ಅನಾಮಿಕ ವ್ಯಕ್ತಿಯೇ ಅಂತರಾಜ್ಯ ಕುಖ್ಯಾತ ಕಳ್ಳ

ಕೊರಟಗೆರೆ:      ಇರಕಸಂದ್ರ ಕಾಲೋನಿಯ ಎಸ್‍ಎಲ್‍ಎನ್ ಪಬ್ಲಿಕ್ ಶಾಲೆಯ ಮುಂಭಾಗದ ರಸ್ತೆಬದಿಯಲ್ಲಿ ನಿಂತಿದ್ದ ಅನಾಮಿಕ ವ್ಯಕ್ತಿಯನ್ನೇ ವಿಚಾರಣೆ ನಡೆಸಿದ ಪೊಲೀಸರಿಗೆ ಐದು ಪ್ರಕರಣಗಳಿಗೆ ಬೇಕಾಗಿದ್ದ ಅಂತರಜಿಲ್ಲಾ ಕಳ್ಳನೊರ್ವ ಸಿಕ್ಕಿಬಿದ್ದಿರುವ ಘಟನೆ ಗುರುವಾರ ನಡೆದಿದೆ.       ಕೊರಟಗೆರೆ ತಾಲೂಕು ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಇರಕಸಂದ್ರ ಕಾಲೋನಿಯ ಪಬ್ಲಿಕ್ ಶಾಲೆಯ ಮುಂಭಾಗ ನಿಂತಿದ್ದ ವ್ಯಕ್ತಿಯ ಗಮನಿಸಿದ ನಡೆಸಿದ ಮುಖ್ಯಪೇದೆ ಮೋಹನ್‍ಕುಮಾರ್ ಠಾಣೆಗೆ ಕರೆದುಕೊಂಡು ಹೋಗಿ ಪಿಎಸೈ ನವೀನ್‍ಕುಮಾರ್ ಸಮ್ಮುಖದಲ್ಲಿ ವಿಚಾರಣೆ ನಡೆಸಿದ ವೇಳೆ ಕಳ್ಳನ ಕರಾಮತ್ತು ಬಯಲಾಗಿದೆ.       ತುಮಕೂರು ನಗರ ಬೆಳಗುಂಬ ರಸ್ತೆಯ ಜ್ಯೋತಿಪುರ ವಾಸಿವಾದ ರಘು(28) ಎಂಬಾತನೇ ಬಂಧಿತ ಆರೋಪಿ. ಈತನ ವಿರುದ್ದ ಈಗಾಗಲೇ ತುಮಕೂರು ಗ್ರಾಮಾಂತರ, ಹೆಬ್ಬೂರು, ಕೋರಾ ಮತ್ತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ವಿವಿಧ ಪ್ರಕರಣ ದಾಖಲಾಗಿ ಜೈಲಿಗೆ ಹೋಗಿ ಮತ್ತೇ ಬಿಡುಗಡೆ ಆದ…

ಮುಂದೆ ಓದಿ...

