ತುಮಕೂರು: ನಿಕಟಪೂರ್ವ ಡಿಸಿ ಡಾ.ರಾಕೇಶ್‍ಕುಮಾರ್’ಗೆ ಆತ್ಮೀಯ ಬೀಳ್ಕೊಡುಗೆ

ತುಮಕೂರು:       ಜಿಲ್ಲೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಬೆಂಗಳೂರಿನ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆಗೊಂಡಿರುವ ನಿಕಟಪೂರ್ವ ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್ ಅವರನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಬುಧವಾರ ರಾತ್ರಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿಕಟಪೂರ್ವ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಅವರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಫಲತಾಂಬೂಲ, ನೆನಪಿನ ಕಾಣಿಕೆ ನೀಡುವ ಮೂಲಕ ಜಿಲ್ಲಾ ಮಟ್ಟದ ಅಧಿಕಾರಿಗಳು ಆತ್ಮೀಯವಾಗಿ ಬೀಳ್ಕೊಟ್ಟರು. ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಹಾಗೂ ಜಿ.ಪಂ. ನೂತನ ಸಿಇಓ ಜಿ.ಎಂ. ಗಂಗಾಧರಸ್ವಾಮಿ ಅವರನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಜಿಲ್ಲೆಯಲ್ಲಿ ಎರಡೂವರೆ ವರ್ಷಗಳ ಕಾಲ ನಾನು ಮಾಡಿರುವ ಕೆಲಸ ನನಗೆ…

ಮುಂದೆ ಓದಿ...

ಸಾಹಿತ್ಯ ಮಾಂತ್ರಿಕ ಚಿ.ಉದಯಶಂಕರ್ ಜನಿಸಿದ್ದು ಚಟ್ನಿಳ್ಳಿ ಗ್ರಾಮದಲ್ಲಿ

ಗುಬ್ಬಿ:       ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಸಂಗೀತ ಇತಿಹಾಸವನ್ನು ನಿರ್ಮಿಸಿದ ಚಿ.ಉದಯಶಂಕರ್ ಕನ್ನಡ ಹಾಗೂ ಧಾರ್ಮಿಕ ಚಿತ್ರಗೀತೆಗಳಿಗೆ ಸಾಕಷ್ಟು ಸಾಹಿತ್ಯವನ್ನು ಬರೆಯುವ ಮೂಲಕ ಆ ಕಾಲದಲ್ಲಿ ತನ್ನದೇ ಆದ ಹವಾ ಸೃಷ್ಟಿಸಿಕೊಂಡಿದ್ದವರು.       ಚಿ.ಉದಯಶಂಕರ್ ಡಾ|| ರಾಜ್ ಕುಮಾರ್‍ರವರ ಪ್ರತಿ ಚಿತ್ರಕ್ಕೂ ಕೂಡ ತನ್ನದೇ ಆದ ಸಂಗೀತದ ಮೂಲಕ ಗಮನ ಸೆಳೆದವರು. ಇವರು ಗುಬ್ಬಿ ತಾಲ್ಲೂಕಿನ ಸಿ ಎಸ್ ಪುರ ಹೋಬಳಿಯ ಚಿಟ್ನಳ್ಳಿ ಗ್ರಾಮದವರು ಎಂಬುದು ಬಹಳ ವಿಶೇಷವಾಗಿದೆ. ಗ್ರಾಮೀಣ ಭಾಗದ ಪ್ರತಿಯೊಂದು ದಶಕಗಳ ಹಿಂದೆಯೇ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಮೈಲಿಗಲ್ಲನ್ನ ಸೃಷ್ಟಿಸಿತು. ತಂದೆ ಸದಾಶಿವಯ್ಯನವರು ಕೂಡ ಕನ್ನಡದ ಸಾಹಿತಿಯಾಗಿದ್ದು, ಮಗ ಚಿ.ಉದಯಶಂಕರ್‍ರವರಿಗೂ ಸಾಹಿತ್ಯದ ಕೃಷಿ ಮುಂದುವರೆಯಿತು ಕನ್ನಡದ ಸುಮಾರು 3ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಬರೆದಂತಹ ಏಕೈಕ ಸಾಹಿತಿ ಎಂದರೆ ಅದು ಚಿ.ಉದಯಶಂಕರ್. ಎಲ್ಲಾ ಸಾಹಿತಿಗಳಂತೆ ಅವರೂ ಕೂಡ…

ಮುಂದೆ ಓದಿ...

ತುಮಕೂರು: ರೈಲು ತಡೆಯಲು ಮುಂದಾದ ರೈತರ ಬಂಧನ

ತುಮಕೂರು:       ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ, ಕರ್ನಾಟಕ ರೈತ ಸಂಘ ಮತ್ತು ಹಸಿರುಸೇನೆ ಹಾಗೂ ಎಐಕೆಸಿಸಿ ಕಾರ್ಯಕರ್ತರು ತುಮಕೂರಿನಲ್ಲಿ ರೈಲು ತಡೆಯಲು ಮುಂದಾದಾಗ ಪೊಲೀಸರು ಬಂಧಿಸಿರುವ ಘಟನೆ ಗುರುವಾರ ನಡೆದಿದೆ.       ರೈತರಿಗೆ ಮರಣ ಶಾಸನವಾಗಿರುವ ನಾಲ್ಕು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕೇಂದ್ರ ಸರಕಾರ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಕಳೆದ 90 ದಿನಗಳಿಂದ ದೆಹಲಿಯ ಹೊರವಲಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇದನ್ನು ಬೆಂಬಲಿಸಿ ಇಂದು ದೇಶದಾದ್ಯಂತ ರೈತರು,ರೈತ ಸಂಘಟನೆಯ ಕಾರ್ಯಕರ್ತರುಗಳು ರೈಲು ತಡೆ ಚಳವಳಿ ಹಮ್ಮಿಕೊಂಡಿದ್ದು,ಇದರ ಭಾಗವಾಗಿ ಇಂದು ತುಮಕೂರಿನಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಮತ್ತು ಎಕೆಐಸಿಸಿಯ ಆರ್.ಕೆ.ಎಸ್‍ನ ಸ್ವಾಮಿ ಅವರ ನೇತೃತ್ವದಲ್ಲಿ ನಗರದ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ,ರೈಲು ತಡೆಯಲು ಮುಂದಾದಾಗ ಪೊಲೀಸರು ಪ್ರತಿಭಟನಾನಿರತರನ್ನು ಬಂಧಿಸಿದರು.      ಪ್ರತಿಭಟನೆಯ…

ಮುಂದೆ ಓದಿ...