಡವು ಕೆಳಕಂಡ ಅರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಲಾಗಿ ಆರೋಪಿಗಳಾದ ಎಸ್. ಮಣಿಕಂಠನ್ @ ರಮೇಶ್ ಕುಮಾರ್, ಮನೋಜ್ ತಿರಕಿ @ ಮೈಕಲ್ ಬಿನ್ ಒಮದ ತಿರಕಿ ರವರುಗಳು ಲಾರಿಯನ್ನು ಕಳ್ಳತನ ಮಾಡಿ ತಮಿಳುನಾಡಿನ ಸೇಲಂಗೆ ತಗೆದುಕೊಂಡು ಹೋಗಿ ಪಳನಿಸ್ವಾಮಿ ಮತ್ತು ಸೆಂಥಿಲ್ ನಾಥನ್ ವಕೀಲರು ರವರುಗಳಿಗೆ ಮಾರಾಟ…

ಮುಂದೆ ಓದಿ...