ಗ್ರಾಮೀಣ ಜನರಿಗೆ ಸರ್ಕಾರಿ ಯೋಜನೆಗಳ ಮಾಹಿತಿ ತಲುಪಿಸುವುದೇ ಗ್ರಾಮ ವಾಸ್ತವ್ಯದ ಸದುದ್ದೇಶ

 ತುಮಕೂರು :       ಕೆಲವು ಹಳ್ಳಿಗಳಲ್ಲಿ ಸರಕಾರದಿಂದ ಜಾರಿಯಾಗುವ ಯೋಜನೆಗಳ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿಯೇ ಇರುವುದಿಲ್ಲ. ಈ ಯೋಜನೆಗಳ ಮಾಹಿತಿ ಹಾಗೂ ಸೌಲಭ್ಯವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದರು.       ಕಂದಾಯ ಇಲಾಖೆಯ ‘ಜಿಲ್ಲಾಧಿಕಾರಿಗಳ ನಡೆ-ಗ್ರಾಮಗಳ ಕಡೆ’ ಕಾರ್ಯಕ್ರಮದಡಿ ಜಿಲ್ಲೆಯ ಮಧುಗಿರಿ ತಾಲೂಕು ಲಕ್ಷ್ಮೀಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಗ್ರಾಮ ವಾಸ್ತವ್ಯದ ಕಾರ್ಯಕ್ರಮದಲ್ಲಿ ಜನರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಸರ್ಕಾರಿ ಯೋಜನೆಗಳ ಸೌಲಭ್ಯವನ್ನು ಫಲಾನುಭವಿಗಳಿಗೆ ತಲುಪಿಸುವುದು, ಪಹಣಿ ತಿದ್ದುಪಡಿ, ಪೌತಿ ಖಾತೆ, ಮಾಶಾಸನ ಸೌಲಭ್ಯ ನೀಡುವುದು ಗ್ರಾಮ ವಾಸ್ತವ್ಯದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಪ್ರೀತಿಯಿಂದಲೇ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸ್ಥಳದಲ್ಲಿ ಕಂಡುಕೊಳ್ಳಬಹುದಾದ ಸಮಸ್ಯೆಗಳನ್ನು ಬಗೆಹರಿಸಿ, ಉಳಿದ ಸಮಸ್ಯೆಗಳನ್ನು ಬಗೆಹರಿಸಲು ಹಂತ…

ಮುಂದೆ ಓದಿ...

ಸಿದ್ಧಾರ್ಥ ಆಸ್ಪತ್ರೆಯಲ್ಲಿ ಸೆಂಟ್ರಲ್ ಕ್ಲಿನಕಲ್ ಲ್ಯಾಬೋರೇಟರಿ ಕಾರ್ಯಾರಂಭ

ತುಮಕೂರು:       ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ನೂತನವಾಗಿ ಸೆಂಟ್ರಲ್ ಕ್ಲಿನಕಲ್ ಲ್ಯಾಬೋರೇಟರಿ ಮತ್ತುದಂತ, ಬಾಯಿ ಮತ್ತು ಮುಖದ ಹೊರ ರೋಗಿಗಳ ಚಿಕಿತ್ಸಾ ವಿಭಾಗವನ್ನು ಬೆಂಗಳೂರಿನ ಸೇಂಟ್‍ಜಾನ್ಸ್ ವೈದ್ಯಕೀಯ ಕಾಲೀಜಿನ ಪ್ರೊಫೆಸರ್‍ಡಾ. ತುಪ್ಪಿಲ್ ವೆಂಕಟೇಶ್ ಉದ್ಘಾಟಿಸಿದರು.       ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ತುಪ್ಪಿಲ್, ಟೆಸ್ಟ್‍ಟ್ಯೂಬ್‍ನಿಂದ ರೊಬೋಟಿಕ್ಸ್ ವರೆಗೂ ಇಂದಿನ ವೈದ್ಯಕೀಯ ಕ್ಷೇತ್ರ ಬೆಳವಣೆಗೆ ಕಂಡಿದೆ. ರೋಗಿಯನ್ನು ಡಯಾಗ್ನೈಸ್ ಮಾಡುವ ಮೂಲಕ ರೋಗವನ್ನು ಪತ್ತೆ ಹಚ್ಚಬಹುದು ಎಂದರು. ಮಾನವಸಂಪನ್ಮೂಲ, ನಿರ್ವಹಣೆ, ವಿಧಾನ, ಸಾಮಗ್ರಿಗಳು, ಉತ್ತಮ ಪರಿಸರ, ಯಾಂತ್ರಿಕ ವ್ಯವಸ್ಥೆ, ಉಪಕರಣಗಳು ಮತ್ತು ಮಾಹಿತಿ ನಿರ್ವಹಣೆ ಎಂಬ ಎಂಟು ಸಂಪನ್ಮೂಲಗಳನ್ನು ಹೊಂದಿದರೆ ಅಂತಾರಾಷ್ಟ್ರೀಯ ಮಟ್ಟದಲಿ ್ಲವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಪಡೆಯಬಹುದು. ಈ ಸಾಲಿನಲ್ಲಿ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಹೆಸರು ಮಾಡಿದೆಎಂದುಅವರು ಶ್ಲಾಘಿಸಿದರು.       ಶಿಕ್ಷಣ, ತರಬೇತಿ, ಸಂಸ್ಥೆ,…

ಮುಂದೆ ಓದಿ...