ಮೂರ್ನಾಲ್ಕು ತಿಂಗಳೊಳಗೆ ಕಿತ್ತೋದ ಅಣೆಕಟ್ಟೆ ರಸ್ತೆ

ಹುಳಿಯಾರು:       ಕಾಮಗಾರಿ ನಡೆಯುವ ಸಂದರ್ಭದಲ್ಲೇ ಸಾರ್ವಜನಿಕರು ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಎಚ್ಚರಿಸಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯಿಸಿದ್ದ ಪರಿಣಾಮ ಕಾಮಗಾರಿ ಮುಗಿದು ಮೂರ್ನಲ್ಕು ತಿಂಗಳೊಳಗಾಗಲೇ ರಸ್ತೆಯ ಅಲ್ಲಲ್ಲಿ ಕಿತ್ತೋಗುತ್ತಿದೆ. ಹೌದು 19 ಕೋಟಿ ರೂ. ವೆಚ್ಚದಲ್ಲಿ ಹುಳಿಯಾರು ಅಣೇಕಟ್ಟೆ ರಸ್ತೆ ಕಾಮಗಾರಿಯು ಇತ್ತೀಚೆಗೆ ನಡೆಯಿತು. ಕಾಮಗಾರಿ ನಡೆಯುತ್ತಿದ್ದ ಸಂದರ್ಬದಲ್ಲೇ ಸ್ಥಳೀಯರು ಕಾಮಗಾರಿಯು ತೀರ ಕಳಪೆಯಿಂದ ಕೂಡಿದ್ದು ಅತ್ತ ಡಾಂಬಾರ್ ಹಾಕಿಕೊಂಡು ಹೋಗುತ್ತಿದ್ದರೆ ಇತ್ತ ಕಿತ್ತೋಗುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಎರಡ್ಮೂರು ತಿಂಗಳುಗಳ ಹಿಂದೆ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಿದ್ದರು.      ಈ ರಸ್ತೆಯ ಡಾಂಬಾರೀಕರಣಕ್ಕೆ 19 ಕೋಟಿ ರೂ. ಬಿಡುಗಡೆಯಾಗಿದ್ದರೂ ಸಹ ಹಳೆಯ ಡಾಂಬಾರ್ ಕೀಳದೆ ಅದರ ಮೇಲೆಯೇ ಹೊಸ ಡಾಂಬಾರ್ ಹಾಕಲಾಗುತ್ತಿದೆ. ಪರಿಣಾಮ ಡಾಂಬಾರ್ ಹಾಕಿದ ಮರುಕ್ಷಣವೇ ಜಲ್ಲಿ ಕಲ್ಲುಗಳು ಮೇಲೇಳುತ್ತಿದೆಯಲ್ಲದೆ ರಸ್ತೆಯ ಅಂಚಿನಲ್ಲಿ…

ಮುಂದೆ ಓದಿ...

ಬ್ಯಾಂಕ್-ಎಟಿಎಂ ಕೇಂದ್ರದ ಹೊರಗಡೆಯೂ ಸಿಸಿ ಟಿವಿ ಅಳವಡಿಕೆಗೆ ಡಿಸಿ ಸೂಚನೆ

ತುಮಕೂರು:       ಗ್ರಾಹಕರ ಹಣದ ಭದ್ರತಾ ದೃಷ್ಟಿಯಿಂದ ಬ್ಯಾಂಕು/ಎಟಿಎಂ ಕೇಂದ್ರಗಳ ಒಳ ಭಾಗದಲ್ಲಲ್ಲದೆ ಹೊರ ಭಾಗದಲ್ಲಿಯೂ ಸಹ ಸಿಸಿ ಟಿವಿಗಳನ್ನು ಅಳವಡಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಬ್ಯಾಂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಮಟ್ಟದ ಭದ್ರತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಬ್ಯಾಂಕ್ ಅಧಿಕಾರಿಗಳು ಪ್ರತಿದಿನ ಸಿಸಿಟಿವಿ ರೆಕಾರ್ಡಿಂಗ್ ಅನ್ನು ಪರಿಶೀಲಿಸಬೇಕು. ಬ್ಯಾಂಕು ಹಾಗೂ ಎಟಿಎಂಗಳ ಸುತ್ತ-ಮುತ್ತ ಗಿಡಗಂಟೆಗಳಿದ್ದರೆ ಸ್ವಚ್ಛತೆ ಮಾಡಿ ರಾತ್ರಿ ಹೊತ್ತು ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಿರಬೇಕು ಎಂದು ಸೂಚಿಸಿದರಲ್ಲದೆ ಇತ್ತೀಚೆಗೆ ಮೊಬೈಲ್/ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರು ಹಣದ ವಂಚನೆಗೊಳಗಾಗುತ್ತಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದರಿಂದ ಗ್ರಾಹಕರು ವಂಚಕರಿಂದ ಎಚ್ಚರಿಕೆ ವಹಿಸುವ ಕುರಿತು ಬ್ಯಾಂಕುಗಳು ಅರಿವು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕೆಂದು ನಿರ್ದೇಶನ ನೀಡಿದರು.       ಅಗ್ನಿಶಾಮಕ ಇಲಾಖೆಯಿಂದ ಜಿಲ್ಲೆಯಲ್ಲಿರುವ…

ಮುಂದೆ ಓದಿ...