ದೇವರಾಯನದುರ್ಗ ಜಾತ್ರೆ ಅಂಗವಾಗಿ ವಿವಿಧ ಹರಾಜು ಪ್ರಕ್ರಿಯೆ

ತುಮಕೂರು :        ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ ದೇವರಾಯನದುರ್ಗ ಗ್ರಾಮದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಜಾತ್ರೆಯು ಮಾರ್ಚ್ 20 ರಿಂದ ಏಪ್ರಿಲ್ 1ರವರೆಗೆ ಜರುಗಲಿದ್ದು, ಜಾತ್ರೆಗೆ ಸಂಬಂಧಿಸಿದಂತೆ ಫೆಬ್ರವರಿ 26ರಂದು ವಿವಿಧ ಹರಾಜು ಪಕ್ರಿಯೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.       ಜಾತ್ರೆಯ ಪ್ರಯುಕ್ತ ಅಂಗಡಿಗಳ ನೆಲ ಬಾಡಿಗೆ ಹಾಗೂ ವಾಹನಗಳ ಪ್ರವೇಶ ಶುಲ್ಕ ವಸೂಲಾತಿ, ಭಕ್ತಾದಿಗಳ ಪಾದರಕ್ಷೆಗಳನ್ನು ಕಾಯುವ ಹಕ್ಕು ಭಾದ್ಯತೆ ಹಾಗೂ ಈಡುಗಾಯಿ ಹರಾಜು ಪ್ರಕ್ರಿಯೆಗಳನ್ನು ನಿಗಧಿತ ಸಮಯದಲ್ಲಿ ನಡೆಸಲಾಗುವುದು. ಅಂಗಡಿ ಹಾಗೂ ವಾಹನಗಳ ಶುಲ್ಕ ವಸೂಲಿ ಹರಾಜು: ಆಸಕ್ತರು ಅಂಗಡಿಗಳ ನೆಲ ಬಾಡಿಗೆ ಹಾಗೂ ವಾಹನಗಳ ಪ್ರವೇಶ ಶುಲ್ಕ ವಸೂಲಾತಿ ಹರಾಜನ್ನು ಫೆಬ್ರವರಿ 26ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರಕ್ರಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಹರಾಜಿನಲ್ಲಿ ಪಾಲ್ಗೊಳ್ಳುವ ಪ್ರತಿ…

ಮುಂದೆ ಓದಿ...

ಬಡ-ಮಧ್ಯಮವರ್ಗದ ಜನರ ಜೀವನದಲ್ಲಿ ಆಟವಾಡುತ್ತಿರುವ ಕೇಂದ್ರ ಬಿಜೆಪಿ

ಗುಬ್ಬಿ:       ಬಡ ಮತ್ತು ಮಧ್ಯಮವರ್ಗ ಜನರ ಜೀವನದಲ್ಲಿ ಆಟವಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ದಿನಕೊಮ್ಮೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಸುತ್ತಿದೆ. ಇದರ ಅಡ್ಡಪರಿಣಾಮ ಎಲ್ಲಾ ಕ್ಷೇತ್ರಕ್ಕೂ ಹೊರೆ ಎನಿಸಲಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಕಿಡಿಕಾರಿದರು.       ತಾಲ್ಲೂಕಿನ ಕೆ.ಜಿ.ಟೆಂಪಲ್‍ನಲ್ಲಿ ಆರಂಭವಾದ ಬುದ್ದ ಬಸವ ಅಂಬೇಡ್ಕರ್ ಫ್ಯೂಯಲ್ ಸ್ಟೇಷನ್ ಪೆಟ್ರೋಲ್ ಬಂಕನ್ನು ಉದ್ಘಾಟಿಸಿದ ಅವರು ಅಗತ್ಯವಸ್ತುಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡುತ್ತಿರುವ ಬಿಜೆಪಿ ಸರ್ಕಾರ ಆರ್ಥಿಕ ಸುಧಾರಣೆ ಹೆಸರಿನಲ್ಲಿ ಕೋವಿಡ್ ಸಂಕಷ್ಟದ ನಡುವೆ ಶ್ರೀಸಾಮಾನ್ಯರಿಗೆ ಗಾಯದ ಮೇಲೆ ಬರೆ ಹಾಕುತ್ತಿದೆ ಎಂದರು.       ಪ್ರತಿ ಬಡವನೂ ದ್ವಿಚಕ್ರವಾಹನವನ್ನು ಅವಲಂಬಿಸಿ ಕೂಲಿ ನಡೆಸುತ್ತಾನೆ. ಅನಿವಾರ್ಯವಾಗಿ ಬದುಕಿಗೆ ಹೊಂದಿಕೊಂಡ ವಾಹನಗಳಿಗೆ ತೈಲ ಒದಗಿಸುವುದು ಕಷ್ಟಸಾಧ್ಯ. ಇಂತಹ ಸಂದರ್ಭದಲ್ಲಿ ಬಜೆಟ್ ನಂತರದಲ್ಲಿ ನಿತ್ಯ ತೈಲ ಬೆಲೆ ಹೆಚ್ಚಿಸುತ್ತಿರುವ ಹಿನ್ನಲೆ ತಿಳಿಯುತ್ತಿಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆ…

ಮುಂದೆ ಓದಿ...